ಸಮಾಜದಲ್ಲಿ ಹೆಣ್ಣಿಗೆ ಪ್ರಾಧಾನ್ಯತೆ ಕೊಡದಿದ್ದರೆ ಪ್ರಪಂಚ ನೆಲೆ ನಿಲ್ಲಲು ಸಾಧ್ಯವಿಲ್ಲ : ಡಾ.ಅನಿಲಾ ದೀಪಕ್ ಶೆಟ್ಟಿ
ಪುತ್ತೂರು: ಅಜ್ಞಾನ ನಮ್ಮನ್ನು ಪಾತಾಳಕ್ಕೆ ತಳ್ಳುತ್ತದೆ. ಅದನ್ನು ನಾವು ಹೋಗಲಾಡಿಸಿ ನಮ್ಮನ್ನು ನಾವು ಸುಜ್ಞಾನದೆಡೆಗೆ ಕೊಂಡೊಯ್ಯಬೇಕು. ಅದಕ್ಕಾಗಿ ಅತಿ ಹೆಚ್ಚು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಗೌರವ ದೊರಕಬೇಕು. ಹೆಣ್ಣಿಗೆ ಪ್ರಾಧಾನ್ಯತೆ ನೀಡದಿದ್ದಲ್ಲಿ ಪ್ರಪಂಚ ನೆಲೆ ನಿಲ್ಲಲು ಸಾಧ್ಯವಿಲ್ಲ ಇದಕ್ಕೆ ನಮ್ಮ ಪುರಾಣಗಳೇ ಪ್ರತ್ಯಕ್ಷ ಸಾಕ್ಷಿ ಎಂದು ಡಾ.ಅನಿಲಾ ದೀಪಕ್ ಶೆಟ್ಟಿ ಹೇಳಿದರು. ವಿವೇಕಾನಂದ ಮಹಾವಿದ್ಯಾಲಯ ಕಲಾ, ವಿಜ್ಞಾನ, ವಾಣಿಜ್ಯ (ಸ್ವಾಯತ್ತ) ಇಲ್ಲಿನ ಸಮಾಜಶಾಸ್ತ್ರ ವಿಭಾಗ, ಐಕ್ಯೂಎಸಿ ಘಟಕ, ಮಹಿಳಾ ಕೋಶ ಕುಂದುಕೊರತೆ ಮೇಲ್ಮನವಿ […]