ಕಗ್ಗದ ಸಂದೇಶ- ಪರಿಮಳ ಬೀರಿ ಬಾಡಿ ಹೋಗುವ ಹೂಮಾಲೆಯಂತೆ ಬದುಕು…
ನೋಡುನೋಡುತ ಲೋಕಸಹವಾಸ ಸಾಕಹುದು|ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ||ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ|ನೋಡಾಡು ಹಗುರದಿಂ– ಮಂಕುತಿಮ್ಮ||ಈ ಸೃಷ್ಟಿಯನ್ನು ನೋಡುತ್ತ ನೋಡುತ್ತ ಇದರ ಸಹವಾಸ ನಮಗೆ ಸಾಕೋ ಸಾಕು ಎನಿಸುತ್ತದೆ. ನೋಡಲು ಸುಂದರವಾಗಿದ್ದರೂ ಸ್ವಲ್ಪ ಹೊತ್ತಿನಲ್ಲಿ ಬಾಡುವ ಹೂಮಾಲೆಯಂತೆ; ಚರ್ಮದೊಳಗೆ ರಹಸ್ಯವಾಗಿರುವ ಕಜ್ಜಿಯಂತೆ ಬದುಕು. ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ಆಳವಾಗಿ ನೋಡಿದರೆ ಬೇಸರವುಂಟಾಗುತ್ತದೆ. ಆದ್ದರಿಂದ ಬಾಳಿನ ಆಳಕ್ಕೆ ಹೋಗದೆ ಮೇಲ್ಮೇಲೆ ಹಗುರವಾಗಿ ನೋಡುತ್ತ ಓಡಾಡು ಎಂದು ಮಾನ್ಯ ಡಿವಿಜಿಯವರು ಬದುಕಿನ ರಹಸ್ಯವನ್ನು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.ಮೇಲ್ಮೇಲೆ ನೋಡುವಾಗ ಜೀವನ ಬಹಳ […]
ಕಗ್ಗದ ಸಂದೇಶ- ಪರಿಮಳ ಬೀರಿ ಬಾಡಿ ಹೋಗುವ ಹೂಮಾಲೆಯಂತೆ ಬದುಕು… Read More »