ಅಪರಾಧ

ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ | ಇಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್‍ನಿಂದ ತೀರ್ಪು ಪ್ರಕಟ

ಧರ್ಮಸ್ಥಳ : 11 ವರ್ಷಗಳ ಹಿಂದೆ ನಡೆದ ದ.ಕ.ಜಿಲ್ಲೆಯ ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯ (17) ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದ ತೀರ್ಪು ಇಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್‍ನಿಂದ ಪ್ರಕಟವಾಗಲಿದೆ. ಧರ್ಮಸ್ಥಳದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ ಉಜಿರೆ ಎಸ್‍ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು 2012 ಅಕ್ಟೋಬರ್ 9 ರಂದು ಕಾಲೇಜಿನಿಂದ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದರು. ಮರುದಿನ ರಾತ್ರಿ ಧರ್ಮಸ್ಥಳ ಮಣ್ಣಸಂಕ ಬಳಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಈ […]

ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ | ಇಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್‍ನಿಂದ ತೀರ್ಪು ಪ್ರಕಟ Read More »

ಪ್ರಿಯಕರನಿಗಾಗಿ 11 ತಿಂಗಳ ಮಗುವನ್ನು ಬಿಟ್ಟು ಬಂದ ಹುಬ್ಬಳಿ ಮಹಿಳೆ | ಜೋಡಿಗಾಗಿ ತಡರಾತ್ರಿ ಕೋಡಿಂಬಾಡಿಯಲ್ಲಿ ಪೊಲೀಸರಿಂದ ಹುಡುಕಾಟ

ಪುತ್ತೂರು: ಹುಬ್ಬಳ್ಳಿಯ ಮಹಿಳೆಯೋರ್ವರು ತನ್ನ 11 ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಪುತ್ತೂರಿನಲ್ಲಿರುವ ಪ್ರಯಕರನನ್ನು ಸೇರಿಕೊಂಡ ಘಟನೆ ತಡರಾತ್ರಿ ನಡೆದಿದ್ದು, ಬಳಿಕ ಮಹಿಳೆಯ ಮನೆಯವರು ಪುತ್ತೂರಿನಲ್ಲಿ ಮಹಿಳೆಗಾಗಿ ಹುಡುಕಾಟ ನಡೆಸಿರುವುದಾಗಿ ತಿಳಿದು ಬಂದಿದೆ. ಹುಬ್ಬಳ್ಳಿಯ ಮಹಿಳೆಯೋರ್ವರು ಅದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದು, ಆತ ಪುತ್ತೂರಿನ ಕೋಡಿಂಬಾಡಿಯಲ್ಲಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಾಹಿತಿ ತಿಳಿದ ಮಹಿಳೆ ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಳು.  ಪುತ್ತೂರಿನಲ್ಲಿ ತನ್ನ ಪ್ರಿಯಕರನ ಬಳಿ ಬಂದಿರಬಹುದು

ಪ್ರಿಯಕರನಿಗಾಗಿ 11 ತಿಂಗಳ ಮಗುವನ್ನು ಬಿಟ್ಟು ಬಂದ ಹುಬ್ಬಳಿ ಮಹಿಳೆ | ಜೋಡಿಗಾಗಿ ತಡರಾತ್ರಿ ಕೋಡಿಂಬಾಡಿಯಲ್ಲಿ ಪೊಲೀಸರಿಂದ ಹುಡುಕಾಟ Read More »

ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

ತೆಲಂಗಾಣ : ತೆಲಂಗಾಣದಲ್ಲಿ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಮಗು ಗಂಭೀರ ಗಾಯಗೊಂಡಿದೆ. ತೆಲಂಗಾಣದ ಕಾಮರೆಡ್ಡಿ ಗಾಂಧಾರಿ ಮಂಡಲದ ಮುಧೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಯಿ ದಾಳಿಯಿಂದ ಬಾಲಕನ ತಲೆ ಹಾಗೂ ಹೊಟ್ಟೆಗೆ ಗಾಯವಾಗಿದೆ. ಗ್ರಾಮದ ಫಂಕ್ಷನ್ ಹಾಲ್‍ನ ಹೊರಗಡೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದೆ. ಗಾಯಗೊಂಡು ನೋವಿನಿಂದ ನರಳುತ್ತಿದ್ದ ಬಾಲಕನನ್ನು ಕಂಡು ಸ್ಥಳೀಯರು ನಾಯಿಯಿಂದ ಬಿಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ Read More »

ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಪುತ್ತೂರು: ಕೊಕ್ಕಡದ ವಿದ್ಯಾರ್ಥಿನಿಯೋರ್ವಳು ಪುತ್ತೂರಿನ ಪಡೀಲ್‌ನಲ್ಲಿರುವ ಹಾಸ್ಟೇಲ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ. ಪುಷ್ಪ ದಂಪತಿ ಪುತ್ರಿ ರೇಖಾ (೧೫) ಆತ್ಮಹತ್ಯೆ ಮಾಡಿಕೊಂಡವರು. ಅವಳ ತಾಯಿ ಪುಷ್ಪ  ಅವರು  ಕಳೆದ ವರ್ಷ ನಿಧನರಾಗಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದಳು.ಅಲ್ಲದೆ ಆಕೆ ತಮ್ಮ ಸಂಬಂಧಿಕರ ಮನೆಯಿಂದ ಶಾಲೆ ಹೋಗುತ್ತಿದ್ದಳು. ಕೊಕ್ಕಡ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ಅತ್ತೆ ಒತ್ತಾಯದ

ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ Read More »

ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆ

ವಿಟ್ಲ: ಕೆಲಸಕ್ಕೆಂದು ತೆರಳಿದ ವಿಟ್ಲದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ನಡೆದಿದೆ. ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಶ್ರೀದೇವಿ (23) ನಾಪತ್ತೆಯಾದವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ವಲಯ ಸೇವಾ ಪ್ರತಿನಿಧಿಯಾಗಿರುವ ಶ್ರೀದೇವಿ ಜೂ.9 ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು ಸಂಜೆ ವರೆಗೂ ಬಾರದ ಹಿನ್ನಲೆಯಲ್ಲಿ ವಿಟ್ಲ ಪೇಟೆ, ಸಂಬಂಧಿಕರ ಮನೆ ಸಹಿತ ವಿವಿಧೆಡೆ ಹುಡುಕಾಟ ನಡೆಸಲಾಗಿತ್ತು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎಲ್ಲೂ ಕಂಡುಬರದ ಹಿನ್ನಲೆಯಲ್ಲಿ ವಿಟ್ಲ ಠಾಣೆಗೆ

ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆ Read More »

ಮಣಿಪುರ ಜನಾಂಗೀಯ ಸಂಘರ್ಷ | ಲೂಟಿ ಮಾಡಿದ ಶಸ್ತ್ರಾಸ್ತ್ರಗಳು ಸರಕಾರದ ವಶಕ್ಕೆ

ಗುವಾಹತಿ: ಮಣಿಪುರದಲ್ಲಿ ಕಳೆದ ತಿಂಗಳಿನಿಂದ ನಡೆದ ಜನಾಂಗೀಯ ಸಂಘರ್ಷದ ವೇಳೆ ಉದ್ರಿಕ್ತ ಗುಂಪು ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿದ್ದು, 11763 ಮದ್ದುಗುಂಡುಗಳು, 896 ಶಸ್ತ್ರಾಸ್ತ್ರಗಳು ಹಾಗೂ 200 ಬಾಂಬ್‍ಗಳನ್ನು ವಶಕ್ಕೆ ಪಡೆದಿವೆ. ರಾಜ್ಯ ಸರಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಈ ಮಾಹಿತಿ ನೀಡಿದ್ದು, ಈ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಲೂಟಿ ಮಾಡಿರುವ ನಿಖರ ಮಾಹಿತಿ ಇಲ್ಲದಿದ್ದರೂ ಗ್ರೆನೇಡ್ ಮತ್ತು ಸಣ್ಣಪುಟ್ಟ ಫಿರಂಗಿಗಳು ಸೇರಿದಂತೆ 50 ಸಾವಿರ ಮದ್ದು ಗುಂಡುಗಳು,

ಮಣಿಪುರ ಜನಾಂಗೀಯ ಸಂಘರ್ಷ | ಲೂಟಿ ಮಾಡಿದ ಶಸ್ತ್ರಾಸ್ತ್ರಗಳು ಸರಕಾರದ ವಶಕ್ಕೆ Read More »

ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ದ.ಕ.ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಗ್ರಕೂಳೂರು ಮಾಲಾಡಿ ಕೋರ್ಟ್ ಬಳಿ ನಿವಾಸಿ ಬಾಲಕೃಷ್ಣ (58) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಕರುಳು ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಪರ ಜಿಲ್ಲಾಧಿಕಾರಿಯ ಕಾರಿನ ಚಾಲಕರಾಗಿ ಕರ್ತವ್ಯ ಮಾಡುತ್ತಿದ್ದರು. ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರ ಪುತ್ರ ಚೇತನ್ ನೀಡಿದ ದೂರಿನಂತೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ನೇಣು ಬಿಗಿದು ಆತ್ಮಹತ್ಯೆ Read More »

ಯುವಕನಿಂದ ವಿದ್ಯಾರ್ಥಿನಿಗೆ ಕಿರುಕುಳ : ಯುವಕನನ್ನು ಕರೆದೊಯ್ದ ನಗರ ಠಾಣಾ ಪೊಲೀಸರು

ಪುತ್ತೂರು: ಯುವಕನೋರ್ವ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಘಟನೆ ಗುರುವಾರ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನೆ ಕುರಿತು ಪೊಲೀಸರು ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಯುವಕನಿಂದ ವಿದ್ಯಾರ್ಥಿನಿಗೆ ಕಿರುಕುಳ : ಯುವಕನನ್ನು ಕರೆದೊಯ್ದ ನಗರ ಠಾಣಾ ಪೊಲೀಸರು Read More »

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ | ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಪರಿಣಾಮ ಮೂವರು ಸಜೀವ ದಹನ

ಮಣಿಪುರ: ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದ್ದು, ಆಂಬುಲೆನ್ಸ್ ಒಂದಕ್ಕೆ ಬೆಂಕಿ ಹಚ್ಚಿದೆ ಪರಿಣಾಮ ಮೂವರು ಸಜೀವ ದಹನಗೊಂಡ ಘಟನೆ ನಡೆದಿದೆ. ಆಂಬುಲೆನ್ಸ್ ನಲ್ಲಿದ್ದ ಏಳು ವರ್ಷದ ಗಾಯಾಳು ಬಾಲಕ, ಆತನ ತಾಯಿ ಹಾಗೂ ಮತ್ತೊಬ್ಬ ಮಹಿಳೆ ಸೇರಿದಂತೆ ಮೂವರು ದಹನಗೊಂಡಿದ್ದಾರೆ. ಮಣಿಪುರದಲ್ಲಿ ಕಳೆದ ಹಲವು ದಿನಗಳಿಂದ ಮೀಸಲಾತಿ ಬಗ್ಗೆ ಘರ್ಷಣೆಗಳು ನಡೆಯುತ್ತಿದೆ.

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ | ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಪರಿಣಾಮ ಮೂವರು ಸಜೀವ ದಹನ Read More »

ಕೊಯಿಲ ಪರಿಸರದಲ್ಲಿ ಅಕ್ರಮ ಕಸಾಯಿಖಾನೆ : ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯ

ಕಡಬ: ತಾಲೂಕಿನ ಕೊÊಲ ಗ್ರಾಮದಲ್ಲಿ ಅಲ್ಲಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯಾಚರಿಸುತ್ತಿದ್ದು, ಪರಿಸರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿ..  ಗೋಳಿತ್ತಡ- ಏಣಿತಡ್ಕ ರಸ್ತೆಯ ತ್ರಿವೇಣಿ ಸರ್ಕಲ್ ಬಳಿ ದನದ ಕಾಲಿನ ಎಲುಬು ಮಂಗಳವಾರ ಪತ್ತೆಯಾಗಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿರುವುದಕ್ಕೆ ಪುಷ್ಠಿ ನೀಡಿದೆ. ಗ್ರಾಮದ ಕುದುಳೂರು, ಕೊರೆಪದವು, ಕಲಾಯಿ, ಕೊಯಿಲ ಗೇಟ್ ಬಳಿ, ಜನತಾ ಕಾಲೋನಿ, ಆತೂರು ಬೈಲು, ಪೂರಿಂಗ ಮುಂತಾದೆಡೆ ಅಕ್ರಮ ಕಸಾಯಿಖಾನೆಗಳು ಕಾಯಾಚರಿಸುತ್ತಿದ್ದು, ಅಕ್ರಮವಾಗಿ ಗೋವಧೆ ನಿರಂತರವಾಗಿ ನಡೆಯುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ರಾತ್ರೋ ರಾತ್ರಿ ಗೋವುಗಳನ್ನು

ಕೊಯಿಲ ಪರಿಸರದಲ್ಲಿ ಅಕ್ರಮ ಕಸಾಯಿಖಾನೆ : ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯ Read More »

error: Content is protected !!
Scroll to Top