ಲೇಖನ

ಈ ನಟನ ರಿಯಲ್‌ ಬದುಕು ರೀಲ್‌ಗಿಂತ ರೋಚಕ

3 ವರ್ಷ ಆಸ್ಪತ್ರೆಯಲ್ಲಿ ಶವದಂತೆ ಮಲಗಿದ್ದವ ಸೂಪರ್‌ಸ್ಟಾರ್‌ ಆಗಿ ಮೆರೆದ ಈ ತಮಿಳು ಸಿನೆಮಾ ನಟನ ಬದುಕೇ ಒಂದು ಅದ್ಭುತವಾದ ಹೋರಾಟ. ತನ್ನ ಪ್ರತಿಭೆಯ ಮೇಲೆ ನಂಬಿಕೆ ಇಟ್ಟುಕೊಂಡು ಸತತವಾದ ಸೋಲು, ಹತಾಶೆ, ನೋವು, ಸವಾಲುಗಳು ಎಲ್ಲವನ್ನೂ ಗೆದ್ದುಬಂದಿರುವ ಚಿಯಾನ್ ವಿಕ್ರಮ್ ಬದುಕಿನಿಂದ ನಾವು ಕಲಿಯುವುದು ಬಹಳಷ್ಟು ಇದೆ. ಆತನಿಗೆ ಹೆತ್ತವರು ಇಟ್ಟ ಉದ್ದವಾದ ಹೆಸರು ಜಾನ್ ಕೆನ್ನೆಡಿ ವಿನೋದ್ ರಾಜ್ ಎಂದು. ಆತನ ತಂದೆ ವಿಕ್ಟರ್ ಕೂಡ ಸಿನೆಮಾ ನಟ ಆಗುವ ಹುಚ್ಚನ್ನು ತಲೆಗೇರಿಸಿಕೊಂಡು ಮನೆ […]

ಈ ನಟನ ರಿಯಲ್‌ ಬದುಕು ರೀಲ್‌ಗಿಂತ ರೋಚಕ Read More »

ಅನಾಥಾಶ್ರಮದ ಹುಡುಗಿ ಅಮೆರಿಕದ ಕಂಪನಿಯ ಸಿಇಒ ಆದ ಕಥೆ

ವಾರಂಗಲ್‌ನಲ್ಲಿ ಕಲ್ಲು ಒಡೆಯುತ್ತಿದ್ದ ಜ್ಯೋತಿ ರೆಡ್ಡಿ ಬಿಲಿಯನ್ ಡಾಲರ್ ಕಂಪನಿ ಕಟ್ಟಿದರು ‘ಯಾವಾಗ ನಿನ್ನ ಆಕಾಂಕ್ಷೆಗಳು ಪ್ರಬಲವಾಗಿ ಇರುತ್ತವೆಯೋ, ಆಗ ನಿನ್ನೊಳಗೆ ಅತಿಮಾನುಷ ಶಕ್ತಿಗಳು ಪ್ರವಹಿಸುತ್ತವೆ. – ನೆಪೋಲಿಯನ್ ಹಿಲ್ ಈ ಮಾತಿಗೆ ನಿದರ್ಶನ ಆಗುವ ಸಾಧನೆ ಮಾಡಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿರುವ ಒಬ್ಬ ಅನಾಥ ಹುಡುಗಿಯ ಕಥೆ ಇಂದು ನಿಮ್ಮ ಮುಂದೆ. ಆಕೆಯ ಹೆಸರು ಜ್ಯೋತಿ ರೆಡ್ಡಿ. ತೆಲಂಗಾಣ ರಾಜ್ಯದ ವಾರಂಗಲ್‌ನ ಅತ್ಯಂತ ಬಡ ಕುಟುಂಬದ ಹುಡುಗಿ ಆಗಿದ್ದಳು. ಆಕೆಯ ಹೆತ್ತವರಿಗೆ ಮೂರು ಗಂಡು

ಅನಾಥಾಶ್ರಮದ ಹುಡುಗಿ ಅಮೆರಿಕದ ಕಂಪನಿಯ ಸಿಇಒ ಆದ ಕಥೆ Read More »

