ಅಪರಾಧ

ದಾವಣಗೆರೆಯಲ್ಲಿ ಬಿಎಂಡಬ್ಲ್ಯು ಕಾರು ಸಮೇತ ಬೆಳ್ಳಿ ವಶ

ನಟಿ ಶ್ರೀದೇವಿ ಪತಿ ಕಾರಿನಲ್ಲಿ ಬೆಳ್ಳಿ ಅಕ್ರಮ ಸಾಗಾಟ ದಾವಣಗೆರೆ : ಬಾಲಿವುಡ್‌ನ ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 66 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್‌ ಜಪ್ತಿ ಮಾಡಿದ್ದಾರೆ. ತಹಶೀಲ್ದಾರ್‌ ಡಾ.ಅಶ್ವತ್ಥ್‌ ತಪಾಸಣೆ ವೇಳೆ ಬಿಎಂಡಬ್ಲ್ಯು ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ ಬಾಕ್ಸ್​ಗಳು ಪತ್ತೆಯಾಗಿದ್ದು, ಇನ್ನಷ್ಟು ತಪಾಸಣೆ ನಡೆಸಿದಾಗ ಅದರೊಳಗೆ ಬೆಳ್ಳಿ ಸಾಮಾಗ್ರಿಗಳು ಸಿಕ್ಕಿವೆ. ಅವುಗಳ ಒಟ್ಟು ಮೌಲ್ಯ 39 ಲಕ್ಷ […]

ದಾವಣಗೆರೆಯಲ್ಲಿ ಬಿಎಂಡಬ್ಲ್ಯು ಕಾರು ಸಮೇತ ಬೆಳ್ಳಿ ವಶ Read More »

ನೈಜೀರಿಯಾದಲ್ಲಿ ಡಕಾಯಿತರ ದಾಳಿಯಿಂದ 46 ನಾಗರಿಕರ ಹತ್ಯೆ

ಎರಡು ದಿನ ನಿರಂತರ ದಾಳಿ ಲಾಗೋಸ್: ನೈಜೀರಿಯಾದ ಬೆನ್ಯೂ ರಾಜ್ಯದಲ್ಲಿ ಸಮುದಾಯವೊಂದರ ಮೇಲೆ ಶಸ್ತ್ರಸಜ್ಜಿತ ಡಕಾಯಿತರು ನಡೆಸಿದ ದಾಳಿಯಲ್ಲಿ ಕನಿಷ್ಠ 46 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.ರಾಜ್ಯದ ಉಮೊಗಿಡಿ ಸಮುದಾಯದಲ್ಲಿ ಮಂಗಳವಾರ ಮತ್ತು ಬುಧವಾರದ ನಡುವೆ ಸಂಭವಿಸಿದ ದಾಳಿಯಲ್ಲಿ ನೂರಾರು ನಿವಾಸಿಗಳು ಗಾಯಗೊಂಡಿದ್ದು, ಹಲವರು ತಮ್ಮ ಮನೆಗಳಿಂದ ಓಡಿಹೋದರು ಎಂದು ಸ್ಥಳೀಯ ಸರ್ಕಾರಿ ಅಧಿಕಾರಿ ಖಚಿತಪಡಿಸಿದ್ದಾರೆ. ದಾಳಿಕೋರರು ಬುಧವಾರ ಮನಬಂದಂತೆ ಗುಂಡು ಹಾರಿಸಿ 46 ಜನರನ್ನು ಕೊಂದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೈಜೀರಿಯಾದಲ್ಲಿ ಡಕಾಯಿತರ ದಾಳಿಯಿಂದ 46 ನಾಗರಿಕರ ಹತ್ಯೆ Read More »

ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ತುರ್ತು ದ್ವಾರ ತೆರೆಯಲು ಯತ್ನಿಸಿದ ಕುಡುಕ ಪ್ರಯಾಣಿಕ

ದೆಹಲಿ : ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೋರ್ವತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ 6E 308 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಅಮಲೇರಿದ ಸ್ಥಿತಿಯಲ್ಲಿ ತುರ್ತು ನಿರ್ಗಮನದ ದ್ವಾರ ತೆರೆಯಲು ಪ್ರಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿ ಕ್ಯಾಪ್ಟನ್‌ಗೆ ಎಚ್ಚರಿಕೆ ನೀಡಿ ಅವನನ್ನು ತಡೆದಿದ್ದಾರೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ ನಂತರ ಪ್ರಯಾಣಿಕನನ್ನು

ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ತುರ್ತು ದ್ವಾರ ತೆರೆಯಲು ಯತ್ನಿಸಿದ ಕುಡುಕ ಪ್ರಯಾಣಿಕ Read More »

ಚಲಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚಿ ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

