ಅಪರಾಧ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ಅಪಾಯದಿಂದ ಪಾರು

ಪುತ್ತೂರು : ಹುಂಡೈ ಐ10 ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕುಂಬ್ರ ಸಮೀಪದ ಮಡ್ಯಂಗಳದಲ್ಲಿ ಸೋಮವಾರ ನಡೆದಿದೆ. ಕಾರಿನಲ್ಲಿ ತಂದೆ ಮತ್ತು ಮಗಳು ಸುಳ್ಯಕ್ಕೆ ಪ್ರಾಣಿಸುತ್ತಿದ್ದು. ಮಗಳು ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಡ್ಯಂಗಳ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇಬ್ಬರಿಗೂ ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ಅಪಾಯದಿಂದ ಪಾರು Read More »

ಕಡಬದ ಕುಟ್ರುಪ್ಪಾಡಿಯಲ್ಲಿ ಸೋಮವಾರ ಮುಂಜಾನೆ ಆನೆ ದಾಳಿ | ಇಬ್ಬರು ಮೃತ್ಯು | ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಕಡಬ : ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಸೋಮವಾರ ಮುಂಜಾನೆ ಆನೆಯೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಕಡಬ ತಾಲೂಕಿನ  ರೆಂಜಲಾಡಿ ಗ್ರಾಮದ ನೈಲ ನಿವಾಸಿಗಳಾದ ರಂಜಿತಾ (21) ಹಾಗೂ  ರಮೇಶ್ ರೈ(55) ಎಂದು ತಿಳಿದು ಬಂದಿದೆ. ರಂಜಿತಾ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರ ಮುಂಜಾನೆ ಕರ್ತವ್ಯಕ್ಕೆ ಮನೆಯಿಂದ ಹೋಗುತ್ತಿದ್ದಾಗ ಮೀನಾಡಿ ಸಮೀಪ ರಸ್ತೆಯಲ್ಲಿ ಆನೆಯೊಂದು ಹಠಾತ್ತನಎ  ದಾಳಿ ನಡೆಸಿದೆ. ಈ ಸಂದರ್ಭ ಯುತಿಯ ಬೊಬ್ಬೆ ಹೊಡೆದದ್ದನ್ನು

ಕಡಬದ ಕುಟ್ರುಪ್ಪಾಡಿಯಲ್ಲಿ ಸೋಮವಾರ ಮುಂಜಾನೆ ಆನೆ ದಾಳಿ | ಇಬ್ಬರು ಮೃತ್ಯು | ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು Read More »

ಸವಣೂರು ಕಂಚಿಕಾರ ಕೆರೆ ಸುತ್ತ ಖಾಸಗಿ ವ್ಯಕ್ತಿಯಿಂದ ಒತ್ತುವರಿ | ಸಮಸ್ಯೆ ಪರಿಹರಿಸದಿದ್ದಲ್ಲಿ ಸದಸ್ಯರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

ಪುತ್ತೂರು : ಸವಣೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಕಂಚಿಕಾರ ಕೆರೆಯ ವ್ಯಾಪ್ತಿಯಲ್ಲಿನ ಐತಿಹಾಸಿಕ ಕಂಚಿಕಾರ ಕೆರೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಈ ಕೆರೆಯ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಕಂದಾಯ ಜಾಗವನ್ನು ಖಾಸಗಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆ ಅತಿಕ್ರಮಣದ ಬಗ್ಗೆ ಗ್ರಾಪಂ ನಿರ್ಣಯ ಕೈಗೊಂಡು ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಫೆ.೨೦ರಂದು ದೋಳ್ಪಾಡಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮವಿದೆ. ಅದಕ್ಕೆ ಮೊದಲು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಮುಂದಿನ

ಸವಣೂರು ಕಂಚಿಕಾರ ಕೆರೆ ಸುತ್ತ ಖಾಸಗಿ ವ್ಯಕ್ತಿಯಿಂದ ಒತ್ತುವರಿ | ಸಮಸ್ಯೆ ಪರಿಹರಿಸದಿದ್ದಲ್ಲಿ ಸದಸ್ಯರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ Read More »

