ಸ್ಥಳೀಯ ಸುದ್ದಿ

ಸಮೀಕ್ಷೆಯ ಜಾತಿ ಕಾಲಂನಲ್ಲಿ “ಒಕ್ಕಲಿಗ”, ಉಪಜಾತಿ ಕಾಲಂನಲ್ಲಿ “ಗೌಡ” ಎಂದು ನಮೂದಿಸಿ |ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ಅಧ್ಯಕ್ಷರು : ಸುರೇಶ್ ಗೌಡ ಬೈಲು ಮನವಿ

ಕರ್ನಾಟಕ ರಾಜ್ಯ ಸರಕಾರವು ಈಗಾಗಲೇ ಆಯೋಜಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೨೫ ಇದೇ ತಿಂಗಳು ಸೆಪ್ಟೆಂಬರ್ ೨೨ ರಿಂದ ರಾಜ್ಯಾದ್ಯಂತ ಆರಂಭಗೊಳ್ಳಲಿದೆ. ಈ ಸಮೀಕ್ಷೆಗೆ ನಿಯೋಜಿತ ಅಧಿಕಾರಿಗಳು ಪ್ರತೀ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಮಾಡಲಿದ್ದಾರೆ. ಈಗಾಗಲೇ ಪ್ರತೀ ಮನೆಗೆ UID ಸಂಖ್ಯೆ ಅಂಟಿಸಲಾಗಿದ್ದು ದಾಖಲಾತಿ ಕೆಲಸ ಪ್ರಾರಂಭಗೊಂಡಿರುತ್ತದೆ. ಸಮೀಕ್ಷೆದಾರರು ಮನೆಗೆ ಬಂದಾಗ ಸಮಸ್ತ ಒಕ್ಕಲಿಗ ಸಮಾಜದವರು ಆದಿಚುಂಚನಗಿರಿ ಮಹಾಸಂಸ್ಥಾನದ ಪರಮ ಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ನಿರ್ದೇಶನ […]

ಸಮೀಕ್ಷೆಯ ಜಾತಿ ಕಾಲಂನಲ್ಲಿ “ಒಕ್ಕಲಿಗ”, ಉಪಜಾತಿ ಕಾಲಂನಲ್ಲಿ “ಗೌಡ” ಎಂದು ನಮೂದಿಸಿ |ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ಅಧ್ಯಕ್ಷರು : ಸುರೇಶ್ ಗೌಡ ಬೈಲು ಮನವಿ Read More »

ಪುತ್ತೂರಿನ ಪ್ರತಿಷ್ಠಿತ ಪ್ರೇರಣಾ ಸಂಸ್ಥೆ 4ನೇ ವರುಷಕ್ಕೆ ಪಾದಾರ್ಪಣೆ

ಪುತ್ತೂರು: ಸುಮಾರು ಮೂರು ವರುಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ NEET /CET ಸ್ಪರ್ಧಾತ್ಮಕ ತರಬೇತಿ ನೀಡುವುದರ ಜೊತೆಗೆ ಉನ್ನತ ಶಿಕ್ಷಣದ ಮಾಹಿತಿ, ಭಾಷಣ ಮತ್ತು ನಿರ್ವಹಣೆ ತರಬೇತಿ, ವಿದ್ಯಾರ್ಥಿವೇತನ ಹಾಗೂ ಇನ್ನಿತರ ಕ್ಯಾಂಪ್ ಗಳನ್ನು ಮಾಡುತ್ತ ಬಂದಿರುವ ನಗರದ ಪ್ರತಿಷ್ಠಿತ ಪ್ರೇರಣಾ ಸಂಸ್ಥೆ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಲಕ್ಷ್ಮಿ ಪೂಜೆಯನ್ನು ಕೇಕಣಾಜೆ ಕೇಶವ ಭಟ್ ತಂತ್ರಿಗಳು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣಾ ಸಂಸ್ಥೆಯ ಅಧ್ಯಕ್ಷರಾದ ಮುರಳೀಧರ ಕೆ ಎಲ್, ಕಾರ್ಯನಿರ್ವಾಹಕ ನಿರ್ದೇಶಕಿಯಾದ

