ಅಪರಾಧ

ಕಾಳಿ ಪೋಸ್ಟರ್‌ ವಿವಾದ : ಎಫ್‌ಐಆರ್‌ ರದ್ದುಗೊಳಿಸಲು ನಿರ್ದೇಶಕಿ ಅರ್ಜಿ

ಕಾಳಿ ಮಾತೆಯನ್ನು ಅಸಭ್ಯವಾಗಿ ಚಿತ್ರಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ಹೊಸದಿಲ್ಲಿ : ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವತೆ ಕೈಯಲ್ಲಿ ಸಿಗರೇಟ್ ಇರುವ ಪೋಸ್ಟರ್‌ ರಚಿಸಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಅನಿವಾಸಿ ಭಾರತೀಯ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಮಣಿಮೇಕಲೈ ಸ್ವತಃ ಕಾಳಿ ದೇವಿಯ ವೇಷ ಧರಿಸಿ ಬಾವುಟ ಹಿಡಿದು ಸಿಗರೇಟ್ ಸೇದುತ್ತಿರುವ ಪೋಸ್ಟರ್‌ ವಿರುದ್ಧ ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ […]

ಕಾಳಿ ಪೋಸ್ಟರ್‌ ವಿವಾದ : ಎಫ್‌ಐಆರ್‌ ರದ್ದುಗೊಳಿಸಲು ನಿರ್ದೇಶಕಿ ಅರ್ಜಿ Read More »

ಫೆಮಾ ಉಲ್ಲಂಘನೆ : ಮಂಗಳೂರಿನ ಉದ್ಯಮಿಯ ಕೋಟಿಗಟ್ಟಲೆ ರೂ. ಆಸ್ತಿ ಜಪ್ತಿ

ವಿದೇಶಗಳಲ್ಲಿ ಫ್ಲ್ಯಾಟ್‌ ಸೇರಿ ಅಪಾರ ಆಸ್ತಿ ಖರೀದಿ ಮಂಗಳೂರು : ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಮಂಗಳೂರಿನ ಉದ್ಯಮಿಯೊಬ್ಬರ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿ ಜಾರಿ ನಿರ್ದೇಶನಾಲಯ(ಇಡಿ) ಆದೇಶ ಹೊರಡಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ 17 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಮಂಗಳೂರಿನ ಮುಕ್ಕ ಗ್ರೂಪ್ ಆಫ್ ಕಂಪನಿಸ್‌ನ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿಯ ಸ್ಥಿರಾಸ್ತಿ ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ

ಫೆಮಾ ಉಲ್ಲಂಘನೆ : ಮಂಗಳೂರಿನ ಉದ್ಯಮಿಯ ಕೋಟಿಗಟ್ಟಲೆ ರೂ. ಆಸ್ತಿ ಜಪ್ತಿ Read More »

ಅಜ್ಞಾತ ಸ್ಥಳದಲ್ಲಿ ಸ್ಯಾಂಟ್ರೊ ರವಿ ವಿಚಾರಣೆ

ಇಂದು ನ್ಯಾಯಾಲಯಕ್ಕೆ ಹಾಜರು ಬೆಂಗಳೂರು: ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಟ್ರೊ ರವಿಯನ್ನು ಕರ್ನಾಟಕ ಪೊಲೀಸರು ಗುಜರಾತ್​ನಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆತಂದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಣ್ಣುತಪ್ಪಿಸಿ ರವಿಯನ್ನು ಪೊಲೀಸರು ಹೊರಗೆ ಕರೆದೊಯ್ದಿದ್ದಾರೆ. ನಿಲ್ದಾಣದ ಒಂದು ದ್ವಾರದಲ್ಲಿ ಎಲ್ಲರಿಗೂ ಕಾಣಿಸುವಂತೆ, ಮತ್ತೊಂದು ದ್ವಾರದಲ್ಲಿ ಗೌಪ್ಯವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ವಿಮಾನ ನಿಲ್ದಾಣದ ಭದ್ರತಾಪಡೆಯ ಗೇಟ್‌ನಿಂದ ಹೊರಗೆ ಕರೆದೊಯ್ಯಲಾಗಿದೆ.ರಾಯಚೂರು, ಮಂಡ್ಯ ಹಾಗೂ ಮೈಸೂರು

ಅಜ್ಞಾತ ಸ್ಥಳದಲ್ಲಿ ಸ್ಯಾಂಟ್ರೊ ರವಿ ವಿಚಾರಣೆ Read More »

ಮಹಿಳಾ ಕ್ರಿಕೆಟರ್‌ ಶವ ಕಾಡಿನಲ್ಲಿ ಪತ್ತೆ

ಸಾವಿನ ಸುತ್ತ ಹಲವು ಅನುಮಾನ ಭುವನೇಶ್ವರ: ಒಡಿಶಾದ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯೊಬ್ಬರ ಶವ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ.ಕ್ರಿಕೆಟ್ ಆಟರ್ಗಾತಿ ರಾಜಶ್ರೀ ಸ್ವೈನಿ ಅವರ ಶವ ಕಟಕ್ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಜ.11ರಿಂದ ರಾಜಶ್ರೀ ನಾಪತ್ತೆಯಾಗಿದ್ದರು. ರಾಜಶ್ರೀ ಅವರ ತರಬೇತಿದಾರರು ಗುರುವಾರ ಕಟಕ್‌ನ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಗುರ್ಡಿ ಜಾಟಿಯಾ ಪೊಲೀಸ್ ಠಾಣೆಯಲ್ಲಿ ರಾಜಶ್ರೀ ಅವರ ಸಾವಿನ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ.