ಅಣ್ಣ ತಂಗಿ ಸಂಬಂಧವನ್ನು ಬೆಸೆಯುವ ಪವಿತ್ರವಾದ ಶ್ರೀರಕ್ಷೆ ರಕ್ಷಾ ಬಂಧನ

ಎಲ್ಲರಿಗೂ ರಕ್ಷಾ ಬಂಧನ ದ ಶುಭಾಶಯಗಳು. ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ವಾದ ರಕ್ಷಾಬಂಧನದಿಂದ ಒಬ್ಬರನ್ನು ಒಬ್ಬರು ಪರಸ್ಪರ ರಕ್ಷಣೆ ಮಾಡುವ ಮನೋಭಾವ ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ. ರಕ್ಷಾ ಬಂಧನದ ಹಬ್ಬವು ಮಹಾಭಾರತದ ಕಾಲದ ಹಿಂದಿನದು. ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಆಕಸ್ಮಿಕವಾಗಿ ತನ್ನ ಸುದರ್ಶನ ಚಕ್ರದಿಂದ ತನ್ನ ಬೆರಳನ್ನು ಕತ್ತರಿಸಿಕೊಂಡಾಗ ದೌಪದಿ ತನ್ನ ಸೀರೆಯ ತುಂಡನ್ನು ಹರಿದು ಶ್ರೀಕೃಷ್ಣನ ಗಾಯದ ಸುತ್ತಲೂ ರಕ್ತ ಹರಿಯುವುದನ್ನು ತಡೆಯಲು

ಅಣ್ಣ ತಂಗಿ ಸಂಬಂಧವನ್ನು ಬೆಸೆಯುವ ಪವಿತ್ರವಾದ ಶ್ರೀರಕ್ಷೆ ರಕ್ಷಾ ಬಂಧನ Read More »

ಚಿತ್ರಕಲಾ ಚತುರೆ -ಗೌತಮಿ ಕಲ್ಚಾರ್

ತನ್ನ ಸಣ್ಣ ವಯಸ್ಸಿನಲ್ಲಿಯೇ ಕಲೆಯ ಮೇಲೆ ಆಸಕ್ತಿಯನ್ನು ಇಟ್ಟುಕೊಂಡು ಸಾಧನೆಯ ಎರೆಮರೆಯಲ್ಲಿ ಉಳಿದಿರುವ ಯುವ ಕಲಾವಿದೆ ಗೌತಮಿ ಕಲ್ವಾರ್. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಲ್ವಾರ್ ನವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಪಂಬೆತ್ತಾಡಿ, ಪ್ರೌಢ ಶಿಕ್ಷಣವನ್ನು ಎಣ್ಮೂರು, ಪದವಿ ಪೂರ್ವ ಶಿಕ್ಷಣ ಪಂಜದಲ್ಲಿ ಪೂರೈಸಿ, ಈಗ ಪದವಿ ಶಿಕ್ಷಣವನ್ನು ಮಂಗಳೂರು ಮಹಲಸ ಕಾಲೇಜ್ ಆಫ್ ಆರ್ಟ್ ನಲ್ಲಿ ಪಡೆಯುತ್ತಿದ್ದಾರೆ. ಇವರ ಚಿತ್ರಕಲಾ ಆಸಕ್ತಿಯನ್ನು ಗುರುತಿಸಿದ ಪ್ರೌಢ ಶಾಲಾ

ಚಿತ್ರಕಲಾ ಚತುರೆ -ಗೌತಮಿ ಕಲ್ಚಾರ್ Read More »

ಮೇ 27 : ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ, ಕವಿಗೋಷ್ಠಿ

ಪುತ್ತೂರು: ಜನಾರ್ದನದುರ್ಗ ಅವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಮೇ 27 ಸೋಮವಾರ ಮಧ್ಯಾಹ್ನ 2.30 ಕ್ಕೆ ಪುತ್ತೂರು ಅನುರಾಗ ವಠಾರದಲ್ಲಿ ನಡೆಯಲಿದೆ. ವಿಶ್ರಾಂತ ಪ್ರಾಂಶುಪಾಲ ಪ್ರೊ.ಝೇವಿಯರ್ ಡಿ’ಸೋಜ ದೀಪ ಪ್ರಜ್ವಲನೆ ಮಾಡಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‍.ಆರ್‍. ಕೃತಿ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಡಾ.ವರದರಾಜ ಚಂದ್ರಗಿರಿ ಕೃತಿ ಪರಿಚಯ ಮಾಡಲಿದ್ದು, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಮ ಕೆ. ಕೃತಿಕಾರರ ಪರಿಚಯ ಮಾಡುವರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

ಮೇ 27 : ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ, ಕವಿಗೋಷ್ಠಿ Read More »

ನಂಬುವ ಮುನ್ನ ಒಮ್ಮೆ ಯೋಚಿಸಿ…!

