ಕ್ಯಾಂಪಸ್‌

ಅಮಿತ್ ಶಾ ಆಗಮನಕ್ಕೆ ಬಿಗಿ ಭದ್ರತೆ ಹೀಗಿದೆ | ಪಾರ್ಕಿಂಗ್, ಊಟದ ವ್ಯವಸ್ಥೆ ಬಗ್ಗೆಯೂ ಇಲ್ಲಿದೆ ಮಾಹಿತಿ

ಪುತ್ತೂರು : ಪ್ರತಿಷ್ಠಿತ ಅಂತರಾಜ್ಯ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಹಾಗೂ ಹನುಮಗಿರಿಯಲ್ಲಿ ಅಮರಗಿರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು  ಇಂದು (ಫೆ. 11) ಪುತ್ತೂರಿಗೆ ಕೇಂದ್ರ ಗೃಹ ಸಚಿವ, ದೇಶದ ಪ್ರಥಮ ಸಹಕಾರ ಸಚಿವ ಅಮಿತ್‍ ಶಾ ಭೇಟಿ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್‍ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‍ ನಿಯೋಜನೆ ಮಾಡಲಾಗಿದೆ. ಅಮಿತ್‍ ಶಾ ಸಹಿತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ರಾಜ್ಯದ ಹಲವು ಸಚಿವರು, ಜನಪ್ರತಿನಿಧಿಗಳು, ರಾಜಕೀಯ ನಾಯಕರುಗಳು […]

ಅಮಿತ್ ಶಾ ಆಗಮನಕ್ಕೆ ಬಿಗಿ ಭದ್ರತೆ ಹೀಗಿದೆ | ಪಾರ್ಕಿಂಗ್, ಊಟದ ವ್ಯವಸ್ಥೆ ಬಗ್ಗೆಯೂ ಇಲ್ಲಿದೆ ಮಾಹಿತಿ Read More »

ಪ್ರೊ.ಹರಿಣಾಕ್ಷಿ ಕೇವಳ ಅವರಿಗೆ ಪಿಹೆಚ್. ಡಿ. ಪದವಿ

ಪುತ್ತೂರು : ಉಡುಪಿಯ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಹರಿಣಾಕ್ಷಿ ಕೇವಳ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಪಿಹೆಚ್. ಡಿ. ಪದವಿ ಲಭಿಸಿದೆ. ಅವರು “ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಕಥೆಗಳಲ್ಲಿಮಹಿಳೆ” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಡಾ. ಹರಿಣಾಕ್ಷಿ ಕೇವಳ ಅವರು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅವರ ಪತ್ನಿ.. ಅವರ ಹಿರಿಯ ಮಗ ಸುಜನ್ ಕೇವಳ ಉದ್ಯಮಿಯಾಗಿದ್ದು ಕಿರಿಯ

ಪ್ರೊ.ಹರಿಣಾಕ್ಷಿ ಕೇವಳ ಅವರಿಗೆ ಪಿಹೆಚ್. ಡಿ. ಪದವಿ Read More »

ಪ್ರೇರಣಾ ಸಂಸ್ಥೆಯಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ | ಫೆ.9 ರಿಂದ ಫೆ.21 ರ ತನಕ ನೋಂದಾವಣೆ

ಪುತ್ತೂರು : ನಗರದ ಅರುಣಾ ಥಿಯೇಟರ್ ಎದುರಿನ, ಕೆನರಾ ಬ್ಯಾಂಕ್ ಸಮೀಪ ಇರುವ ಪ್ರಭು ಬಿಲ್ಡಿಂಗನಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಕೋಚಿಂಗ್ ಸೆಂಟರ್‌ನಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು,  ಫೆ.9 ರಿಂದ ಫೆ.21 ರ ತನಕ ನೋಂದಾವಣೆ ನಡೆಯಲಿದೆ. ಸರಕಾರಿ ಹುದ್ದೆಗಳಿಗೆ ಕೆಎಎಸ್ ಮತ್ತು ಐಎಎಸ್ ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದು, ಮೊದಲು ಬಂದ 20 ಮಂದಿಗೆ ಮಾತ್ರ ಅವಕಾಶವಿದೆ. ಆಸಕ್ತರು ಹೆಸರು ನೋಂದಾಯಿಸಲು ಪ್ರೇರಣಾ ಸಂಸ್ಥೆಯನ್ನು ಮುಖತಃ ಅಥವಾ

ಪ್ರೇರಣಾ ಸಂಸ್ಥೆಯಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ | ಫೆ.9 ರಿಂದ ಫೆ.21 ರ ತನಕ ನೋಂದಾವಣೆ Read More »