ತಿರುವನಂತಪುರ : ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಬೆಂಕಿ ಹಚ್ಚಿ ಮೂವರು ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದ ಆರೋಪಿಗೆ ಏ. 07 ರಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶಾರುಖ್‌ ಸೈಫಿ(24) ಎಂಬವನೇ ಆರೋಪಿ.ಗಾಯಗೊಂಡಿರುವುದರಿಂದ ಆತನನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ಕಸ್ಟಡಿಗೆ ತೆಗೆದುಕೊಂಡ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಅವರು ಆಸ್ಪತ್ರೆಗೆ ಆಗಮಿಸಿ ಆರೋಪಿ ಶಾರುಖ್‌ ಸೈಫಿಯನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದಾರೆ. ಭಾನುವಾರ ತಡರಾತ್ರಿ ಕೇರಳದ ಕಣ್ಣೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು,

ಚಲಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚಿ ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ Read More »

ರೈಲ್ವೇ ಟ್ರ್ಯಾಕಿನಲ್ಲಿ ಪತ್ತೆಯಾಯ್ತು KSRTC ಚಾಲಕನ ಮೃತದೇಹ!

ಪುತ್ತೂರು: ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕಿನಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಕುಸುಮಾಧರ ಗೌಡ ಅಭೀರ (34 ವ.) ಎಂಬವರ ಮೃತದೇಹ ಇದಾಗಿದೆ. ಗುರುವಾರ ರಾತ್ರಿ ಕರ್ತವ್ಯದಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ಶುಕ್ರವಾರ ಬೆಳಿಗ್ಗೆ ಮೃತದೇಹ ರೈಲ್ವೇ ಟ್ರ್ಯಾಕಿನಲ್ಲಿ ಪತ್ತೆಯಾಗಿದೆ. ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕುಸುಮಾಧರ ಕೆಲಸ ನಿರ್ವಹಿಸುತ್ತಿದ್ದರು. 1 ವರ್ಷದ ಹಿಂದೆ ವಿವಾಹವಾಗಿದ್ದರು. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈಲ್ವೇ ಟ್ರ್ಯಾಕಿನಲ್ಲಿ ಪತ್ತೆಯಾಯ್ತು KSRTC ಚಾಲಕನ ಮೃತದೇಹ! Read More »

ಶಾಸಕ ಸಂಜೀವ ಮಠಂದೂರು ಅವರ ಮಾನಹಾನಿ | ಕ್ರಮಕೈಗೊಳ್ಳಲು ಶಾಸಕರ ಆಪ್ತ ಸಹಾಯಕರಿಂದ ದೂರು

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರನ್ನು ಹೋಲುವ ಫೊಟೋಗಳನ್ನು ಮಹಿಳೆಯ ಫೊಟೊದೊಂದಿಗೆ ಜೋಡಣೆ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಬಗ್ಗೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರ ಆಪ್ತ ಸಹಾಯಕ ವಸಂತ್ ಎಸ್. ದೂರಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗಕ್ಕೆ ನೀಡಿರುವ ದೂರಿನಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಅವರ ಫೊಟೋವನ್ನು ಮಹಿಳೆಯೊಬ್ಬರ ಫೊಟೋದೊಂದಿಗೆ ಎಡಿಟ್

ಶಾಸಕ ಸಂಜೀವ ಮಠಂದೂರು ಅವರ ಮಾನಹಾನಿ | ಕ್ರಮಕೈಗೊಳ್ಳಲು ಶಾಸಕರ ಆಪ್ತ ಸಹಾಯಕರಿಂದ ದೂರು Read More »

ಎಡಿಟ್ ಫೊಟೋ ವೈರಲ್ | ಠಾಣೆ ಮೆಟ್ಟಿಲೇರಿದ ಸಂತ್ರಸ್ತ ಮಹಿಳೆ

ಪುತ್ತೂರು: ಜನಪ್ರತಿನಿಧಿಯವರ ಫೊಟೋದೊಂದಿಗೆ ತನ್ನ ಫೊಟೋವನ್ನು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಫೊಟೋ ಎಡಿಟ್ ಮಾಡಿ, ವೈರಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಖಾಸಗಿ ಫೊಟೋವನ್ನು ಎಡಿಟ್ ಮಾಡಿ, ಜನಪ್ರತಿನಿಧಿಯೊಂದಿಗೆ ಜೋಡಿಸಲಾಗಿದೆ. ಈ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ದೌರ್ಜನ್ಯ ನಡೆಸಲಾಗುತ್ತಿದೆ. ಓರ್ವ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಸರಿಯಲ್ಲ. ಇಂತಹ ಘಟನೆಯಿಂದಾಗಿ ತನಗೆ ಹಾಗೂ ತನ್ನ ಮನೆಮಂದಿಗೆ ತೀವ್ರ

