ಅಪರಾಧ

ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ತನಿಖೆ ಕೈಗೆತ್ತಿಕೊಂಡ ಎನ್‍ ಐಎ ತಂಡ ಮಂಗಳೂರಿಗೆ

ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎನ್‌ಐಎ ಅಧಿಕಾರಿಗಳ ತಂಡ ಮಂಗಳೂರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಡಿಎಸ್ಪಿ ಪವನ್ ಕುಮಾರ್ ನೇತೃತ್ವದ ಎನ್‌ಐಎ ತಂಡ ನಡೆಸುತ್ತಿದೆ. ಅದರಂತೆ ಇಂದು ಬೆಂಗಳೂರಿನಿಂದ ಆಗಮಿಸಿದ ತಂಡ ಮಂಗಳೂರು ಸಿಸಿಬಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿವೆ.

ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ತನಿಖೆ ಕೈಗೆತ್ತಿಕೊಂಡ ಎನ್‍ ಐಎ ತಂಡ ಮಂಗಳೂರಿಗೆ Read More »

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕ ಮೃತ್ಯು

ಮಂಗಳೂರು: ನಗರದ ಯೆಯ್ಯಾಡಿಯ ಬಾ‌ರ್ ಒಂದರಲ್ಲಿ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ (32) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಜೂ,6 ರಂದು ಎರಡು ಗುಂಪುಗಳ ಮಧ್ಯೆ ಜಗಳ ಉಂಟಾಗಿ ವೇಳೆಗೆ ಚೂರಿ ಇರಿತವಾಗಿತ್ತು. ಆರೋಪಿಗಳು ಮೃತಪಟ್ಟ ಯುವಕ ಕೌಶಿಕ್ ಪರಿಚಿತರೇ ಆಗಿದ್ದರು. ಒಂದು ತಿಂಗಳ ಹಿಂದೆ ಇವರ ನಡುವೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಚಾರದಲ್ಲಿ ಜೂನ್ 6ರಂದು ಯೆಯ್ಯಾಡಿಯ ಬಾರ್‌ನಲ್ಲಿದ್ದಾಗ ಪರಸ್ಪರ ಬೈದಾಡಿಕೊಂಡಿದ್ದರು. ಇದೇ ವೇಳೆ ಬಿಜೈ ನಿವಾಸಿಗಳಾದ ಬ್ರಿಜೇಶ್ ಮತ್ತು ಗಣೇಶ್

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕ ಮೃತ್ಯು Read More »

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು

ಮಧ್ಯರಾತ್ರಿ ಹಟ್ಟಿಯಲ್ಲಿದ್ದ ಹಸುವಿಗೆ ಹಿಂಸೆ ಬೆಂಗಳೂರು: ಬೆಂಗಳೂರು ಬಳಿಕ ಇದೀಗ ಬಾಗಲಕೋಟೆ ಜಿಲ್ಲೆಯಲ್ಲೂ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಸಂಭವಿಸಿದೆ. ಕುಳಗೇರಿ ಕ್ರಾಸ್‌ ಬಳಿ ಮನೆಯ ಹಟ್ಟಿಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ದುರುಳರು ವಿಕೃತಿ ಮೆರೆದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕುಳಗೇರಿ ಗ್ರಾಮದ ಭರಮಪ್ಪ ಕುರಿ ಎಂಬವರು ಸಾಕಿರುವ ಹಸುವಿನ ಕೆಚ್ಚಲನ್ನು ದುರುಳರು ಶುಕ್ರವಾರ ಕತ್ತರಿಸಿದ್ದಾರೆ. ಮಧ್ಯರಾತ್ರಿ ಹಸುವಿಗೆ ಮೇವು ಹಾಕಿ ಮನೆಯವರು ತೆರಳಿದ್ದಾರೆ. ಬಳಿಕ ಈ ಕೃತ್ಯ ಎಸಗಿದ್ದಾರೆ. ಹಸುವಿನ ಕೆಚ್ಚಲಿನಿಂದ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು Read More »

