ತೆಲಂಗಾಣದಲ್ಲಿ ಸ್ಥಳೀಯ ಮಹಿಳಾ ಕೃಷಿಕರೊಂದಿಗೆ ಗದ್ದೆಗಿಳಿದು ನೇಜಿ ನಾಟಿ ಮಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ | ಚುನಾವಣಾ ಪ್ರಚಾರದಲ್ಲಿ ಭಾಗಿ
ತೆಲಂಗಾಣ: ತೆಲಂಗಾಣ ವಿಧಾನಸಭಾ ಚುನಾವಣೆ ಸಿದ್ಧತೆ ಹಾಗೂ ಸಂಘಟನಾ ಕಾರ್ಯದಲ್ಲಿ ಪಾಲ್ಗೊಳ್ಳಲು ತೆಲಂಗಾಣಕ್ಕೆ ತೆರಳಿರುವ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸ್ಥಳೀಯ ಮಹಿಳಾ ಕೃಷಿಕರೊಂದಿಗೆ ಗದ್ದೆಗಿಳಿದು ನೇಜಿ ನಾಟಿ ಮಾಡುವ ಕಾರ್ಯದಲ್ಲಿ ಭಾಗಿಯಾದರು. ಜಿಲ್ಲೆಯ ಬೆಳ್ಳಂಪಲ್ಲಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಕನ್ನೆಪಲ್ಲಿ ಮಂಡಲದ ಪಕ್ಷ ಸಂಘಟನೆ ಹಾಗೂ ಚುನಾವಣಾ ಸಿದ್ಧತೆಯ ತಯಾರಿಗಳ ಕುರಿತು ನಡೆದ ಪ್ರಮುಖರ ಸಭೆಯಲ್ಲಿ ಅವರು ಪಾಲ್ಗೊಂಡು ಸ್ಥಳೀಯ ಪಕ್ಷದ ಕಚೇರಿಯಲ್ಲಿ ಬಿಜೆಪಿ ಧ್ವಜಾರೋಹಣ ಮಾಡಿದರು. ಎಲ್ಲರಂ ಗ್ರಾಮದಲ್ಲಿ ಸ್ಥಳೀಯ ಜನರನ್ನು ಭೇಟಿಯಾಗಿ ಮಾತುಕತೆ […]










