ಅಪರಾಧ

ತಂದೆ-ಮಗ ಹೊಡೆದಾಟ | ತಂದೆ ಮೃತ್ಯು

ಪುತ್ತೂರು: ತಂದೆ –ಮಗನ ಹೊಡೆದಾಟದಲ್ಲಿ ಗಾಯಗೊಂಡು ತಂದೆ ಮೃತಪಟ್ಟ ಘಟನೆ ಕುಕ್ಕುಜಡ್ಕದಲ್ಲಿ ನಡೆದಿದೆ. ಕಿಟ್ಟು ಹಾಗೂ ಮಗ ಹರ್ಷಿತ್ ಹೊಡೆದಾಡಿಕೊಂಡಿದ್ದು, ಗಂಭೀರ ಗಾಯಗೊಂಡ ತಂದೆ ಕಿಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಳೆಯ ದ್ವೇಷದಿಂದ ಕಿಟ್ಟು ಅವರ ಎರಡನೇ ಹೆಂಡತಿ ಮಗ ಹರ್ಷಿತ್ ಅಡಿಕೆ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ. ಗಾಯಗೊಂಡ ಕಿಟ್ಟು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ […]

ತಂದೆ-ಮಗ ಹೊಡೆದಾಟ | ತಂದೆ ಮೃತ್ಯು Read More »

ಡಿವೈಎಸ್ಪಿ ಹುದ್ದೆಗೆ ಕಳಂಕ ತಂದ ಪುತ್ತೂರು ಡಿವೈಎಸ್ಪಿಯ ಅಮಾನತು ಮಾಡಿ

ಕಡಬ: ಪುತ್ತೂರು ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಹುದ್ದೆಯನ್ನು ಅರಿಯದ ಸಾಮಾನ್ಯ ವ್ಯಕ್ತಿಯಂತೆ ಹಲ್ಲೆ ನಡೆಸಿದ ಪುತ್ತೂರು ಡಿವೈಎಸ್ಪಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ವಿ.ಹಿಂ.ಪ. ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿ, ಇದೇ ಡಿವೈಎಸ್ಪಿ ಕೊಂಬಾರು ಆನೆ ದಾಳಿ ಪ್ರಕರಣದಲ್ಲಿ ಕೂಡ ತಾನೂ ಡಿವೈಎಸ್ಪಿ ಎಂಬುದನ್ನು ಮರೆತು ಅನಾಗರಿಕನಂತೆ ವರ್ತಿಸಿದ್ದಾರೆ. ಸಮಸ್ಯೆಗಳು ಬಂದಾಗ ಅದನ್ನು ಬಗೆಹರಿಸುವ ಬಗ್ಗೆ ಯೋಚಿಸದೆ ಒಟ್ಟಾರೆಯಾಗಿ ವರ್ತಿಸಿರುವುದು ಕಂಡು ಬಂದಿದೆ. ಸಾಮಾನ್ಯ ಜನರಿಗೆ ಕಾನೂನು

ಡಿವೈಎಸ್ಪಿ ಹುದ್ದೆಗೆ ಕಳಂಕ ತಂದ ಪುತ್ತೂರು ಡಿವೈಎಸ್ಪಿಯ ಅಮಾನತು ಮಾಡಿ Read More »

ಹೊಸ ಸರ್ಕಾರ ಬಂದಾಕ್ಷಣ ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಹೊಸ ಸರ್ಕಾರ ಬಂದ ತಕ್ಷಣ ಮುಂದಿನ‌ 5 ವರ್ಷ ಏನಾಗ್ತದೆ ಎಂಬುದಕ್ಕೆ ಸಾಕ್ಷಿ ಈ ಘಟನೆ. ಕಂಬಳದಲ್ಲಿ ಕೋಣಗಳ ಮೇಲೆ ಹೊಡೆಯಬಾರದು ಎಂದು ಹೇಳುತ್ತಾರೆ. ಅದಕ್ಕಿಂತಲೂ ಅಮಾನವೀಯವಾದ ಕೃತ್ಯ. ಆದ್ದರಿಂದ ಈ ಘಟನೆಗೆ ಕಾರಣರಾದ ಡಿವೈಎಸ್ಪಿಯನ್ನೇ ಅಮಾನತು ಮಾಡುವಂತೆ ಹಿಂದೂ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗ್ರಹಿಸಿದರು. ಗುರುವಾರ ಪುತ್ತೂರು ಮಹಾವೀರ ಆಸ್ಪತ್ರೆಗೆ ಆಗಮಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ದಾಖಲಾಗಿರುವ ಯುವಕರ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಬಂದು 2-3 ದಿನ ಆಗಿದೆಯಷ್ಟೇ.

ಹೊಸ ಸರ್ಕಾರ ಬಂದಾಕ್ಷಣ ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ: ಡಾ. ಕಲ್ಲಡ್ಕ ಪ್ರಭಾಕರ ಭಟ್ Read More »

ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಯ್ತು ಬಿಜೆಪಿ ಮುಖಂಡನ ಶವ!

