ಅಪರಾಧ

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಂಚಿಕಾರ್ ಪೇಟೆಯ ಕೂಟೇಲು ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಸುಮಾರು 45 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪುರಸಭಾ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು ಬಂಟ್ವಾಳ ಪೇಟೆ ಕಡೆ ಹೋಗುತ್ತಿರುವ ಸಂದರ್ಭದಲ್ಲಿ ಕೂಟೇಲು ಸೇತುವೆ ಸಮೀಪದಲ್ಲಿ ಮಹಿಳೆಯ ಚಪ್ಪಲಿ ಕಂಡು ಬಂದ ಕಾರಣಕ್ಕಾಗಿ ನದಿಯಲ್ಲಿ ನೋಡಿದಾಗ ಮಹಿಳೆಯ ಮೃತದೇಹ ಕವಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತ ಮಹಿಳೆಯ ಬಗ್ಗೆ ಗುರುತು ಪತ್ತೆಗಾಗಿ […]

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ Read More »

ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ

ಕೌಕ್ರಾಡಿ: ಜಮೀನು ಖಾತೆ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟ ಕೌಕ್ರಾಡಿ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿ ಗ್ರಾಮದಲ್ಲಿ ಜಾಗದ 9/11 ಖಾತೆ  ಬದಲಾವಣೆಗೆ 2017 ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಆಗದ ಹಿನ್ನಲೆಯಲ್ಲಿ 2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದ್ದರು. ಆದರೂ ಬದಲಾವಣೆ ಆಗಿರಲಿಲ್ಲ. ಗ್ರಾಪಂ ಪಿಡಿಒ ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ Read More »

ಕೌಕ್ರಾಡಿ ಗ್ರಾಪಂ ಪಿಡಿಒ ವಿರುದ್ಧ ದೂರು ಹಿನ್ನಲೆ | ಲೋಕಾಯುಕ್ತ ಪೊಲೀಸರಿಂದ ದಾಳಿ

ಪುತ್ತೂರು: ಗ್ರಾಪಂ ಒಂದರ ಪಿಡಿಒ ವಿರುದ್ಧ ದೂರು ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸಿದ ಘಟನೆ ಗುರುವಾರ ನಡೆದಿದೆ. ಕೌಕ್ರಾಡಿ ಗ್ರಾಪಂಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು,ಗ್ರಾಪಂ ಕಚೇರಿಯಲ್ಲೇ ಪಿಡಿಒ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ

ಕೌಕ್ರಾಡಿ ಗ್ರಾಪಂ ಪಿಡಿಒ ವಿರುದ್ಧ ದೂರು ಹಿನ್ನಲೆ | ಲೋಕಾಯುಕ್ತ ಪೊಲೀಸರಿಂದ ದಾಳಿ Read More »

ನೆಹರುನಗರ ನಿವಾಸಿ ವಸಂತ ಪ್ರಭು ಆತ್ಮಹತ್ಯೆ

ಪುತ್ತೂರು: ನೆಹರೂನಗರ ನಿವಾಸಿ ವಸಂತ ಪ್ರಭು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಮೃತರಿಗೆ ಪತ್ನಿ ಇದ್ದಾರೆ.

ನೆಹರುನಗರ ನಿವಾಸಿ ವಸಂತ ಪ್ರಭು ಆತ್ಮಹತ್ಯೆ Read More »

ವಾಟ್ಸ್ ಪ್ ಮೂಲಕ ವಿದ್ಯಾರ್ಥಿನಿಗೆ ಪ್ರೀತಿಯ ಸಂದೇಶ | ಇಬ್ಬರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದ ಪೊಲೀಸರು

