ಶಿಕ್ಷಣದ ಉದ್ದೇಶ ಜ್ಞಾನಾರ್ಜನೆಯೇ ಹೊರತು ಧನಾರ್ಜನೆಯಲ್ಲ: ಸುಬ್ರಹ್ಮಣ್ಯ ನಟ್ಟೋಜ | ಅಂಬಿಕಾದಲ್ಲಿ ಹೆತ್ತವರ ಸಭೆ
ಪುತ್ತೂರು: ಶಿಕ್ಷಣ ಎನ್ನುವುದು ಜ್ಞಾನಾರ್ಜನೆಗೆ ಇರುವುದೇ ಹೊರತು ಧನಾರ್ಜನೆಗಾಗಿ ಅಲ್ಲ. ಧನಾರ್ಜನೆಗಾಗಿ ಮಕ್ಕಳನ್ನು ತಯಾರು ಮಾಡಿದರೆ ಅವರು ನಾಳೆ ನಮ್ಮ ಅಂಕೆಯಲ್ಲಿ ಇರುವುದಿಲ್ಲ. ಡಾಕ್ಟರ್ ಇಂಜಿನಿಯರ್‌ಗಳನ್ನು ತಯಾರು ಮಾಡುವುದಕ್ಕಿಂತ ದೇಶಪ್ರೇಮ ಹೊಂದಿರುವ ನಾಯಕರನ್ನು ತಯಾರು ಮಾಡುವುದೇ ಆದ್ಯತೆಯಾಗಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ನಡೆದ ರಕ್ಷಕ-ಶಿಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ […]