ಕ್ಯಾಂಪಸ್‌

ಅಂಬಿಕಾ ಕ್ಯಾಂಪಸ್‌ಗೆ ಮಹಾಲಿಂಗೇಶ್ವರ ದೇವರ ಸವಾರಿ

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ಗುರುವಾರ ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ ಆಗಮಿಸಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಹಾಗೂ ಪುತ್ರ ಶ್ರೀಕೃಷ್ಣ ನಟ್ಟೋಜ ದೇವರನ್ನು ಬರಮಾಡಿಕೊಂಡರು. ನಂತರ ದೇವರಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಟ್ಟೆಪೂಜೆ ನಡೆಯಿತು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಅಂಬಿಕಾ ಮಹಾವಿದ್ಯಾಲಯದ […]

ಅಂಬಿಕಾ ಕ್ಯಾಂಪಸ್‌ಗೆ ಮಹಾಲಿಂಗೇಶ್ವರ ದೇವರ ಸವಾರಿ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

ಪುತ್ತೂರು:  ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಹಿರಿಯ ಶಿಕ್ಷಕ  ರಾಧಾಕೃಷ್ಣ ರೈ ಅಂಬೇಡ್ಕರ್ ಕುರಿತು ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ನಾವು ದೇವತಾ  ಮನುಷ್ಯರಂತೆ ಕಾಣಬೇಕು. ಅವರು ಸಂವಿಧಾನದ ರಚನೆಯ ಮೂಲಕ ದೇಶದ ಸಮಸ್ತ ಪ್ರಜೆಗಳ ಏಳಿಗೆಗಾಗಿ ಶ್ರಮಿಸಿದ ಭಾರತ ಕಂಡ  ಮಹಾನ್ ಚೇತನ” ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಅಂಬೇಡ್ಕರ್  ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.  ಹಿರಿಯ  ದೈಹಿಕ  ಶಿಕ್ಷಣ  ಶಿಕ್ಷಕ  ಭಾಸ್ಕರ್  ಗೌಡ  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲಾ ಎಸ್ಟೇಟ್ ಮ್ಯಾನೇಜರ್ ಚರಣರಾಜ್,  ಶಿಕ್ಷಕ- ಕ್ಷಕೇತರ  ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ Read More »

ಸಂಪ್ಯ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಪುತ್ತೂರು: ಪುತ್ತೂರು-ಸುಳ್ಯ ಮುಖ್ಯರಸ್ತೆಯ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಜಯರಾಮ್ ರೈ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಂಬಂಧಿಸಿ ಸಾಲ ಸೌಲಸೌಲಭ್ಯದ ಸಂಪೂರ್ಣ ಮಾಹಿತಿ ನೀಡಿದರು. ಕೆರಿಯರ್ ಕೌನ್ಸಿಲರ್ ಮಹಮ್ಮದ್ ರಫೀಕ್ ಮಾತನಾಡಿ, ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡುವಾಗ ಇತರರಿಂದ ಪ್ರೇರಿತರಾಗಬಾರದು. ಬದಲಾಗಿ ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಕೋರ್ಸ್ ಆಯ್ಕೆ

ಸಂಪ್ಯ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ Read More »

ಅಂಬಿಕಾ ಮಹಾವಿದ್ಯಾಲಯದಲ್ಲಿ  ಸ್ಮಾರ್ಟ್ ಬೋರ್ಡ್ ಬಳಕೆ ತರಬೇತಿ

ಪುತ್ತೂರು: ಆಧುನಿಕ ಕಾಲಘಟ್ಟದ ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ಈಗ ಪ್ರಚಲಿತಕ್ಕೆ ಬರುತ್ತಿದೆ. ಹಾಗಾಗಿ ಪಾರಂಪರಿಕವಾಗಿದ್ದ ಸುಣ್ಣದ ಕಡ್ಡಿ, ಕರಿಹಲಗೆಯ ಬದಲಾಗಿ ಸ್ಮಾಟ್ ಬೋರ್ಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಕರಿಹಲಗೆಯನ್ನಷ್ಟೇ ಅಲ್ಲದೆ ತಮಗೆ ಬೇಕಾದ ಬಣ್ಣದ ಹಿನ್ನೆಲೆ ಹಾಗೂ ಅಕ್ಷರಗಳನ್ನು ರೂಪಿಸಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು 1.75 ಲಕ್ಷ ರೂ.

