ಸುದ್ದಿ

ಪರೀಕ್ಷೆಗೆ ಹೆದರಿ ಮನೆಬಿಟ್ಟು ಹೋಗಿದ್ದನೇ ದಿಗಂತ್‌?

ಶಿವಮೊಗ್ಗ, ಮೈಸೂರು, ಬೆಂಗಳೂರು ತಿರುಗಾಡಿ ಉಡುಪಿಗೆ ಬಂದಾಗ ಪತ್ತೆ ​ಮಂಗಳೂರು : ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ‌ ಪಿಯುಸಿ ವಿದ್ಯಾರ್ಥಿ ದಿಗಂತ್ ನಿಗೂಢ ನಾಪತ್ತೆ ಪ್ರಕರಣ ಕೊನೆಗೂ ನಿನ್ನೆ ಬಗೆಹರಿದಿದೆ. ದಿಗಂತ್‌ ನಾಪತ್ತೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿ ವಿಧಾನ ಮಂಡಲದ ಕಲಾಪದಲ್ಲೂ ಪ್ರತಿಧ್ವನಿಸಿತ್ತು. ಸ್ಪೀಕರ್‌ ಖಾದರ್‌ ನೀಡಿದ ಸೂಚನೆಯ ಬಳಿಕ ಪೊಲೀಸರು 11 ತಂಡಗಳನ್ನು ರಚಿಸಿ ಹುಡುಕಾಡಿ ದಿಗಂತ್‌ನನ್ನು ನಿನ್ನೆ ಉಡುಪಿಯ ಡಿಮಾರ್ಟ್‌ ಮಾಲ್‌ನಲ್ಲಿ ಪತ್ತೆಹಚ್ಚಿದ್ದಾರೆ. ಹಿಂದು ಸಂಘಟನೆಗಳಿಂದ ಪ್ರತಿಭಟನೆ ಸಹಿತ ಹಲವು ಬೆಳವಣಿಗೆಗಳಿಗೆ ಕಾರಣವಾಗಿದ್ದ […]

ಪರೀಕ್ಷೆಗೆ ಹೆದರಿ ಮನೆಬಿಟ್ಟು ಹೋಗಿದ್ದನೇ ದಿಗಂತ್‌? Read More »

ಚಾಂಪಿಯನ್ಸ್‌ ಟ್ರೋಫಿ : ಫೈನಲ್‌ ಪಂದ್ಯದ ಮೇಲೆ ನಡೆದಿದೆ ಭರ್ಜರಿ ಬೆಟ್ಟಿಂಗ್‌

ಭಾರತ-ನ್ಯೂಜಿಲ್ಯಾಂಡ್‌ ಫೈನಲ್‌ ಕದನಕ್ಕೆ ಕ್ಷಣಗಣನೆ; ಭಾರತವೇ ಬುಕ್ಕಿಗಳ ಫೇವರಿಟ್‌ ದುಬೈ : ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ನಡುವೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಐಸಿಸಿ ಟೂರ್ನಿಯ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಗೆದ್ದ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಏನಾಗಲಿದೆ ಎಂಬ ತೀವ್ರ ಕುತೂಹಲ ಕ್ರಿಕೆಟ್‌ ಪ್ರೇಮಿಗಳಲ್ಲಿದೆ. ಇದರ ಜೊತೆಗೆ ಈ ಪಂದ್ಯದ ಮೇಲೆ ಭರ್ಜರಿ ಬೆಟ್ಟಿಂಗ್‌ ಕೂಡ ನಡೆದಿದೆ. ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ ಪಂದ್ಯ ಶುರುವಾಗಲಿದೆ.

ಚಾಂಪಿಯನ್ಸ್‌ ಟ್ರೋಫಿ : ಫೈನಲ್‌ ಪಂದ್ಯದ ಮೇಲೆ ನಡೆದಿದೆ ಭರ್ಜರಿ ಬೆಟ್ಟಿಂಗ್‌ Read More »