ನಂಬಿಕೆ ಎಂಬುದು ಕನ್ನಡಿಯಂತೆ. ಒಮ್ಮೆ ಕನ್ನಡಿ ಒಡೆದರೆ ಮತ್ತೆ ಕನ್ನಡಿಯನ್ನು ಸರಿ ಪಡಿಸಲು ಸಾಧ್ಯವಿಲ್ಲ. ನಂಬಿಕೆ ಕೂಡಾ ಹಾಗೆಯೇ. ಒಬ್ಬರ ಮೇಲೆ ಹುಟ್ಟಿ ಆ ನಂಬಿಕೆಯನ್ನು ಅವರೇ ಕೆಡಿಸಿದರೆ ಮತ್ತೆ ಅವರ ಮೇಲೆ ನಂಬಿಕೆ ಹುಟ್ಟಲು ಸಾಧ್ಯವಿಲ್ಲ. ನಂಬಿಕೆ ವ್ಯಕ್ತಿಯೊಬ್ಬನ ಮೇಲೆ ಇರಿಸುವ ಯೋಗ್ಯ ಭರವಸೆಯಾಗಿದೆ. ನಂಬಿಕೆ ಯಾರ ಮೇಲೆಯೂ ಸುಮ್ಮನೆ ಬರುವುದಲ್ಲ. ಬದಲಾಗಿ ಅವರ ನಡತೆಯಿಂದ ಹುಟ್ಟುವುದು . ಆದರೆ ಈ ನಂಬಿಕೆಗೆ ಧಕ್ಕೆ ತರುವ ಕಾರ್ಯಗಳು ಕೆಲವೊಮ್ಮೆ ನಡೆಯುತ್ತದೆ. ಗೊತ್ತಾಗಿಯೂ ಗೊತ್ತಿಲ್ಲದೆಯೂ ನಡೆಯುತ್ತದೆ. ನಂಬಿಕೆ

ನಂಬುವ ಮುನ್ನ ಒಮ್ಮೆ ಯೋಚಿಸಿ…! Read More »

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ ಎನ್ನುವ ಮಾತು  ಅಕ್ಷರಶಃ ಸತ್ಯ. ಏಕೆಂದರೆ ಒಂದು ಮನೆಯಲ್ಲಿ ಹೆಣ್ಣು ಕಲಿತರೆ ಆ ಮನೆಗೆ ಬೆಳಕಾಗುವಳು. ಸಮಾಜದ ಎಲ್ಲ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಸಮಾಜವನ್ನೇ ಉದ್ದರಿಸುವರು. ಸಮಾಜದ ಪ್ರಗತಿಯ ರಥ ಸಾಗಬೇಕಾದರೆ ಗಂಡು-ಹೆಣ್ಣು ಎಂಬ ಎರಡು ಚಕ್ರಗಳು ಇರಲೇಬೇಕು. ರಥಕ್ಕೆ ಹೇಗೆ ಒಂದು ಚಕ್ರ ಇಲ್ಲವಾದರೆ ಚಲಿಸಲು ಸಾಧ್ಯವಿಲ್ಲವೋ ಸಮಾಜವೂ ಹಾಗೆಯೇ, ಪ್ರಕೃತಿಯೇ ಗಂಡು, ಹೆಣ್ಣಿಗೂ ಸಮಾನವಾದ ಸ್ಥಾನಮಾನವನ್ನು ನೀಡಿಬಿಟ್ಟಿದೆ. ಯಾರೂ ಹೆಚ್ಚಲ್ಲ ಯಾರೂ ಕಡಿಮೆಯಲ್ಲ ದೈಹಿಕವಾಗಿ ಗಂಡು-ಹೆಣ್ಣು ಎರಡು

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ Read More »

ಬೇಸಿಗೆ ರಜೆ ಅಂದು – ಇಂದು

ಮಕ್ಕಳು ಮುಂದಿನ ಭವಿಷ್ಯದ  ಆಸ್ತಿ. ಹಾಗಾಗಿ ಮಕ್ಕಳ ಸಮಗ್ರ ಬೆಳವಣಿಗೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಪೋಷಕರ ಕರ್ತವ್ಯ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಬೇಸಿಗೆ ಬಂತೆಂದರೆ ಹಬ್ಬ!ಬಂಧು ಮಿತ್ರರ ಜೊತೆಗೂಡಿಕೊಂಡು ಆಟೋಟಗಳ ಜೊತೆಗೆ ಹರಟೆ, ಪುರಾಣ, ಕಥೆ, ಕವಿತೆ ಮುಂತಾದವುಗಳನ್ನು ಸ್ವಾಭಾವಿಕವಾಗಿ ಕಲಿಯುತ್ತಿದ್ದರು. ಇದ್ದರಿಂದ ಅವರಲ್ಲಿ ದೈಹಿಕ ಮತ್ತು ಭೌದ್ಧಿಕ ಚುರುಕುತನ ಬೆಳೆಯುತ್ತಿತ್ತು. ಆದರೆ ಇತ್ತೀಚಿನ ಮಕ್ಕಳು ಇಂತಹ ಸಂದರ್ಭಗಳಿಂದ ವಂಚಿತರಾಗಿದ್ದಾರೆ. ಇಂದಿನ ಮಕ್ಕಳು ಬೇಸಿಗೆ ರಜೆಯ ಸಮಯದಲ್ಲಿ ಆ ಕ್ಲಾಸ್ ಈ ಕ್ಲಾಸ್ ಎಂದುಕೊಂಡು ಬಂಧು ಮಿತ್ರರಿಂದ

