1500 ರೂ. ಇದ್ದ ಅಂಕಪಟ್ಟಿ ನೈಜತೆ ಪರಿಶೀಲನೆ ಶುಲ್ಕ 500 ರೂ.ಗೆ ಇಳಿಕೆ: ಶಾಸಕ ಅಶೋಕ್ ರೈ ಕಾರ್ಯಕ್ಕೆ ಶ್ಲಾಘನೆ
ಪುತ್ತೂರು: ಅಂಕಪಟ್ಟಿ ನೈಜತೆ ಪರಿಶೀಲನೆಯ ದುಬಾರಿ ಶುಲ್ಕ ಉದ್ಯೋಗ ಆಕಾಂಕ್ಷಿತರಿಗೆ ಹೊರೆಯಾಗಿ ಪರಿಣಮಿಸಿದ್ದು, ಶುಲ್ಕವನ್ನು ಕಡಿತ ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಒತ್ತಾಯ ಮಾಡಿದ್ದರ ಫಲವೆಂಬಂತೆ ಮಂಗಳೂರು ವಿಶ್ವವಿದ್ಯಾಲಯ ಶುಲ್ಕದಲ್ಲಿ ವಿನಾಯಿತಿ ನೀಡಿದೆ. ಗುರುವಾರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಇದುವರೆಗೆ ಒಂದು ಅಂಕಪಟ್ಟಿಗೆ 1500 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ ಎಲ್ಲಾ ಅಂಕಪಟ್ಟಿಗೆ ಒಟ್ಟು 13500 ರೂ. ಶುಲ್ಕ ಪಾವತಿಸಬೇಕಾಗಿತ್ತು. ಗ್ರಾಮೀಣ ಭಾಗದ ಬಡ ಉದ್ಯೋಗ ಆಕಾಂಕ್ಷಿತರು […]