ಮುಂಡೂರು ಶಾಲೆಯಲ್ಲಿ ನೀರಿನ ಘಟಕ, ಸ್ಮಾರ್ಟ್‍ ಕ್ಲಾಸ್‍ ಉದ್ಘಾಟನೆ

ಪುತ್ತೂರು : ಮುಂಡೂರು ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳು ಮನೆಯಿಂದ ಪ್ಲಾಸ್ಟಿಕ್‍ ಬಾಟಲಿಗಳಲ್ಲಿ ನೀರು ತರಬಾರದು ಎಂಬ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗಳಿಗೆ ಒದಗಿಸಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ವಿಜಯ ಪಿ, ಎಎಸ್‍ಡಿಎಂ ಸಿ ಅಧ್ಯಕ್ಷ ರಮೇಶ್ ಪಜಿಮಣ್ಣು, ಗ್ರಾ.ಪಂ. ಸದಸ್ಯ

ಮುಂಡೂರು ಶಾಲೆಯಲ್ಲಿ ನೀರಿನ ಘಟಕ, ಸ್ಮಾರ್ಟ್‍ ಕ್ಲಾಸ್‍ ಉದ್ಘಾಟನೆ Read More »

ಡಿಜಿಟಲ್‍ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಚಣಿಕ, ವೈಜ್ಞಾನಿಕ ವ್ಯವಸ್ಥೆ ಆಗಬೇಕು : ಶಾಸಕ ಸಂಜೀವ ಮಠಂದೂರು | ಸುದಾನ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಭೆ

ಪುತ್ತೂರು : ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ  ಫೆ 9 ಗುರುವಾರ ಮಂಜಲ್ಪಡ್ಪು ಸುಧಾನ ಪ್ರೌಢ ಶಾಲಾ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಪ್ರೌಢ ಶಾಲೆಗಳಲ್ಲಿ ಯಾವುದೇ ಕೊರತೆ ಆಗದಂತೆ ಸರಕಾರ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ಸರಕಾರಿ ಶಾಲೆಗಳನ್ನು ಬೆಳೆಸುವ, ಉಳಿಸುವ ಕೆಲಸ ಆಗಿದೆ. ರಾಷ್ಟ್ರಿಯ ಶಿಕ್ಷಣ ನೀತಿಯಿಂದ ಇಂದಿನ ನಮ್ಮ ಶಿಕ್ಷಣ  ಡಿಜಿಟಲ್ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಷಣಿಕ, ವೈಜ್ಞಾನಿಕ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆಗಬೇಕು. ಈ

ಡಿಜಿಟಲ್‍ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಚಣಿಕ, ವೈಜ್ಞಾನಿಕ ವ್ಯವಸ್ಥೆ ಆಗಬೇಕು : ಶಾಸಕ ಸಂಜೀವ ಮಠಂದೂರು | ಸುದಾನ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಭೆ Read More »

ಮಾಣಿಲ ಪ್ರೌಢಶಾಲಾ ದ್ವಿತೀಯ ದರ್ಜೆ ಸಹಾಯಕಿ ಕೆ.ಗಿರಿಜ ಅವರಿಗೆ ಬೀಳ್ಕೊಡುಗೆ

ಮಾಣಿಲ : ಜ.31 ರಂದು ಮಾಣಿಲ ಸರಕಾರಿ ಪ್ರೌಢಶಾಲೆಯಿಂದ ವಯೋ ನಿವೃತ್ತಿ ಹೊಂದಿದ ದ್ವಿತೀಯ ದರ್ಜೆ ಸಹಾಯಕಿ ಕೆ.ಗಿರಿಜ ಅವರನ್ನು ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಪರವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗಿರಿಜಾ ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ,, ಮಾಣಿಲ ಗ್ರಾಮ ಪಂಚಾಯತ್ನ ಅಧ್ಯಕ್ಷೆ ವನಿತಾ, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ, ನಿವೃತ್ತ ಶಿಕ್ಷಕ ಅನಂತ ಭಟ್, ಎಸ್‍ಡಿಎಂಸಿ ಸದಸ್ಯರಾದ ಚಂದ್ರಶೇಖರ ರಾವ್

ಮಾಣಿಲ ಪ್ರೌಢಶಾಲಾ ದ್ವಿತೀಯ ದರ್ಜೆ ಸಹಾಯಕಿ ಕೆ.ಗಿರಿಜ ಅವರಿಗೆ ಬೀಳ್ಕೊಡುಗೆ Read More »

ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯಕೂಟ

ಪುತ್ತೂರು : ಕುಟುಂಬ ವ್ಯವಸ್ಥೆ ಭಾರತದ ಶಕ್ತಿ. ಕುಟುಂಬದಿಂದ ದೇಶ ಕಟ್ಟುವ ಕೆಲಸ ಪ್ರಾರಂಭವಾಗುವುದು. ಜನನಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು. ದೇಶಕ್ಕಾಗಿ ಅಳಿಲ ಸೇವೆ ಎಲ್ಲರೂ ಮಾಡಬೇಕು. ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರ ಕೆಲ ನಿಮಿಷಗಳ ಭಾಷಣ ಅವರನ್ನು ಜಗದ್ವಂದ್ಯರನ್ನಾಗಿ ಮಾಡಿತು. ಗುರಿ, ಶಿಸ್ತು, ಪ್ರಯತ್ನದಿಂದ ಮುಂದೆ ಬನ್ನಿ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ ಎಂದು  ಖ್ಯಾತ ವಾಗ್ಮಿ ರಂಜನ್ ಬೆಳ್ಳರ್ಪಾಡಿ ಹೇಳಿದರು. ಅವರು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ  ದ್ವಿತೀಯ

ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯಕೂಟ Read More »

ಮುಕ್ವೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ ಉದ್ಘಾಟನೆ

ಪುತ್ತೂರು : ಮುಕ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕರ ವಿಶೇಷ ಅನುದಾನದಿಂದ ಒದಗಿಸಿದ ಸ್ಮಾರ್ಟ್ ಕ್ಲಾಸ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿದರು. ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್ ಮಕ್ಕಾಳಿಗೆ ಸಮವಸ್ತ್ರ ವಿತರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಎಲರೂ ಶ್ರಮಿಸಿದಾಗ ನಮ್ಮ ಸರಕಾರಿ ಶಾಲೆ ಇನ್ನಷ್ಟು ಬೆಳೆಯುಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಚಕ್ರ ಎಸೆತ

ಮುಕ್ವೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ ಉದ್ಘಾಟನೆ Read More »

ಇತಿಹಾಸ ಸೃಷ್ಟಿಸುವ ಕೆಲಸ  ಸರಕಾರಿ ಶಾಲಾ ಮಕ್ಕಳು ಮಾಡುತ್ತಾರೆ : ಶಾಸಕ ಸಂಜೀವ ಮಠಂದೂರು

ಪುತ್ತೂರು : ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಗೆ ಶೀಲಾನ್ಯಾಸ, ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಸೋಮವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ, ಸಮಾಜದಲ್ಲಿ ಒಳ್ಳೆಯ ಇತಿಹಾಸ ಸೃಷ್ಟಿ ಮಾಡುವ ಕೆಲಸವನ್ನು ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಮಾಡುತ್ತಾರೆ. ಮಕ್ಕಳಿಗೆ ಮೂಲಭೂತ ಸೌಕರ್ಯವಾದ ಶೌಚಾಲಯ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್, ನೀರಿನ ಘಟಕ ಕೊಡುವ ಕೆಲಸ ಸರಕಾರ ಮಾಡಿದೆ. ಹೀಗೆ ಹಲವು ಯೋಜನೆಗಳನ್ನು ಸರಕಾರ ತಂದಿದೆ ಎಂದರು. ಕಾರ್ಯಕ್ರಮದಲ್ಲಿ

ಇತಿಹಾಸ ಸೃಷ್ಟಿಸುವ ಕೆಲಸ  ಸರಕಾರಿ ಶಾಲಾ ಮಕ್ಕಳು ಮಾಡುತ್ತಾರೆ : ಶಾಸಕ ಸಂಜೀವ ಮಠಂದೂರು Read More »

ಕಾವು ಮಾಡನ್ನೂರು ಸ.ಹಿ.ಪ್ರಾ. ಶಾಲೆಯಲ್ಲಿ ನೂತನ ಕೊಠಡಿಗೆ ಶಂಕುಸ್ಥಾಪನೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಪುತ್ತೂರು : ಕಾವು ಮಾಡನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವು ವಿವೇಕ ಶಾಲಾ ಯೋಜನೆಯಡಿ ನೂತನ ಕೊಠಡಿಗೆ ಶಂಕುಸ್ಥಾಪನೆ ಮತ್ತು ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಸೋಮವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ, ಸಂಸ್ಕಾರಯುತ ಶಿಕ್ಷಣಕೆ ಪೂರಕವಾಗಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಕುಡಿಯುವ ನೀರಿನ ಘಟಕ ಕೊಡುವ ಕೆಲಸ ಸರಕಾರ ಮಾಡಿದೆ. ಮಕ್ಕಳ ವಿದ್ಯಾಭ್ಯಾಸಕೆ ಪೂರಕವಾಗಿ ಸರಕಾರಿ ಶಾಲೆಗಳಿಗೆ ಹಲವು ಯೋಜನೆಗಳ ಮುಕಾಂತರ ಸ್ಮಾರ್ಟ್ ಕ್ಲಾಸ್ ಒದಗಿಸಿ ಮಕ್ಕಳ

ಕಾವು ಮಾಡನ್ನೂರು ಸ.ಹಿ.ಪ್ರಾ. ಶಾಲೆಯಲ್ಲಿ ನೂತನ ಕೊಠಡಿಗೆ ಶಂಕುಸ್ಥಾಪನೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ Read More »

error: Content is protected !!
Scroll to Top