ಕ್ಯಾಂಪಸ್‌

ಅಕ್ಷಯ ಕೆರಿಯರ್ ಅಕಾಡೆಮಿ ಹಾಗೂ ಮಂಗಳೂರು ಕೆರಿಯರ್ ಡೆಸ್ಟಿನಿಯಿಂದ ಪುತ್ತೂರಿನಲ್ಲಿ  ಎರಡನೇ ಬ್ಯಾಚ್ ಏವಿಯೇಶನ್  ಮತ್ತು ಸ್ಯಾಪ್ (SAP) ಕೋರ್ಸ್ ತರಬೇತಿ ಆರಂಭ

ಪುತ್ತೂರು: ಅಕ್ಷಯ ಕೆರಿಯರ್ ಅಕಾಡೆಮಿ ಮತ್ತು ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಹಯೋಗದಲ್ಲಿ ಪುತ್ತೂರಿನ ದರ್ಬೆ ಆರಾಧ್ಯ ಆರ್ಕೆಡ್‍ ನಲ್ಲಿ ಒಂದು ವರ್ಷದ ಡಿಪ್ಲೊಮಾ ಇನ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸಿನ ಎರಡನೇ ಬ್ಯಾಚ್ ಮತ್ತು ಸ್ಯಾಪ್  ಕೋರ್ಸ್ ಬ್ಯಾಚ್ ಆರಂಭಿಸಲಾಯಿತು. ಹೊಸ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭ ಅಕ್ಷಯ ಕಾಲೇಜಿನ ಚೇರ್ಮೆನ್ ಜಯಂತ್ ನಡುಬೈಲು ಮಾತನಾಡಿ, ದರ್ಬೆ ಬೈಪಾಸ್ ರಸ್ತೆಯ ಫಾ.ಪತ್ರಾವೋ ಸರ್ಕಲ್ ಬಳಿಯ ಆರಾಧ್ಯ ಆರ್ಕೇಡ್‍ ನ ಮೂರನೇ ಮಹಡಿಯಲ್ಲಿ […]

ಅಕ್ಷಯ ಕೆರಿಯರ್ ಅಕಾಡೆಮಿ ಹಾಗೂ ಮಂಗಳೂರು ಕೆರಿಯರ್ ಡೆಸ್ಟಿನಿಯಿಂದ ಪುತ್ತೂರಿನಲ್ಲಿ  ಎರಡನೇ ಬ್ಯಾಚ್ ಏವಿಯೇಶನ್  ಮತ್ತು ಸ್ಯಾಪ್ (SAP) ಕೋರ್ಸ್ ತರಬೇತಿ ಆರಂಭ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆಯ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯನ್ನು ಆಯೋಜಿಸಲಾಯಿತು. ಕಾಲೇಜಿನ ಉಪಪ್ರಾಚಾರ್ಯ ಡಾ.ವಿಜಯಕುಮಾರ್ ಮೊಳೆಯಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪರಸ್ಪರ ಸೌಹಾರ್ದತೆಯಿಂದ ರಾಷ್ಟ್ರ ಸದೃಢವಾಗುತ್ತದೆ. ವಿದ್ಯಾರ್ಥಿಗಳು ಧರ್ಮ, ಭಾಷೆ ಹಾಗೂ ಮತೀಯ ಕಲ್ಪನೆಗಳನ್ನು ಮೀರಿ ಪರಸ್ಪರ ಸೌಹಾರ್ದತೆಯನ್ನು ಕಾಪಾಡಿಕೊಂಡು ಸದ್ಭಾವನೆಯನ್ನು ಮೂಡಿಸಬೇಕೆಂದು ಹೇಳಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ವಿನಯಚಂದ್ರ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ವಂದಿಸಿದರು.

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ Read More »

ವಿದ್ಯಾಭಾರತಿ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ವಿದ್ಯಾಭಾರತಿ ದಕ್ಷಿಣ ಕನ್ನಡದ ವತಿಯಿಂದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯು ಶ್ರೀ ಭಾರತಿ ವಿದ್ಯಾಸಂಸ್ಥೆ ಅಲಂಕಾರು ಇದರ ಆಶ್ರಯದಲ್ಲಿ ಶ್ರೀ ಭಾರತಿ ಪ್ರೌಢ ಶಾಲೆಯಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಅಭಿಜ್ಞಾ ಶಾಂಭವಿ 8ನೇ ಪ್ರಥಮ ಸ್ಥಾನ, ಬಾಲಕರ ವಿಭಾಗದಲ್ಲಿ ಪ್ರಥಮ್.ಎಂ 8ನೇ ತರಗತಿ ಪ್ರಥಮ ಸ್ಥಾನ ಹಾಗೂ ರಂಜಿತ್ ಪ್ರಭು 8ನೇ ತರಗತಿ ಪ್ರಥಮ ಸ್ಥಾನ ಪಡೆದು ಸೆಪ್ಟೆಂಬರ್ 6 ಮತ್ತು 7ರಂದು ಬೆಳಗಾವಿಯಲ್ಲಿ ನಡೆಯಲಿರುವ