ಮಹಿಳಾ ಕ್ರಿಕೆಟರ್‌ ಶವ ಕಾಡಿನಲ್ಲಿ ಪತ್ತೆ Read More »

526 ಕೋ.ರೂ. ವಂಚನೆ : ಉದ್ಯಮಿ ಬಂಧನ

ರಿಯಲ್‌ ಎಸ್ಟೇಟ್‌ ಉದ್ಯಮಿಯಿಂದ ಹೂಡಿಕೆದಾರರಿಗೆ ಪಂಗನಾಮ ಬೆಂಗಳೂರು: 500 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿಯ ಕರಣ್ ಗ್ರೂಪ್ ಬಿಲ್ಡರ್ಸ್ & ಡೆವಲಪರ್ಸ್ ಮುಖ್ಯಸ್ಥ ಮಹೇಶ್ ಬಿ.ಓಜಾ ಅವರನ್ನು ಗುರುವಾರ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ನ್ಯಾಯಾಲಯ ಓಜಾ ಅವರನ್ನು 10 ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆಯ ಹೆಸರಿನಲ್ಲಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಓಜಾ ವಿರುದ್ಧ ಕರ್ನಾಟಕ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು

526 ಕೋ.ರೂ. ವಂಚನೆ : ಉದ್ಯಮಿ ಬಂಧನ Read More »

ತೀರ್ಥಹಳ್ಳಿ ಕಾಂಗ್ರೆಸ್‌ ಕಚೇರಿಯಲ್ಲಿ ಎನ್‌ಐಎ ಶೋಧ

ಶಂಕಿತ ಉಗ್ರ ಶಾರಿಕ್‌ ಕುಟುಂಬಕ್ಕೆ ಸೇರಿದ ಕಟ್ಟದಲ್ಲಿದೆ ಕಾಂಗ್ರೆಸ್‌ ಕಚೇರಿ ಶಿವಮೊಗ್ಗ: ತೀರ್ಥಹಳ್ಳಿಯಲ್ಲಿರುವ ಕಾಂಗ್ರೆಸ್‌ ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣದ ಆರೋಪಿ ಮಹಮ್ಮದ್‌ ಶಾರೀಕ್‌ ಕುಟುಂಬದ ಆಸ್ತಿಯನ್ನು ಕಾಂಗ್ರೆಸ್‌ ಲೀಸ್‌ಗೆ ಪಡೆದಿರುವ ಕುರಿತು ವಿಚಾರಣೆ ನಡೆಸಲಾಗಿದೆ.ತೀರ್ಥಹಳ್ಳಿ ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿ ಹಾಗೂ ಅದರ ಮೇಲೆ

ತೀರ್ಥಹಳ್ಳಿ ಕಾಂಗ್ರೆಸ್‌ ಕಚೇರಿಯಲ್ಲಿ ಎನ್‌ಐಎ ಶೋಧ Read More »

ಸ್ಯಾಂಟ್ರೊ ರವಿ ಪತ್ತೆಗೆ 11 ಪೊಲೀಸ್‌ ತಂಡ ರಚನೆ

ರಾಜಕೀಯ ನಾಯಕರ ಸಿಡಿ ಪ್ರಕರಣಗಳಿಗೆ ನಂಟು ಶಂಕೆ ಬೆಂಗಳೂರು : ರಾಜಕೀಯ ನಾಯಕ ಸಿಡಿ ಕೇಸ್‌ಗೆ ನೇರ ಸಂಬಂಧ ಹೋಮದಿದ್ದಾನೆ ಎಂದು ಶಂಕಿಸಲಾಗಿರುವ ಸ್ಯಾಂಟ್ರೊ ರವಿ ಪತ್ತೆಗಾಗಿ 11 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಯಾಂಟ್ರೊ ರವಿ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸಲು ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.ದೂರು ದಾಖಲಾದ ಬಳಿಕ ಸ್ಯಾಂಟ್ರೊ ರವಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿದಿದೆ. ಸ್ಯಾಂಟ್ರೊ ರವಿ

ಸ್ಯಾಂಟ್ರೊ ರವಿ ಪತ್ತೆಗೆ 11 ಪೊಲೀಸ್‌ ತಂಡ ರಚನೆ Read More »

ಬಿರಿಯಾನಿ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ತಿರುವು : ಆತ್ಮಹತ್ಯೆ ಶಂಕೆ

