ಬೆಳಗಾವಿ ಸುವರ್ಣ ಸೌಧದ ಎದುರು ಗಿಡ ನೆಟ್ಟ ಶಾಸಕ ಅಶೋಕ್ ರೈ
ಪುತ್ತೂರು: ವಿಧಾನ ಸಭಾ ಅಧಿವೇಶನ ನಡೆಯುತ್ತಿರುವ ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗಿಡ ನೆಡುವ ಮೂಲಕ ಬೆಳಗಾವಿಯ ಅಧಿವೇಶನದ ಸವಿನೆನಪಿನ ಗುರುತು ಮಾಡಿದರು. ಹಲಸಿನ ಗಿಡವನ್ನು ಶಾಸಕರು ನೆಡುವ ಮೂಲಕ ತನ್ನ ಪರಿಸರ ಪ್ರೇಮ ಮೆರೆದರು. ಪುತ್ತೂರಿನ ರಸ್ತೆ ಬದಿಗಳಲ್ಲಿ ಕಾಟು ಮಾವಿನ ಗಿಡ ನೆಡುವ ಮೂಲಕ ಸುದ್ದಿಯಾಗಿದ್ದ ಶಾಸಕರು ಬೆಳಗಾವಿಯಲ್ಲಿ ಹಲಸಿನ ಗಿಡ ನೆಡುವ ಮೂಲಕ ಎರಡನೇ ಬಾರಿಗೆ ಸುದ್ದಿಯಾದರು.
ಬೆಳಗಾವಿ ಸುವರ್ಣ ಸೌಧದ ಎದುರು ಗಿಡ ನೆಟ್ಟ ಶಾಸಕ ಅಶೋಕ್ ರೈ Read More »