ಅಪರಾಧ

66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಚೋರನ ಬಂಧನ

ಅತಿದೊಡ್ಡ ಅಂತರ್‌ಜಾಲ ಮಾಹಿತಿ ಕಳ್ಳತನ ಪ್ರಕರಣ ಹೈದರಾಬಾದ್ : 66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಸೈಬರ್‌ ಚೋರನೊಬ್ಬನನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ 56 ಲಕ್ಷ ಜನರು ಸೇರಿ ಎಂಟು ಮೆಟ್ರೋ ನಗರಗಳು, 24 ರಾಜ್ಯಗಳ 44 ವಿಭಾಗಗಳಲ್ಲಿ ಜನರ ಮಾಹಿತಿಯನ್ನು ಕಳ್ಳತನ ಮಾಡಿರುವ ದೇಶದ ಅತಿ ದೊಡ್ಡ ಡೇಟಾ ಕಳವು ಪ್ರಕರಣ ಇದು ಎಂದು ಸೈಬರಾಬಾದ್ ಪೊಲೀಸರು ಹೇಳಿದ್ದಾರೆ. ಒಟ್ಟಾರೆ 66.9 ಕೋಟಿ ಜನರ ಮತ್ತು ಖಾಸಗಿ ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ […]

66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಚೋರನ ಬಂಧನ Read More »

ಪುತ್ತೂರು : ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಪುತ್ತೂರು : ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಏ. 1 ರಂದು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲದ ಕನ್ಯಾನ ಗ್ರಾಮದ ಬೈರಿಕಟ್ಟೆ ಆಂಗ್ರಿ ನಿವಾಸಿ ಮಹಮ್ಮದ್ ತೌಪೀರ್ ಎಂಬಾತನೇ ಬಂಧಿತ ಆರೋಪಿ. ಆರೋಪಿಯನ್ನು ಬೆಂಗಳೂರಿನ ಅತ್ತಿಬೆಲೆ ಎಂಬಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ

ಪುತ್ತೂರು : ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

7.3 ಕೋಟಿ ಮೌಲ್ಯದ 3.6 ಟನ್‌ ಗಾಂಜಾ ವಶ

ಅಗರ್ತಲಾ : ತ್ರಿಪುರಾ ಪೊಲೀಸರು ಗುರುವಾರ 7.3 ಕೋಟಿ ಮೌಲ್ಯದ 3,660 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಪವಿಭಾಗೀಯ ಪೊಲೀಸ್ ಅಧಿಕಾರಿ ಕಮಲ್ ದೆಬ್ಬರ್ಮಾ ನೇತೃತ್ವದ ಪೊಲೀಸ್ ತಂಡವು ಉನಕೋಟಿ ಜಿಲ್ಲೆಯ ಪೆಚಾರ್ತಲ್‌ನಲ್ಲಿ ಚೆಕ್ ಗೇಟ್‌ನಲ್ಲಿ ಅಸ್ಸಾಂನಿಂದ ಬಂದ ಹತ್ತು ಚಕ್ರಗಳ ತೈಲ ಟ್ಯಾಂಕರ್ ಅನ್ನು ತಡೆದು 3,660 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಪೊಲೀಸರು ವಾಹನದ ಚಾಲಕ ಪ್ರಿಯಾಲಾಲ್ ದೆಬ್ಬರ್ಮಾ (27)

7.3 ಕೋಟಿ ಮೌಲ್ಯದ 3.6 ಟನ್‌ ಗಾಂಜಾ ವಶ Read More »

ದೋಳ್ಪಾಡಿ: ದೈವ ನರ್ತನದ ವೇಳೆಯೇ ಕುಸಿದು ಬಿದ್ದು ದೈವ ನರ್ತಕ ಸಾವು

ಪುತ್ತೂರು: ದೈವ ನರ್ತನದ ವೇಳೆ ದೈವ ನರ್ತಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಾ. 30ರಂದು ನಡೆದಿದೆ. ಕಾಣಿಯೂರು ಗ್ರಾಮ ಪಂಚಾಯತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಘಟನೆ ವರದಿಯಾಗಿದೆ. ಹೃದಯಾಘಾತದಿಂದ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದ ದೈವ ನರ್ತಕ ಕಾಂತು ಅಜಿಲ ಮಾಲೆಂಗ್ರಿ ಮೃತಪಟ್ಟವರು. ಇವರು ಮೂಲಂಗೀರಿ ನಿವಾಸಿ. ಕಾಂತು ಅಜಿಲ ಅವರು ಹಲವು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಕಟ್ಟಿಗೆ ಸಂಬಂಧಿಸಿದಂತೆ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ. 30ರಂದು ಕಾಣಿಯೂರು ಗ್ರಾಮದ ಇಡ್ಯಡ್ಕದಲ್ಲಿ