ಸುಳ್ಯ: ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ನವೀನ್ ರೈ ಮೇನಾಲ ಅವರ ಮೃತದೇಹ ಸುಳ್ಯದ ಹೊಳೆಯಲ್ಲಿ ಪತ್ತೆಯಾಗಿದೆ. ಪಯಸ್ವಿನಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ. ಪಂಪ್ ರಿಪೇರಿಗೆ ತೆರಳಿದ್ದ ಅವರು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಯ್ತು ಬಿಜೆಪಿ ಮುಖಂಡನ ಶವ! Read More »

ಪೊಲೀಸರ ಕೃತ್ಯ ಅಮಾನುಷ : ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಚಕ್ರವರ್ತಿ ಸೂಲಿಬೆಲೆ

ಪುತ್ತೂರು: ದೌರ್ಜನ್ಯಕ್ಕೆ ಒಳಗಾದ ಯುವಕರ ಫೊಟೋ ನೋಡಿ ಎದೆ ಝಲ್ಲೆನಿಸಿತು. ಪೊಲೀಸರ ಕೃತ್ಯ ಅಮಾನುಷ. ಇಂತಹ ಪರಿಸ್ಥಿತಿ ಬೇರಾರಿಗೂ ಬರಬಾರದು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪೊಲೀಸ್ ರಿಂದ ದೌರ್ಜನ್ಯಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಚಕ್ರವರ್ತಿ ಸೂಲಿಬೆಲೆಯವರು ಪುತ್ತೂರು ಆಸ್ಪತ್ರೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿ, ಮಾತನಾಡಿದರು. ತೇಜೋವಧೆ, ಅವಮಾನ ಮಾಡುವುದನ್ನು ನಾವು ಸಹಿಸಿಕೊಳ್ಳಬೇಕಾದ ಸಂದರ್ಭಗಳು ಜೀವನದಲ್ಲಿ ಬರುತ್ತವೆ. ಅದರಲ್ಲೂ ಪಕ್ಷಕ್ಕೆ ಸೋಲಾದಾಗ ಇಂತಹ ಘಟನೆಗಳು ಸಹಜ. ಹಾಗೆಂದು ನೋವುಂಟಾದವರು ಎಲ್ಲರೂ ನರೇಂದ್ರ ಮೋದಿಯನ್ನು ನೋಡಬೇಕು. ಅವರಷ್ಟು

ಪೊಲೀಸರ ಕೃತ್ಯ ಅಮಾನುಷ : ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಚಕ್ರವರ್ತಿ ಸೂಲಿಬೆಲೆ Read More »

ಪೊಲೀಸರಿಂದ ಹಲ್ಲೆ: ಇಬ್ಬರು ಪೊಲೀಸರು ಅಮಾನತು

ಪುತ್ತೂರು: ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆ ಯಲ್ಲಿ ವಿಚಾರಣೆಗೆ ಒಳಪಡಿಸಿದ ಆರೋಪಿತರಿಗೆ ಪೊಲೀಸ್ ರು ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ PSI ಪುತ್ತೂರು ಗ್ರಾಮಾಂತರ ಠಾಣೆ ಹಾಗೂ ಹರ್ಷಿತ್ PC ರವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. DSP ಪುತ್ತೂರು ರವರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಎಸ್ಪಿ ಅವರ ಪ್ರಕಟಣೆ ತಿಳಿಸಿದೆ. ಹಲ್ಲೆಗೊಳಗಾದ ಅವಿನಾಶ್ ನೀಡಿದ ದೂರಿನ ಮೇರೆಗೆ Dysp ಪುತ್ತೂರು, PSI ಪುತ್ತೂರು

ಪೊಲೀಸರಿಂದ ಹಲ್ಲೆ: ಇಬ್ಬರು ಪೊಲೀಸರು ಅಮಾನತು Read More »

ಪೊಲೀಸ್ ಹಲ್ಲೆ ಪ್ರಕರಣ: ತನಿಖೆಯ ಹೊಣೆ DYSPಗೆ | ಎಸ್ಪಿ ಡಾ. ವಿಕ್ರಂ ಅಮಟೆ 

ಪುತ್ತೂರು: ಅವಹೇಳನ ಮಾಡಿ ಬ್ಯಾನರ್ ಹಾಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರಿಂದ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ASP ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಮುಂದಿನ ತನಿಖೆಗೆ DYSP ಅವರಿಗೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ‌ ವಿಕ್ರಂ ಅಮಟೆ ಹೇಳಿದರು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಅಭಿ / ಅವಿನಾಶ್ ದೂರು ನೀಡಿದ್ದು, ಎಫ್.ಐ.ಆರ್. ದಾಖಲಾಗುತ್ತಿದೆ. ಮುಂದಿನ ತನಿಖೆಗೆ ಡಿ.ವೈ.ಎಸ್.ಪಿ.ಗೆ ನೀಡಲಾಗುವುದು. ಹಲ್ಲೆ ನಡೆಸಿದ ಬಗ್ಗೆ 3 ಪೊಲೀಸರ