ತಾಯಿ ಹಚ್ಚಿದ ಅಗರಬತ್ತಿಯಿಂದ ಏಳುತಿಂಗಳ ಮಗು ಮೃತ್ಯು

ಕನಕಗಿರಿ :  ಮಗುವಿಗೆ ಅನಾರೋಗ್ಯವಾಗಿದ್ದರಿಂದ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದರೆ ಗುಣಮುಖವಾಗಬಹುದೆಂದು ತಿಳಿದು ಏಳು ತಿಂಗಳ ಮಗುವಿಗೆ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದ್ದು, ಬಳಿಕ ಗುಣ ಪಡಿಸಲು ಮನೆಮದ್ದು ಮಾಡಿದ ಪರಿಣಾಮ ಮಗು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಮಗು ಮೃತಪಟ್ಟ ವೇಳೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ‘ಸುಟ್ಟಗಾಯಗಳಿಂದ ನಂಜಾಗಿ ಮಗು ಸಾವನ್ನಪ್ಪಿದೆ’ ಎಂದು ತಿಳಿಸಿದ್ದಾರೆ. ಈ ಕುರಿತು ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ್ ಎಂಬುವವರು

ತಾಯಿ ಹಚ್ಚಿದ ಅಗರಬತ್ತಿಯಿಂದ ಏಳುತಿಂಗಳ ಮಗು ಮೃತ್ಯು Read More »

ನಾಪತ್ತೆಯಾದ ದಿಗಂತ್‍ ಪತ್ತೆ

ಬಂಟ್ವಾಳ : ಸುಮಾರು  13 ದಿನಗಳ ಕಾಲ  ನಾಪತ್ತೆಯಾಗಿದ್ದ ದಿಗಂತ್ ಪತ್ತೆಯಾಗಿದ್ದು, ಪೊಲೀಸರು ಕರೆ ತರುತ್ತಿದ್ದಾರೆ ಎಂದು ತಿಳಿದುಬಂದಿದೆ. ಫೆ. 25ರಂದು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ದಿಗಂತ್ ಹಿಂದಿರುಗಿ ಬಂದಿರಲಿಲ್ಲ. ರೈಲ್ವೇ ಹಳಿಯಲ್ಲಿ ಆತನ ಚಪ್ಪಲಿಗಳು, ಮೊಬೈಲ್ ಪತ್ತೆಯಾಗಿ ಸಾಕಷ್ಟು ಅನುಮಾನಗಳ ಜೊತೆ ಗೊಂದಲಕ್ಕೆ ಕಾರಣವಾಗಿತ್ತು. ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆದು ಪೊಲೀಸರು ತನಿಖೆ ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಆತ ಕರಾವಳಿ ಭಾಗದಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ

ನಾಪತ್ತೆಯಾದ ದಿಗಂತ್‍ ಪತ್ತೆ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಿಂದ ಆಟದಿಂದ ಪಾಠ  ಎಂಬ ವಿಸ್ತರಣಾ ಕಾರ್ಯಕ್ರಮ

ಎನೆಕಲ್ಲು : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ , ಆಂತರಿಕ ಗುಣಮಟ್ಟ ಭರವಸಾ ಕೋಶ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎನೆಕಲ್ಲು ಇಲ್ಲಿ ಆಟದಿಂದ ಪಾಠ ಎಂಬ ವಿಸ್ತರಣಾ ಕಾರ್ಯಕ್ರಮ ಮಾ.8 (ಇಂದು) ರಂದು ನಡೆಯಿತು. ಸಮಾಜಶಾಸ್ತ್ರ ವಿಭಾಗದ  ತೃತೀಯ ಪದವಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳಿಗೆ ವಿವಿಧ ರೀತಿಯ ಆಟಗಳನ್ನು ಹಮ್ಮಿಕೊಂಡು ಆ ಮೂಲಕ ಪಾಠವನ್ನು ಕಲಿಸಿದರು.  ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಮಯ ಪರಿಪಾಲನೆ, ಕೌಶಲ್ಯವನ್ನು ಹೆಚ್ಚಿಸುವ ಆಟಗಳನ್ನು ಆಡಿಸಿದರು.   ಕಾರ್ಯಕ್ರಮದಲ್ಲಿ ಸರಕಾರಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಿಂದ ಆಟದಿಂದ ಪಾಠ  ಎಂಬ ವಿಸ್ತರಣಾ ಕಾರ್ಯಕ್ರಮ Read More »

