ಕ್ಯಾಂಪಸ್‌

ಪ್ರಾಣಾಯಾಮ, ಧ್ಯಾನಗಳ ಪರಿಣಾಮಕಾರಿ ಅಭ್ಯಾಸದಿಂದ ದೇಹ, ಮನಸ್ಸು ಸ್ವಸ್ಥ | ಯೋಗ, ಪ್ರಕೃತಿ ಚಿಕಿತ್ಸಾ ಮಾಹಿತಿ ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಹೆಚ್.

ಪುತ್ತೂರು: ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಹೆಮ್ಮೆ ಮತ್ತು ಸುಯೋಗ ಎಂದು ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವೈದ್ಯಕೀಯ ಪದವಿ ವಿದ್ಯಾರ್ಥಿನಿ ಪ್ರತೀಕ್ಷಾ ಹೆಚ್. ಹೇಳಿದರು. ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಆಯುಷ್ ಶಾಖೆಯಾದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಧಾನದ ಮೂಲಕ ವಿವಿಧ ರೋಗಗಳಿಗೆ ಔಷಧ ಹಾಗೂ ಶಸ್ತ್ರಚಿಕಿತ್ಸೆ ರಹಿತ ಪರಿಹಾರವನ್ನು ಕಂಡುಕೊಳ್ಳಬಹುದಾದ ಅನೇಕ ವೈಶಿಷ್ಟ್ಯಗಳ ಬಗ್ಗೆ ಅವರು ಬೆಳಕು […]

ಪ್ರಾಣಾಯಾಮ, ಧ್ಯಾನಗಳ ಪರಿಣಾಮಕಾರಿ ಅಭ್ಯಾಸದಿಂದ ದೇಹ, ಮನಸ್ಸು ಸ್ವಸ್ಥ | ಯೋಗ, ಪ್ರಕೃತಿ ಚಿಕಿತ್ಸಾ ಮಾಹಿತಿ ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಹೆಚ್. Read More »

ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಲಕ್ಷ್ಮೀಪೂಜೆ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆ ಸೆ. 18ರಂದು ಎರಡನೇ ವರ್ಷಕ್ಕೆ ಕಾಲಿಟ್ಟಿದೆ. 2ನೇ ವರ್ಷದ ಪಾದಾರ್ಪಣೆ ಅಂಗವಾಗಿ ಸಂಸ್ಥೆಯಲ್ಲಿ ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಕುಂಟ್ಯಾನ, ನಿರ್ದೇಶಕರಾದ ಮುರಳೀಧರ ಕೆ.ಎಲ್., ನಾಗೇಶ್ ಕೆಡೆಂಜಿ, ವಸಂತ ವೀರಮಂಗಲ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್’ನ ನಿರ್ದೇಶಕರಾದ ಕೇಶವ ಅಮೈ ಕಲಾಯಿಗುತ್ತು, ಸತೀಶ್ ಪಾಂಬಾರು, ಪ್ರೇರಣಾ ಸಂಸ್ಥೆಯ ಪ್ರಬಂಧಕರಾದ ದಯಾಮಣಿ ನಾಗೇಶ್, ಪಿ.ಆರ್‍.ಒ. ಮೋಕ್ಷಿತ ಕೂಟೇಲು, ಆಶಾಲತಾ ಸತೀಶ್ ಪಾಂಬಾರು, ಮಮತಾ

ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಲಕ್ಷ್ಮೀಪೂಜೆ Read More »

ವಿದ್ಯಾರಶ್ಮಿಯ ಶಿಕ್ಷಕಿ ಪರಿಮಳ ಎನ್.ಎಂ. ಅವರು ‘ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿಗೆ ಆಯ್ಕೆ

ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಕನ್ನಡ ಭಾಷಾ ಶಿಕ್ಷಕಿ ಪರಿಮಳ ಎನ್.ಎಂ. ಅವರು ‘ಸಾವಿತ್ರಿಬಾಯಿ ಫುಲೆ ‘ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ. 24ರಂದು ಭಾನುವಾರ ಬೆಳಗಾವಿಯ ಗೋಕಾಕ ನಾಡಿನ ಸಮಾಚಾರ ಕನ್ನಡ ದೈನಿಕ ನೀಡಲಿರುವ ಈ ಪ್ರಶಸ್ತಿಗೆ, ಪರಿಮಳ ಎನ್.ಎಂ. ಅವರ ‘ಸಾಹಿತ್ಯ ಮತ್ತು ಶಿಕ್ಷಣ’ ವಿಭಾಗದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯಾರಶ್ಮಿಯ ಶಿಕ್ಷಕಿ ಪರಿಮಳ ಎನ್.ಎಂ. ಅವರು ‘ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿಗೆ ಆಯ್ಕೆ Read More »

ಹ್ಯಾಮರ್, ಶಾಟ್‍ಪುಟ್ : ಸಿಂಚನಾ ಬಿ. ದಕ್ಷಿಣ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಪುತ್ತೂರು: ಮಂಡ್ಯದ ಕೆರೆಗೋಡುನಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಹ್ಯಾಮರ್ ತ್ರೋ ಮತ್ತು ಶಾಟ್‌ಪುಟ್ ಪಂದ್ಯಾಟದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಬಿ. ಪ್ರಥಮ ಸ್ಥಾನ ಪಡೆದು ಅಕ್ಟೋಬರ್‌ನಲ್ಲಿ ಹೈದರಾಬಾದ್ ನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವರು ಬೆಟ್ಟಂಪಾಡಿ ಬೈಲಾಡಿ ನಿವಾಸಿ ನಿತ್ಯಾನಂದ ಮತ್ತು ನಮಿತಾ ಕೆ.ಕೆ. ದಂಪತಿ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಹ್ಯಾಮರ್, ಶಾಟ್‍ಪುಟ್ : ಸಿಂಚನಾ ಬಿ. ದಕ್ಷಿಣ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ Read More »

ಸೇವೆಯೇ ಎನ್‍.ಎಸ್‍.ಎಸ್‍ ಘಟಕದ ಧ್ಯೇಯ | ಮಾಹಿತಿ ಕಾರ್ಯಕ್ರಮದಲ್ಲಿ ವಂ.ಡಾ.ಆಂಟನಿ ಪ್ರಕಾಶ್ ಮೊಂತೆರೋ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ 2023-24 ರ  ಶೈಕ್ಷಣಿಕ ವರ್ಷದ ಮಾಹಿತಿ ಕಾರ್ಯಕ್ರಮ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ವಂ|ಡಾ| ಅಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಎಸ್.ಎಸ್. ಘಟಕ ಬಹಳ ಪ್ರಮುಖ ಘಟಕವಾಗಿದ್ದು, ಸೇವೆ ನೀಡುವ ಘಟಕವಾಗಿದೆ. ಸೇವೆಯೇ ಅದರ ಧ್ಯೇಯವಾಗಿರುತ್ತದೆ.  “ನನಗಾಗಿ ಅಲ್ಲ ನಿನಗಾಗಿ” ಎಂಬ ಧ್ಯೇಯ ವಾಕ್ಯದಡಿ ಕಾರ್ಯನಿರ್ವಹಿಸುವ ಎನ್.ಎಸ್.ಎಸ್.ನಂತಹ ಘಟಕಗಳಲ್ಲಿ ಸ್ವಯಂಸೇವಕರಾಗಿರುವ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು. ಕಾಲೇಜಿನ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ವಾಸುದೇವ

ಸೇವೆಯೇ ಎನ್‍.ಎಸ್‍.ಎಸ್‍ ಘಟಕದ ಧ್ಯೇಯ | ಮಾಹಿತಿ ಕಾರ್ಯಕ್ರಮದಲ್ಲಿ ವಂ.ಡಾ.ಆಂಟನಿ ಪ್ರಕಾಶ್ ಮೊಂತೆರೋ Read More »

