ಕೃಷಿ

ಜೂನ್ 1ಕ್ಕೇ ಶುರುವಾಗಲಿದೆ ಮಳೆಗಾಲ

ಹೊಸದಿಲ್ಲಿ : ಈ ವರ್ಷ ಮುಂಗಾರು ವಿಳಂಬವಾಗುತ್ತದೆ ಎಂಬ ಮುನ್ಸೂಚನೆಯಿಂದ ಕಂಗಾಲಾಗಿದ್ದ ರೈತಾಪಿ ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಈ ಸಾಲಿನಲ್ಲೂ ಮುಂಗಾರು ವಾಡಿಕೆಯಂತೆ ಜೂನ್ 1ರಂದಲೇ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೊಸ ಮಾಹಿತಿ ಬಿಡುಗಡೆಗೊಳಿಸಿದೆ. ಕೆಲ ದಿನಗಳ ಹಿಂದೆ ಮುಂಗಾರು ಕರ್ನಾಟಕ ಪ್ರವೇಶ ಸುಮಾರು ಒಂದು ವಾರದಷ್ಟು ವಿಳಂಬವಾಗಬಹುದು ಎಂಬ ಮುನ್ಸೂಚನೆ ನೀಡಿದಾಗ ಬಿರು ಬೇಸಿಗೆಯಿಂದಾಗಿ ಜಲಮೂಲಗಳೆಲ್ಲ ಬತ್ತಿ ನೀರಿಗೆ ಹಾಹಾಕಾರ ಮಾಡುತ್ತಿದ್ದ ಜನರಿಗೆ ಚಿಂತೆಯಾಗಿತ್ತು. ಮುಂಗಾರು ಮಳೆಗೆ ಕಾರಣವಾಗುವ ನೈಋತ್ಯ […]

ಜೂನ್ 1ಕ್ಕೇ ಶುರುವಾಗಲಿದೆ ಮಳೆಗಾಲ Read More »

ಕಂಬಳ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ದೆಹಲಿ: ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಈ ಮೂಲಕ ಕಂಬಳಕ್ಕಿದ್ದ ದೊಡ್ಡ ತೊಡಕೊಂದು ನಿವಾರಣೆಯಾದಂತಾಗಿದೆ. ಕರ್ನಾಟಕದ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎನ್ನುವ ವಿಚಾರದಲ್ಲಿ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಸಲ್ಲಿಕೆ ಆಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮೇ 18ರಂದು ತನ್ನ ತೀರ್ಪು ನೀಡಿದ್ದು, ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನೀಡಿ ಎಂದು

ಕಂಬಳ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ Read More »

ಕ್ಯಾಂಪ್ಕೋ ಡೆಪ್ಯುಟಿ ಮೆನೇಜರಿಗೆ ಸನ್ಮಾನ, ಬೀಳ್ಕೊಡುಗೆ

ಪುತ್ತೂರು: ಕ್ಯಾಂಪ್ಕೋದಲ್ಲಿ ಡೆಪ್ಯುಟಿ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾದ ಉಷಾ ದಂಪತಿಯನ್ನು ಪುತ್ತೂರು ಕ್ಯಾಂಪ್ಕೋ ಕಚೇರಿಯಲ್ಲಿ ಸನ್ಮಾನ ಮಾಡಿ, ಬೀಳ್ಕೊಡಲಾಯಿತು. ಕಳೆದ 26 ವರ್ಷಗಳ ಕಾಲ ಉಷಾ ಅವರು ಕ್ಯಾಂಪ್ಕೋದಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ನಿವೃತ್ತಗೊಳ್ಳುತ್ತಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯ ಎಂಡಿ ಕೃಷ್ಣ ಕುಮಾರ್ ಸನ್ಮಾನ ನೆರವೇರಿಸಿದರು. ಕ್ಯಾಂಪ್ಕೋ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕ್ಯಾಂಪ್ಕೋ ಡೆಪ್ಯುಟಿ ಮೆನೇಜರಿಗೆ ಸನ್ಮಾನ, ಬೀಳ್ಕೊಡುಗೆ Read More »

ಪುತ್ತೂರು ಜಾತ್ರೆ : ಸೋಮವಾರ ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆ ರದ್ದು

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಎ.17ರಂದು ಜರುಗುವ ಬ್ರಹ್ಮರಥೋತ್ಸವದಂದು ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎ.17ರ ಸೋಮವಾರ ಕಿಲ್ಲೆ ಮೈದಾನದಲ್ಲಿನ ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ. ಪ್ರತಿ ಬಾರಿ ಬ್ರಹ್ಮರಥೋತ್ಸವದಂದು ಪುತ್ತೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಆ ದಿನ ವಾಹನ ಪಾರ್ಕಿಂಗ್ ಗೆ ಕಿಲ್ಲೆ ಮೈದಾನ ಸಹಿತ ಹಲವಾರು ಮೈದಾನಗಳನ್ನು ಗುರುತಿಸಲಾಗುತಿತ್ತು. ಈ ಬಾರಿ ಎ.17ರಂದು ಸೋಮವಾರ ಆಗಿರುವುದರಿಂದ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಿದರೆ ವಾಹನ ಪಾರ್ಕಿಂಗ್ ಗೆ ತೊಂದರೆ ಆಗುವ