ಪುತ್ತೂರಿನ ಪ್ರತಿಷ್ಠಿತ ಪ್ರೇರಣಾ ಸಂಸ್ಥೆ 4ನೇ ವರುಷಕ್ಕೆ ಪಾದಾರ್ಪಣೆ Read More »

ತೆನ್ಕಾಯಿ ಮಲೆ ಕಿರುಚಿತ್ರದ ಹಾಡು, ಟ್ರೈಲರ್ ಬಿಡುಗಡೆ

ಪುತ್ತೂರು: ಅಕ್ಟೋಬರ್ 24ರಂದು ತೆರೆ ಕಾಣಲಿರುವ ಕನ್ನಡ ಕಿರುಚಿತ್ರ ತಿನ್ಕಾಯಿಮಲೆಯ ಹಾಡು ಮತ್ತು ಟ್ರೈಲರ್ ಸೆ.12ರಂದು ಪುತ್ತೂರಿನ ಜಿ.ಎಲ್. ಮಾಲ್ ನಲ್ಲಿ ಬಿಡುಗಡೆಗೊಂಡಿದೆ‌. ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮನ್ಮಥ ಶೆಟ್ಟಿ, ಧರ್ಮ ಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪುತ್ತೂರು ವಲಯದ ಅಧ್ಯಕ್ಷ ರಘು ಶೆಟ್ಟಿ, ಸುಶಾಂತ್ ಮರೀಲು ಹಾಡು ಮತ್ತು

ತೆನ್ಕಾಯಿ ಮಲೆ ಕಿರುಚಿತ್ರದ ಹಾಡು, ಟ್ರೈಲರ್ ಬಿಡುಗಡೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಅಡ್ಯನಡ್ಕ ಒಕ್ಕೂಟದ ಕ್ರೀಡಾಕೂಟ, ವಾರ್ಷಿಕೋತ್ಸವ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡ್ಯನಡ್ಕ ಒಕ್ಕೂಟದ ಕ್ರೀಡಾಕೂಟ ಹಾಗೂ ವಾರ್ಷಿಕೋತ್ಸವದ ಕಾರ್ಯಕ್ರಮ ಜನತಾ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಧ್ಯೇಯಗೀತೆಯೊಂದಿಗೆ ಪ್ರಾರಂಭಗೊಂಡ ಈಕಾರ್ಯಕ್ರಮವನ್ನು ಈ ವಿದ್ಯಾಸಂಸ್ಥೆಯ ಸಂಚಾಲಕಿ ಡಾ.ಅಶ್ವಿನಿ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಚೆಲ್ಲಡ್ಕ ಪುಷ್ಪಾಕರ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುದ್ದುಪದವು ಶಾಲೆಯ ಶಿಕ್ಷಕ ವಿಠಲ ಜಿ., ವಲಯ ಮೇಲ್ವಿಚಾರಕ ಚಂದ್ರಶೇಖರ್ ಉಪಸ್ಥಿತರಿದ್ದರು. ಅಪರಾಹ್ನ ನಡೆದ ಸಮರೂಪ ಸಮಾರಂಭದ ಅಧ್ಯಕ್ಷತೆಯನ್ನು ಗಣೇಶ್ ಮೈರುಗ ವಹಿಸಿದ್ದರು. ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಅಡ್ಯನಡ್ಕ ಒಕ್ಕೂಟದ ಕ್ರೀಡಾಕೂಟ, ವಾರ್ಷಿಕೋತ್ಸವ Read More »