ದೋಳ್ಪಾಡಿ: ದೈವ ನರ್ತನದ ವೇಳೆಯೇ ಕುಸಿದು ಬಿದ್ದು ದೈವ ನರ್ತಕ ಸಾವು Read More »

ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂಗಾಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ

ಲಿಂಕ್‌ ಕಳುಹಿಸಿ ಹಣ ಎಗರಿಸಿದ ಖದೀಮ ಉಡುಪಿ : ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂ ಬಗ್ಗೆ ಮಾಹಿತಿ ಹುಡುಕಲು ಹೋದ ಮಹಿಳೆಯೊಬ್ಬರು ಸುಮಾರು 2 ಲ.ರೂ. ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಡುಪಿಯ ಜ್ಯೋತಿ (32) ಹಣ ಕಳೆದುಕೊಂಡವರು. ಫೇಸ್‌ಕ್ರೀಂ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ವೇಳೆ ದೊರೆತ ನಂಬರ್‌ಗೆ ಕರೆ ಮಾಡಿದ್ದು, ಆಗ ವ್ಯಕ್ತಿಯೊಬ್ಬ ನೋಂದಣಿ ಮಾಡುವಂತೆ ಸೂಚಿಸಿದ್ದಾನೆ. ಮಾ.22 ರಂದು ಮತ್ತೆ ಕರೆ ಮಾಡಿದ ವ್ಯಕ್ತಿ ಈ ಹಿಂದೆ ಮಾಡಿದ ಮಾಹಿತಿ

ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂಗಾಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ Read More »

ಪೊಲೀಸರ ಸಮಯ ಪ್ರಜ್ಞೆ : ಆತ್ಮಹತ್ಯೆಗೆ ಬಲಿಯಾಗುತ್ತಿದ್ದ ಯುವಕ ಬಚಾವ್

ದೆಹಲಿ : ಈಶಾನ್ಯ ದೆಹಲಿಯ ನಂದ್ ನಾಗ್ರಿ ಪ್ರದೇಶದಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ 25 ವರ್ಷದ ಯುವಕನನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನ ಜೀವ ಉಳಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ಮಾಹಿತಿ ಪಡೆದು ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡು ಪ್ರಾಣ ಉಳಿಸಿದ್ದಾರೆ. ಸೋಮವಾರ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ಸಂತ್ರಸ್ತನ ಫೇಸ್‌ಬುಕ್

ಪೊಲೀಸರ ಸಮಯ ಪ್ರಜ್ಞೆ : ಆತ್ಮಹತ್ಯೆಗೆ ಬಲಿಯಾಗುತ್ತಿದ್ದ ಯುವಕ ಬಚಾವ್ Read More »

ಅಪರಿಚಿತ ಗಂಡಸಿನ ಕೊಳೆತ ಶವ ನೀರಿನ ಟ್ಯಾಂಕಿಯಲ್ಲಿ ಪತ್ತೆ

ಪುತ್ತೂರು: ಅಪರಿಚಿತ ವ್ಯಕ್ತಿಯ ಶವವೊಂದು ಗ್ರಾಪಂನ ನೀರು ಪೂರೈಕೆಯ ಸಿಮೆಂಟ್‍ ಟ್ಯಾಂಕಿನ ಒಳಗಡೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಡನ್ನೂರು ಗ್ರಾಮದ ತೋಟದಮೂಲೆ ಎಂಬಲ್ಲಿ ಗ್ರಾಪಂ ನೀರು ಸರಬರಾಜಿನ ಸಿಮೆಂಟ್ ಟ್ಯಾಂಕಿ ಒಳಗಡೆ ಶವ ಪತ್ತೆಯಾಗಿದ್ದು, ಪರಿಸರದಲ್ಲಿ ದುರ್ನಾತ ಬೀರುತ್ತಿರುವುದರಿಂದ ಸ್ಥಳೀಯರು ಟ್ಯಾಂಕಿಯನ್ನು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಟ್ಯಾಕಿನ ಮೇಲೆ ಕೇಸರಿ ಬಣ್ಣ ಲುಂಗಿಯೊಂದು ಪತ್ತೆಯಾಗಿದ್ದು, ಟ್ಯಾಂಕ್ ಸ್ವಚ್ಛ ಮಾಡಲು ಬಳಸುವ ಏಣಿ ನಾಪತ್ತೆಯಾಗಿದ್ದು ಸಂಶಯಕ್ಕೆ ಎಡೆಮಾಡಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿ

ಅಪರಿಚಿತ ಗಂಡಸಿನ ಕೊಳೆತ ಶವ ನೀರಿನ ಟ್ಯಾಂಕಿಯಲ್ಲಿ ಪತ್ತೆ Read More »

ಪಿಎಫ್ಐ ಸುಳ್ಯ ಕಚೇರಿ ಎನ್ಐಎ ವಶ | ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

ಸುಳ್ಯ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಸುಳ್ಯದ ಕಚೇರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ವಶಪಡಿಸಿಕೊಂಡಿದೆ. ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರುವ ತಾಹಿರಾ ಕಾಂಪ್ಲೆಕ್ಸಿನಲ್ಲಿ ಮೊದಲ ಮಹಡಿಯಲ್ಲಿ ಕಚೇರಿ ಇದೆ ಎಂದು ಹೇಳಲಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್.ಐ.ಎ. ಚುರುಕುಗೊಳಿಸಿದೆ. ಸುಳ್ಯದಲ್ಲಿರುವ ಪಿಎಫ್ಐ ಕಚೇರಿಯನ್ನು ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಕಚೇರಿಯಲ್ಲೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಮೂಲಗಳು

ಪಿಎಫ್ಐ ಸುಳ್ಯ ಕಚೇರಿ ಎನ್ಐಎ ವಶ | ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ Read More »

ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 6 ತಿಂಗಳು ಜೈಲು

ಮಂಗಳೂರು : ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಾ.27 ರಂದು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ. ಕಡಬ ಗ್ರಾಮದ ಲಿಗೋರಿ ಡಿಸೋಜ ಪುತ್ರ ವಿಲ್ಫ್ರೇಡ್ ಡಿಸೋಜ (34) ಬಂಧಿತ ಆರೋಪಿ. ಈತ ಪ್ರಸ್ತುತ ಮಂಗಳೂರು ಕುಲಶೇಖರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸಿರ್ಲಾ ಪಡ್ಪು ಹೆವೆನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಈತನ ವಿರುದ್ಧ conviction warrent ಹೊರಡಿಸಿದ ನಂತರ ಆತ ತಲೆಮರೆಸಿಕೊಂಡಿದ್ದ. ಇನ್ನು

ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 6 ತಿಂಗಳು ಜೈಲು Read More »

ಅಕ್ರಮ ಜಾನುವಾರು ಸಾಗಾಟ : ಆರೋಪಿ ಸಹಿತ ವಾಹನ ವಶಕ್ಕೆ, ಇಬ್ಬರು ಪರಾರಿ

ಬಂಟ್ವಾಳ : ಮಾ.26 ರಂದು ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ ವಾಹನದಲ್ಲಿದ್ದ ದನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.ಚಾಲಕ ಪ್ರವೀಣ್ ಪ್ರದೀಪ್ ಪೆರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳು ವಾಹನದಿಂದ ಜಿಗಿದು ಪರಾರಿಯಾಗಿದ್ದಾರೆ. ವಾಹನದಲ್ಲಿ ಹಿಂಸಾತ್ಮಕ ವಾಗಿ ಕಟ್ಟಿಹಾಕಲಾಗಿದ್ದ ಎರಡು ಕರು ಸಹಿತ ಪಿಕಪ್ ವಾಹನ ಸೇರಿ ಒಟ್ಟು ಸುಮಾರು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಟ್ವಾಳ ಗ್ರಾಮಾಂತರ

ಅಕ್ರಮ ಜಾನುವಾರು ಸಾಗಾಟ : ಆರೋಪಿ ಸಹಿತ ವಾಹನ ವಶಕ್ಕೆ, ಇಬ್ಬರು ಪರಾರಿ Read More »

error: Content is protected !!
Scroll to Top