ಪುತ್ತೂರು ಜಾತ್ರೆ : ಸೋಮವಾರ ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆ ರದ್ದು Read More »

ಜಿಲ್ಲೆಯ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರ ಪುತ್ತೂರಿಗೆ | ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜಿಲ್ಲೆಗೆ ಮಂಜೂರಾದ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರಗಳು ಪುತ್ತೂರಿಗೇ ಮಂಜೂರಾಗಿವೆ. ಈ ಮೂರು ಕೇಂದ್ರಗಳಿಗೂ ಜಾಗದ ಸಮಸ್ಯೆ ಇತ್ತು. ಜಾಗದ ಸಮಸ್ಯೆಯನ್ನು ನಿವಾರಿಸಿ, ಅನುದಾನ ತರಿಸಿ, ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಕೆಲಸ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ಸೋಮವಾರ ದರ್ಬೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದು, ರೈತರ

ಜಿಲ್ಲೆಯ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರ ಪುತ್ತೂರಿಗೆ | ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಸರಕಾರ ಕೃಷಿ ಸಾಲದ ವಸೂಲಾತಿಗಾಗಿ ಯಾವುದೇ ರೀತಿಯ ಕಾನೂನು ಹೋರಾಟ ಮಾಡಬಾರದು : ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ದ.ಕ.ಜಿಲ್ಲಾ ಒಕ್ಕೂಟ ಆಗ್ರಹ

ಪುತ್ತೂರು : ಬಂಟ್ವಾಳ ತಾಲೂಕಿನ ಇಡ್ಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದದಿಂದ ಪಡೆದುಕೊಂಡ ಕೃಷಿ ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಬ್ಯಾಂಕ್‌ನಿಂದ ಕಿರುಕುಳ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡ ವೀರಪ್ಪ ಗೌಡ ಅವರ ಕುಟುಂಬಕ್ಕೆ ಅವರ ಸಂಪೂರ್ಣ ಸಾಲಮನ್ನಾದ ಜತೆ ಸರಕಾರ ಕನಿಷ್ಠ 50 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ದ.ಕ.ಜಿಲ್ಲಾ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಂಘದ ಜಿಲ್ಲಾ ಸಂಚಾಲಕ, ಒಕ್ಕೂಟದ ಮುಖ್ಯಸ್ಥ ರೂಪೇಶ್

ಸರಕಾರ ಕೃಷಿ ಸಾಲದ ವಸೂಲಾತಿಗಾಗಿ ಯಾವುದೇ ರೀತಿಯ ಕಾನೂನು ಹೋರಾಟ ಮಾಡಬಾರದು : ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ದ.ಕ.ಜಿಲ್ಲಾ ಒಕ್ಕೂಟ ಆಗ್ರಹ
Read More »

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿ ಸಹಾಯಧನ ಚೆಕ್ ಹಸ್ತಾಂತರ

ಪುತ್ತೂರು : ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿ ಚಿಕಿತ್ಸಾ ವೆಚ್ಚಕ್ಕೆ ಸಹಾಯಧನ ಚೆಕ್ ನ್ನು ಸೋಮವಾರ ಹಸ್ತಾಂತರಿಸಲಾಯಿತು. ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯರಾದ ಪುತ್ತೂರು ತಾಲೂಕಿನ,ಅನುಗ್ರಹ ಮನೆಯ ಮೋಹನಚಂದ್ರ ಬೋರ್ಕರ್ರವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಅವರ ಮಗಳಾದ ಕು. ಅಂಕಿತಾ  ಹಾಗೂ ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ಅಂಗಡಿಹಿತ್ತಿಲು ಮನೆಯ ಬಾಲಕೃಷ್ಣ ಗೌಡ ರವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ತಲಾ  50 ಸಾವಿರ ರೂ. ಸಹಾಯಧನದ ಚೆಕ್

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿ ಸಹಾಯಧನ ಚೆಕ್ ಹಸ್ತಾಂತರ Read More »