ಅಂಬಿಕಾ ಮಹಾವಿದ್ಯಾಲಯದಲ್ಲಿ  ಸ್ಮಾರ್ಟ್ ಬೋರ್ಡ್ ಬಳಕೆ ತರಬೇತಿ Read More »

ವಿವೇಕಾನಂದ ಕಾಲೇಜಿನಲ್ಲಿ ರಕ್ತದಾನ ಶಿಬಿರ | ವಿದ್ಯಾರ್ಥಿಗಳಿಂದ 156 ಯೂನಿಟ್ ರಕ್ತ ಸಂಗ್ರಹ

ಪುತ್ತೂರು: ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯುತ್ತ) ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ರೆಡ್ ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್‌ ರೇಂಜರ್, ವಿದ್ಯಾರ್ಥಿ ಸಂಘ, ರೋಟರಿ-  ಕ್ಯಾಂಪ್ಕೋ ರಕ್ತ ನಿಧಿ ಕೇಂದ್ರ ಪುತ್ತೂರು, ರೋಟರಿ ರಕ್ತ ನಿಧಿ ಕೇಂದ್ರ, ಮಂಗಳೂರು ವೆನ್‌ಲಾಕ್ ಸರ್ಕಾರಿ ಆಸ್ಪತ್ರೆ, ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರೋಟರಿಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಶೆಣೈ, ವೈದ್ಯಾಧಿಕಾರಿ ಡಾ.ಶರತ್‌ಕುಮಾರ್‌ ರಾವ್, ಕಾಲೇಜಿನ ಐಕ್ಯೂಎಸಿ ಸಂಯೋಜಕ

ವಿವೇಕಾನಂದ ಕಾಲೇಜಿನಲ್ಲಿ ರಕ್ತದಾನ ಶಿಬಿರ | ವಿದ್ಯಾರ್ಥಿಗಳಿಂದ 156 ಯೂನಿಟ್ ರಕ್ತ ಸಂಗ್ರಹ Read More »

ಸಿಇಟಿ, ನೀಟ್ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳ ಜೊತೆಗೆ ಸಂವಾದ

ಪುತ್ತೂರು: ಯಾವುದೇ ಪರೀಕ್ಷೆಎದುರಿಸುವಲ್ಲಿ ಆಸಕ್ತಿಯ ಜೊತೆ ನಿರಂತರ ಅಭ್ಯಾಸ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಿ ಓದಬೇಕು. ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಅರಿತುಕೊಂಡ ವಿಷಯಗಳ ಬಗ್ಗೆ ಪುನರ್ ಮನನ ಮಾಡಿಕೊಳ್ಳುವ ಅಭ್ಯಾಸ ಹೆಚ್ಚಿಸಿಕೊಂಡರೆ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಾಮನ್ ಪೈ ಹೇಳಿದರು. ನರೇಂದ್ರ ಪದವಿ ಪೂರ್ವಕಾಲೇಜಿನಲ್ಲಿ ಸಿಇಟಿ, ನೀಟ್‌ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ

ಸಿಇಟಿ, ನೀಟ್ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳ ಜೊತೆಗೆ ಸಂವಾದ Read More »

ಶ್ವೇತಾಂಬಿಕಾ ಪಿ. ಅವರಿಗೆ ಪಿ.ಎಚ್.ಡಿ 

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ  ಶ್ವೇತಾಂಬಿಕಾ ಪಿ. ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ. ಡಾ.ಎಂ.ಆರ್. ಮದ್ದಾನಿ ಅವರ ಮಾರ್ಗದರ್ಶನದಲ್ಲಿ ‘ಅ ಸ್ಟಡಿ ಒನ್ ದ ಇಫೆಕ್ಟಿವ್ನೆಸ್ ಓಫ್ ಪ್ಲಾಂಟ್ ಎಕ್ಸಟ್ರಾಕ್ಟಸ್ ಆಸ್ ಕೊರೋಸಿವ್ ಇನ್ಹಿಬಿಟರ್ಸ್ ಓನ್ ಮೈಲ್ಡ್ ಸ್ಟೀಲ್ ಆಂಡ್ ಅಲುಮಿನಿಯಂ’ ಎಂಬ ಪ್ರಬಂಧಕ್ಕಾಗಿ ರಸಾಯನ ಶಾಸ್ತ್ರದಲ್ಲಿ ಪಿಎಚ್‍ಡಿ ಪದವಿ ಲಭಿಸಿದೆ. ವಿಜಯಲಕ್ಷ್ಮಿ ಆರ್.ಭಟ್ ಹಾಗೂ ರಾಘವೇಂದ್ರ ಭಟ್ ಪೆರ್ನಾಜೆ ಅವರ ಪುತ್ರಿಯಾಗಿದ್ದು, ನವೀನ್ ಕುಮಾರ್ ಕೆ. ಅವರ ಪತ್ನಿ. 