ಪುತ್ತೂರು: ವಿದ್ಯಾರ್ಥಿಗಳಿಬ್ಬರು ವಾಟ್ಸ್ ಪ್ ಮೂಲಕ ಕಾಲೇಜೊಂದರ ವಿದ್ಯಾರ್ಥಿನಿಗೆ ಪ್ರೀತಿಯ ಸಂದೇಶ ಕಳುಹಿಸಿದ ವಿಷಯಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸರು ವಿದ್ಯಾರ್ಥಿಗಳಿಬ್ಬರನ್ನು ಬಂಧಿಸಿದ್ದಾರೆ. ಪಡ್ನೂರು ಮೂಲಕ ವಿದ್ಯಾರ್ಥಿಗಳಿಬ್ಬರು ಈ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಇಬ್ಬರನ್ನು ಠಾಣೆಗೆ ಕರೊದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ವಾಟ್ಸ್ ಪ್ ಮೂಲಕ ವಿದ್ಯಾರ್ಥಿನಿಗೆ ಪ್ರೀತಿಯ ಸಂದೇಶ | ಇಬ್ಬರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದ ಪೊಲೀಸರು Read More »

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿ ಬಿತ್ತರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆ | ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರು

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರ ಪೊಲೀಸ್ ಇಲಾಖೆ ಆದೇಶ ನೀಡಿದೆ. ಈಗಾಗಲೇ ಜಗತ್ತಿನಾದ್ಯಂತ ಹಲವಾರು ಸಾಮಾಜಿಕ ಜಾಲತಾಣಗಳಿದ್ದು, ಅವುಗಳ ಪೈಕಿ ವಾಟ್ಸಪ್, ಫೇಸ್ ಬುಕ್, ಇನ್ ಸ್ಟಾ ಗ್ರಾಂ, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ತೆರೆದು ತಮಗೆ ಬೇಕಾದಂತೆ ಸುಳ್ಳು ಸುದ್ದಿಗಳನ್ನು ಹರಿಯಬಿಟ್ಟು ಸಮಾಜದಲ್ಲಿ ಗೊಂದಲ, ದ್ವೇಷ ಉಂಟ ಮಾಡುವುದು ಒಂದೆಡೆಯಾದರೆ, ಇನ್ನೊಂದೆಡೆ ಸಾರ್ವಜನಿಕರಿಗೆ ಉಪಯೋಗವಾಗುವಂತ ಒಳ್ಳೆಯ ಸುದ್ಧಿಗಳನ್ನು ಬಿತ್ತರಿಸುವವರಿದ್ದಾರೆ. ಇನ್ನು ಮುಂದೆ ಪೊಲೀಸ್ ಇಲಾಖೆ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿ ಬಿತ್ತರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆ | ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರು Read More »

ಬ್ಯಾನರ್ ವಿಚಾರದಲ್ಲಿ ಯುವಕರ ಮೇಲೆ ಪೊಲೀಸ್  ದೌರ್ಜನ್ಯ | ಡಿವೈಎಸ್‍ ಪಿ ಡಾ.ವೀರಯ್ಯ ಹೀರೇಮಠ ನ್ಯಾಯಾಲಯಕ್ಕೆ ಶರಣು | ಜಾಮೀನಿನ ಮೇಲೆ ಬಿಡುಗಡೆ

ಪುತ್ತೂರು: ಚುನಾವಣೆ ಸಂದರ್ಭ ನಡೆದ  ಬ್ಯಾನರ್ ಪ್ರಕರಣದಲ್ಲಿ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ಎದುರಿಸುತ್ತಿರುವ ಡಿವೈಎಸ್‍ಪಿ ಡಾ.ವೀರಯ್ಯ ಹಿರೇಮಠ ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣಾ ಎಸ್‍ಐ ಶ್ರೀನಾಥ್ ರೆಡ್ಡಿ ಮತ್ತು ಕಾನ್‍ಸ್ಟೇಬಲ್ ಹರ್ಷಿತ್ ಅವರನ್ನು ಸೇವೆಯಿಂದ ಈಗಾಗಲೇ ಅಮಾನತುಗೊಳಿಸಲಾಗಿದೆ. ವಿಧಾನಸಭಾ ಚುನಾವಣೆ ಬಳಿಕ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನೊಳಗೊಂಡ ಶ್ರದ್ಧಾಂಜಲಿ ಬರಹದೊಂದಿಗೆ ಬ್ಯಾನರ್ ಅಳವಡಿಸಿ, 

