ಅಪಘಾತ

ಬೈಕ್‍—ಖಾಸಗಿ ಬಸ್ ಡಿಕ್ಕಿ | ಬೈಕ್‍ ಸವಾರ ಸ್ಥಳದಲ್ಲೇ ಮೃತ್ಯು

ಕೊಕ್ಕಡ: ಖಾಸಗಿ ಬಸ್ ಹಾಗೂ ಬೈಕ್‍ ಡಿಕ್ಕಿ ಹೊಡೆದುಕೊಂಡು ಬೈಕ್‍ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ ಮಾಧವ ಆಚಾರಿ (52) ಮೃತಪಟ್ಟ ಬೈಕ್‍ ಸವಾರ . ಆಂಧ್ರಪ್ರದೇಶದಿಂದ ಅಯ್ಯಪ್ಪ ವೃತಧಾರಿಗಳನ್ನು ಶಬರಿಮಲೆ ಯಾತ್ರೆಗೆ ಕೊಂಡೊಯ್ಯುವ ಖಾಸಗಿ ಬಸ್ಸು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದು, ಬೈಕ್ ಸವಾರ ಕೊಕ್ಕಡದಿಂದ ಕಾಪಿನಬಾಗಿಲಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. […]

ಬೈಕ್‍—ಖಾಸಗಿ ಬಸ್ ಡಿಕ್ಕಿ | ಬೈಕ್‍ ಸವಾರ ಸ್ಥಳದಲ್ಲೇ ಮೃತ್ಯು Read More »

ಕಾರುಗಳ ಡಿಕ್ಕಿ | ಜಖಂಗೊಂಡ ಕಾರು

ಪುತ್ತೂರು: ಕಾರುಗಳೆರಡು ಡಿಕ್ಕಿ ಹೊಡೆದುಕೊಂಡ ಘಟನೆ ತೆಂಕಿಲ ಬೈಪಾಸ್‍ ಬಳಿ ನಡೆದಿದೆ. ಅಪಘಾತ ಪರಿಣಾಮ ಕಾರುಗಳು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾರುಗಳ ಡಿಕ್ಕಿ | ಜಖಂಗೊಂಡ ಕಾರು Read More »

ಬಸ್‍ ಬ್ರೇಕ್‍ ಫೈಲ್‍| ಕ್ಷಣಾರ್ಧದಲ್ಲೇ  ತಪ್ಪಿದ ದುರಂತ

ಮಂಗಳೂರು: ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ವಿಶಾಲ್ ಟ್ರಾವೆಲ್ಸ್ ಬಸ್ ಬ್ರೇಕ್‍ ಫೈಲ್‍ ಆಗಿರುವ ಘಟನೆ ಗುರುವಾರ ಬೆಳಗ್ಗೆ ನಗರದ ಬಲ್ಲಾಳ್‌ಬಾಗ್ ಬಳಿ ನಡೆದಿದೆ. ಈ ದುರಂತದಲ್ಲಿ ಯಾವುದೆ ಅಪಾಯ ಸಂಭವಿಸದೆ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ 8 ಗಂಟೆ ವೇಳೆಗೆ ಘಟನೆ ನಡೆದಿದ್ದು, ಲಾಲ್‌ಬಾಗ್ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದುವರಿದ ಬಸ್ ಬಲ್ಲಾಳ್‌ಬಾಗ್ ತಂಗುದಾಣದತ್ತ ಬಂದಿದೆ. ಈ ವೇಳೆ ಚಾಲಕ ಸಿದ್ದಿಕ್ ಎರ್ಮಾಳ್ ಅವರಿಗೆ ಬಸ್ಸಿನ ಬ್ರೇಕ್ ಫೈಲ್‍ ಆಗಿದೆ ಎಂದು  ತಿಳಿದ

ಬಸ್‍ ಬ್ರೇಕ್‍ ಫೈಲ್‍| ಕ್ಷಣಾರ್ಧದಲ್ಲೇ  ತಪ್ಪಿದ ದುರಂತ Read More »

