ಕ್ಯಾಂಪಸ್‌

ಕಾಣಿಯೂರು ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ

ಕಾಣಿಯೂರು: ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಪುಂಡಲಿಕ ಪೂಜಾರ ಕ್ರೀಡಾಕೂಟ ಉದ್ಘಾಟಿಸಿ ಶುಭಹಾರೈಸಿದರು. ಕಾಲೇಜಿನ ಪ್ರಾಚಾರ್ಯರಾದ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುಧಾಕರ್ ಎಸ್. ಸ್ವಾಗತಿಸಿ, ಶಶಿಕಲಾ ಕೆ. ವಂದಿಸಿದರು. ಸಂಧ್ಯಾ ಜೆ. ರೈ ಕಾರ್ಯಕ್ರಮ ನಿರೂಪಿಸಿದರು.

ಕಾಣಿಯೂರು ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ Read More »

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಹಲವು ಪ್ರಶಸ್ತಿ

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ  ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜನಪದಗೀತೆ ಸ್ಪರ್ಧೆಯಲ್ಲಿ ರೇಷ್ಮಾ.ಟಿ ದ್ವಿತೀಯ, ಪ್ರೌಢಶಾಲಾ ವಿಭಾಗದ ಬೋಧನೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ರೇಖಾ ಆಚಾರ್ಯ ದ್ವಿತೀಯ, ಪ್ರಾಥಮಿಕ

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಹಲವು ಪ್ರಶಸ್ತಿ Read More »

ಬೆಳಂದೂರು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಬೆಳಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ, ರಾಜ್ಯಶಾಸ್ತ್ರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ‘ಸಂವಿಧಾನ ದಿನಾಚರಣೆ’ ಆಚರಿಸಲಾಯಿತು.  ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಶಂಕರ ಭಟ್ ಪಿ. ಪಾಲ್ಗೊಂಡು ಮಾಹಿತಿ ನೀಡಿದರು. ಕನ್ಯಾಸ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ಹರಿಣಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಅನುಪಮ ಪಿ. ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸಿದರು. ಎನ್‍ಎಸ್‍ಎಸ್‍ ಕಾರ್ಯಕ್ರಮ ಅಧಿಕಾರಿ ಶಾಂತಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂವಿಧಾನ ದಿನದ

ಬೆಳಂದೂರು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ Read More »

ನ. 30: ಕನಕದಾಸ ಜಯಂತಿ ‘ದಾಸ ಸಾಹಿತ್ಯ-ಒಳನೋಟಗಳು’ ಒಂದು ದಿನದ ವಿಚಾರ ಸಂಕಿರಣ

ಪುತ್ತೂರು: ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ, ಕಾಲೇಜಿನ ಕನ್ನಡ, ಸಂಸ್ಕೃತ ಹಾಗೂ ಲಲಿತಕಲಾ ಸಂಘ ಮತ್ತು ಐಕ್ಯೂಎಸಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕು ಸಮಿತಿ ಸಹಯೋಗದಲ್ಲಿ ಕನಕದಾಸ ಜಯಂತಿ ‘ದಾಸ ಸಾಹಿತ್ಯ-ಒಳನೋಟಗಳು’ ಒಂದು ದಿನದ ವಿಚಾರ ಸಂಕಿರಣ ನ. 30ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕು ಸಮಿತಿ ಅಧ್ಯಕ್ಷ ಡಾ.ಗಣರಾಜ ಕುಂಬ್ಳೆ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು

ನ. 30: ಕನಕದಾಸ ಜಯಂತಿ ‘ದಾಸ ಸಾಹಿತ್ಯ-ಒಳನೋಟಗಳು’ ಒಂದು ದಿನದ ವಿಚಾರ ಸಂಕಿರಣ Read More »

ವಿದ್ಯಾರ್ಥಿಗಳು ಜೀವನದ ಗುರಿ ತಲುಪಲು ಜಾಗೃತರಾಗಬೇಕು | | ‘ಕನಸುಗಳು- 2023’ ಉದ್ಘಾಟಿಸಿ ನರಸಿಂಹ ಪೈ

ಪುತ್ತೂರು:  ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಅದನ್ನು ಸಾಕಾರಗೊಳಿಸುವ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ತಲುಪುವುದರ ಬಗ್ಗೆ ಸದಾ ಜಾಗೃತರಾಗಬೇಕು ಎಂದು ಯುವ ಉದ್ಯಮಿ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಕೋಶಾಧಿಕಾರಿ ನರಸಿಂಹ ಪೈ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಕನಸನ್ನು