ಬ್ಯಾಂಕ್‌ಗೆ ವಂಚನೆ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು : ಕಬಕ ಬ್ಯಾಂಕ್ ಒಂದಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಿಟ್ಲ ಮೂಲದ ಆರೋಪಿಯೊಬ್ಬನ್ನು ಪುತ್ತೂರು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಟ್ಲ ಬೋಳಂತಿಮೊಗರು ನಿವಾಸಿ ಅಬ್ದುಲ್ ಗಫೂರ್ ಎಂಬರ ಪುತ್ರ ಮೊಹಮ್ಮದ್ ಅನ್ವರ್ ಬಂಧಿತ ಆರೋಪಿ. 2017 ರಲ್ಲಿ ಮೊಹಮ್ಮದ್ ಅನ್ವರ್ ಕಬಕದ ಬ್ಯಾಂಕ್ ಒಂದರಲ್ಲಿ ಸಾಲಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಆರೋಪಿ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಅರೋಪಿ ವಿರುದ್ಧ ವಾರಂಟ್ ಮಾಡಿತ್ತು. ಇದೀಗ ಪೊಲೀಸರು ಶುಕ್ರವಾರ ಆರೋಪಿಯನ್ನು ವಿಟ್ಲದಲ್ಲಿ

ಬ್ಯಾಂಕ್‌ಗೆ ವಂಚನೆ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕೀಟ ನಾಶಕ ಸೇವಿಸಿ ಆತ್ಮಹತ್ಯೆ : ಕೃಷಿಕ ಮೃತ್ಯು

ಪುತ್ತೂರು: ಪಡ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಕೃಷಿಕರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇಡಿಯಾಪು ದಿ.ಈಶ್ವರ ಗೌಡ ಎಂಬವರ ಪುತ್ರ ಜತ್ತಪ್ಪ ಗೌಡ (68) ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಗುರುವಾರ ಸಂಜೆ ಮನೆಯಲ್ಲಿ ಕೃಷಿಗೆ ಬಲಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ವಿಷಯ ತಿಳಿದ ಮನೆ ಮಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು

ಕೀಟ ನಾಶಕ ಸೇವಿಸಿ ಆತ್ಮಹತ್ಯೆ : ಕೃಷಿಕ ಮೃತ್ಯು Read More »

ಬಲಿಪ ಭಾಗವತ ಖ್ಯಾತಿಯ ನಾರಾಯಣ ಭಾಗವತ ಅಸ್ತಂಗತ

ಪುತ್ತೂರು : ಬಲಿ ಭಾಗವತರೆಂದೇ ಖ್ಯಾತರಾದ ತೆಂಕುತಿಟ್ಟಿನ ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ (84) ಗುರುವಾರ ಸಂಜೆ 6.30 ಕ್ಕೆ ಸ್ವಗೃಹದಲ್ಲಿ ಅಸ್ತಂಗತರಾದರು. ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆಯವರು. ಪ್ರಸ್ತುತ ಬಲಿಪ ನಾರಾಯಣ ಭಾಗವತರು  ಮೂಡಬಿದ್ರೆಯ ನೂಯಿ ಎಂಬಲ್ಲಿ ವಾಸವಾಗಿದ್ದರು. ಮಾ.13, 1938 ರಲ್ಲಿ ಜನಿಸಿದ್ದ ಬಲಿಪರು ತನ್ನ 13ನೇ ವಯಸ್ಸಿನಲ್ಲೇ ಯಕ್ಷರಂಗಕ್ಕೆ ಕಾಲಿಟ್ಟಿದ್ದರು. ಸುಮಾರು 60 ವರ್ಷಗಳ ಕಲಾ ಸೇವೆ ಮಾಡಿರುವ ಅವರು, ಕಟೀಲು ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವು

ಬಲಿಪ ಭಾಗವತ ಖ್ಯಾತಿಯ ನಾರಾಯಣ ಭಾಗವತ ಅಸ್ತಂಗತ Read More »

ಸಾರ್ವಜನಿಕ ಶಾಂತಿ ಭಂಗ : ಬೀದಿ ಬದಿ ವ್ಯಾಪಾರ ತೆರವು

ಪುತ್ತೂರು: ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕೋರ್ಟ್ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಯೊಬ್ಬನನ್ನು ಪೊಲೀಸರು ತೆರವು ಮಾಡಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಸ್ಥಳಕ್ಕಾಗಮಿಸಿದ ಪಿ.ಎಸ್‍.ಐ. ಶ್ರೀಕಾಂತ್ ರಾಥೋಡ್ ಅವರ ನೇತೃತ್ವದ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕೋರ್ಟ್ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವ್ಯಾಪಾರ ನಡೆಸುತ್ತಿದ್ದುದು ಮಾತ್ರವಲ್ಲ, ಸ್ಥಳೀಯರಿಗೂ ಸಮಸ್ಯೆ ಉಂಟು ಮಾಡುತ್ತಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು, ಬೀದಿ ಬದಿ ವ್ಯಾಪಾರಿಯನ್ನು ಆ ಸ್ಥಳದಿಂದ ತೆರಳುವಂತೆ ಸೂಚಿಸಿ,