ಕೇಪು ಕಾರ್ಯಕ್ಷೇತ್ರದ  ಕಲ್ಲಂಗಳ ಶಾಲೆಯಲ್ಲಿ  ಟ್ಯೂಷನ್ ಕ್ಲಾಸ್ ಸಮಾರೋಪ  ಕಾರ್ಯಕ್ರಮ

ಕೇಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ  ಕೇಪು ವಲಯದ ಕೇಪು ಕಾರ್ಯಕ್ಷೇತ್ರದ  ಕಲ್ಲಂಗಳ ಶಾಲೆಯಲ್ಲಿ  3 ತಿಂಗಳ ಟ್ಯೂಷನ್ ಕ್ಲಾಸ್  ಆಯೋಜಿಸಿದ್ದು  ಇದರ  ಸಮಾರೋಪ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೇಪು ಒಕ್ಕೂಟ ಅಧ್ಯಕ್ಷ   ವೆಂಕಪ್ಪರವರು ವಹಿಸಿದ್ದರು.  ಶಾಲೆಯ ಮುಖ್ಯೋಪಾಧ್ಯಾಯಿಣಿ  ಮಾಲತಿ ಯೋಜನೆಯ ಮುಖಾಂತರ ನಡೆಯುವ ಕಾರ್ಯಕ್ರಮಗಳ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದರು.   ಪೂರ್ವ ತಯಾರಿ  ಪರೀಕ್ಷೆಯಲ್ಲಿ ಉತ್ತಮ  ಫಲಿತಾಂಶ ಇದ್ದು  ಇನ್ನು ಮುಂದೆಯು ಇಂತಹ

ಕೇಪು ಕಾರ್ಯಕ್ಷೇತ್ರದ  ಕಲ್ಲಂಗಳ ಶಾಲೆಯಲ್ಲಿ  ಟ್ಯೂಷನ್ ಕ್ಲಾಸ್ ಸಮಾರೋಪ  ಕಾರ್ಯಕ್ರಮ Read More »

ಪುತ್ತೂರಿನ ಖ್ಯಾತ ಗಾಯಕ  ಡಾ. ಕಿರಣ್ ಕುಮಾರ್  ಗಾನಸಿರಿಯವರಿಗೆ ಸುಗಮ ಸಂಗೀತ ಸೇವಾ ರತ್ನ ಪ್ರಶಸ್ತಿ

ಪುತ್ತೂರು : ಪುತ್ತೂರಿನ ಖ್ಯಾತ ಗಾಯಕ  ಡಾ. ಕಿರಣ್ ಕುಮಾರ್  ಗಾನಸಿರಿಯವರಿಗೆ ಸುಗಮ ಸಂಗೀತ ಸೇವಾ ರತ್ನ ಪ್ರಶಸ್ತಿ ಲಭಿಸಿದೆ. ವಿಜಯ ಮ್ಯೂಸಿಕ್ ಸ್ಕೂಲ್, ಜ್ಞಾನಭಾರತಿ, ಬೆಂಗಳೂರು ಇವರು ಖ್ಯಾತ ಸಂಗೀತ ನಿರ್ದೇಶಕರಾದ ದಿ. ರಾಜನ್ ನಾಗೇಂದ್ರ ಸವಿ ನೆನಪಿನಲ್ಲಿ ಸುಗಮ ಸಂಗೀತ ಕ್ಷೇತ್ರದ ಅನುಪಮ ಸೇವೆಗಾಗಿ  ಈ ಪ್ರಶಸ್ತಿ ಲಭಿಸಲಿದೆ.  ಪ್ರಶಸ್ತಿ ಪ್ರಧಾನ ಸಮಾರಂಭ ಸಪ್ತಸ್ವರ ಸಂಗೀತೋತ್ಸವವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 9 ರಂದು ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕರು ಶ್ರೀ ಹರಿಕೃಷ್ಣ ಸೇರಿದಂತೆ

ಪುತ್ತೂರಿನ ಖ್ಯಾತ ಗಾಯಕ  ಡಾ. ಕಿರಣ್ ಕುಮಾರ್  ಗಾನಸಿರಿಯವರಿಗೆ ಸುಗಮ ಸಂಗೀತ ಸೇವಾ ರತ್ನ ಪ್ರಶಸ್ತಿ Read More »

