ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ಮಹಾಸಭೆ | 32.40 ಕೋಟಿ ವ್ಯವಹಾರ, 10.02 ಲಕ್ಷ ಲಾಭ, ಶೇ.12 ಡಿವಿಡೆಂಡ್ ಘೋಷಣೆ
ಪುತ್ತೂರು: ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘ 2023-24ನೇ ಸಾಲಿನಲ್ಲಿ 32.40 ಕೋಟಿ ವ್ಯವಹಾರ ನಡೆಸಿ 10.02 ಲಕ್ಷ ರೂ. ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು. ಸಂಘದ ಪ್ರಧಾನ ಕಚೇರಿಯ ‘ಮಾಧುರಿ ಸೌಧ’ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಘೋಷಣೆ ಮಾಡಿದರು. ವರದಿ ವರ್ಷ ಸಂಘದಲ್ಲಿ 3,030 ಸದಸ್ಯರಿಂದ 13.77 ಲಕ್ಷ ರೂ. ಪಾಲು ಬಂಡವಾಳ, 64.22 […]