ಶ್ವೇತಾಂಬಿಕಾ ಪಿ. ಅವರಿಗೆ ಪಿ.ಎಚ್.ಡಿ  Read More »

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅನಾವರಣ

ಪುತ್ತೂರು: ಸ್ಮಾರ್ಟ್ ಬೋರ್ಡ್‌ಗಳ ಮೂಲಕ ತರಗತಿಗಳು ನಡೆದಾಗ ದೃಶ್ಯ ಮಾಧ್ಯಮದೊಂದಿಗೆ ವಿದ್ಯಾರ್ಥಿಗಳು ವಿಷಯಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಬಹುದು. ತನ್ಮೂಲಕ ಜ್ಞಾನ ವೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಕಲಿಕಾ ಕ್ಷೇತ್ರದಲ್ಲಿ ಪರಿಣತಿ ಪಡೆದು ಯಶಸ್ಸು ಪಡೆಯಬಹುದು ಎಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಭಿಲಾಷ್ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಅಳವಡಿಸಲಾಗಿರುವ ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ನ್ನು ಉದ್ಘಾಟಿಸಿ ಮಾತನಾಡಿದರು. ದಶಕದ ಹಿಂದಿನವರೆಗೂ ಶಾಲಾ

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅನಾವರಣ Read More »

ಅಂಬಿಕಾದಲ್ಲಿ ನಡೆದ ಬಾಲಸ್ತುತಿ ಸ್ಪರ್ಧೆ |  ಸುದೀಪ್ತಿ ಹಾಗೂ ವಿಖ್ಯಾತ್‌ಗೆ ’ಬಾಲಸ್ತುತಿ ರತ್ನ’ ಬಿರುದು ಪ್ರದಾನ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮುನ್ನಡೆಯುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ವಿಷು ಹಬ್ಬದ ಪ್ರಯುಕ್ತ ಆಯೋಜಿಸಲಾದ ಹಿಂದೂ ಧಾರ್ಮಿಕ ಶ್ಲೋಕಗಳ ಕಂಠಪಾಠ ಸ್ಪರ್ಧೆ ಬಾಲಸ್ತುತಿ – 2023 4 ವರ್ಷದ ಮಕ್ಕಳ ವಿಭಾಗದಲ್ಲಿ ಸುದೀಪ್ತಿ ಹಾಗೂ 5ನೇ ವರ್ಷದ ಮಕ್ಕಳ ವಿಭಾಗದಲ್ಲಿ ವಿಖ್ಯಾತ್ ಪ್ರಥಮ ಸ್ಥಾನ ಗಳಿಸುವ ಮೂಲಕ ತಲಾ ಐದು ಸಾವಿರ ರೂಪಾಯಿ ಹಾಗೂ ಶಾರದಾಂಬೆಯ ಭಾವಚಿತ್ರ ಸಹಿತವಾದ ಪಾದುಕೆ ಬಹುಮಾನದೊಂದಿಗೆ ಬಾಲಸ್ತುತಿ ರತ್ನ ಬಿರುದಿಗೆ ಭಾಜನರಾಗಿದ್ದಾರೆ. ಸುದೀಪ್ತಿ ಪುತ್ತೂರಿನ

ಅಂಬಿಕಾದಲ್ಲಿ ನಡೆದ ಬಾಲಸ್ತುತಿ ಸ್ಪರ್ಧೆ |  ಸುದೀಪ್ತಿ ಹಾಗೂ ವಿಖ್ಯಾತ್‌ಗೆ ’ಬಾಲಸ್ತುತಿ ರತ್ನ’ ಬಿರುದು ಪ್ರದಾನ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಓಪ್ಟಮ್ ಕಂಪನಿಯ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮದ ಉದ್ಘಾಟನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಹಾಗೂ ನೇಮಕಾತಿ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆಕೋಶಗಳ ಸಂಯುಕ್ತ ಆಶ್ರಯದಲ್ಲಿ ಯುನೈಟೆಡ್ ಸ್ಟೇಟ್ಸ್ ಮೂಲದ ಬಹುರಾಷ್ಟ್ರೀಯ ಹೆಲ್ತ್ ಕೇರ್ ಮತ್ತು ಇನ್ಶೂರೆನ್ಸ್ ಕಂಪನಿ ಓಪ್ಟಮ್ನ ಮೆಡಿಕಲ್ ಕೋಡರ್ ಹುದ್ದೆಗಳಿಗಾಗಿ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮ ಕಾಲೇಜಿನಲ್ಲಿ ಆಯೋಜಿಸಲಾಯಿತು. ಲಿಖಿತ ಪರೀಕ್ಷೆ ನಡೆಸುವ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ಜು ಕಾಲೇಜಿನ ಪ್ರಾಂಶುಪಾಲ ವಂ ಡಾ| ಆಂಟೊನಿ ಪ್ರಕಾಶ್ ಮೊಂತೆರೊ ವಹಿಸಿ ಮಾತನಾಡಿ, ನೇಮಕಾತಿ ಕಾರ್ಯಕ್ರಮಗಳು ಅಭ್ಯರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಓಪ್ಟಮ್ ಕಂಪನಿಯ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮದ ಉದ್ಘಾಟನೆ Read More »

error: Content is protected !!
Scroll to Top