ಅಪರಾಧ

ವಸತಿ ಶಾಲೆ ಹಾಸ್ಟೆಲ್‌ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಮಗಳೂರು: ವಸತಿ ಶಾಲೆಯ ಹಾಸ್ಟೆಲ್‌ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.ಶಮಿತಾ (15) ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ. ಶನಿವಾರ ರಾತ್ರಿ ಶಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗ್ಗಿನ ಜಾವ ಮಕ್ಕಳು ಎದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪ ತಾಲೂಕಿನ ಬೊಮ್ಲಾಪುರ ಗ್ರಾಮದ ವಿದ್ಯಾರ್ಥಿನಿ 6ನೇ ತರಗತಿಯಿಂದ ವಸತಿ ಶಾಲೆಯಲ್ಲೇ ಓದುತ್ತಿದ್ದಳು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸತಿ ಶಾಲೆ ಹಾಸ್ಟೆಲ್‌ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕೊಳೆತು ನಾರುತ್ತಿದ್ದ ನಾಯಿಯ ಮೃತದೇಹದೊಂದಿಗೆ ವಾಸಿಸುತ್ತಿದ್ದ ಮಹಿಳೆ

ಸಾಕುನಾಯಿಯನ್ನು ಕೊಂದು ಮಾಟಮಂತ್ರ ಮಾಡಿದ ಗುಮಾನಿ ಬೆಂಗಳೂರು: ನಗರದ ಮಹದೇವಪುರದ ಅಪಾರ್ಟ್ಮೆಂಟ್‌ನಲ್ಲಿ ಮಹಿಳೆಯೊಬ್ಬಳು ತಾನು ಸಾಕಿದ್ದ ನಾಯಿಯ ಕೊಳೆತು ನಾರುತ್ತಿದ್ದ ಮೃತದೇಹದೊಂದಿಗೆ ವಾಸವಿದ್ದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. 38 ವರ್ಷದ ಮಹಿಳೆ ತ್ರಿಪರ್ಣಾ ಪೈಕ್ ದೊಡ್ಡಾನೆಕುಂದಿಯ ಅಕ್ಮೆ ಬ್ಯಾಲೆಟ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್ ಸಂಖ್ಯೆ ಜೆ-404 ರಲ್ಲಿ ವಾಸವಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘ ಆಕೆಯ ಫ್ಲಾಟ್‌ನಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಬಿಬಿಎಂಪಿಗೆ ದೂರು ನೀಡಿತ್ತು. ದೂರು ಹಿನ್ನೆಲೆಯಲ್ಲಿ ಪಶುಸಂಗೋಪನಾ ತಂಡ ಫ್ಲಾಟ್‌ಗೆ ಭೇಟಿ ನೀಡಿದ್ದು, ಈ

ಕೊಳೆತು ನಾರುತ್ತಿದ್ದ ನಾಯಿಯ ಮೃತದೇಹದೊಂದಿಗೆ ವಾಸಿಸುತ್ತಿದ್ದ ಮಹಿಳೆ Read More »

ಬೀಚ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ : ಯುವಕನ ಬಂಧನ

ಇನ್‌ಸ್ಟಾಗ್ರಾಂ ಗೆಳತಿಯನ್ನು ಕರೆದುಕೊಂಡು ಬಂದು ಕಾರಿನಲ್ಲಿ ದೌರ್ಜನ್ಯ ಮಂಗಳೂರು : ಉಳ್ಳಾಲ ಸಮೀಪ ಸೋಮೇಶ್ವರ ಬೀಚ್‌ನಲ್ಲಿ ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಯುವಕನ ವಿರುದ್ಧ ಪೋಕ್ಸೊ ಕೇಸ್‌ ದಾಖಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಹದಿಹರೆಯದ ಬಾಲಕಿಯನ್ನು ಸೋಮೇಶ್ವರ ಬೀಚ್ ಬಳಿ ಕರೆದುಕೊಂಡು ಬಂದ ಯುವಕ ಕಾರಿನಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ದೂರಿನನ್ವಯ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಬಂಧಿತ

ಬೀಚ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ : ಯುವಕನ ಬಂಧನ Read More »

