ಕ್ಯಾಂಪಸ್‌

ಉಪನ್ಯಾಸಕ ಹುದ್ದೆ ಶಿಫ್ಟ್: ಜಿಡೆಕಲ್ಲು ವಿದ್ಯಾರ್ಥಿಗಳಿಂದ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ

ಪುತ್ತೂರು: ಎರಡು ಉಪನ್ಯಾಸಕ ಹುದ್ದೆಗಳನ್ನು ಶಿಫ್ಟ್ ಮಾಡಿರುವ ಸರಕಾರದ ಕ್ರಮವನ್ನು ಖಂಡಿಸಿ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಸೋಮವಾರ ಕಾಲೇಜು ಭಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ನಾಯಕ ವಿನೀತ್ ಮಾತನಾಡಿ, ಕಾಲೇಜಿನಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಆಗಬೇಕು ಎಂದು ಹೇಳುತ್ತಾರೆ. ಆದರೆ ಇರುವ ಉಪನ್ಯಾಸಕ ಹುದ್ದೆಯನ್ನೇ ಪಿರಿಯಾಪಟ್ಟಣಕ್ಕೆ ಶಿಫ್ಟ್ ಮಾಡುತ್ತಾರೆ. ಹೀಗಾದರೆ ಕಾಲೇಜು ಅಭಿವೃದ್ಧಿ ಆಗುವುದು ಹೇಗೆ? ಕಾಲೇಜಿಗೆ ಆಗಮಿಸಲು ಬಸ್ […]

ಉಪನ್ಯಾಸಕ ಹುದ್ದೆ ಶಿಫ್ಟ್: ಜಿಡೆಕಲ್ಲು ವಿದ್ಯಾರ್ಥಿಗಳಿಂದ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ Read More »

ಸವಣೂರು ಸ.ಪ.ಪೂ. ಕಾಲೇಜಿನ ನೂತನ ಗೇಟ್ ಉದ್ಘಾಟಿಸಿದ ಸವಣೂರು ಸೀತಾರಾಮ ರೈ

ಪುತ್ತೂರು: ಸ್ವಾತಂತ್ರ್ಯ ಸೇನಾನಿ, ಶಿಕ್ಷಕ ಶೀಂಟೂರು ದಿ.ನಾರಾಯಣ ರೈ ಸ್ಮರಣಾರ್ಥ ಅವರ ಪುತ್ರ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರು ಸವಣೂರು ಸ.ಪ.ಪೂ. ಕಾಲೇಜಿಗೆ ಕೊಡುಗೆಯಾಗಿ ನೀಡಿದ ನೂತನ ಗೇಟ್ ಇದರ ಉದ್ಘಾಟನೆ ಮಾ. 24ರಂದು ನಡೆಯಿತು. ಗೇಟ್‌ ಉದ್ಘಾಟಿಸಿ ಮಾತನಾಡಿದ ಸವಣೂರು ಕೆ. ಸೀತಾರಾಮ ರೈ, ಸುತ್ತಮುತ್ತಲಿನ 8 ಗ್ರಾಮಗಳ ಸರಕಾರಿ ಶಾಲೆಗಳಿಗೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದ್ದೇನೆ. ಈ ಮೂಲಕ ನನ್ನದೇ ಶಿಕ್ಷಣ ಸಂಸ್ಥೆಯ ಜೊತೆಗೆ ಸರಕಾರಿ

ಸವಣೂರು ಸ.ಪ.ಪೂ. ಕಾಲೇಜಿನ ನೂತನ ಗೇಟ್ ಉದ್ಘಾಟಿಸಿದ ಸವಣೂರು ಸೀತಾರಾಮ ರೈ Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಅಮೃತ ಸಿಂಚನ ಸ್ಮರಣ ಸಂಚಿಕೆ ಬಿಡುಗಡೆ, ಗುರುನಮನ ಕಾರ್ಯಕ್ರಮ

ಪುತ್ತೂರು: ಸ್ವ ಗ್ರಾಮದ ಶಾಲೆಗಳಲ್ಲಿ ಅದರಲ್ಲೂ ಮಾತೃ ಭಾಷೆಯಲ್ಲಿ ಕಲಿತ ಶಿಕ್ಷಣದಿಂದ ಮಾತ್ರ ಪರಿಪೂರ್ಣತೆ ಪಡೆಯಲು ಸಾಧ್ಯ ಎ೦ದು ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿಶ್ವೇಶ್ವರ ವಿ.ಕೆ. ಹೇಳಿದರು. ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಅಮೃತ ಸಿಂಚನ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಜಿ ಅವರ ನಿವೃತ್ತಿ ಹಿನ್ನೆಲೆಯಲ್ಲಿ ನಡೆದ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ದೇಶದ ಅಮೃತ ಮಹೋತ್ಸವದ

