ಶೈಕ್ಷಣಿಕ

ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ

ರಾಜ್ಯಾದ್ಯಂತ ಮಾ. 31ರಿಂದ ಏ. 15 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 8,42,811 ಎಂದು ವರದಿಗಳು ತಿಳಿಸಿವೆ.ಎಸ್ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯದಲ್ಲಿ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಪೊಲೀಸ್ ಬಿಗಿ ಬಂದೋಬಸ್ತ್ ಇರುತ್ತದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್​​, ಇಯರ್‌ಫೋನ್ ಅಂತಹ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ತರುವಂತಿಲ್ಲ. ಮಾ. 31ರಿಂದ ಏ. 15 ರವರೆಗೆ ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ […]

ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ Read More »

ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ ಸಹಪಾಠಿಗಳಿಗೆ 28 ಲಕ್ಷ ರೂ. ಪಂಗನಾಮ

ಮಂಗಳೂರು : ಸುರತ್ಕಲ್‌ನ ಎನ್‌ಐಟಿಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳಿಗೇ ಸುಮಾರು 28 ಲ.ರೂ. ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿರುವ ಬಗ್ಗೆ ವಿದ್ಯಾರ್ಥಿ ಯಶ್‌ವರ್ಧನ್‌ ಜೈನ್ ಎಂಬಾತನ ವಿರುದ್ಧ ಕೇಸು ದಾಖಲಾಗಿದೆ.. 2022ರ ಮಾರ್ಚ್‌ನಿಂದ ವಾಟ್ಸಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ. ಅಕ್ಟೋಬರ್ ತಿಂಗಳಿನಲ್ಲಿ ‘ವೈವಿಜೆ ಇನ್‌ವೆಸ್ಟ್‌ಮೆಂಟ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ.

ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ ಸಹಪಾಠಿಗಳಿಗೆ 28 ಲಕ್ಷ ರೂ. ಪಂಗನಾಮ Read More »

ಅಮೆರಿಕದ ಶಾಲೆಯಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ ಯುವತಿ : 6 ಸಾವು

ನ್ಯೂಯಾರ್ಕ್‌ : ಅಮೆರಿಕದ ಪ್ರಾಥಮಿಕ ಶಾಲೆಯೊಂದರಲ್ಲಿ ಯುವತಿಯೊಬ್ಬಳು ಬಂದೂಕಿನಿಂದ ಯದ್ವಾತದ್ವಾ ಗುಂಡು ಹಾರಿಸಿ ಕನಿಷ್ಠ 6 ಮಂದಿಯನ್ನು ಸಾಯಿಸಿದ್ದಾಳೆ. ಗುಂಡಿಗೆ ಬಲಿಯಾದವರಲ್ಲಿ ಮೂವರು ವಿದ್ಯಾರ್ಥಿಗಳು. ಅಮೆರಿಕದ ನ್ಯಾಶ್ವಿಲ್ಲೆಯ ಖಾಸಗಿ ಕ್ರಿಶ್ಚಿಯನ್‌ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯು ಎರಡು ರೈಫಲ್‌ ಮತ್ತು ಒಂದು ಪಿಸ್ತೂಲ್‌ ಮೂಲಕ ಮನಬಂದಂತೆ ಶೂಟೌಟ್‌ ಮಾಡಿದ್ದಾಳೆ. ನ್ಯಾಶ್‌ವಿಲ್ಲೆಯ ಖಾಸಗಿ ಕ್ರಿಶ್ಚಿಯನ್‌ ಪ್ರೈಮರಿ ಶಾಲೆ “ದಿ ಕವೆನೆಂಟ್‌ ಸ್ಕೂಲ್‌”ನಲ್ಲಿ ಈ ಹಿಂಸಾಕೃತ್ಯ ನಡೆದಿದೆ. ಬಳಿಕ ಪೊಲೀಸರ ಗುಂಡಿಗೆ ಹಂತಕಿ ಬಲಿಯಾಗಿದ್ದಾಳೆ. ಈ ಶೂಟರ್‌ ನ್ಯಾಶ್‌ವಿಲ್ಲೆಯ

ಅಮೆರಿಕದ ಶಾಲೆಯಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ ಯುವತಿ : 6 ಸಾವು Read More »

ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

ಉದ್ಯೋಗ ಮಾಹಿತಿಅಗ್ನಿಪಥ್ 2023 : ಭಾರತೀಯ ವಾಯುಪಡೆ ಸೇನೆಯ ಅಗ್ನಿವೀರ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ / ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೊನೆಯ ದಿನಾಂಕ: 31-03-2023. ಸಿಬ್ಬಂದಿ ನೇಮಕಾತಿ ಆಯೋಗ (SSC): ಫೇಸ್ XI ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ + ಪದವಿ + ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ: 27-03-2023. KMF: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ವಿವಿಧ ಹುದ್ದೆಗಳು. ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ ಪದವಿ/ಬಿ.ಇ/ಐಟಿಐ/ಡಿಪ್ಲೋಮಾ. ಕೊನೆಯ ದಿನಾಂಕ: 17-04-2023. ಕರ್ನಾಟಕ ಹೈಕೋರ್ಟ್‌ನಲ್ಲಿ 37 ಡ್ರೈವರ್ ಹುದ್ದೆಗಳು, ವಿದ್ಯಾರ್ಹತೆ:

ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ Read More »

ನೆಲ್ಲಿಕಟ್ಟೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ | ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ 80 ಲಕ್ಷ ರೂ. ವೆಚ್ಚದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ನೆಲ್ಲಿಕಟ್ಟೆಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ವಿವಿಧ ಕಾಮಗಾರಿಗಳಿಗೆ ಸಂಬಂಧಪಟ್ಟ ಸುಮಾರು ಐದು ಕೋಟಿ ರೂ. ಕಾಮಗಾರಿಗಳಿಗೆ ಮುಂದಿನ ಒಂದು ವಾರದಲ್ಲಿ ಶಿಲಾನ್ಯಾಸ ಮಾಡಲಿದ್ದೇವೆ. ಪ್ರಸ್ತುತ ಉಪ್ಪಿನಂಗಡಿ, ಪುತ್ತೂರು, ವಿಟ್ಲ ವಿಧಾನಸಭಾ ಕ್ಷೇತ್ರದಲ್ಲಿರುವ ಶಾಲಾ ಕಾಲೇಜು, ಪದವಿ ಕಾಲೇಜುಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಅಲ್ಲದೆ ಉಪ್ಪಿನಂಗಡಿ ಪದವಿಪೂರ್ವ ಕಾಲೇಜು ಲೋಕಾರ್ಪಣೆ ಜತೆಗೆ ಶಿಲಾನ್ಯಾಸವನ್ನೂ

ನೆಲ್ಲಿಕಟ್ಟೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ | ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು Read More »

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಹಿಜಾಬ್‌ ನಿಷೇಧ ಮುಂದುವರಿಕೆ; ಪರೀಕ್ಷಾ ಕೇಂದ್ರಗಳಲ್ಲಿ ಬಿಗು ಬಂದೋಬಸ್ತ್‌ ಬೆಂಗಳೂರು : ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು, ರಾಜ್ಯದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. 5,716 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾಗುವ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ.

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ Read More »

error: Content is protected !!
Scroll to Top