ಜಿ. ಎಲ್. ಆಚಾರ್ಯದಲ್ಲಿ ಶಿಕ್ಷಕರಿಗಾಗಿ ಆಫರ್: ಕೊನೆಯ 7 ದಿನಗಳು ಮಾತ್ರ

ಪುತ್ತೂರು: ನಗರದ ಪ್ರತಿಷ್ಠಿತ ಆಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗಾಗಿ ವಿಶೇಷ ಆಫರ್ ಇದ್ದು, ಇದು ಮುಂದಿನ 7 ದಿನಗಳು ವರೆಗೆ ಮಾತ್ರವೇ ಲಭ್ಯವಿದೆ. ಈ ಆಫರ್‌ನ ಸದುಪಯೋಗವನ್ನು ಬೋಧಕರ ಜೊತೆಗೆ ಬೋಧಕೇತರ ಸಿಬ್ಬಂದಿಗಳು ಸಹ ಪಡೆದುಕೊಳ್ಳುವ ಅವಕಾಶ ಇದೆ. ಚಿನ್ನಾಭರಣಗಳ ಪ್ರತೀ ಗ್ರಾಂಗೆ ಮೇಲೆ ರೂ. 300/-ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್‌ಗೆ ರೂ.5000/-ರಿಯಾಯಿತಿ, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿ. ಗೆ ರೂ.3000/- ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್

ಜಿ. ಎಲ್. ಆಚಾರ್ಯದಲ್ಲಿ ಶಿಕ್ಷಕರಿಗಾಗಿ ಆಫರ್: ಕೊನೆಯ 7 ದಿನಗಳು ಮಾತ್ರ Read More »

ಗತಕಾಲದ ತುಳು ಪರಂಪರೆಯನ್ನು ಯುವಜನರಿಗೆ ತಲುಪಿಸುವ ಕಾರ್ಯ ಶ್ಲಾಘನೀಯ: ಬಲರಾಮ ಆಚಾರ್ಯ

ಪುತ್ತೂರು: ಹಿಂದಿನ ಕಾಲದ ತುಳು ಪರಂಪರೆಯನ್ನು ಇಂದಿನ ಯುವಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಪುತ್ತೂರು ತುಳುಕೂಟದ ಕಾರ್ಯವೈಖರಿಯನ್ನು ಜಿ. ಎಲ್. ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ ಅವರು ಶ್ಲಾಘಿಸಿದರು. ಪುತ್ತೂರು ತುಳುಕೂಟ ‌ಮತ್ತು ಚಿಗುರೆಲೆ ಸಾಹಿತ್ಯ ಬಳಗದ ಸಹಯೋಗದಲ್ಲಿ ನಡೆದ ತುಳು ಕಬಿಕೂಟ -2025 ಅನ್ನು ತುಳು ಕಬಿತೆಯನ್ನು ‌ವಾಚಿಸುವ ಮೂಲಕ ಅವರು ಉದ್ಘಾಟನೆ ಮಾಡಿ‌ ಮಾತನಾಡಿದರು. ಮುಖ್ಯ ಅತಿಥಿ ಸುದಾನ ಶಾಲಾ ಶಿಕ್ಷಕಿ, ಸಾಹಿತಿ ಕವಿತಾ ಅಡೂರು ಅವರು ಉದಯೋನ್ಮುಖ ಕವಿಗಳಿಗೆ ಮಾರ್ಗದರ್ಶನ ನೀಡಿದರು.

ಗತಕಾಲದ ತುಳು ಪರಂಪರೆಯನ್ನು ಯುವಜನರಿಗೆ ತಲುಪಿಸುವ ಕಾರ್ಯ ಶ್ಲಾಘನೀಯ: ಬಲರಾಮ ಆಚಾರ್ಯ Read More »

ಸೆ.5: ಪುತ್ತೂರಿನಲ್ಲಿ ತುಳು ಕಬಿಕೂಟೊ – 2025 ಕಾರ್ಯಕ್ರಮ

ಪುತ್ತೂರು: ಸೆ. 5 ರಂದು ತುಳುಕೂಟ ಪುತ್ತೂರು, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವುಗಳ ಆಶ್ರಯದಲ್ಲಿ ತುಳು ಕಬಿಕೂಟೊ – 2025 ಕಾರ್ಯಕ್ರಮ ಬೆಳಗ್ಗೆ 9.30ರಿಂದ ಪುತ್ತೂರಿನ ಜಿ.ಎಲ್‌. ವನ್ ಮಹಲ್‌ನ ಮೊದಲ ಮಹಡಿಯಲ್ಲಿ ನಡೆಯಲಿದೆ. ಜಿ.ಎಲ್.‌ ಆಚಾರ್ಯ ಜ್ಯುವೆಲ್ಲರ್ಸ್‌ನ ಮಾಲಕ ಬಲರಾಮ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ ಅಕ್ಷತಾ ಪೆರ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಕವಿತಾ ಅಡೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಲಾಗಿದೆ.