ಬೇಸಿಗೆ ರಜೆ ಅಂದು – ಇಂದು Read More »

ಹೊಸ ವರುಷದ ಆದಿ ಯುಗಾದಿ

ಚೈತ್ರ ಮಾಸದ ಪ್ರಾರಂಭದ ದಿನ ಭಾರತೀಯರಿಗೆ ಹೊಸ ವರುಷ .ಪ್ರತೀ ಮನೆಯಲ್ಲಿ ಸಿಹಿ ಮತ್ತು ಕಹಿ ಬೇವಿನ ಮಿತ್ರಣದ ಜತೆಗೆ ಪ್ರಾರಂಭವಾಗುವ ಈ ದಿನ ಜೀವನದಲ್ಲಿ ಸಿಹಿ ಕಹಿಯು ಒಂದ ಸಮನಾಗಿ ನಮ್ಮ ಬಾಳಿನಲ್ಲಿ ಇರಲಿ ಎಂಬ ಆಶಾಭಾವನೆಯೊಟ್ಟಿಗೆ ಹೊಸ ವರ್ಷವನ್ನು ಪ್ರಾರಂಭಿಸಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಮೊದಲ ಹಬ್ಬವೇ ಯುಗಾದಿ.ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಸೃಷ್ಟಿಯಾಗಿದೆ. ‘ಯುಗ’ ಎಂದರೆ ಹೊಸ ಕಾಲ ಎಂದೂ ‘ಆದಿ’ ಎಂದರೆ ಆರಂಭ ಅಂತ .ಹೊಸ

ಹೊಸ ವರುಷದ ಆದಿ ಯುಗಾದಿ Read More »

ಅಭಿವೃದ್ಧಿ ಹಾಗೂ ಹಿಂದುತ್ವವೇ ಕ್ಯಾ.ಬ್ರಿಜೇಶ್ ಚೌಟ ಮೂಲಮಂತ್ರ

ಹಿಂದುತ್ವಕ್ಕೆ ಬದ್ದತೆ ಅಭಿವೃದ್ಧಿಗೆ ಆದ್ಯತೆ ಎಂಬ ವಿಚಾರಧಾರೆಯಡಿಯಲ್ಲಿ ದ.ಕ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಈ ಬಾರಿ ಚುನಾವಣಾ ಅಖಾಡಕ್ಕೆ ಸಜ್ಜುಗೊಂಡಿದ್ದಾರೆ. ಪಕ್ಷ, ಸಂಘಟನೆ, ಜಾನಪದ ಕ್ರೀಡೆ, ರಾಷ್ಟ್ರೀಯತೆ, ಸಾಹಿತ್ಯ ಕ್ಷೇತ್ರದ ಸಂಘಟನೆಗಳ ಮೂಲಕ ಇಷ್ಟು ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಇವರು ದ.ಕ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬಹುದೊಡ್ಡ ಕನಸು, ದೂರದೃಷ್ಟಿತ್ವದ ಕನಸುಗಳನ್ನು ಹೊತ್ತವರು ಕೂಡ. ಸುಶಿಕ್ಷಿತ ಜಿಲ್ಲೆಗೆ ಉತ್ತಮ ಜ್ಞಾನವುಳ್ಳ ಒಳ್ಳೆಯ ಸುಶಿಕ್ಷಿತ ಅಭ್ಯರ್ಥಿಯ ಕೂಗು ಇಂದು ನಿನ್ನೆಯದಲ್ಲ.ಈ ಕಾರಣಕ್ಕಾಗಿ ಭಾಜಾಪ ಈ ಬಾರಿ

ಅಭಿವೃದ್ಧಿ ಹಾಗೂ ಹಿಂದುತ್ವವೇ ಕ್ಯಾ.ಬ್ರಿಜೇಶ್ ಚೌಟ ಮೂಲಮಂತ್ರ Read More »

error: Content is protected !!
Scroll to Top