ರಂಜಿತಾ ಸಾವನ್ನು ಅಣಕಿಸಿದ್ದ ಡೆಪ್ಯುಟಿ ತಹಸೀಲ್ದಾರ್ ಅಮಾನತು

ವಿಮಾನ ದುರಂತದಲ್ಲಿ ಸಾವಿಗೀಡಾದ ರಂಜಿತಾ ಬಗ್ಗೆ ವ್ಯಂಗ್ಯವಾಗಿ ಕಮೆಂಟ್‌ ಕಾಸರಗೋಡು: ಅಹಮದಾಬಾದ್‌ ವಿಮಾನ ದುರಂತದಲ್ಲಿ ಕೇರಳದ ನರ್ಸ್‌ ರಂಜಿತಾ ಅವರ ಸಾವನ್ನು ವ್ಯಂಗ್ಯಮಾಡಿ ಅಣಕಿಸಿದ್ದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ಡೆಪ್ಯುಟಿ ತಹಸೀಲ್ದಾರ್ ಎ.ಪವಿತ್ರನ್ ಅವರನ್ನು ಕೇರಳ ಸರ್ಕಾರ ಅಮಾನತು ಮಾಡಿದೆ. ಕೇರಳ ಸರ್ಕಾರಕ್ಕೆ ರಜೆ ಹಾಕಿ ಹೋಗಿದ್ದಕ್ಕೆ ರಂಜಿತಾಗೆ ಸಾವು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪವಿತ್ರನ್ ವ್ಯಂಗ್ಯವಾಗಿ ಕಮೆಂಟ್ ಹಾಕಿದ್ದರು. ಇನ್ನೊಂದು ಪೋಸ್ಟ್‌ ಮಾಡಿ ಆಕೆ ಇನ್ನೂ ಎತ್ತರಕ್ಕೇರಲಿ ಎಂದು ಪವಿತ್ರನ್‌ ಕಮೆಂಟ್‌ ಮಾಡಿದ್ದರು. ಪವಿತ್ರನ್‌

ರಂಜಿತಾ ಸಾವನ್ನು ಅಣಕಿಸಿದ್ದ ಡೆಪ್ಯುಟಿ ತಹಸೀಲ್ದಾರ್ ಅಮಾನತು Read More »

ದೈವ ನರ್ತಕನ ಹತ್ಯೆ : ಆರೋಪಿ ಚಿದಾನಂದ ಬಂಧನ

ಮುಳ್ಳೇರಿಯ: ಅದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ಕಲಾವಿದ ಟಿ. ಸತೀಶನ್ ಯಾನೆ ಬಿಜು (46) ಅವರ ಸಾವು ಕೊಲೆಯೆಂದು ತನಿಖೆಯಲ್ಲಿ ತಿಳಿದುಬಂದಿದ್ದು, ಆರೋಪಿಯಾದ ಸ್ನೇಹಿತ ಚಿದಾನಂದನನ್ನು (32) ಪೊಲೀಸರು ಬಂಧಿಸಿದ್ದಾರೆ. ಚೋಮಣ್ಣ ಎಂಬವರ ಮನೆಯಲ್ಲಿ ಜೂ.9 ರಂದು ಚಿದಾನಂದ ಹಾಗೂ ಸತೀಶನ್‍ ಇಬ್ಬರು ಮದ್ಯ ಸೇವಿಸುತ್ತಿದ್ದರು. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಈ ಸಂದರ್ಭ ಚಿದಾನಂದ ಸತೀಶನ್ ಅವರನ್ನು ಕೆಳಗೆ ತಳ್ಳಿದ್ದಾನೆ. ಸತೀಶನ್‍ ತಲೆಗೆ ಗಾಯವಾಗಿದೆ.  ಸತೀಶನ್‍ ಮನೆಗೆ

ದೈವ ನರ್ತಕನ ಹತ್ಯೆ : ಆರೋಪಿ ಚಿದಾನಂದ ಬಂಧನ Read More »

ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ : ತುರ್ತು ಭೂ ಸ್ಪರ್ಶ

ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ನವದೆಹಲಿ : ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಇನ್ನೂ ದೇಶ ಮಮ್ಮಲ ಮರುಗುತ್ತಾ ಇರುವಾಗಲೇ ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.ಥಾಯ್ಲೆಂಡ್‌ನಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದ್ದು, ಈ ಕಾರಣದಿಂದ ತಕ್ಷಣ ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದೆ ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಹೇಳಿದ್ದಾರೆ. ಇದೀಗ ವಿಮಾನ AI 379 ಲ್ಯಾಂಡ್ ಆಗಿದ್ದು, ಹಾರಾಟ

ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ : ತುರ್ತು ಭೂ ಸ್ಪರ್ಶ Read More »

ಅಶ್ರಫ್‌, ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣಗಳ ಎನ್‌ಐಎ ತನಿಖೆ?

ಎನ್‌ಐಎಗೊಪ್ಪಿಸುವ ಕುರಿತು ಸ್ಪೀಕರ್‌ ಯು.ಟಿ.ಖಾದರ್‌ ಮಾತುಕತೆ ಮಂಗಳೂರು : ಮಂಗಳೂರು ಸಮೀಪ ಕುಡುಪುವಿನಲ್ಲಿ ನಡೆದ ಕೇರಳ ವಯನಾಡು ಮೂಲದ ಅಶ್ರಫ್ ಗುಂಪು ಹತ್ಯೆ ಹಾಗೂ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹಿಮಾನ್‌ ಹತ್ಯೆ ಪ್ರಕರಣಗಳ ತನಿಖೆಯನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯನ್ನು ಎನ್‌ಐಎ ತನಿಖೆಗೆ ಕೇಂದ್ರ ಸರ್ಕಾರ ಒಪ್ಪಿಸಿದ ಬಳಿಕ ಅಶ್ರಫ್‌ ಮತ್ತು ಅಬ್ದುಲ್‌ ರಹಿಮಾನ್‌ ತನಿಖೆಯನ್ನೂ ಎನ್‌ಐಎ ಮಾಡಲಿ ಎಂಬ ಒತ್ತಾಯ ಕೇಳಿ ಬಂದಿತ್ತು.

ಅಶ್ರಫ್‌, ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣಗಳ ಎನ್‌ಐಎ ತನಿಖೆ? Read More »

ಮಹಿಳೆಗೆ ಕಿರುಕುಳ : ಆರೋಪಿ ಬಂಧನ

ಬಂಟ್ವಾಳ: ಪತಿಯ ಜತೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಆರೋಪಿಯೋರ್ವ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ದೈಹಿಕ ಕಿರುಕುಳ ನೀಡಿದ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ನಡೆದಿದೆ. ಅಬೂಬಕ್ಕರ್ ಎಂಬಾತ ಮಹಿಳೆಗೆ ಕಿರುಕುಳ ನೀಡಿದ ಆರೋಪಿ. ಉಜಿರೆಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ಮಹಿಳೆಯ ಜತೆ ಆತ ಅಸಭ್ಯವಾಗಿ ವರ್ತಿಸಿದಲ್ಲದೇ ದೈಹಿಕ ಕಿರುಕುಳ ನೀಡಿದ್ದಾನೆ. ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಹಿಳೆಗೆ ಕಿರುಕುಳ : ಆರೋಪಿ ಬಂಧನ Read More »