ವಿದ್ಯಾರ್ಥಿಗಳು ಜೀವನದ ಗುರಿ ತಲುಪಲು ಜಾಗೃತರಾಗಬೇಕು | | ‘ಕನಸುಗಳು- 2023’ ಉದ್ಘಾಟಿಸಿ ನರಸಿಂಹ ಪೈ Read More »

ಸಜಂಕಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಮೇಳೈಸಿದ ಮೆಟ್ರಿಕ್ ಮೇಳ | ಮೆಟ್ರಿಕ್ ಮೇಳಗಳು ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಿಸಲು ಸಹಕಾರಿಯಾಗುತ್ತದೆ: ಸಾವಿತ್ರಿ ಕೆ

ಪುತ್ತೂರು: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸುವ ಸಲುವಾಗಿ ಹಮ್ಮಿಕೊಳ್ಳಲಾಗುವ ಮೆಟ್ರಿಕ್ ಮೇಳ  ಸ.ಹಿರಿಯ ಪ್ರಾಥಮಿಕ ಶಾಲೆ ಸಜಂಕಾಡಿಯಲ್ಲಿ ನಡೆಯಿತು. ವಿದ್ಯಾರ್ಥಿಗಳು ಬಗೆಬಗೆಯ ಸೊಪ್ಪು, ತರಕಾರಿ, ವಿವಿಧ ಬಗೆಯ ತಿನಿಸುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಮಾರಾಟದಲ್ಲಿ ತೊಡಗಿ ಸಂಭ್ರಮಿಸಿದರು . ಮುಖ್ಯ ಅತಿಥಿಯಾಗಿ ನಿವೃತ್ತ  ಶಿಕ್ಷಕಿ  ಸಾವಿತ್ರಿ ಕೆ ಮಾತನಾಡಿ, ಮೆಟ್ರಿಕ್ ಮೇಳಗಳು ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಿಸಿ ಕ್ರಿಯಾಶೀಲ ರಾಗುವಂತೆ ಮಾಡುತ್ತವೆ ಎಂದರು ಬಡಗನ್ನೂರು ಗ್ರಾಮ ಪಂಚಾಯಿತಿ ಸದಸ್ಯ ರವಿರಾಜ್ ರೈ ಸಜಂಕಾಡಿ ಮೆಟ್ರಿಕ್ ಮೇಳ ಉದ್ಘಾಟಿಸಿ ಶುಭ

ಸಜಂಕಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಮೇಳೈಸಿದ ಮೆಟ್ರಿಕ್ ಮೇಳ | ಮೆಟ್ರಿಕ್ ಮೇಳಗಳು ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಿಸಲು ಸಹಕಾರಿಯಾಗುತ್ತದೆ: ಸಾವಿತ್ರಿ ಕೆ Read More »

ರಾಜ್ಯಮಟ್ಟದ ಕಬಡ್ಡಿ: ರಾಮಕುಂಜೇಶ್ವರ ಪ್ರೌಢಶಾಲೆ ದ್ವಿತೀಯ | ಪ್ರೌಢಶಾಲೆಯ ನಾಲ್ವರು ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಮಕುಂಜ: ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ‍್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕಾರ್ತಿಕ್ ಬೆಸ್ಟ್ ರೈಡರ್ ಆಗಿ ಹೊರಹೊಮ್ಮಿದ್ದು, ಕಾರ್ತಿಕ್, ಶ್ರೇಯಸ್ ಹಿತೇಶ್, ಸತ್ಯ ನಾಲ್ವರು ರಾಷ್ಟ್ರಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ನಿವೃತ್ತ ಯುವಜನ ಕ್ರೀಡಾಧಿಕಾರಿ ಮಾಧವ್ ಬಿ.ಕೆ., ಕೋಚ್ ಜಸ್ವಂತ್ ಗೌಡ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ತರಬೇತಿ ನೀಡಿದ್ದಾರೆ. ತಂಡವನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಗುರುಗಳು, ಶಿಕ್ಷಕರು ಅಭಿನಂದಿಸಿದ್ದಾರೆ.