ಮತ್ತೆ ಹೆಚ್ಚಳವಾದ ಆನ್‌ಲೈನ್‌ ವಂಚನೆ ಪ್ರಕರಣಗಳು : ಪೊಲೀಸರಿಂದ ಜಾಗೃತಿ ಅಭಿಯಾನ

ಮಂಗಳೂರು ನಗರವೊಂದರಲ್ಲೇ ಹಲವು ಲಕ್ಷ ರೂಪಾಯಿ ಪಂಗನಾಮ ಮಂಗಳೂರು : ಆನ್‌ಲೈನ್ ಮೂಲಕ ಹೂಡಿಕೆಗೆ ಪ್ರಚೋದಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಮತ್ತೊಮ್ಮೆ ಕಳವಳಕಾರಿಯಾಗಿ ಹೆಚ್ಚುತ್ತಿವೆ. ಕಳೆದೊಂದು ವಾರದಲ್ಲೆ ಮಂಗಳೂರು ಸೈಬರ್‌ ಠಾಣೆಯಲ್ಲೇ ಇಂಥ ಹಲವು ಪ್ರಕರಣಗಳು ದಾಖಲಾಗಿದ್ದು, ಒಂದು ಕೋಟಿಗಟ್ಟಲೆ ಮೊತ್ತ ವಂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಸಾರ್ವಜನಿಕ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದು, ಜನರು ಇಂಥ ತ್ವರಿತ ಲಾಭದ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಎಚ್ಚರಿಸಿದ್ದಾರೆ. ವಂಚಕರು ನಕಲಿ ಹೂಡಿಕೆ ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು

ಮತ್ತೆ ಹೆಚ್ಚಳವಾದ ಆನ್‌ಲೈನ್‌ ವಂಚನೆ ಪ್ರಕರಣಗಳು : ಪೊಲೀಸರಿಂದ ಜಾಗೃತಿ ಅಭಿಯಾನ Read More »

ಆರ್‌ಸಿಬಿ ಆಟಗಾರ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಪ್ರೀತಿಸುವ ನಾಟಕವಾಡಿ ವಂಚಿಸಿದ್ದಾರೆ ಎಂದು ಆರೋಪಿಸಿದ ಯುವತಿ ಲಖನೌ: ಐಪಿಎಲ್​ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಭಾರತದ ಯುವ ಕ್ರಿಕೆಟಿಗ ಯಶ್ ದಯಾಳ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಕೂಡ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು,

ಆರ್‌ಸಿಬಿ ಆಟಗಾರ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ Read More »

ಬಾಂಗ್ಲಾ ದೇಶದಲ್ಲಿ ಹಿಂದೂ ಧರ್ಮೀಯರ ದುರ್ಗಾ ದೇವಾಲಯ ಧ್ವಂಸ : ಆಕ್ರೋಶ‌ ವ್ಯಕ್ತಪಡಿಸಿದ ಭಾರತ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳು ಮುಂದುವರೆದಿದ್ದು, ಢಾಕಾದ ಖಿಲ್ಖೇತ್ ಪ್ರದೇಶದ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ದುರ್ಗಾ ದೇವಾಲಯವನ್ನು ಧ್ವಂಸ ಮಾಡಲಾಗಿದೆ. ಈ ಘಟನೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್ ಸಿಂಗ್ ಜೈ ಸ್ ವಾಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕೃತ್ಯ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಘಾಸಿ ‌ಮಾಡಿದೆ. ಇದನ್ನು ಸಾಮಾನ್ಯ ಘಟನೆ ಎಂದು ಹಗುರವಾಗಿ ಪರಿಗಣಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕೇವಲ ಭೂ ಕಬಳಿಕೆಯ ವಿಷಯವಲ್ಲ. ಬದಲಾಗಿ

ಬಾಂಗ್ಲಾ ದೇಶದಲ್ಲಿ ಹಿಂದೂ ಧರ್ಮೀಯರ ದುರ್ಗಾ ದೇವಾಲಯ ಧ್ವಂಸ : ಆಕ್ರೋಶ‌ ವ್ಯಕ್ತಪಡಿಸಿದ ಭಾರತ Read More »

ಕೋಡಿಮಠದ ಸ್ವಾಮೀಜಿಯ ಸರ, ಉಂಗುರ ಕದ್ದ ಕಳ್ಳ ಸೆರೆ

ರೈಲಿನಲ್ಲಿ ಪ್ರಯಾಣಿಸುವಾಗ ಬ್ಯಾಗಿನಿಂದ ಕಳವಾಗಿದ್ದ ಆಭರಣ ಹಾಸನ : ದೇಶ-ಕಾಲದ ಬಗ್ಗೆ ಭವಿಷ್ಯ ನುಡಿದು ಖ್ಯಾತರಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಚಿನ್ನ ಮತ್ತು ನಗದು ಕಳ್ಳತನ ಮಾಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷಗಳ ಹಿಂದೆ ಈತ ಕಳ್ಳತನ ನಡೆದಿತ್ತು. ಉತ್ತರಾಖಂಡದ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಎಂಬಾತ ಆರೋಪಿ. 2018ರಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಲೆದರ್ ಬ್ಯಾಗ್‌ನಲ್ಲಿ 250

ಕೋಡಿಮಠದ ಸ್ವಾಮೀಜಿಯ ಸರ, ಉಂಗುರ ಕದ್ದ ಕಳ್ಳ ಸೆರೆ Read More »

ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ವಂಚಿಸಿದ ಯುವಕ | ಗಂಡು ಮಗುವಿಗೆ ಜನ್ಮವಿತ್ತ ಯುವತಿ