ಬ್ಯಾನರ್ ವಿಚಾರದಲ್ಲಿ ಯುವಕರ ಮೇಲೆ ಪೊಲೀಸ್  ದೌರ್ಜನ್ಯ | ಡಿವೈಎಸ್‍ ಪಿ ಡಾ.ವೀರಯ್ಯ ಹೀರೇಮಠ ನ್ಯಾಯಾಲಯಕ್ಕೆ ಶರಣು | ಜಾಮೀನಿನ ಮೇಲೆ ಬಿಡುಗಡೆ Read More »

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ಲಂಚ ಸ್ವೀಕಾರ ವರದಿ ಪ್ರಕಟ : ಹೊರಗುತ್ತಿಗೆ ನೌಕರರಿಂದ ಮುಷ್ಕರ

ಪುತ್ತೂರು: ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಲಂಚ ಕೇಳುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಸರಕಾರಿ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿಗಳು ಶನಿವಾರ ದಿಢೀರ್ ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ ಮುಷ್ಕರ ನಡೆಸಿರುವ ಘಟನೆ ನಡೆದಿದೆ. ಮುಷ್ಕರದ ಪರಿಣಾಮ ಮರಣೋತ್ತರ ಪರೀಕ್ಷೆಗೆ ಬಂದ ಉಪ್ಪಿನಂಗಡಿ ಹಾಗೂ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎರಡು ಶವಗಳು ಮೂರು ಗಂಟೆಗೂ ಅಧಿಕ ಕಾಲ ಶವಾಗಾರದಲ್ಲಿ ಶವ ಪರೀಕ್ಷೆಗಾಗಿ ಕಾಯುವ ಪರಿಸ್ಥಿತಿ ಉಂಟಾಯಿತು. ಮೃತಪಟ್ಟವರ ಕುಟುಂಬಸ್ಥರು ಸೇರಿದಂತೆ ಆಪ್ತರಿಗೆ ಈ ಘಟನೆ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ಲಂಚ ಸ್ವೀಕಾರ ವರದಿ ಪ್ರಕಟ : ಹೊರಗುತ್ತಿಗೆ ನೌಕರರಿಂದ ಮುಷ್ಕರ Read More »

ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ನಿರ್ದೋಷಿ | ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ತೀರ್ಪು

ಧರ್ಮಸ್ಥಳ: ಧರ್ಮಸ್ಥಳ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿಚಾರಣೆಯಲ್ಲಿರುವ ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದಿಂದ ಖುಲಾಸೆ ಮಾಡಿದೆ. ಸಂತೋಷ್ ರಾವ್ ವಿರುದ್ಧ ಸಲ್ಲಿಕೆಯಾಗಿರುವ ಸಾಕ್ಷ್ಯಾಧ್ಯಾರಗಳ ಕೊರತೆ ಹಿನ್ನಲೆಯಲ್ಲಿ ಆರೋಪಿಯನ್ನು ದೋಷಮುಕ್ತಿಗೊಳಿಸಲಾಗಿದೆ. ಈ ಕುರಿತು ನ್ಯಾಯಮೂರ್ತಿ ಸಿ.ಬಿ.ಸಂತೋಷ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ ಉಜಿರೆ ಎಸ್‍ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು

ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ನಿರ್ದೋಷಿ | ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ತೀರ್ಪು Read More »

ಬಾಲಕಿಯರಿಗೆ ಕಿರುಕುಳ | ಮದ್ರಸಾ ಶಿಕ್ಷಕನ ಬಂಧನ

ಕಾಸರಗೋಡು: ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪಿ ಉಪ್ಪಿನಂಗಡಿ ಮೂಲದ ಮದ್ರಸಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಳಂತಿಲ ಹೌಸ್ ನಿವಾಸಿ ಅಬ್ದುಲ್ ಹಮೀದ್ (55) ಬಂಧಿತ ಆರೋಪಿ. ಕಾಸರಗೋಡಿನಲ್ಲಿ ಮದ್ರಸಾ ಶಿಕ್ಷಕನಾಗಿದ್ದ ಆರೋಪಿ 7-8 ನೇ ತರಗತಿ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಆದೂರು ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಾಲಕಿಯರಿಗೆ ಕಿರುಕುಳ | ಮದ್ರಸಾ ಶಿಕ್ಷಕನ ಬಂಧನ Read More »

error: Content is protected !!
Scroll to Top