ಅಪರಾಧ

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಭೇಟಿಯಾದ ಜಗದೀಶ್ ಕಾರಂತ್

ಪುತ್ತೂರು : ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರನ್ನು ಬುಧವಾರ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಕಾರ್ಯಕರ್ತರ ಜೊತೆ ಮಾತನಾಡಿದ ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಈ ಸಂದರ್ಭ ಪ್ರಮುಖರು ಉಪಸ್ಥಿತರಿದ್ದರು.

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಭೇಟಿಯಾದ ಜಗದೀಶ್ ಕಾರಂತ್ Read More »

ಕಲ್ಲಾರೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ

ಪುತ್ತೂರು: ಕಲ್ಲಾರೆ ಕಟ್ಟಡವೊಂದರ ಬಳಿ ವ್ಯಕ್ತಿಯೊಬ್ಬರ ಶವ ಬುಧವಾರ ಪತ್ತೆಯಾಗಿದೆ. ಉಪ್ಪಿನಂಗಡಿ ಮೂಲದ, ಗುಜರಿ ಹೆಕ್ಕುತ್ತಿದ್ದ ಮಂಜುನಾಥ ಮೃತಪಟ್ಟ ರೀತಿಯಲ್ಲಿ ಪತ್ತೆಯಾದವರು. ಮಂಜುನಾಥ್ ಅವರು ನಿತ್ಯ ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದರು. ಕಲ್ಲಾರೆ ಕಟ್ಟಡವೊಂದರ ಬಳಿ ಅವರು ಮಲಗುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಪಕ್ಷಪಾತಕ್ಕೀಡಾಗಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಕೆಗೊಂಡ ಬಳಿಕ ಮತ್ತೆ ಅದೇ ಕಾಯಕ ಮಾಡುತ್ತಿದ್ದರು. ಇದೀಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಕಲ್ಲಾರೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ Read More »

ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶ

ವಿಟ್ಲ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರಿಗೊಪ್ಪಿಸಿ ಎರಡು ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ. ಕಂಬಳ ಕೋಣ ಎಂದು ನೆಪವೊಡ್ಡಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಿಕಪ್ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶ Read More »

ಪೊಲೀಸ್ ದೌರ್ಜನ್ಯ: ಯುವಕರಿಗೆ ಧೈರ್ಯ ತುಂಬಿದ ಕುಂಟಾರು ರವೀಶ ತಂತ್ರಿ

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಭಾನುವಾರ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಭೇಟಿಯಾಗಿ ಧೈರ್ಯ ತುಂಬಿದರು. ಬ್ಯಾನರ್ ಪ್ರಕರಣದಲ್ಲಿ ಪೊಲೀಸರ ಬಂಧಿಯಾಗಿ ಹಲ್ಲೆಗೊಳಗಾದ ಯುವಕರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಭೇಟಿಯಾದರು. ಪ್ರಮುಖರು ಉಪಸ್ಥಿತರಿದ್ದರು.

ಪೊಲೀಸ್ ದೌರ್ಜನ್ಯ: ಯುವಕರಿಗೆ ಧೈರ್ಯ ತುಂಬಿದ ಕುಂಟಾರು ರವೀಶ ತಂತ್ರಿ Read More »