ಎಡಿಟ್ ಫೊಟೋ ವೈರಲ್ | ಠಾಣೆ ಮೆಟ್ಟಿಲೇರಿದ ಸಂತ್ರಸ್ತ ಮಹಿಳೆ Read More »

ರಾಜಕಾರಣಿಯೊಬ್ಬರೊಂದಿಗೆ ಮಹಿಳೆಯ ಅಶ್ಲೀಲ ರೀತಿಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ | ಮಹಿಳೆಯಿಂದ ಉಪ್ಪಿನಂಗಡಿ ಠಾಣೆಗೆ ದೂರು

ಉಪ್ಪಿನಂಗಡಿ : ಪ್ರತಿಷ್ಠಿತ ರಾಜಕಾರಣಿಯೊಬ್ಬರ ಫೋಟೊವನ್ನು ಮಹಿಳೆಯೊಂದಿಗೆ ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಈ ಕುರಿತು ಮಹಿಳೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನೆಕ್ಕಿಲಾಡಿಯ ಮಹಿಳೆಯೋರ್ವರು ದೂರು ನೀಡಿದ್ದಾರೆ. ದೂರಿನಲ್ಲಿ – ತನ್ನ ಫೋಟೊವನ್ನು ವಿಭಿನ್ನ ರೀತಿಯಲ್ಲಿ ಅಸಹ್ಯಕರವಾಗಿ, ಅಶ್ಲೀಲವಾಗಿ ಪ್ರತಿಷ್ಠಿತ ರಾಜಾಕರಣಿ ಜತೆಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಈ ರೀತಿ ಮಾಡಿ ತನ್ನ ಘನತೆಗೆ ಕುಂದುಂಟು ಮಾಡಿರುವ ಅಪರಿಚಿತ

ರಾಜಕಾರಣಿಯೊಬ್ಬರೊಂದಿಗೆ ಮಹಿಳೆಯ ಅಶ್ಲೀಲ ರೀತಿಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ | ಮಹಿಳೆಯಿಂದ ಉಪ್ಪಿನಂಗಡಿ ಠಾಣೆಗೆ ದೂರು Read More »

ಕ್ರಿಕೆಟಿಗ ಪ್ರಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಯೂ ಟ್ಯೂಬರ್‌ ಸಪ್ನಾ ಗಿಲ್‌

ಮುಂಬಯಿಯ ಹೋಟೆಲಲ್ಲಿ ಕಿತ್ತಾಡಿಕೊಂಡ ಘಟನೆ ಮುಂಬಯಿ : ಯೂ ಟ್ಯೂಬರ್‌ ಸಪ್ನಾ ಗಿಲ್ ಎಂಬಾಕೆ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಐಪಿಸಿಯ ಸೆಕ್ಷನ್ 354, 509, 324ರ ಅಡಿಯಲ್ಲಿ ಕ್ರಿಕೆಟಿಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಪ್ನಾ ಗಿಲ್ ಪೃಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್ ವಿಚಾರಣೆ ನಡೆಸುವುದಾಗಿ ತಿಳಿಸಿದೆ.ಕಿರುಕುಳ

ಕ್ರಿಕೆಟಿಗ ಪ್ರಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಯೂ ಟ್ಯೂಬರ್‌ ಸಪ್ನಾ ಗಿಲ್‌ Read More »

ಚುಂಬನ ಪ್ರಕರಣದಲ್ಲಿ 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ನಿರ್ದೋಷಿ

2007ರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಮುಂಬಯಿ : ಸಾರ್ವಜನಿಕ ವೇದಿಕೆಯಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ ಅವರನ್ನು ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ 16 ವರ್ಷದ ಬಳಿಕ ನಿರ್ದೋಷಿ ಎಂದು ಸಾಬೀತಾಗಿದ್ದಾರೆ.ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ನಿರ್ದೋಷಿ ಎಂದು ಹೇಳಿ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪನ್ನು ಮುಂಬಯಿಯ ಸೆಷನ್ಸ್‌ ಕೋರ್ಟ್‌ ಎತ್ತಿ ಹಿಡಿದಿದೆ.2007ರಲ್ಲಿ ರಾಜಸ್ಥಾನದಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟ ರಿವರ್ಡ್‌ ಗೇರ್‌ ಅವರು ಶಿಲ್ಪಾ ಶೆಟ್ಟಿಯನ್ನು ಬರಸೆಳೆದು ಅಪ್ಪಿ ಹಿಡಿದು ಚುಂಬಿಸಿದ್ದರು.

ಚುಂಬನ ಪ್ರಕರಣದಲ್ಲಿ 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ನಿರ್ದೋಷಿ Read More »

error: Content is protected !!
Scroll to Top