ರಾಜ್ಯಮಟ್ಟದ ಕಬಡ್ಡಿ: ರಾಮಕುಂಜೇಶ್ವರ ಪ್ರೌಢಶಾಲೆ ದ್ವಿತೀಯ | ಪ್ರೌಢಶಾಲೆಯ ನಾಲ್ವರು ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಕೆದಿಲ ವಿದ್ಯಾರ್ಥಿಗಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್: ಕ್ರಮಕ್ಕೆ ಒತ್ತಾಯ!

ಕೆದಿಲ: ಪ್ರಾಥಮಿಕ ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್ ಪತ್ತೆಯಾಗಿದ್ದು, ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೋಷಕರು ಒತ್ತಾಯ ಮಾಡಿದ ಘಟನೆ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ನಡೆದಿದೆ. ಗಡಿಯಾರ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಕೈಯಲ್ಲಿ ಈ ಪೆನ್ಸಿಲ್ ಕಂಡು ಬಂದಿದ್ದು, ಪೋಷಕರು ಈ ಪೆನ್ಸಿಲ್ ನ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಈ ಮಾರಾಟಗಾರರು ಮಕ್ಕಳಿಗೆ ಬೇಕಾಗುವ ಪೆನ್ಸಿಲ್ ನ ಆರ್ಡರ್ ಪಡೆದುಕೊಂಡು ಹೋಗುತ್ತಾರೆ. ಅದರ ಬೆಲೆಯನ್ನು

ಕೆದಿಲ ವಿದ್ಯಾರ್ಥಿಗಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್: ಕ್ರಮಕ್ಕೆ ಒತ್ತಾಯ! Read More »

ವ್ಯಕ್ತಿತ್ವ ವಿಕಸನದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸುವುದು ಅತ್ಯಗತ್ಯ: ಪ್ರತಿಭಾ ಶೋಭನಮ್’ನಲ್ಲಿ ಕನಿಷ್ಕ ಎಸ್ ಚಂದ್ರ

ಪುತ್ತೂರು: ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮೊಳಗಿನ ಶಕ್ತಿಯ ಅರಿವುಂಟಾಗುತ್ತದೆ. ಇದು ಹೊಸ ಅನುಭವಗಳನ್ನು ತೆರೆದಿಡಲು ಸಹಾಯವಾಗುತ್ತದೆ.  ಮುಂದಿನ ತಲೆಮಾರಿಗೆ ನಮ್ಮೊಳಗಿನ ಜ್ಞಾನವನ್ನು ಹಂಚಬೇಕು. ಕಾಲಕ್ಕೆ ತಕ್ಕುದಾದ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂಬುದನ್ನು ನಿರ್ಧರಿಸುವುದು ಉತ್ತಮ ಎಂದು ಪುತ್ತೂರು ಪಿಡಬ್ಲ್ಯುಡಿ ಇಂಜಿನಿಯರ್ ಕನಿಷ್ಕ ಎಸ್ ಚಂದ್ರ ಹೇಳಿದರು. ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪ್ರತಿಭಾ ಶೋಭನಮ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ

ವ್ಯಕ್ತಿತ್ವ ವಿಕಸನದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸುವುದು ಅತ್ಯಗತ್ಯ: ಪ್ರತಿಭಾ ಶೋಭನಮ್’ನಲ್ಲಿ ಕನಿಷ್ಕ ಎಸ್ ಚಂದ್ರ Read More »

ಬೆಳಂದೂರು ಕಾಲೇಜಿನಲ್ಲಿ ರಂಗ ತರಬೇತಿ ಶಿಬಿರ

ಬೆಳಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಸಾಂಸ್ಕೃತಿಕ ಸಮಿತಿ ಮತ್ತು ಕನ್ನಡ ವಿಭಾಗದ ನೇತೃತ್ವದಲ್ಲಿ ಒಂದು ದಿನದ ರಂಗ ತರಬೇತಿ ಶಿಬಿರ ನಡೆಯಿತು. ತರಬೇತುದಾರರಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ರಂಗ ತರಬೇತುದಾರ ರಾಕೇಶ್ ಆಚಾರ್ಯ ಬನಾರಿ ಭಾಗವಹಿಸಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವ ಮತ್ತು ಕಲೆಯೂ ಹೇಗೆ ವ್ಯಕ್ತಿತ್ವದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಶಂಕರ ಭಟ್ ಪಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ

ಬೆಳಂದೂರು ಕಾಲೇಜಿನಲ್ಲಿ ರಂಗ ತರಬೇತಿ ಶಿಬಿರ Read More »

error: Content is protected !!
Scroll to Top