ಪುತ್ತೂರು: ಯುವತಿಯನ್ನು ವಂಚಿಸಿ ಗರ್ಭಿಣಿಯಾಗಿಸಿ ವಂಚಿಸಿದ ಯುವಕನ ಶೋಧ ಕಾರ್ಯ ಮುಂದುವರಿದಿದ್ದು, ಈ ನಡಿಗೆ ಯುವತಿ ನಿನ್ನೆ ರಾತ್ರಿ ಗಂಡು ಮಗಿವಿಗೆ ಜನ್ಮ ನೀಡಿದ್ದಾರೆ. ಸಂತ್ರಸ್ತೆಯೂ ಜೂ 24 ರಂದು ರಾತ್ರಿ ಬಪ್ಪಳಿಗೆ ನಿವಾಸಿ ಇಂಜಿನಿಯರಿಂಗ್‍ ವಿದ್ಯಾರ್ಥಿಯೋರ್ವ ತನಗೆ ಮದುವೆಯಾಗುವುದಾಗಿ ನಂಬಿಸಿ ಇದೀಗ ಮದುವೆಯಾಗಲು ನಿರಾಕರಿಸಿರುವುದಾಗಿ ದೂರು ನೀಡಿದಂತೆ ನಗರ ಠಾಣೆಯಲ್ಲಿ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತ ಯುವತಿಯ ತಾಯಿ ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಿಗದಿ ಮಾಡಿದ್ದರು. ಆದರೇ ನಿಗದಿತ ಸಮಯಕ್ಕೆ ಮಹಿಳೆ

ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ವಂಚಿಸಿದ ಯುವಕ | ಗಂಡು ಮಗುವಿಗೆ ಜನ್ಮವಿತ್ತ ಯುವತಿ Read More »

ಮದುವೆ ಮಾಡಿಸದ ದ್ವೇಷದಲ್ಲಿ ತಾಯಿಯ ಕೊಲೆ : ಪೊಲೀಸರ ಬಳಿ ಬಾಯಿಬಿಟ್ಟ ಆರೋಪಿ

ಮಂಜೇಶ್ವರ ವರ್ಕಾಡಿಯಲ್ಲಿ ತಾಯಿಯನ್ನು ದಹಿಸಿ ಕೊಂದ ಪ್ರಕರಣ ಕಾಸರಗೋಡು : ತನಗೆ ಮದುವೆ ಮಾಡದ್ದಕ್ಕಾಗಿ ಮತ್ತು ಆಸ್ತಿಗಾಗಿ ತಾಯಿಯನ್ನು ಕೊಂದಿರುವುದಾಗಿ ವರ್ಕಾಡಿ ಕೊಲೆ ಪ್ರಕರಣದ ಆರೋಪಿ ಮೆಲ್ವಿನ್‌ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೇರೋ (59) ಅವರನ್ನು ಪುತ್ರನೇ ಬೆಂಕಿ ಹಚ್ಚಿ ಜಿಂವಂತ ಸುಟ್ಟುಕೊಂದ ಪ್ರಕರಣ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಆರೋಪಿ ತನ್ನ ಸೋದರತ್ತೆಯನ್ನೂ ಇದೇ ಮಾದರಿ ಸಾಯಿಸಲು ಯತ್ನಿಸಿದ್ದ. ಅವರು ತಪ್ಪಿಸಿಕೊಂಡಿದ್ದರು. ಆರೋಪಿಯನ್ನು ಪೊಲೀಸರು ಬೈಂದೂರಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ಮಾಹಿತಿ

ಮದುವೆ ಮಾಡಿಸದ ದ್ವೇಷದಲ್ಲಿ ತಾಯಿಯ ಕೊಲೆ : ಪೊಲೀಸರ ಬಳಿ ಬಾಯಿಬಿಟ್ಟ ಆರೋಪಿ Read More »

ಚಾಮರಾಜನಗರದಲ್ಲಿ ಇನ್ನೊಂದು ಹುಲಿ ಸಾವು

4-5 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆ ಬೆಂಗಳೂರು: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಹುಲಿಗಳ ಹತ್ಯಾಕಾಂಡ ಹಸಿರಾಗಿರುವಾಗಲೇ ರಾಜ್ಯದಲ್ಲಿ ಇನ್ನೊಂದು ಹುಲಿ ಸಾವನ್ನಪ್ಪಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರದ ಗುಂಡ್ರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ. 4-5 ವರ್ಷದ ಹೆಣ್ಣು ಹುಲಿ ಸಹಜವಾಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶುಕ್ರವಾರ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಕಳೇಬರ ಪತ್ತೆ ಆಗಿದೆ. ಇಂದು ವೈದ್ಯರು ಹುಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಐದು ಹುಲಿಗಳನ್ನು ವಿಷವಿಕ್ಕಿ ಸಾಯಿಸಿದ ಪ್ರಕರಣ

ಚಾಮರಾಜನಗರದಲ್ಲಿ ಇನ್ನೊಂದು ಹುಲಿ ಸಾವು Read More »

error: Content is protected !!
Scroll to Top