ಸಾರ್ವಜನಿಕ ಶಾಂತಿ ಭಂಗ : ಬೀದಿ ಬದಿ ವ್ಯಾಪಾರ ತೆರವು Read More »

ಅಫಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳೀಕೃಷ್ಣ ಭಟ್ ಮೃತದೇಹದ ಮೆರವಣಿಗೆ, ಅಂತಿಮ ದರ್ಶನ | ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಗೆಳೆಯನಿಗೆ ‘ಅಕ್ಷರ ನಮನ’

ಪುತ್ತೂರು: ಬೆಟ್ಟಂಪಾಡಿ ಮಂಡಲದ ನಿಡ್ಪಳ್ಳಿಯ ಸಕ್ರೀಯ ಬಿಜೆಪಿ ಕಾರ್ಯಕರ್ತ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುರಳೀಕೃಷ್ಣ ಭಟ್ ಮುಂಡೂರು ಅವರ ಮೃತದೇಹದ ಅಂತಿಮಯಾತ್ರೆ ಹಾಗೂ ಅಂತಿಮ ದರ್ಶನ ಬುಧವಾರ ಮಧ್ಯಾಹ್ನ ನಡೆಯಿತು. ವಾಹನದ ಮೂಲಕ ಸಾಗಿಬಂದ ಅಂತಿಮ ಯಾತ್ರೆಯಲ್ಲಿ ಹಲವಾರು ಮಂದಿ ಜೊತೆಗೂಡಿದರು. ಬಳಿಕ ಅಂತಿಮ ದರ್ಶನವನ್ನು ವೀಕ್ಷಿಸಿದ ಮಂದಿಯ ಕಣ್ಣಾಲಿಗಳು ತುಂಬಿ ಬಂದವು. ಸಂಟ್ಯಾರಿನ ಬಳಕ್ಕದಲ್ಲಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಮುರಳೀಕೃಷ್ಣ ಭಟ್ ಅವರು ಕೊನೆಯುಸಿರೆಳೆದಿದ್ದರು. ಮುರಳೀಕೃಷ್ಣ ಭಟ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ

ಅಫಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳೀಕೃಷ್ಣ ಭಟ್ ಮೃತದೇಹದ ಮೆರವಣಿಗೆ, ಅಂತಿಮ ದರ್ಶನ | ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಗೆಳೆಯನಿಗೆ ‘ಅಕ್ಷರ ನಮನ’ Read More »

ಸವಣೂರು ಕಿನಾರ ವಾರಿಜ ಶೆಟ್ಟಿ ನಿಧನ

ಪುತ್ತೂರು: ಸವಣೂರು ಕಿನಾರ ದಿ. ಸಂಕಪ್ಪ ಶೆಟ್ಟಿಯವರ ಪತ್ನಿ ವಾರಿಜ ಶೆಟ್ಟಿ (75 ವ) ಫೆ. 15ರಂದು ಬೆಳಿಗ್ಗೆ ನಿಧನರಾದರು. ಮೃತರು ಪುತ್ರರಾದ ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ಕಿನಾರ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಪುತ್ರಿಯರಾದ ಜಯಶ್ರೀ, ವಸಂತಿ, ಉಷಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ: ಫೆ. 15ರಂದು ಮಧ್ಯಾಹ್ನ ಗಂಟೆ 12ಕ್ಕೆ ಮೃತರ ಅಂತ್ಯಸಂಸ್ಕಾರ ಸವಣೂರಿನ ಕಿನಾರ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸವಣೂರು ಕಿನಾರ ವಾರಿಜ ಶೆಟ್ಟಿ ನಿಧನ Read More »

ಶರವೂರು: ಮೊಟ್ಟೆ ಸಾಗಾಟದ ಟೆಂಪೋ ಪಲ್ಟಿ, ಚಾಲಕ ಗಂಭೀರ

ಪುತ್ತೂರು: ಆಲಂಗಾರು ಬಳಿಯ ಶರವೂರು ದೇವಸ್ಥಾನದ ಬಳಿಯಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಟೆಂಪೋವೊಂದು ಪಲ್ಟಿಯಾದ ಘಟನೆ ಫೆ. 15ರಂದು ಬೆಳಿಗ್ಗೆ ನಡೆದಿದೆ. ಆಲಂಗಾರು ಕಡೆಯಿಂದ ಶಾಂತಿಮೊಗರು ಕಡೆಗೆ ಬರುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿದ್ದ ಚಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಟೆಂಪೋದಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಶರವೂರು: ಮೊಟ್ಟೆ ಸಾಗಾಟದ ಟೆಂಪೋ ಪಲ್ಟಿ, ಚಾಲಕ ಗಂಭೀರ Read More »

error: Content is protected !!
Scroll to Top