ಡಿ.ಸಿ.ಆರ್.ನಲ್ಲಿ ಗೇರು ದಿನೋತ್ಸವ -2023 ಆಚರಣೆ

ಪುತ್ತೂರು : ಪುತ್ತೂರಿನ ಕೆಮ್ಮಿಂಜೆಯಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಗೇರು ದಿನೋತ್ಸವ-2023 ವನ್ನು ಆಚರಿಸಲಾಯಿತು. ಮುಖ್ಯ ಅಥಿತಿಗಳಾಗಿ ಗದಗ ಜಿಲ್ಲಾ ಗೇರು ಬೆಳೆಗಾರರ ಸಂಘದ ಅಧ್ಯಕ್ಷ ಗುರುನಾಥ ಆರ್. ಓದುಗೌಡರ್ ಮಾತನಾಡಿ, ಕೃಷಿಕರು ತಾಯಿಗೆ ಸಮಾನ. ತಾಯಿಯ ಕುಂದು ಕೊರತೆಗಳನ್ನು ನಿವಾರಿಸುವಲ್ಲಿ ಕೃಷಿ ವಿಜ್ಞಾನಿಗಳು ಮಾಡಬೇಕಾದ ಕೆಲಸದ ಬಗ್ಗೆ ತಿಳಿಸಿದರು. ರೈತರ ಹೊಲಗಳಿಗೆ ಬೇಟಿ ನೀಡಿ ಖಾಲಿ ಇರುವ ಪ್ರದೇಶದಲ್ಲಿ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಂಡು ಪರಿಸರಕ್ಕೆ ಹೊಂದುವ ವಿವಿಧ ತಳಿಗಳನ್ನು ಬಿಡುಗಡೆ ಮಾಡಬೇಕೆಂದು ಸಲಹೆ ನೀಡಿದ ಅವರು,

ಡಿ.ಸಿ.ಆರ್.ನಲ್ಲಿ ಗೇರು ದಿನೋತ್ಸವ -2023 ಆಚರಣೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 541ನೇ ನಮ್ಮೂರ ಕೆರೆಗೆ ಭೂಮಿ ಪೂಜೆ | ಶಾಸಕ ಸಂಜೀವ ಮಠಂದೂರು ಅವರಿಂದ ಚಾಲನೆ

ಪುತ್ತೂರು “ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಳಮೊಗ್ರು ಗ್ರಾಪಂ, ಅಜಲಡ್ಕಕೆರೆ ಸಮಿತಿ, ಸಹಯೋಗದಲ್ಲಿ 541ನೇ ನಮ್ಮೂರ ನಮ್ಮ ಕೆರೆ ಹೂಳೆತ್ತುವ, ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮ ಅಜಲಡ್ಕಕೆರೆ ಆವರಣದಲ್ಲಿ ಗುರುವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕೆರೆ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಬೂಡಿಯರು ವಹಿಸಿದ್ದರು.  ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 541ನೇ ನಮ್ಮೂರ ಕೆರೆಗೆ ಭೂಮಿ ಪೂಜೆ | ಶಾಸಕ ಸಂಜೀವ ಮಠಂದೂರು ಅವರಿಂದ ಚಾಲನೆ Read More »

ಹೈನುಗಾರಿಕೆಗೆ ಪ್ರೋತ್ಸಾಹಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆ ನಿರ್ಮಾಣ, ಪಶುವೈದ್ಯಕೀಯ ಕಾಲೇಜು ಸ್ಥಾಪನೆ | ಪಶುವೈದ್ಯಕೀಯ ಇಲಾಖೆಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಶಾಸಕ ಸಂಜೀವ ಮಠಂದೂರು|ಗೋ ಪೂಜೆ ನೆರವೇರಿಸಿ ಫಲಾನುಭವಿಗಳಿಗೆ ವಿತರಣೆ

ಪುತ್ತೂರು: ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆಗಳ ನಿರ್ಮಾಣ, ಪಶುವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಫೆ.27ರಂದು ಪಶು ಆಸ್ಪತ್ರೆಯ ಆವರಣದಲ್ಲಿ ದ.ಕ. ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ವತಿಯಿಂದ 2022-23ನೇ ಸಾಲಿನ ಅಮೃತಸಿರಿ, ಅಮೃತ ಯೋಜನೆ, ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಮಲೆನಾಡುಗಿಡ್ಡ ಮಿಶ್ರತಳಿ, ಹಸು ಘಟಕ, ಆಡು ಘಟಕ ಮೊದಲಾದ ಸವಲತ್ತುಗಳ ವಿತರಿಸಿ ಮಾತನಾಡಿದರು. ಗೋವಿನ

ಹೈನುಗಾರಿಕೆಗೆ ಪ್ರೋತ್ಸಾಹಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆ ನಿರ್ಮಾಣ, ಪಶುವೈದ್ಯಕೀಯ ಕಾಲೇಜು ಸ್ಥಾಪನೆ | ಪಶುವೈದ್ಯಕೀಯ ಇಲಾಖೆಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಶಾಸಕ ಸಂಜೀವ ಮಠಂದೂರು|ಗೋ ಪೂಜೆ ನೆರವೇರಿಸಿ ಫಲಾನುಭವಿಗಳಿಗೆ ವಿತರಣೆ Read More »

error: Content is protected !!
Scroll to Top