ದೂರ ಶಿಕ್ಷಣ ಇನ್ನು ಹತ್ತಿರ | ಶಿಕ್ಷಣ ಪಡೆಯುವ ನಿಮ್ಮ ಕನಸು ಪ್ರೇರಣಾದಲ್ಲಿ ನನಸು! | ವಯಸ್ಸಿನ ಅಂಜಿಕೆ ಬೇಡ, ಸದಾವಕಾಶದ ಬಾಗಿಲು ತೆರೆದ ಪ್ರೇರಣಾ
ಪುತ್ತೂರು: ಶಿಕ್ಷಣ ಪಡೆಯುವ ವಯಸ್ಸಲ್ಲಿ ಶಿಕ್ಷಣ ಪಡೆದಿಲ್ಲವೇ? ಕೆಲಸದ ಒತ್ತಡದಿಂದ ಶಿಕ್ಷಣದಿಂದ ದೂರ ಉಳಿದಿರುವಿರೇ? ಹೀಗಿದ್ದು, ವಿದ್ಯಾಭ್ಯಾಸ ಮುಂದುವರಿಸುವ ಅಪೇಕ್ಷೆ ನಿಮ್ಮದಾಗಿದ್ದರೆ ಪುತ್ತೂರಿನ ಪ್ರೇರಣಾ ಸಂಸ್ಥೆಗೆ ಭೇಟಿ ನೀಡಿ. ವಿದ್ಯಾಭ್ಯಾಸ ಪಡೆಯುವುದು ಎಲ್ಲರ ಬಯಕೆಯೂ ಹೌದು. ಅದರಲ್ಲೂ ಅನಿವಾರ್ಯ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿ ಕೆಲಸಕ್ಕೆ ಸೇರಿದವರು ಕಾಲೇಜನ್ನು, ಕಾಲೇಜು ವಿದ್ಯಾರ್ಥಿಗಳನ್ನು ನೋಡಿ ತಾವು ಶಿಕ್ಷಣ ಮುಂದುವರಿಸಬೇಕು ಎಂದು ಅಪೇಕ್ಷೆ ಪಡುತ್ತಿರುತ್ತಾರೆ. ಆದರೆ ಅದು ಹೇಗೆ ಎಂದು ತಿಳಿಯದು. ಆದ್ದರಿಂದ ಶಿಕ್ಷಣ ಪಡೆಯಬೇಕೆಂಬ ಕನಸು ಕನಸಾಗಿಯೇ ಉಳಿದಿರುತ್ತದೆ. ಆದರೆ […]