ವಿದ್ಯಾಭಾರತಿ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್‍ ಟೆಕ್ನಾಲಜಿಯಲ್ಲಿ ಆನ್ಲೈನ್‌ನಲ್ಲಿ ಸುರಕ್ಷಿತವಾಗಿರಿ ಜಾಗೃತಿ ಕಾರ್ಯಕ್ರಮ

ಪುತ್ತೂರು: ಆಧುನಿಕ ಸಮಾಜದಲ್ಲಿ ಸೈಬರ್ ಅಪರಾಧ ಹಾಗೂ ಮಾದಕ ದ್ರವ್ಯಗಳ ಬಳಕೆ ವ್ಯಾಪಕವಾಗಿ ಹೆಚ್ಚಳವನ್ನು ಕಂಡಿದ್ದು, ಇದು ವ್ಯಕ್ತಿಯೊಬ್ಬನ ಚಾರಿತ್ರ್ಯ ಹಾಗೂ ಹಣಕಾಸಿನ ಮೂಲವನ್ನು ನಾಶಮಾಡುತ್ತವೆ ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಪ್ರತಿಯೊಬ್ಬರೂ ಸೈಬರ್ ಕ್ರೈಂ ಬಗ್ಗೆ ತಿಳುವಳಿಕೆ ಹೊಂದುವುದು ಆವಶ್ಯಕ ಎಂದು ಪುತ್ತೂರು ಟ್ರಾಫಿಕ್ ಪೋಲೀಸ್‍ ಠಾಣೆಯ ಪಿಎಸ್‌ಐ ಉದಯ ರವಿ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್‍ ಟೆಕ್ನಾಲಜಿ ಕಾಲೇಜು ಆಂತರಿಕ ದೂರು ಸಮಿತಿ ಆಶ್ರಯದಲ್ಲಿ ನಡೆದ ಆನ್ಲೈನ್‌ನಲ್ಲಿ ಸುರಕ್ಷಿತವಾಗಿರಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್‍ ಟೆಕ್ನಾಲಜಿಯಲ್ಲಿ ಆನ್ಲೈನ್‌ನಲ್ಲಿ ಸುರಕ್ಷಿತವಾಗಿರಿ ಜಾಗೃತಿ ಕಾರ್ಯಕ್ರಮ Read More »

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರತಿಜ್ಞಾ ವಿಧಿ ಸ್ವೀಕಾರ

ಪುತ್ತೂರು:  ಅಕ್ಷಯ ಎಜುಕೇಶನ್‍ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನಲ್ಲಿ   ವಿದ್ಯಾರ್ಥಿ ಒಕ್ಕೂಟದ ಪ್ರತಿಜ್ಞಾ ವಿಧಿ ಸ್ವೀಕಾರ ಕಾಲೇಜಿನ ಸಭಾಂಗಣದಲ್ಲಿ      ಜರುಗಿತು. ಕಾರ್ಯಕ್ರಮವನ್ನು  ದೀಪ  ಬೆಳಗಿಸಿ ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ, ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ?  ಮತ್ತು ಏನಾಗ ಬೇಕು ?  ಎಂದು ನಾವೇ  ತೀರ್ಮಾನಿಸಬೇಕು. ಜೀವನದಲ್ಲಿ  ಲಭಿಸುವ  ಅವಕಾಶವನ್ನು ಅತ್ಯಂತ ಶ್ರದ್ದೆಯಿಂದ ಮತ್ತು ನಂಬಿಕೆಯಿರಿಸಿ ಮಾಡಿದಲ್ಲಿ ಮಾತ್ರ ನಮ್ಮ

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರತಿಜ್ಞಾ ವಿಧಿ ಸ್ವೀಕಾರ Read More »

ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡಕ್ಕೆ ದ್ವಿತೀಯ ಬಹುಮಾನ

ಪುತ್ತೂರು: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಡಾ। ವಿಕ್ರಂ ಸಾರಾಭಾಯಿ ಅವರ ಜನ್ಮದಿನದ ಸ್ಮರಣಾರ್ಥ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮತ್ತು ಕೆನರಾ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಕೆನರಾ ವಿಕಾಸ್ ಕ್ಯಾಂಪಸ್‍ ನಲ್ಲಿ ಆಯೋಜಿಸಿರುವ ವಿಕ್ರಮ ಕಾರ್ಯಕ್ರಮದಲ್ಲಿ 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ‘ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ’ಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮೂರು ತಂಡಗಳು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ವಿಕ್ರಮ್‍ ಟ್ರೋಫಿ ಹಾಗೂ ಮೂರು ಸಾವಿರ

ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡಕ್ಕೆ ದ್ವಿತೀಯ ಬಹುಮಾನ Read More »

ಅಕ್ಷಯ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ಅಕ್ಷಯ ಕಾಲೇಜು, ಪುತ್ತೂರಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕ (ಐಕ್ಯೂಎಸಿ) ಸಹಯೋಗದೊಂದಿಗೆ ಆಯೋಜಿಸಲಾದ ಎನ್‌ ಎಸ್‌ ಎಸ್‌ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಗಸ್ಟ್ 12, 2025ರಂದು ಕಾಲೇಜು ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು, ಜಿಡೆಕಲ್ಲಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು “ಎನ್‌ ಎಸ್‌ ಎಸ್ ಕೇವಲ ಒಂದು ಘಟಕವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಪಾಠಶಾಲೆ. ಇಲ್ಲಿ

ಅಕ್ಷಯ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ Read More »

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಅಗತ್ಯ – ವಿಧಾನ ಪರಿಷತ್ ಸದಸ್ಯ (ಶಾಸಕ) ಕಿಶೋರ್ ಕುಮಾರ್, ಪುತ್ತೂರು

ವಿಧಾನಪರಿಷತ್ತಿನ ಮುಂಗಾರು ಅಧಿವೇಶನದಲ್ಲಿ ಶಾಸಕ ಶ್ರೀ ಕಿಶೋರ್ ಕುಮಾರ್ ಅವರು ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಮಾನ್ಯ ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ – ಕಾಡು ಪ್ರಾಣಿ ಸಂಘರ್ಷದ ಕುರಿತು ಸೂಕ್ತವಾದ ಕ್ರಮವನ್ನು ಕೈಗೊಂಡು ಈ ಭಾಗದ ಜನರ ಬಹುಮುಖ್ಯ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗಿ ಬೆಳೆ ಹಾನಿ ಮಾಡುವ ಘಟನೆಗಳು

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಅಗತ್ಯ – ವಿಧಾನ ಪರಿಷತ್ ಸದಸ್ಯ (ಶಾಸಕ) ಕಿಶೋರ್ ಕುಮಾರ್, ಪುತ್ತೂರು Read More »

ಆ.10 : ಮಂಡ್ಯದಲ್ಲಿ ಕೆ.ಆರ್ದ.ಎಸ್ ಪಾರ್ಟಿಯ ಸಂಸ್ಥಾಪನ ದಿನ, ಮಹಾ ಅಧಿವೇಶನ

ಪುತ್ತೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 6ನೇ ಸಂಸ್ಥಾಪನಾ ದಿನ ಮತ್ತು ಮಹಾ ಅಧಿವೇಶನ ಆ.10ರಂದು ಮಂಡ್ಯದ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 300 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕೆಆರ್‌ಎಸ್ ಪಾರ್ಟಿಯ ದ.ಕ.ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಹೇಳಿದ್ದಾರೆ. ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019ರ ಆ.10ರಂದು ಬೆಂಗಳೂರಿನಲ್ಲಿ ಪಕ್ಷವು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಮತ್ತು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಅವರಿಂದ ಉದ್ಘಾಟನೆಗೊಂಡು ಕಳೆದ ಆರು ವರ್ಷಗಳಿಂದ

ಆ.10 : ಮಂಡ್ಯದಲ್ಲಿ ಕೆ.ಆರ್ದ.ಎಸ್ ಪಾರ್ಟಿಯ ಸಂಸ್ಥಾಪನ ದಿನ, ಮಹಾ ಅಧಿವೇಶನ Read More »

ಅಕ್ಷಯ ಕಾಲೇಜಿನಲ್ಲಿ 21 ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ ಕಾರ್ಯಾಗಾರ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಬಿಸಿಎ ವಿಭಾಗದ “ಬೈಟ್ ಬ್ಲಿಜ್” ಐಟಿ ಕ್ಲಬ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “21 ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ” ಎಂಬ ವಿಷಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ವಾಣಿಜ್ಯ ವಿಭಾಗದ ಉಪನ್ಯಾಸಕ ಕಿಶನ್ ಎನ್ ರಾವ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. 21 ನೇ ಶತಮಾನದಲ್ಲಿ ಸ್ಪರ್ಧಾತ್ಮಕವಾಗಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಉಪಯೋಗಿಸಿ ತಂತ್ರಜ್ಞಾನದಲ್ಲಿ ಕ್ರಾಂತಿ ಯನ್ನು ಸೃಷ್ಟಿಸುತ್ತಿರುವ ಮನುಷ್ಯ ನಿಗೆ ಅಷ್ಟೇ ಸವಾಲುಗಳನ್ನು

ಅಕ್ಷಯ ಕಾಲೇಜಿನಲ್ಲಿ 21 ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ ಕಾರ್ಯಾಗಾರ Read More »

error: Content is protected !!
Scroll to Top