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ತೆಂಕಿಲ ವಿವೇಕಾನಂದದ ವಿಶಾಲ್ ಪಿ. ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದಕ್ಷಿಣ ವಲಯದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ (17ರ ವಯೋಮಾನದ) ವಿಶಾಲ್ ಪಿ. 10ನೇ ತರಗತಿ [ವಿಠಲ.ಪಿ ಮತ್ತು ರೇಷ್ಮ ದಂಪತಿ ಪುತ್ರ] ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಮಥ ಎಮ್ ಭಟ್ 10ನೇ ತರಗತಿ [ರವಿನಾರಾಯಣ.ಎಮ್ ಮತ್ತು ಶರಾವತಿ ದಂಪತಿ ಪುತ್ರ] ದ್ವಿತೀಯ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ತೆಂಕಿಲ ವಿವೇಕಾನಂದದ ವಿಶಾಲ್ ಪಿ. ಆಯ್ಕೆ Read More »

ವಿದ್ಯಾಭಾರತಿ ಕರ್ನಾಟಕ ಕ್ಷೇತ್ರೀಯ ಮಟ್ಟದ ಗಣಿತ-ವಿಜ್ಞಾನ ಮೇಳ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ಪುತ್ತೂರು: ಕಲಬುರಗಿ ಸೇಡಂನಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ವತಿಯಿಂದ ನಡೆದ ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜ್ಞಾನ ಮಾದರಿ ತಯಾರಿಯಲ್ಲಿ 8ನೇ ತರಗತಿಯ ಶಮನ್ ಎನ್ ಪ್ರಥಮ, ಪ್ರೀತಿ.ಪಿ.ಪ್ರಭು  ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯುವ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿರುತ್ತಾರೆ. ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ 8 ನೇ ತರಗತಿಯ ನಿರೀಕ್ಷಿತ್ ಹೆಗ್ಡೆ,

ವಿದ್ಯಾಭಾರತಿ ಕರ್ನಾಟಕ ಕ್ಷೇತ್ರೀಯ ಮಟ್ಟದ ಗಣಿತ-ವಿಜ್ಞಾನ ಮೇಳ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ Read More »

ಪುಷ್ಟಿರಹಿತ ಆಹಾರ ಸೇವನೆಯಿಂದ ದೈಹಿಕ ದೃಢತೆ ಕ್ಷೀಣ | ಆಪ್ತಸಮಾಲೋಚನಾ ಕೇಂದ್ರದ ಚಟುವಟಿಕೆಗಳಿಗೆ ಚಾಲನೆ ನೀಡಿ ಡಾ.ಪ್ರದೀಪ್ ಕುಮಾರ್

ಪುತ್ತೂರು: ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ನಿರ್ಣಾಯಕ ಪರಿಣಾಮ ಬೀರುತಿದ್ದು, ಪ್ರಸ್ತುತ ಅನೇಕ ಕಲಬೆರಕೆ ವಸ್ತುಗಳೂ ಮಾರುಕಟ್ಟೆಯನ್ನು ಆವರಿಸಿಕೊಂಡಿರುವುದು ಇದಕ್ಕೆ ಕಾರಣ. ಈ ಬಗ್ಗೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸುವುದು ಅತ್ಯಂತ ಅಗತ್ಯ ಎಂದು ಡಾ.ಪ್ರದೀಪ್ ಕುಮಾರ್‍ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗ ಮುನ್ನಡೆಸುತ್ತಿರುವ ಚಿತ್ತ ಚಿಕಿತ್ಸಾ ಎಂಬ ಆಪ್ತ ಸಮಾಲೋಚನಾ ಕೇಂದ್ರದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಆಧುನಿಕ ಜೀವನಶೈಲಿಯ ಮುಂದಿನ ಪರಿಣಾಮಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ವಾಟ್ಸಪ್

ಪುಷ್ಟಿರಹಿತ ಆಹಾರ ಸೇವನೆಯಿಂದ ದೈಹಿಕ ದೃಢತೆ ಕ್ಷೀಣ | ಆಪ್ತಸಮಾಲೋಚನಾ ಕೇಂದ್ರದ ಚಟುವಟಿಕೆಗಳಿಗೆ ಚಾಲನೆ ನೀಡಿ ಡಾ.ಪ್ರದೀಪ್ ಕುಮಾರ್ Read More »