ಸ್ಕೂಟರ್ ಗೆ ಕಾರು ಡಿಕ್ಕಿ | ಶಿಕ್ಷಕಿಯ ದುರ್ಮರಣ

ಮೂಡಬಿದ್ರೆ : ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಾಲಕಿ  ಶಿಕ್ಷಕಿ ಸಾವನಪ್ಪಿದ ಘಟನೆ ಮೂಡುಬಿದ್ರಿ ರಾಜ್ಯ ಹೆದ್ದಾರಿಯ ಶಿರ್ತಾಡಿ ಸೇತುವೆ ಬಳಿ ಘಟನೆ ನಡೆದಿದೆ.   ಮೃತರನ್ನು ಮೂಡುಬಿದ್ರಿ ನಾಗರಕಟ್ಟೆಯ ನಿವಾಸಿಯಾಗಿದ್ದು, ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಸುಜಯ  ಭಂಡಾರಿ (35) ಎನ್ನಲಾಗಿದೆ. ಶುಕ್ರವಾರ ಸಂಜೆ ವೇಳೆಗೆ ತನ್ನ ಕರ್ತವ್ಯ ಮುಗಿಸಿ ಮೂಡಬಿದ್ರೆ ನಾಗರಕಟ್ಟೆಯಲ್ಲಿರುವ ಮನೆಗೆ ಆಕ್ಟಿವದಲ್ಲಿ ಹೋಗುತ್ತಿದ್ದರು. ಶಿರ್ತಾಡಿ ಸೇತುವೆ ಬಳಿ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಕಾರು

ಸ್ಕೂಟರ್ ಗೆ ಕಾರು ಡಿಕ್ಕಿ | ಶಿಕ್ಷಕಿಯ ದುರ್ಮರಣ Read More »

ಬಜೆಟ್ ಘೋಷಣೆ ಮೂಲಕ ಜನರ ಮೂಗಿಗೆ ತುಪ್ಪ ಸವರಲು ಸಿದ್ಧರಾಮಯ್ಯ ಹೊರಟಿದ್ದಾರೆ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು : ಸಿಎಂ ಸಿದ್ದರಾಮಯ್ಯ  ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸೋ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್, ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ

ಬಜೆಟ್ ಘೋಷಣೆ ಮೂಲಕ ಜನರ ಮೂಗಿಗೆ ತುಪ್ಪ ಸವರಲು ಸಿದ್ಧರಾಮಯ್ಯ ಹೊರಟಿದ್ದಾರೆ : ಅರುಣ್ ಕುಮಾರ್ ಪುತ್ತಿಲ Read More »

ಇಬ್ಬರು ಪ್ರೇಯಸಿಯರ ಜೊತೆ ಸೇರಿ ಮೂರನೆಯ ಪ್ರೇಯಸಿಯನ್ನು ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ ಪಾತಕಿ

ಬೆಚ್ಚಿಬೀಳಿಸುತ್ತಿದೆ ಇಂಜಿನಿಯರಿಂಗ್‌ ವಿದ್ಯಾರ್ಥಿ ಎಸಗಿದ ಕೃತ್ಯ ಚೆನ್ನೈ : ಇಬ್ಬರು ಪ್ರೇಯಸಿಯರ ಜೊತೆ ಸೇರಿಕೊಂಡು ಮೂರನೇ ಪ್ರೇಯಸಿಯನ್ನು ಕೊಂದು ಕಮರಿಗೆ ಎಸೆದ ಪ್ರಕರಣವನ್ನು ತಮಿಳುನಾಡಿನ ಸೇಲಂ ಪೊಲೀಸರು ಭೇದಿಸಿದ್ದಾರೆ. ಲೋಗನಾಯಕಿ (35) ಕೊಲೆಯಾದ ಮಹಿಳೆ. ಅವಳ ಪ್ರಿಯಕರ ಇಂಜಿನಿಯರಿಂಗ್‌ ವಿದ್ಯಾರ್ಥಿ ಅಬ್ದುಲ್‌ ಅಝೀಝ್‌ (22) ಮತ್ತು ಅವನ ಪ್ರೇಯಸಿಯರಾದ ಐಟಿ ಉದ್ಯೋಗಿ ತಾವಿಯಾ ಸುಲ್ತಾನ (22) ಮತ್ತು ನರ್ಸಿಂಗ್‌ ವಿದ್ಯಾರ್ಥಿನಿ ಮೋನಿಶಾ (21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.ತಾವಿಯಾ ಸುಲ್ತಾನ ಮತ್ತು ಮೋನಿಶಾಳನ್ನು ಬಲೆಗೆ ಹಾಕಿಕೊಳ್ಳುವ ಮುನ್ನ ಆರೋಪಿ

ಇಬ್ಬರು ಪ್ರೇಯಸಿಯರ ಜೊತೆ ಸೇರಿ ಮೂರನೆಯ ಪ್ರೇಯಸಿಯನ್ನು ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ ಪಾತಕಿ Read More »

error: Content is protected !!
Scroll to Top