ಕ್ಯಾಂಪಸ್‌

ಜೂ.30 : ವಿವೇಕಾನಂದ ಕಾಲೇಜಿನಲ್ಲಿ ಬೀಳ್ಕೊಡುಗೆ, ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ವಿವೇಕಾನಂದ ಕಾಲೇಜು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಐಕ್ಯೂಎಸಿ ವತಿಯಿಂದ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ ಜೂ.30 ಶುಕ್ರವಾರ ಕಾಲೇಜು ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಪಿ. ತಿಳಿಸಿದ್ದಾರೆ. ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1965 ರಲ್ಲಿ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜು ಆರಂಭಗೊಂಡಿದ್ದು […]

ಜೂ.30 : ವಿವೇಕಾನಂದ ಕಾಲೇಜಿನಲ್ಲಿ ಬೀಳ್ಕೊಡುಗೆ, ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ Read More »

ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ವೇದವೃತ ಭಂಡಾರಿಗೆ ಎರಡು ಬೆಳ್ಳಿ ಪದಕ

ಪುತ್ತೂರು : ಬೆಂಗಳೂರಿನಲ್ಲಿ ನಡದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ವೇದವೃತ ಭಂಡಾರಿ ಚಿಲ್ಮೆತ್ತಾರು ಎರಡು ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ. 4X50m ಮಿಡ್ಲೆ ರಿಲೇ ಹಾಗೂ 4x25m Manikan curry  ವಿಭಾಗಗಳಲ್ಲಿ ಸ್ಪರ್ಧಿಸಿ ಎರಡು ಬೆಳ್ಳಿ  ಪದಕಗಳನ್ನು ಪಡೆದುಕೊಂಡಿರುತ್ತಾನೆ. ಬಾಲವನ ಈಜು ಕೊಳದಲ್ಲಿ ಈಜು ತರಬೇತಿಯನ್ನು ರೋಹಿತ್.ಪಿ ಮತ್ತು ದೀಕ್ಷಿತ್ ಅವರಿಂದ ಪಡೆದಿರುತ್ತಾನೆ. ಈತ ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಎಸ್.ಭಂಡಾರಿ ದಂಪತಿ ಪುತ್ರ

ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ವೇದವೃತ ಭಂಡಾರಿಗೆ ಎರಡು ಬೆಳ್ಳಿ ಪದಕ Read More »

ಇಕೋ ಕ್ಲಬ್‍ ವತಿಯಿಂದ ಸ್ವಚ್ಛತೆ ಹಾಗೂ ಗಿಡಗಳನ್ನು ನೆಡುವ ಕಾರ್ಯಕ್ರಮ

ಪುತ್ತೂರು : ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ಇಕೋ ಕ್ಲಬ್  ವತಿಯಿಂದ ಗುರುವಾಯನಕೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚತಾ ಕಾರ್ಯಕ್ರಮ ಹಾಗೂ ವಿವಿಧ ರೀತಿಯ ಸಸ್ಯಗಳನ್ನು ನಡಲಾಯಿತು ಇಕೋ ಕ್ಲಬ್ ಸ್ವಯಂ ಸೇವಕರಿಂದ ಪರಿಸರದ ಬಗೆಗಿನ ಜಾಗೃತಿ ಮತ್ತು ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಇಕೋ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

ಇಕೋ ಕ್ಲಬ್‍ ವತಿಯಿಂದ ಸ್ವಚ್ಛತೆ ಹಾಗೂ ಗಿಡಗಳನ್ನು ನೆಡುವ ಕಾರ್ಯಕ್ರಮ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವೇಕಾನಂದ ಎನರ್ಜಿ ಮ್ಯಾನೇಜ್ಮೆಂಟ್ ಸೆಂಟರ್ ಉದ್ಘಾಟನೆ

ಪುತ್ತೂರು: ಕೆಲ ಸಮಯದ ಹಿಂದೆ ವಿದ್ಯುಚ್ಚಕ್ತಿಯನ್ನು ವಿತರಿಸುವ ಕಾರ್ಯ ಸವಾಲಿನದಾಗಿತ್ತು ಆದರೆ ಈಗ ವಿತರಣೆಯಲ್ಲಾಗುವ ನಷ್ಟವನ್ನು ಕಂಡುಹಿಡಿದು ಸರಿಪಡಿಸುವ ಕಾರ್ಯ ಅತ್ಯಂತ ಸವಾಲಿನದ್ದಾಗಿದೆ ಎಂದು ಮೆಸ್ಕಾಂ ಪುತ್ತೂರು ವಿಭಾಗದ ಎಇಇ ರಾಮಚಂದ್ರ. ಎ ಹೇಳಿದರು. ಅವರು ಬ್ಯೂರೋ ಆಫ್ ಎನರ್ಜಿ ಎಫಿಸಿಯನ್ಸಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವೇಕಾನಂದ ಎನರ್ಜಿ ಮ್ಯಾನೇಜ್ಮೆಂಟ್ ಸೆಂಟರ್ ಉದ್ಘಾಟನೆ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 10ನೇ ತರಗತಿ ಮಕ್ಕಳ ಪೋಷಕರ ಸಭೆ