ವಿಜ್ಞಾನದ ಜತೆ ಭಾಷೆ ಬೆಳೆಯಬೇಕು | ಹಿಂದಿ ದಿನಾಚರಣೆಯಲ್ಲಿ ಪ್ರೊ. ಶ್ರೀಪತಿ ಕಲ್ಲೂರಾಯ

ಪುತ್ತೂರು: ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಭಾಷೆ ಮುಖ್ಯ. ಭಾಷೆ ಎಂಬುವುದು ಒಂದು ವಿಜ್ಞಾನ. ಅದರಲ್ಲಿರುವ ಅನೇಕ ವಿಸ್ಮಯಗಳನ್ನು ನಾವು ಕಲಿಯಬೇಕು. ಭಾರತ ಅನೇಕ ಭಾಷೆಗಳಿಂದ ಕೂಡಿರುವುದು ಮಾತ್ರವಲ್ಲದೆ ಅದರ ಹಿನ್ನಲೆಯಿಂದ ಹೆಚ್ಚು ಪ್ರಖ್ಯಾತವಾಗಿದೆ. ವಿಜ್ಞಾನದ ಜೊತೆಗೆ ಭಾಷೆ ಕೂಡಾ ಬೆಳೆಯಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ಹಿಂದಿ ಸಂಘ ಹಾಗೂ ಐಕ್ಯೂಏಸಿ ಜಂಟಿ ಸಹಯೋಗದಲ್ಲಿ   ಆಯೋಜಿಸಿದ  ಹಿಂದಿ ದಿನಾಚರಣೆ ಕಾರ್ಯಕ್ರಮದ

ವಿಜ್ಞಾನದ ಜತೆ ಭಾಷೆ ಬೆಳೆಯಬೇಕು | ಹಿಂದಿ ದಿನಾಚರಣೆಯಲ್ಲಿ ಪ್ರೊ. ಶ್ರೀಪತಿ ಕಲ್ಲೂರಾಯ Read More »

ದೂರದರ್ಶಿತ್ವವುಳ್ಳ ಯೋಚನೆಗಳು, ಯೋಜನೆಗಳು ಸರ್ ಎಂ.ವಿ.ಯವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿವೆ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಪೌರಾಯುಕ್ತ ಮಧು ಎಸ್‍.ಮನೋಹರ್

ಪುತ್ತೂರು: ನಮ್ಮ ನಾಡಿನ ಹೆಮ್ಮೆಯ ಪುತ್ರ, ದೇಶ ಕಂಡ ಅಪ್ರತಿಮ ವಿಜ್ಞಾನಿ ಸರ್ ಎಂ.ವಿಶ್ವೇಶ್ವರಯ್ಯನವರು ಕಲಿಸಿಕೊಟ್ಟ ಶ್ರಮ ಮತ್ತು ಪ್ರಾಮಾಣಿಕತೆಯ ಪಾಠವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತನ್ಮೂಲಕ ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದು ಪುತ್ತೂರು ನಗರಸಭೆಯ ಆಯುಕ್ತ ಮಧು.ಎಸ್.ಮನೋಹರ್ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್  ವಿಭಾಗ, ಐಎಸ್‌ಟಿಇ ಘಟಕ ಮತ್ತು ಕಾಲೇಜಿನ ಇನ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ ನ ಸಂಯುಕ್ತ ಆಶ್ರಯದಲ್ಲಿ ನಡೆದ ಇಂಜಿನಿಯರ್ಸ್ ಡೇ

ದೂರದರ್ಶಿತ್ವವುಳ್ಳ ಯೋಚನೆಗಳು, ಯೋಜನೆಗಳು ಸರ್ ಎಂ.ವಿ.ಯವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿವೆ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಪೌರಾಯುಕ್ತ ಮಧು ಎಸ್‍.ಮನೋಹರ್ Read More »

error: Content is protected !!
Scroll to Top