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಅಮೃತ ಸಿಂಚನ ಸ್ಮರಣ ಸಂಚಿಕೆ ಬಿಡುಗಡೆ, ಗುರುನಮನ ಕಾರ್ಯಕ್ರಮ Read More »

ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ ಉದ್ಘಾಟನೆ

ಪುತ್ತೂರು: ಪುತ್ತೂರು ರೋಟರಿ ಕ್ಲಬ್ ಪುತ್ತೂರು ಸಿಟಿ  ಚರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಶುಕ್ರವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ, ರೋಟರಿ ಸಂಘಟನೆ ಉತ್ತಮ  ನಿರ್ಧಾರ ತೆಗೆದುಕೊಂಡು ಎಲ್ ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಿ ಇತಿಹಾಸ ನಿರ್ಮಿಸಲು ಹೊರಟ್ಟಿದಾರೆ. ಮಕ್ಕಳ ಆರೋಗ್ಯದ ಕಾಳಜಿ ಜತೆ ಸರಕಾರಿ ಶಾಲೆಯ ಉಳಿಸುವ ನಿಟ್ಟಿನಲ್ಲಿ ವಿಗೆ 5 ಕೋಟಿ ವೆಚ್ಚದಲ್ಲಿ 111

ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ ಉದ್ಘಾಟನೆ Read More »

ಮಣಿಕ್ಕರ ಶಾಲೆ: ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಮಠಂದೂರು

ಪುತ್ತೂರು: ಶತಮಾನದ ಕಡೆಗೆ ಹೋಗಬೇಕಿದ್ದರೆ ನಾವು ಶಾಲಾ ಅಭಿವೃದ್ಧಿಗಾಗಿ ನಾವು ಏನು ಮಾಡಬೇಕು ಎಂಬ ಯೋಚನೆಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್ ಗಳನ್ನು ಶಾಲೆಗಳಿಗೆ ಒದಗಿಸಲಾಗುತ್ತಿದೆ. ಜತೆಗೆ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಮಣಿಕ್ಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ಈ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವುದರಿಂದ ಮುಂದೆ ಹೆತ್ತವರು

ಮಣಿಕ್ಕರ ಶಾಲೆ: ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಮಠಂದೂರು Read More »

ಹಿಂದೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್

ಪುತ್ತೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ  ಹಿಂದಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪುತ್ತೂರಿನ ಡಿಂಪಲ್ ಮಿಶೆಲ್ ತಾವ್ರೋ 8.45 ಸಿಜಿಪಿಎ ಪಡೆದು ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ದಿನೇಶ್ ಪಾವ್ಲ್‍ ತಾವ್ರೋ ಹಾಗೂ ಮೋಂತಿಮೇರಿ ಮಸ್ಕರೇನಸ್ ದಂಪತಿ ಪುತ್ರಿ.

ಹಿಂದೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ Read More »

ಮೊಬೈಲಿಗಿಂತಲೂ ಪುಸ್ತಕದ ಮಾಹಿತಿ ಶಾಶ್ವತ | ಬಾಲವನದಲ್ಲಿ ಗ್ರಂಥಾಲಯ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಮೊಬೈಲಿಗಿಂತಲೂ ಪುಸ್ತಕದ ಮಾಹಿತಿ ಶಾಶ್ವತ. ಆದ್ದರಿಂದ ಯುವಕರು ದಿನದ ಕನಿಷ್ಠ 1 ಗಂಟೆಯನ್ನಾದರೂ ಗ್ರಂಥಾಲಯಕ್ಕೆ ನಮ್ಮ ಸಮಯವನ್ನು ಮೀಸಲಿಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರಿನ ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಸೋಮವಾರ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸುಸಂಸ್ಕೃತವಾಗಿದೆ ಅಂದರೆ ಅದಕ್ಕೆ ಸಾಹಿತ್ಯವೇ ಪ್ರಮುಖ ಕಾರಣ. ಸುಸಂಸ್ಕೃತತೆಯ ಜೊತೆಗೆ, ದೇಶ ದೊಡ್ಡ ಮಟ್ಟಿನ ಬೆಳವಣಿಗೆಗಳನ್ನು ಕಂಡಿವೆ. ಇದು ಗ್ರಂಥಾಲಯ, ಸಾಹಿತ್ಯದಿಂದ ಸಾಧ್ಯವಾಯಿತು. ಆದ್ದರಿಂದ ಪುತ್ತೂರಿನ ಜನರು ಬಾಲವನದ ಗ್ರಂಥಾಲಯಕ್ಕೆ ಬಂದು,

ಮೊಬೈಲಿಗಿಂತಲೂ ಪುಸ್ತಕದ ಮಾಹಿತಿ ಶಾಶ್ವತ | ಬಾಲವನದಲ್ಲಿ ಗ್ರಂಥಾಲಯ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ

ಪುತ್ತೂರು : ಹರಿಯಾಣದಲ್ಲಿ ನಡೆಯುವ 69ನೇ ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಗೆ  ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ತಾಲೂಕಿನ ಬಲ್ನಾಡಿನ ವಿನುಶ್ರೀ ಆಯ್ಕೆಯಾಗಿದ್ದಾರೆ. ಬಲ್ನಾಡು ಗ್ರಾಮದ ಕೆಲ್ಲಾಡಿ ದಿ. ವೀರಪ್ಪ ಗೌಡ ಮತ್ತು ಸುಶೀಲ ದಂಪತಿಯ ತೃತೀಯ ಪುತ್ರಿಯಾದ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ. ಪ್ರಸ್ತುತ ಮೂಡಬಿದಿರೆಯ ಅಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಪಿ ಬಿಎಡ್ ವಿದ್ಯಾರ್ಥಿನಿಯಾಗಿದ್ದಾರೆ.

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ Read More »

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ | ಪ್ರಸ್ತುತ ವರ್ಷದಿಂದ ಆರಂಭ

ಪುತ್ತೂರು: ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ್ನು ಅಳವಡಿಸುವ ಮೂಲಕ ಜೀವನ ಕೌಶಲ್ಯ ತರಬೇತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು ಎಂದು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರ ಕೇಂದ್ರವೆನಿಸಿರುವ ಅಂಬಿಕಾ ಸಂಸ್ಥೆ ಅನೇಕ ಮೊದಲುಗಳನ್ನು ಹುಟ್ಟು ಹಾಕಿದೆ. ಇದೀಗ ಮತ್ತೊಂದು ಮೈಲಿಗಲ್ಲು ಎಂಬಂತೆ ಸಿಬಿಎಸ್‌ಇ ಸಂಸ್ಥೆಯಲ್ಲಿ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ | ಪ್ರಸ್ತುತ ವರ್ಷದಿಂದ ಆರಂಭ Read More »

ಯೋಜನೆಗೆ ನಿಷ್ಠೆ ಜತೆಯಾದಾಗ ಭವಿಷ್ಯ ಉಜ್ವಲ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಬಿರಾವು

ಪುತ್ತೂರು: ಗುರಿಯನ್ನು ನಿರ್ಧರಿಸಿ ಕಾರ್ಯಯೋಜನೆಯನ್ನು ತಯಾರಿಸಿದ ಮೇಲೆ ಪ್ರತಿದಿನ ನಿಷ್ಠೆಯಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ನಮ್ಮ ನಾಳೆಗಳು ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಪುತ್ತೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು ಹೇಳಿದರು. ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಯುಗದಲ್ಲಿ ಎಲ್ಲರೂ ತ್ವರಿತಗತಿಯ ಫಲಿತಾಂಶವನ್ನೇ ಬಯಸುತ್ತಾರೆ. ಆದರೆ ಅಭ್ಯಾಸವಿಲ್ಲದ ಸಾಧನೆಗಳು ಕ್ಷಣಿಕ ಫಲಿತಾಂಶವನ್ನು ನೀಡಬಲ್ಲದೇ ಹೊರತು ಭವಿಷ್ಯಕ್ಕೆ ಸಹಕಾರಿಯಾಗಲಾರದು ಎಂದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ

ಯೋಜನೆಗೆ ನಿಷ್ಠೆ ಜತೆಯಾದಾಗ ಭವಿಷ್ಯ ಉಜ್ವಲ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಬಿರಾವು Read More »

error: Content is protected !!
Scroll to Top