ಕ್ಯಾಂಪಸ್‌

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ

ಪುತ್ತೂರು : ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸಿದ  66ನೇ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿದ್ಯಾಭಾರತಿಯನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಏಳನೇ ಸ್ಥಾನವನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದೆ. ತಂಡದಲ್ಲಿ ವಿದ್ಯಾರ್ಥಿಗಳಾದ ಪವನ್, ಗುರುಪ್ರಸಾದ್, ಭರತ್, ಅಶ್ವಿತ್ ಭಂಡಾರಿ, ನಂದನ್, ಮಂಜುನಾಥ, ಸಾತ್ವಿಕ್, ಪವನ್ ಕುಮಾರ್, ಶ್ರೀನಿಶ್, ಜೀವನ್ ಭಾಗವಹಿಸಿದ್ದರು. ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್,  ಡಾ. ಜ್ಯೋತಿ ,ಯತೀಶ್ ಬಾರ್ತಿಕುಮೆರ್ ಹಾಗೂ ಕಾರ್ತಿಕ್ […]

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ Read More »

ಅಕ್ಷಯ ಕಾಲೇಜಿನಲ್ಲಿ ’ಅಕ್ಷಯ ವೈಭವ- 2023 ವಾರ್ಷಿಕೋತ್ಸವ  ಸಮಾರಂಭ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ  ’ಅಕ್ಷಯ ವೈಭವ’ ವಾರ್ಷಿಕೋತ್ಸವ  ಸಮಾರಂಭ ನಡೆಯಿತು. ಮಂಗಳೂರು ವಿ.ವಿ ಉಪಕುಲಪತಿ ಡಾ. ಜಯರಾಜ್ ಅಮೀನ್ ದೀಪ ಬೆಳಗಿಸಿ ಉದ್ಘಾಟಿಸಿ, ಅತೀ ಕಡಿಮೆ ಸಮಯದಲ್ಲಿ ವೃತ್ತಿಪರ ಕೋರ್ಸ್‌ನೊಂದಿಗೆ ಕಾಲೇಜು ಪ್ರಾರಂಭಿಸಿ, ವಿ.ವಿ, ರಾಷ್ಟ್ರ-ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಕಾಲೇಜಿನ ಗರಿಮೆಯನ್ನು ಹೆಚ್ಚಿಸಿದೆ. ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದಿಗೆ ಜೀವನಕ್ಕೆ ಬೇಕಾದ ಕೌಶಲ್ಯ ನೀಡುವಲ್ಲಿ ಅಕ್ಷಯದಂತಹ ಸಂಸ್ಥೆಯ ಅವಶ್ಯಕತೆಯಿದೆ.

ಅಕ್ಷಯ ಕಾಲೇಜಿನಲ್ಲಿ ’ಅಕ್ಷಯ ವೈಭವ- 2023 ವಾರ್ಷಿಕೋತ್ಸವ  ಸಮಾರಂಭ Read More »

ವಿವೇಕಾನಂದ ಮಹಾವಿದ್ಯಾಲಯದಲ್ಲಿ ’ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘ ದಿನಾಚರಣೆ

ಪುತ್ತೂರು: ದೇಶದ ಬಗೆಗೆ ಪ್ರತಿಯೊಬ್ಬರಲ್ಲೂ ಸದ್ಭಾವನೆ ಮೂಡಬೇಕು. ನಮ್ಮ ದೇಶದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡಬೇಕು.ಪರಸ್ಪರ ಪ್ರೀತಿ ಪ್ರೇಮ ವನ್ನು ಹಂಚಿಕೊಂಡು ಬಾಳಬೇಕು ಹಾಗೂ ಭವ್ಯ ಭಾರತವನ್ನು ಕಟ್ಟುವಲ್ಲಿ ಸಫಲರಾಗಿ ಸದೃಢ ಪ್ರಜೆಗಳಾಗಿ ಪ್ರಜ್ವಲಿಸಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ’ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆಯಲ್ಲಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ’ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘ ದಿನಾಚರಣೆ Read More »

ಜೂ.15 ರಿಂದ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಜೂ.15 ರಿಂದ ಆರಂಭಗೊಳ್ಳಲಿದೆ. ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ.ಮಹಾನಗರಗಳ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಬೇಕು ಎನ್ನುವ ಸದುದ್ದೇಶದಿಂದ ಪ್ರೇರಣಾ ಸಂಸ್ಥೆಯಲ್ಲಿ ಜೂ.15 ರಿಂದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸೀಮಿತ ವಿದ್ಯಾರ್ಥಿಗಳಿಗೆ

ಜೂ.15 ರಿಂದ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ Read More »