ನಿಯಂತ್ರಣ ತಪ್ಪಿ ಕಾರು ಪಲ್ಟಿ

ಪುತ್ತೂರು: ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ವಿವೇಕಾನಂದ ಶಾಲೆಯ ಬಳಿ ನಡೆದಿದೆ. ಬುಧವಾರ ತಡರಾತ್ರಿ ಘಟನೆ ನಡೆದಿದೆ. ಕಾರು ಸಂಪೂರ್ಣ ಜಖಂ ಗೊಂಡಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್‌ ಡಿಕ್ಕಿ : ಇಬ್ಬರು ಸಾವು

ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆ ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಪಾದಯಾತ್ರೆ ನಡೆಸುತ್ತಿದ್ದ ತಂಡ ಮಂಗಳೂರು: ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ತಂಡದಲ್ಲಿದ್ದ ಇಬ್ಬರುಗುಜರಾತಿನಲ್ಲಿ ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ನಿನ್ನೆ ಸಂಭವಿಸಿದೆ. ಇವರಲ್ಲಿ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಎಂದು ಗುರುತಿಸಲಾಗಿದೆ. ಪಾದಯಾತ್ರಿಗಳು ನಿನ್ನೆ ಮಧ್ಯಾಹ್ನ ಮಾರುತಿ ಓಮ್ನಿ ಕಾರಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಟ್ರಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,

ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್‌ ಡಿಕ್ಕಿ : ಇಬ್ಬರು ಸಾವು Read More »

ಮರಕ್ಕೆ ಡಿಕ್ಕಿ ಹೊಡೆದ ಬಸ್‍ | ಪ್ರಯಾಣಿಕರಿಗೆ ಗಂಭೀರ ಗಾಯ

ಕೊಡಗು: ಗುಂಡಿಯನ್ನು ತಪ್ಪಿಸಲು ಹೋದ KSRTC ಬಸ್‍ ಚಾಲಕ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊಡಗಿನಲ್ಲಿ ನಡೆದಿದೆ. KSRTC ಬಸ್ ಮೈಸೂರಿನಿಂದ ವಿರಾಜಪೇಟೆ ಕಡೆಗೆ ಚಲಿಸುವ ಬಸ್‍ ಆಗಿದ್ದು, ಕೊಡಗಿನ  ತಿತಿಮತಿ ಸಮೀಪದ ದೇವರಪುರದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂ ಗೊಂಡಿದೆ. ಬಸ್ ಚಾಲಕನ ಕಾಲು ಮುರಿದಿದ್ದು, ಗಾಯಾಳುಗಳಿಗೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಮರಕ್ಕೆ ಡಿಕ್ಕಿ ಹೊಡೆದ ಬಸ್‍ | ಪ್ರಯಾಣಿಕರಿಗೆ ಗಂಭೀರ ಗಾಯ Read More »

ರಿಕ್ಷಾ ಪಲ್ಟಿ | ಮಹಿಳೆಗೆ ಗಾಯ

ಪುತ್ತೂರು: ಬೋಳೂವಾರಿನ ಪ್ರಗತಿ ಆಸ್ಪತ್ರೆಯ ಎದುರುಗಡೆ ಆಟೋರಿಕ್ಷಾ  ಪಲ್ಟಿಯಾಗಿ ಮಹಿಳೆಯೋರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಗತಿ ಆಸ್ಪತ್ರೆ, ಎದುರುಗಡೆ ಪುತ್ತೂರಿಂದ ಬೊಳುವಾರು ಕಡೆ ಆಟೋರಿಕ್ಷಾ ಬರುತ್ತಿರುವಾಗ, ಎದುರುಗಡೆಯಿಂದ ಬರುವ ರಿಕ್ಷಾವೊಂದು ಸಡನ್ ಆಗಿ ತಿರುಗಿಸಿದಾಗ, ಪೇಟೆ ಕಡೆಯಿಂದ ಬರುವ ರಿಕ್ಷಾ ಚಾಲಕ ಕೂಡಲೇ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಪಲ್ಟಿ ಯಾದ ಘಟನೆ ನಡೆದಿದೆ. ಪಲ್ಟಿಯಾದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಆತೂರಿನ ಮಹಿಳೆ ಎಂದು ತಿಳಿದು ಬಂದಿದೆ, ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ರಿಕ್ಷಾ ಪಲ್ಟಿ | ಮಹಿಳೆಗೆ ಗಾಯ Read More »