ಯುವತಿ ಹೊಟ್ಟೆಯಲ್ಲಿ ಇಲಿ ಪಾಷಾಣದ ಅಂಶ ಪತ್ತೆ ಕಾಸರಗೋಡು: ಕಾಸರಗೋಡಿನ ಅಡ್ಕತ್ತಬೈಲಿನ 19 ವರ್ಷದ ಅಂಜುಶ್ರೀ ಪಾರ್ವತಿ ಎಂಬ ಯುವತಿ ಬಿರಿಯಾನಿ ತಿಂದು ಮೃತಪಟ್ಟಿರುವ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಆಕೆ ಆತ್ಮಹತ್ಯೆಗೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂಬುದು ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಿಂದ ಬಹಿರಂಗಗೊಂಡಿದೆ.ಪರಿಯಾರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಆಕೆಯ ಸಾವು ವಿಷಾಹಾರದಿಂದ ಸಂಭವಿಸಿಲ್ಲ. ಇಲಿ ಪಾಷಾಣ ಪೇಸ್ಟ್ ಬಾಲಕಿಯ ಯಕೃತ್ತಿನ ಮೇಲೆ ಪರಿಣಾಮ ಬೀರಿದ್ದು, ಆಕೆಯ ಸಾವಿಗೆ ಕಾರಣವಾಯಿತು ಎಂದು ವರದಿ ನೀಡಿದ್ದಾರೆ.ರಾಸಾಯನಿಕ ಪರೀಕ್ಷೆಯ

ಬಿರಿಯಾನಿ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ತಿರುವು : ಆತ್ಮಹತ್ಯೆ ಶಂಕೆ Read More »

ನಾಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪ್ರಿಯಕರನೊಂದಿಗೆ ಪತ್ತೆ

ಪೊಲೀಸ್‌ ಠಾಣೆಗೆ ಬಂದು ಪ್ರಿಯಕರನ ಜತೆ ಬದುಕುವುದಾಗಿ ಹೇಳಿಕೆ ಸುಬ್ರಹ್ಮಣ್ಯ : ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಸದಸ್ಯೆ ವಿವಾಹಿತೆ ಭಾರತಿ ಮೂಕಮೂಲೆ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ. ಜ.5ರಂದು ಪ್ರಿಯಕರನೊಂದಿಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ಬಂದಿರುವ ಭಾರತಿ ತಾನು ಆತನೊಂದಿಗೆ ಬದುಕಲು ಇಚ್ಚಿಸಿರುವುದಾಗಿ ಹೇಳಿ ತೆರಳಿದ್ದಾರೆ. ಭಾರತಿ ಮೂಕಮೂಲೆ ಮತ್ತು ಪ್ರಿಯಕರ ನಂದನ್‌ ನ್ಯಾಯವಾದಿಯೊಂದಿಗೆ ಠಾಣೆಗೆ ಬಂದಿದ್ದರು. ಪ್ರಿಯಕರ ನಂದನ್‌ ಜತೆ ಮುಂದಿನ ಜೀವನ ಕಳೆಯುವುದಾಗಿ ಆಕೆ ಲಿಖಿತವಾಗಿ ಹೇಳಿಕೆ ಕೊಟ್ಟು ತೆರಳಿದ್ದಾರೆ. ಭಾರತಿ

ನಾಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪ್ರಿಯಕರನೊಂದಿಗೆ ಪತ್ತೆ Read More »

ಚಳಿ ತಡೆಯಲು ಹಾಕಿದ ಹೀಟರ್‌ಗೆ ಕುಟುಂಬವೇ ಬಲಿ

ವಿಷಕಾರಿ ಅನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು ಲಖನೌ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಸ್ವಾನ್ ಎಂಬಲ್ಲಿ ಚಳಿ ತಡೆಯಲು ಹಾಕಿಕೊಂಡ ಹೀಟರ್ ಒಂದಿಡೀ ಕುಟುಂಬವನ್ನು ಬಲಿತೆಗೆದುಕೊಂಡಿದೆ. ಹೀಟರ್‌ನ ವಿಷಕಾರಿ ಅನಿಲ ಸೇವಿಸಿ ಮದ್ರಸಾ ಶಿಕ್ಷಕ ಆಸಿಫ್ (32) , ಅವರ ಪತ್ನಿ ಶಗುಫ್ತಾ (30) ಮತ್ತು ಮಕ್ಕಳಾದ 3 ವರ್ಷದ ಝೈದ್ ಮತ್ತು 2 ವರ್ಷದ ಮೈರಾ ಮೃತಪಟ್ಟಿದ್ದಾರೆ.ಶನಿವಾರ ರಾತ್ರಿ ಆಸಿಫ್ ಕುಟುಂಬ ತೀವ್ರ ಚಳಿಯನ್ನು ತಡೆಯಲು ಗ್ಯಾಸ್ ಪೆಟ್ರೋಮ್ಯಾಕ್ಸ್ ಹಚ್ಚಿ ಕೊಠಡಿಯಲ್ಲಿ ಮಲಗಿತ್ತು.

ಚಳಿ ತಡೆಯಲು ಹಾಕಿದ ಹೀಟರ್‌ಗೆ ಕುಟುಂಬವೇ ಬಲಿ Read More »

error: Content is protected !!
Scroll to Top