ಪುತ್ತೂರು: ಮಗುವಿನ ಮೇಲಿನ ವ್ಯಾಮೋಹ ಮಕ್ಕಳ ಬೆಳವಣಿಗೆಗೆ ತೊಡಕಾಗಬಾರದು. ಮಗುವಿನ ದೈನಂದಿನ ಆಗು ಹೋಗುಗಳನ್ನು ತಿಳಿದುಕೊಳ್ಳಲು ಪೋಷಕರು ಸದಾ ಶಾಲೆಯ ಸಂಪರ್ಕದಲ್ಲಿ ಇರಬೇಕು ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸಂಚಾಲಕ ರವಿನಾರಾಯಣ ಎಂ ಹೇಳಿದರು. ಅವರು ಶಾಲಾ ಸಭಾಂಗಣದಲ್ಲಿ ನಡೆದ 10ನೇ ತರಗತಿಯ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ ಮಾತನಾಡಿ,  ಪೋಷಕರ ಸಲಹೆ ಸೂಚನೆಗಳನ್ನು ಸದಾ ಪುರಸ್ಕರಿಸಿ, ಅಳವಡಿಸುವ ಭರವಸೆ ನೀಡಿದರು. ಶಾಲಾ ಮುಖ್ಯ ಶಿಕ್ಷಕ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 10ನೇ ತರಗತಿ ಮಕ್ಕಳ ಪೋಷಕರ ಸಭೆ Read More »

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಸಹಜ’ – ಮೂಲಿಕಾ ವನ ನಿರ್ಮಾಣ ಯೋಜನೆ |

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆ ಯೋಜನೆ ’ವಿವೇಕ ಸಂಜೀವಿನಿ’ಯ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಆಂದೋಲನ ಆಶಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಹಜ- ಮೂಲಿಕಾ ವನ ನಿರ್ಮಾಣ ಯೋಜನೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಪುತ್ತೂರು ಶ್ರೀ ದುರ್ಗಾ ಕ್ಲಿನಿಕ್ ನ ಆರ್ಯುವೇದಿಕ್ ವೈದ್ಯರಾದ ಡಾ|ಹರಿಕೃಷ್ಣ ಪಾಣಾಜೆ ಕಾರ್ಯಕ್ರಮ ಉದ್ಫಾಟಿಸಿ ಮಾತಾನಾಡಿ,  ’ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ. ಈಗ ಬೆಳೆಸಿಕೊಳ್ಳುವ ಈ

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಸಹಜ’ – ಮೂಲಿಕಾ ವನ ನಿರ್ಮಾಣ ಯೋಜನೆ | Read More »

ಅಕ್ಷಯ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಹೇಮ ಚಂದ್ರಹಾಸ್ ಅಗಳಿ ಮಾತನಾಡಿ, ಯೋಗಾಸಾನವನ್ನು ನಿಯಮಿತವಾಗಿ ಅಭ್ಯಾಸ ಮಾಡಿದಾಗ ಮನಸ್ಸು ಮತ್ತು ದೇಹದಿಂದ ಬರುವ ರೋಗಗಳನ್ನು ದೂರವಿರಿಸುತ್ತದೆ. ನಮ್ಮ ಆರೋಗ್ಯವನ್ನು ನಾವು ಯೋಗದಿಂದ ಸ್ಥಿರವಾಗಿಡಬಹುದು. ಅಲ್ಲದೇ, ಸ್ವೀಕರಿಸಿದ ವಿಷಗಾಳಿಯನ್ನು ಕಪಾಲಭಾತಿ ಕ್ರಿಯೆಯ ಮೂಲಕ ಹೊರಹಾಕಬಹುದು ಎಂದು ಹೇ:ಳಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಮಾತನಾಡಿ, ಯೋಗ ಸಾಧನೆಯಿಂದ

ಅಕ್ಷಯ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ “ಆರೋಗ್ಯ ಯೋಗ” ಕಾರ್ಯಕ್ರಮ | ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ

ಮಾಣಿಲ : ದೈಹಿಕ ಮಾನಸಿಕ ಸಮತೋಲನ ಕಾಪಾಡಲು ಯೋಗ ಅಗತ್ಯ. ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಸುಯೋಗ – ಎಂದು ಪ್ರತಿಷ್ಠಿತ ಸಂಸ್ಥೆ ವಿಟ್ಲ ಜೆಸಿಐ ನ ಅಧ್ಯಕ್ಷರಾದ ಪರಮೇಶ್ವರ ಹೆಗಡೆ ಹೇಳಿದರು. ಅವರು ‘ವಿಶ್ವ ಯೋಗ ದಿನ ‘ ಪ್ರಯುಕ್ತ ಸರ್ಕಾರಿ ಪ್ರೌಢ ಶಾಲೆ ಮಾಣಿಲ ದಲ್ಲಿ ಜೆಸಿಐ ವಿಟ್ಲ ಸಹಯೋಗದಲ್ಲಿ ಏರ್ಪಡಿಸಲಾದ ‘ಆರೋಗ್ಯ ಯೋಗ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್ ಡಿ ಎಂಸಿ ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಭುವನೇಶ್ವರ್

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ “ಆರೋಗ್ಯ ಯೋಗ” ಕಾರ್ಯಕ್ರಮ | ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ Read More »

ಶ್ರೀ ಆದಿ ಚುಂಚನಗಿರಿ ಕಾವೂರು ಮಂಗಳೂರು ಶಾಖಾ ಮಠದ ಬಿಜಿಎಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಮಂಗಳೂರು : ಶ್ರೀ ಆದಿ ಚುಂಚನಗಿರಿ ಕಾವೂರು ಮಂಗಳೂರು ಶಾಖಾ ಮಠದ ನೇತೃತ್ವದಲ್ಲಿ ನಡೆಯುವ ಬಿಜಿಎಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಬುಧವಾರ ಆಚರಿಸಲಾಯಿತು. ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಶ್ರೀಗಳು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿ, ಸ್ವತಃ ಯೋಗ ಪ್ರಾತ್ಯಕ್ಷಿಕೆ ನಡೆಸಿದರು. ಈ ಸಂದರ್ಭದಲ್ಲಿ ಬಿಜಿಎಸ್‍ ಸ್ಕೂಲ್ ನ ಮುಖ್ಯ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು.

ಶ್ರೀ ಆದಿ ಚುಂಚನಗಿರಿ ಕಾವೂರು ಮಂಗಳೂರು ಶಾಖಾ ಮಠದ ಬಿಜಿಎಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

“ಪ್ರೇರಣಾ” ದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ‍ಕ್ಲಾಸ್ ಶೀಘ್ರದಲ್ಲಿ ಆರಂಭ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಜ್ವಲವಾಗುವ ಪ್ರೇರಣಾ

ಪುತ್ತೂರು: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೇ ಗಮನಿಸಿ. ನಿಮಗೆ ಕಲಿಕೆ ಕಷ್ಟವಾಗುತ್ತಿದೆಯೇ ? ಹಾಗಾದರೆ ತಡಮಾಡಬೇಡಿ. ಪ್ರತಿಷ್ಠಿತ ಪ್ರೇರಣಾ ಸಂಸ್ಥೆಗೆ ಭೇಟಿ ನೀಡಿ. ಇಲ್ಲಿ ನುರಿತ ಬೋಧಕರಿಂದ ನೀಡುವ ಟ್ಯೂಷನ್ ತರಗತಿಯಲ್ಲಿ ಪಾಲ್ಗೊಳ್ಳಿ. ನಗರದ ಅರುಣಾ ಥಿಯೇಟರ್ ಎದುರುಗಡೆ ಇರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ನುರಿತ ಶಿಕ್ಷಕರುಗಳಿಂದ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯದಲ್ಲಿ ಟ್ಯೂಷನ್ ನೀಡಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಟ್ಯೂಷನ್ ಜತೆಗೆ ಉಚಿತವಾಗಿ ಮೆಡಿಟೇಷನ್ ತರಗತಿಗಳನ್ನು ನೀಡಲಾಗುವುದು.

“ಪ್ರೇರಣಾ” ದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ‍ಕ್ಲಾಸ್ ಶೀಘ್ರದಲ್ಲಿ ಆರಂಭ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಜ್ವಲವಾಗುವ ಪ್ರೇರಣಾ Read More »

error: Content is protected !!
Scroll to Top