ಪೊಲೀಸ್ ಹಲ್ಲೆ ಪ್ರಕರಣ: ತನಿಖೆಯ ಹೊಣೆ DYSPಗೆ | ಎಸ್ಪಿ ಡಾ. ವಿಕ್ರಂ ಅಮಟೆ  Read More »

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರೋಪ | ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ

ಪುತ್ತೂರು: ಯಾರು ನಮ್ಮ ಕಾರ್ಯಕರ್ತರ ಮೇಲೆ ಅಮಾನುಷವಾಗಿ ದೌರ್ಜನ್ಯವೆಸಗಿದ್ದಾರೋ ಅವರನ್ನ ಸಸ್ಪೆಂಡ್ ಮಾಡಿ. ಇದರಲ್ಲಿ ರಾಜಕೀಯ ಬೇಡ. ಯಾರು ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವಾಗಿದ್ಯೋ ಅವೆರೆಲ್ಲ ನಮ್ಮವರು. ತಕ್ಷಣ ಅಮಾನಯಷವಾಗಿ ವರ್ತಿಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ ಆಗ್ರಹಿಸಿದ್ದಾರೆ. ಪ್ರಕಟಣೆ ನೀಡಿದ ಅವರು, ಕ್ರಮ ಕೈಗೊಳ್ಳದೇ ಹೋದಲ್ಲಿ ಹಿಂದೂ ಸಮಾಜದಿಂದ ಹೋರಾಟ, ಅಗತ್ಯ ಬಿದ್ದಲ್ಲಿ ಪೊಲೀಸ್ ಸ್ಟೇಷನ್ ಬಳಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಇಂದು ಸಂಜೆ ವೇಳೆಗೆ

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರೋಪ | ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ Read More »

ಪ್ರಚೋದನಾತ್ಮಕ ಪೋಸ್ಟ್‌: ಪೊಲೀಸ್‌ ಕಮೀಷನರ್ ಎಚ್ಚರಿಕೆ

ಮಂಗಳೂರು: ವಿಧಾನಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾದ ಬಳಿಕ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಪ್ರಚೋದನಾತ್ಮಕ ಸಂದೇಶಗಳನ್ನು ಪೋಸ್ಟ್‌ ಮಾಡುತ್ತಿರುವುದು ಕಂಡು ಬಂದಿದ್ದು ಇಂತಹ ಪೋಸ್ಟ್‌ಗಳನ್ನು ಹಾಕುವ ಅಥವಾ ಫಾರ್ವರ್ಡ್‌ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಎಚ್ಚರಿಕೆ ನೀಡಿದ್ದಾರೆ. ಜಾತಿ, ಧರ್ಮ ಮತ್ತು ಪ್ರದೇಶ ಆಧಾರಿತವಾಗಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವಂತಹ ಮತ್ತು ವೈಯಕ್ತಿಕ ನಿಂದನೆ ಮಾಡುವಂತಹ ದ್ವೇಷಪೂರಿತ ಮತ್ತು

ಪ್ರಚೋದನಾತ್ಮಕ ಪೋಸ್ಟ್‌: ಪೊಲೀಸ್‌ ಕಮೀಷನರ್ ಎಚ್ಚರಿಕೆ Read More »

ಚಪ್ಪಲಿ ಹಾರ ಹಾಕಿದ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯದ ಆರೋಪ | ಫೊಟೋಗಳ ಬಗ್ಗೆ ಹೇಳಿಕೆ ನೀಡಿದ ಪುತ್ತೂರು ಡಿವೈಎಸ್ಪಿ

ಪುತ್ತೂರು: ಬಿಜೆಪಿ ನಾಯಕರ ಭಾವಚಿತ್ರವಿರುವ ಬ್ಯಾನರಿಗೆ ಚಪ್ಪಲಿ ಹಾರ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾದ ಆರೋಪಿಗಳಿಗೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ಭಾವಚಿತ್ರವನ್ನು ಹಾಕಿ, ಅದರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಎಂಬ ಶೀರ್ಷಿಕೆ ನೀಡಿ, ಅದಕ್ಕೆ ಚಪ್ಪಲಿ ಹಾರ ಹಾಕಿದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ

ಚಪ್ಪಲಿ ಹಾರ ಹಾಕಿದ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯದ ಆರೋಪ | ಫೊಟೋಗಳ ಬಗ್ಗೆ ಹೇಳಿಕೆ ನೀಡಿದ ಪುತ್ತೂರು ಡಿವೈಎಸ್ಪಿ Read More »

error: Content is protected !!
Scroll to Top