ಫೆ.11 ರಂದು ಪುತ್ತೂರಿನಲ್ಲಿ ಐತಿಹಾಸಿಕ ಸಮಾವೇಶ ; ರೈತರಿಗೆ ಇನ್ನಷ್ಟು ಚಟುವಟಿಕೆಗೆ ಶಕ್ತಿ, ಉತ್ತೇಜನ ನೀಡಲಿದೆ ಕಾರ್ಯಕ್ರಮ : ಸಚಿವ ಸುನಿಲ್ ಕುಮಾರ್
ಪುತ್ತೂರು : ಅಡಿಕೆ ಬೆಳೆಗಾರರು ಹಾಗೂ ರೈತರನ್ನು ಮುಂದಿಟ್ಟುಕೊಂಡು ಫೆ.11 ರಂದು ಪುತ್ತೂರಿನಲ್ಲಿ ಐತಿಹಾಸಿಕ ಸಮಾವೇಶವಾಗಿ ಮೂಡಿ ಬರಲಿದ್ದು, ರೈತರ ಇನ್ನಷ್ಟು ಕಾರ್ಯಚಟುವಟಿಕೆಗಳಿಗೆ ಶಕ್ತಿ ನೀಡುವ ಜತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಡೆಯಲಿದ್ದು, ಉದ್ಘಾಟನೆಗೋಸ್ಕರ ಮಧ್ಯಾಹ್ನ 12 ಗಂಟೆಗೆ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್‌ಶಾ ಆಗಮಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿಕ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸಮಾವೇಶ ನಡೆಯುವ ತೆಂಕಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಮಧ್ಯಾಹ್ನ […]