ಕುಲ್ಕುಂದ ನಿವಾಸಿ ಕಡಬದಲ್ಲಿ ಮೃತ್ಯು

ಕಡಬ: ಕುಲ್ಕುಂದ ನಿವಾಸಿಯೊಬ್ಬರು ಕಡಬದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲೊನಿ ನಿವಾಸಿ ನರಸಿಂಹ (60) ಮೃತಪಟ್ಟವರಾಗಿದ್ದಾರೆ. ಮೃತರು ಸುಬ್ರಹ್ಮಣ್ಯ ಐನೆಕಿದು ಸೊಸೈಟಿಯಲ್ಲಿ ಗುಮಾಸ್ತರಾಗಿ ಕೆಲಸದಲ್ಲಿದ್ದವರು ಪ್ರಸ್ತುತ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿದ್ದರು. 15 ವರ್ಷದ ಹಿಂದೆ ಇವರು ಪಾರ್ಶ್ವವಾಯು ಪೀಡಿತರಾಗಿದ್ದರು. ಅಲ್ಲದೇ ಮೂರ್ಛೆರೋಗದ ಬಗ್ಗೆ ಮಾತ್ರೆಯನ್ನು ಸೇವಿಸುತ್ತಿದ್ದರು. ಇದರ ಜೊತೆಗೆ ಕುಡಿತದ ಚಟವನ್ನು ಹೊಂದಿದ್ದರು. ಅವರು ಬುಧವಾರ  ಕಡಬ ಪೇಟೆಯ ಹಳೇ ಪ್ರವಾಸಿ ಮಂದಿರದ ಕಟ್ಟಡದ ಬಳಿ ಬಿದ್ದುಕೊಂಡಿರುವುದನ್ನು ಪಕ್ಕದ ಬಾರ್

ಕುಲ್ಕುಂದ ನಿವಾಸಿ ಕಡಬದಲ್ಲಿ ಮೃತ್ಯು Read More »

ಹಿಂದೂ ಮುಖಂಡ ಅಜಿತ್ ರೈ ಹೊಸಮನೆಯನ್ನು ಹೊರದಬ್ಬಿದ ಕಾರ್ಯಕರ್ತರು

ಪುತ್ತೂರು : ಹಿಂದೂ ಮುಖಂಡ ಅಜಿತ್‌ ರೈ ಹೊಸಮನೆಯನ್ನು ಕಾರ್ಯಕರ್ತರು ಹೊರದೂಡಿದ ಘಟನೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಮೇ 19 ರಂದು ನಡೆದಿದೆ. ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್‌ ಪುತ್ತೂರಿಗೆ ಆಗಮಿಸಿ ಬ್ಯಾನರ್‌ ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯಕ್ಕೊಳಗಾಗಿ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭ ಅವರೊಂದಿಗೆ ಅರುಣ್ ಪುತ್ತಿಲ ಮತ್ತು ಅವರ ಬೆಂಬಲಿಗರು ಇದ್ದು, ಯತ್ನಾಳ್‌ ಗಾಯಾಳು ಕೊಠಡಿಗೆ ಹೋಗುವ ಸಂದರ್ಭ ಅವರ ಹಿಂದೆ ಅಜಿತ್‌

ಹಿಂದೂ ಮುಖಂಡ ಅಜಿತ್ ರೈ ಹೊಸಮನೆಯನ್ನು ಹೊರದಬ್ಬಿದ ಕಾರ್ಯಕರ್ತರು Read More »

ತಂದೆ-ಮಗ ಹೊಡೆದಾಟ | ತಂದೆ ಮೃತ್ಯು

ಪುತ್ತೂರು: ತಂದೆ –ಮಗನ ಹೊಡೆದಾಟದಲ್ಲಿ ಗಾಯಗೊಂಡು ತಂದೆ ಮೃತಪಟ್ಟ ಘಟನೆ ಕುಕ್ಕುಜಡ್ಕದಲ್ಲಿ ನಡೆದಿದೆ. ಕಿಟ್ಟು ಹಾಗೂ ಮಗ ಹರ್ಷಿತ್ ಹೊಡೆದಾಡಿಕೊಂಡಿದ್ದು, ಗಂಭೀರ ಗಾಯಗೊಂಡ ತಂದೆ ಕಿಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಳೆಯ ದ್ವೇಷದಿಂದ ಕಿಟ್ಟು ಅವರ ಎರಡನೇ ಹೆಂಡತಿ ಮಗ ಹರ್ಷಿತ್ ಅಡಿಕೆ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ. ಗಾಯಗೊಂಡ ಕಿಟ್ಟು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ

ತಂದೆ-ಮಗ ಹೊಡೆದಾಟ | ತಂದೆ ಮೃತ್ಯು Read More »