ಸವಣೂರುನಲ್ಲಿ ತಂಬಾಕು ವಿರೋಧಿ ದಿನಾಚರಣೆ

ತಂಬಾಕು ಸೇವನೆ ರೋಗವನ್ನು ಕ್ರಯಕ್ಕೆ ಪಡೆದಂತೆ – ತಾರಾನಾಥ ಸವಣೂರು ಸವಣೂರು :  ತಂಬಾಕು ಸೇವನೆಯೊಂದು ಚಟ. ಈ ಚಟದಿಂದ ರೋಗಗಳನ್ನು ಕ್ರಯಕ್ಕೆ ಪಡೆದಂತೆ ಎಂದು ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರು ನುಡಿದರು. ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ಸವಣೂರು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ಇವುಗಳ ಆಶ್ರಯದಲ್ಲಿ ಸವಣೂರಿನ ಶ್ರೀ ವಿನಾಯಕ ಸಭಾ ಭವನದಲ್ಲಿ ನಡೆದ

ಸವಣೂರುನಲ್ಲಿ ತಂಬಾಕು ವಿರೋಧಿ ದಿನಾಚರಣೆ Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ, ಮದ್ದಳೆ ಮತ್ತು ಭಾಗವತಿಕೆಯ ತರಬೇತಿ.ಉದ್ಘಾಟನೆ

ಪುತ್ತೂರು: ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ ವಾದನ ತರಬೇತಿ ಉದ್ಗಾಟನೆ ನಡೆಯಿತು. ತೆಂಕತಿಟ್ಟಿನ ಹೆಸರಾಂತ ಚಂಡೆ ವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ತರಬೇತಿಯ ಪ್ರಯೋಜನವನ್ನು ಪಡೆದು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎಸ್. ಡಿ.ಎಂ.ಸಿ ಸದಸ್ಯ ವಿಷ್ಣು ಕನ್ನಡಗುಳಿ,ಮಾಣಿಲ ಮಾತನಾಡಿ, ಅನೇಕ ಪ್ರಸಿದ್ಧ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ತವರೂರಾಗಿದೆ, ಮುಂದೆ ನಮ್ಮ ವಿದ್ಯಾರ್ಥಿಗಳೂ ಸಹ ಇಂತಹ ಕಲಾವಿದರಾಗಿ ರೂಪುಗೊಳ್ಳಲಿ ಎಂದರು. ಮುಖ್ಯಶಿಕ್ಷಕ ಭುವನೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ, ಮದ್ದಳೆ ಮತ್ತು ಭಾಗವತಿಕೆಯ ತರಬೇತಿ.ಉದ್ಘಾಟನೆ Read More »

ಪುತ್ತೂರು: ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಸವಣೂರು :  ಇಂಡಿಯನ್ ರೆಡ್ ಕ್ರಾಸ್ ಘಟಕ ಪುತ್ತೂರು, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ರೋಟರ‍್ಯಾಕ್ಟ್ ಕ್ಲಬ್ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಸವಣೂರು ಯುವಕ ಮಂಡಲ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಜೂ.10ರಂದು  ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ  ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು

ಪುತ್ತೂರು: ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ Read More »

ರಾಷ್ಟ್ರ ಮಟ್ಟದ ಯೋಗ ಪಂದ್ಯಾಟಕ್ಕೆ ವಿವೇಕಾನಂದ  ಪದವಿ ಪೂರ್ವ  ಕಾಲೇಜಿನ ನಿಶ್ಚಲ್ ಕೆ ಜೆ ಆಯ್ಕೆ

ಪುತ್ತೂರು : ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸುವ  99ನೇ ರಾಷ್ಟ್ರ ಮಟ್ಟದ ಯೋಗ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ ಜೆ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅವರು ಪುತ್ತೂರಿನ ನೆಹರೂನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ. ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ರಾಷ್ಟ್ರ ಮಟ್ಟದ ಯೋಗ ಪಂದ್ಯಾಟಕ್ಕೆ ವಿವೇಕಾನಂದ  ಪದವಿ ಪೂರ್ವ  ಕಾಲೇಜಿನ ನಿಶ್ಚಲ್ ಕೆ ಜೆ ಆಯ್ಕೆ Read More »

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸುವ 99ನೇ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ವಿದ್ಯಾಭಾರತಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಬಾರ್ತಿಕುಮೆರ್ ಇವರ ನೇತೃತ್ವದಲ್ಲಿ  ಈ ತಂಡವು ತರಬೇತಿಯನ್ನು ಪಡೆದಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಸವಣೂರು ವಿದ್ಯಾರಶ್ಮಿಯಲ್ಲಿ ಶಾಲಾ ಪ್ರಾರಂಭೋತ್ಸವ, ಸವಣೂರು ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬ

ಸವಣೂರು: ಎಸ್.ಎನ್.ಆರ್.ರೂರಲ್ ಎಜುಕೇನಲ್ ಟ್ರಸ್ಟ್ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬ ಜೂ.9ರಂದು ನಡೆಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಭಾಗೀರಥಿ ಮುರುಳ್ಯ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಎನ್.ಸುಂದರ ರೈ ,ಕಸ್ತೂರಿ ಕಲಾ ಸೀತಾರಾಮ ರೈ

ಸವಣೂರು ವಿದ್ಯಾರಶ್ಮಿಯಲ್ಲಿ ಶಾಲಾ ಪ್ರಾರಂಭೋತ್ಸವ, ಸವಣೂರು ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬ Read More »

error: Content is protected !!
Scroll to Top