ಪಾರ್ಟಿ ಮಾಡಲು ಅನುಮತಿ ಪಡೆಯಬೇಕೆಂದು ಗೊತ್ತಿರಲಿಲ್ಲ : ಮಂಗ್ಲಿ ಗೋಳಾಟ

ಬರ್ತ್‌ಡೇ ಪಾರ್ಟಿಯಲ್ಲಿ ಮದ್ಯ, ಮಾದಕ ವಸ್ತು ಬಳಸಿದ ಪ್ರಕರಣ ಹೈದರಾಬಾದ್‌: ಬರ್ತ್‌ಡೇ ಪಾರ್ಟಿಯಲ್ಲಿ ಮದ್ಯ ಮತ್ತು ಡ್ರಗ್ಸ್‌ ಪೂರೈಸಿರುವ ಆರೋಪಕ್ಕೆ ಒಳಗಾಗಿರುವ ತೆಲುಗಿನ ಪ್ರಸಿದ್ಧ ಗಾಯಕಿ ಮಂಗ್ಲಿ ಯಾನೆ ಸತ್ಯವತಿ ರಾಠೋಡ್‌, ಪಾರ್ಟಿಯಲ್ಲಿ ಮದ್ಯ ಸೇವಿಸಲು ಪೊಲೀಸರ ಅನುಮತಿ ಪಡೆಯಬೇಕೆಂದು ತನಗೆ ಗೊತ್ತಿರಲಿಲ್ಲ, ಇದು ಅರಿವಿಲ್ಲದೆ ಆಗಿರುವ ತಪ್ಪು ಎಂದು ಹೇಳಿಕೊಂಡಿದ್ದಾರೆ. ಪ್ರಸಿದ್ಧ ಜಾನಪದ ಗಾಯಕಿಯಾಗಿರುವ ಮಂಗ್ಲಿ ತೆಲುಗು ಮತ್ತು ಕನ್ನಡದ ಅನೇಕ ಸಿನಿಮಾಗಳಿಗೂ ಹಾಡಿದ್ದಾರೆ. ವಿಶಿಷ್ಟವಾದ ಧ್ವನಿ ಮತ್ತು ಜಾನಪದ ಶೈಲಿಯ ನೃತ್ಯಗಳಿಂದ ಅವರು ಸೋಷಿಯಲ್‌

ಪಾರ್ಟಿ ಮಾಡಲು ಅನುಮತಿ ಪಡೆಯಬೇಕೆಂದು ಗೊತ್ತಿರಲಿಲ್ಲ : ಮಂಗ್ಲಿ ಗೋಳಾಟ Read More »

ಕೋಮು ನಿಗ್ರಹ ಪಡೆ ನಾಳೆ ಉದ್ಘಾಟನೆ

ಸುಧೀರ್‌ ಕುಮಾರ್‌ ರೆಡ್ಡಿ ಮುಖ್ಯಸ್ಥ; ಮಂಗಳೂರಲ್ಲಿ ಕೇಂದ್ರ ಕಚೇರಿ ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಪದೇಪದೆ ಸಂಭವಿಸುತ್ತಿರುವ ಕೋಮು ಗಲಭೆಗಳನ್ನು ನಿಗ್ರಹಿಸುವ ಸಲುವಾಗಿ ಸರ್ಕಾರ ರಚಿಸಿರುವ ವಿಶೇಷ ಕೋಮು ನಿಗ್ರಹ ಪಡೆಯ ಉದ್ಘಾಟನೆ ನಾಳೆ ನೆರವೇರಲಿದೆ. ಗೃಹ ಸಚಿವ ಜಿ.ಪರಮೇಶ್ವರ್‌ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಭಾಗವಹಿಸಲಿದ್ದಾರೆ. ಕೋಮುಗಲಭೆ ಪ್ರಚೋದಿಸುವ ಸರಣಿ ಹತ್ಯೆಗಳ ತಡೆಗೆ ರಾಜ್ಯ ಸರ್ಕಾರ ಈ ವಿಶೇಷ ಪಡೆಯನ್ನು ರಚಿಸಿದೆ. ವಿಶೇಷ ಕಾರ್ಯಪಡೆ ಘಟಕಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ

ಕೋಮು ನಿಗ್ರಹ ಪಡೆ ನಾಳೆ ಉದ್ಘಾಟನೆ Read More »

error: Content is protected !!
Scroll to Top