ಸೆ.5: ಪುತ್ತೂರಿನಲ್ಲಿ ತುಳು ಕಬಿಕೂಟೊ – 2025 ಕಾರ್ಯಕ್ರಮ Read More »

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮುಖ್ಯ ಶಿಕ್ಷಕ ತಾರಾನಾಥ ಪಿ ಭಾಜನ

ಪುತ್ತೂರು: 2025 -26 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮುಖ್ಯ ಶಿಕ್ಷಕ ತಾರಾನಾಥ ಪಿ ಭಾಜನರಾಗಿದ್ದಾರೆ. ಕಿರು ಪರಿಚಯ ಸವಣೂರು ಗ್ರಾಮದ ಪರಣೆ ನಿವಾಸಿ ಸೀತಾರಾಮ ಗೌಡ ಮತ್ತು ಗಿರಿಜ ದಂಪತಿಗಳ ಪುತ್ರ ತಾರಾನಾಥ ಪಿ ಇವರು 1971 ರಲ್ಲಿ ಜನಿಸಿದರು ಸವಣೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಾಣಿಯೂರು ನಲ್ಲಿ ಪ್ರೌಢ ಮತ್ತು ಕಾಲೇಜು ಶಿಕ್ಷಣ, 1990 ರಲ್ಲಿ ಮಂಗಳೂರು ನಲ್ಲಿ ಟಿ ಸಿ ಎಚ್‌ ಪದವಿ ಪಡೆದು

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮುಖ್ಯ ಶಿಕ್ಷಕ ತಾರಾನಾಥ ಪಿ ಭಾಜನ Read More »

ಜಿ.ಎಲ್. ಆಚಾರ್ಯದಲ್ಲಿ ‌ಶಿಕ್ಷಕರಿಗೆ ವಿಶೇಷ ಆಫರ್

ಪುತ್ತೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಪ್ರತಿಷ್ಟಿತ ಆಭರಣ ಮಳಿಗೆ ಜಿ. ಎಲ್. ಆಚಾರ್ಯವು ಶಿಕ್ಷಕರಿಗಾಗಿ ‌ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಹಬ್ಬ ಹರಿದಿನಗಳ‌ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ಸದ್ಯ ಶಿಕ್ಷಕರಿಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿರುವುದಾಗಿದೆ. ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂಗೆ 300 ರೂ. ಫ್ಲಾಟ್ ಡಿಸ್ಕೊಂಟ್, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್‌ಗೆ 5000 ರೂ. ಫ್ಲಾಟ್ ಡಿಸ್ಕೊಂಟ್, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆಜಿಗೆ 3000 ರೂ. ಫ್ಲಾಟ್ ಡಿಸ್ಕೊಂಟ್ ಆಫರ್

ಜಿ.ಎಲ್. ಆಚಾರ್ಯದಲ್ಲಿ ‌ಶಿಕ್ಷಕರಿಗೆ ವಿಶೇಷ ಆಫರ್ Read More »

ಆ.29: ಭಾರೀ ಮಳೆಯ ಹಿನ್ನೆಲೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯ ಹಿನ್ನಲೆ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೋರು ಮಳೆಯ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 29 ( ನಾಳೆ )ಶುಕ್ರವಾರದಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ,ಸರಕಾರಿ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ‌.

ಆ.29: ಭಾರೀ ಮಳೆಯ ಹಿನ್ನೆಲೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ Read More »

error: Content is protected !!
Scroll to Top