ಡಿವೈಎಸ್ಪಿ ಹುದ್ದೆಗೆ ಕಳಂಕ ತಂದ ಪುತ್ತೂರು ಡಿವೈಎಸ್ಪಿಯ ಅಮಾನತು ಮಾಡಿ

ಕಡಬ: ಪುತ್ತೂರು ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಹುದ್ದೆಯನ್ನು ಅರಿಯದ ಸಾಮಾನ್ಯ ವ್ಯಕ್ತಿಯಂತೆ ಹಲ್ಲೆ ನಡೆಸಿದ ಪುತ್ತೂರು ಡಿವೈಎಸ್ಪಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ವಿ.ಹಿಂ.ಪ. ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿ, ಇದೇ ಡಿವೈಎಸ್ಪಿ ಕೊಂಬಾರು ಆನೆ ದಾಳಿ ಪ್ರಕರಣದಲ್ಲಿ ಕೂಡ ತಾನೂ ಡಿವೈಎಸ್ಪಿ ಎಂಬುದನ್ನು ಮರೆತು ಅನಾಗರಿಕನಂತೆ ವರ್ತಿಸಿದ್ದಾರೆ. ಸಮಸ್ಯೆಗಳು ಬಂದಾಗ ಅದನ್ನು ಬಗೆಹರಿಸುವ ಬಗ್ಗೆ ಯೋಚಿಸದೆ ಒಟ್ಟಾರೆಯಾಗಿ ವರ್ತಿಸಿರುವುದು ಕಂಡು ಬಂದಿದೆ. ಸಾಮಾನ್ಯ ಜನರಿಗೆ ಕಾನೂನು

ಡಿವೈಎಸ್ಪಿ ಹುದ್ದೆಗೆ ಕಳಂಕ ತಂದ ಪುತ್ತೂರು ಡಿವೈಎಸ್ಪಿಯ ಅಮಾನತು ಮಾಡಿ Read More »

ಹೊಸ ಸರ್ಕಾರ ಬಂದಾಕ್ಷಣ ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಹೊಸ ಸರ್ಕಾರ ಬಂದ ತಕ್ಷಣ ಮುಂದಿನ‌ 5 ವರ್ಷ ಏನಾಗ್ತದೆ ಎಂಬುದಕ್ಕೆ ಸಾಕ್ಷಿ ಈ ಘಟನೆ. ಕಂಬಳದಲ್ಲಿ ಕೋಣಗಳ ಮೇಲೆ ಹೊಡೆಯಬಾರದು ಎಂದು ಹೇಳುತ್ತಾರೆ. ಅದಕ್ಕಿಂತಲೂ ಅಮಾನವೀಯವಾದ ಕೃತ್ಯ. ಆದ್ದರಿಂದ ಈ ಘಟನೆಗೆ ಕಾರಣರಾದ ಡಿವೈಎಸ್ಪಿಯನ್ನೇ ಅಮಾನತು ಮಾಡುವಂತೆ ಹಿಂದೂ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗ್ರಹಿಸಿದರು. ಗುರುವಾರ ಪುತ್ತೂರು ಮಹಾವೀರ ಆಸ್ಪತ್ರೆಗೆ ಆಗಮಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ದಾಖಲಾಗಿರುವ ಯುವಕರ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಬಂದು 2-3 ದಿನ ಆಗಿದೆಯಷ್ಟೇ.

ಹೊಸ ಸರ್ಕಾರ ಬಂದಾಕ್ಷಣ ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ: ಡಾ. ಕಲ್ಲಡ್ಕ ಪ್ರಭಾಕರ ಭಟ್ Read More »

ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಯ್ತು ಬಿಜೆಪಿ ಮುಖಂಡನ ಶವ!

ಸುಳ್ಯ: ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ನವೀನ್ ರೈ ಮೇನಾಲ ಅವರ ಮೃತದೇಹ ಸುಳ್ಯದ ಹೊಳೆಯಲ್ಲಿ ಪತ್ತೆಯಾಗಿದೆ. ಪಯಸ್ವಿನಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ. ಪಂಪ್ ರಿಪೇರಿಗೆ ತೆರಳಿದ್ದ ಅವರು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಯ್ತು ಬಿಜೆಪಿ ಮುಖಂಡನ ಶವ! Read More »

error: Content is protected !!
Scroll to Top