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ

100 ಮೀಟರ್‌ ಉದ್ದಕ್ಕೂ ನಿಲ್ಲಿಸಿದ್ದ 40 ವಾಹನಗಳು ಜಖಂ ಮುಂಬಯಿ: ಬ್ರೇಕ್‌ಫೇಲ್ ಆದ ಬೆಸ್ಟ್‌ ಬಸ್ ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿ 49 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ತಡರಾತ್ರಿ ಮುಂಬಯಿಯ ಉಪನಗರ ಕುರ್ಲಾದಲ್ಲಿ ಸಂಭವಿಸಿದೆ. ಕುರ್ಲಾ ಪಶ್ಚಿಮದ ಎಲ್ ವಾರ್ಡ್‌ನ ಎಸ್‌ ಜಿ ಬರ್ವೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಬ್ರೇಕ್‌ಫೇಲ್‌ ಆದ ಬಸ್‌ 100 ಮೀಟರ್‌ ಉದ್ದಕ್ಕೆ ನಿಲ್ಲಿಸಿದ್ದ ಸುಮಾರು 40 ವಾಹನಗಳಿಗೆ ಡಿಕ್ಕಿ

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ Read More »

ಮರವೂರು ಸೇತುವೆಯಲ್ಲಿ ಕಾರು ಡಿಕ್ಕಿ ಹೊಡೆದು ದನ ಸಾವು

ಬಜಪೆ: ಮಂಗಳೂರು – ಬಜಪೆ ರಾಜ್ಯ ಹೆದ್ದಾರಿ 67ರ ಮರವೂರು ಸೇತುವೆಯಲ್ಲಿ ಮಂಗಳೂರು ಕಡೆಯಿಂದ ಬಂದ ಕಾರೊಂದು ಸೇತುವೆಯ ಅವೈಜ್ಞಾನಿಕ ಮಾರ್ಗಸೂಚಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಯ ತಪ್ಪಿ ದನವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು ಅಪಘಾತಕ್ಕೊಳಗಾದ ದನ ಮೃತಪಟ್ಟಿದೆ. ಮರವೂರಿನಲ್ಲಿರುವ ಎರಡು ಸೇತುವೆಗಳ ಪೈಕಿ ಒಂದರಲ್ಲಿ ಸಂಚಾರ ನಿಷೇಧಿಸಲಾಗಿದ್ದು ಸಂಚಾರದ ಮಾರ್ಗಸೂಚಿ ತೀರಾ ಗೊಂದಲಕಾರಿಯಾಗಿದ್ದು ಕಾಮಗಾರಿ ಕೂಡಾ ಅವೈಜ್ಞಾನಿಕವಾಗಿರುವುದರಿಂದ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ ಎಂದು ಸ್ಥಳೀಯರ ಆರೋಪ. ಅಪಘಾತಕ್ಕೊಳಗಾದ ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣಪುಟ್ಟ

ಮರವೂರು ಸೇತುವೆಯಲ್ಲಿ ಕಾರು ಡಿಕ್ಕಿ ಹೊಡೆದು ದನ ಸಾವು Read More »

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು

ಗುಜರಾತ್‍ : ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಐವರು ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವನ್ನಪ್ಪಿದ  ಘಟನೆ ಗುಜರಾತ್‌ನ ಜುನಾಗಢದಲ್ಲಿ ನಡೆದಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನಲೆ ಐವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ವಿದ್ಯಾರ್ಥಿಗಳ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಅದೇ ಸಮಯದಲ್ಲಿ ಅಭಿಮುಖವಾಗಿ ವೇಗವಾಗಿ ಬಂದ ಎರಡನೇ ಕಾರಿಗೆ ಡಿಕ್ಕಿ ಹೊಡೆದಿದೆ . ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು Read More »

error: Content is protected !!
Scroll to Top