ಅಪಘಾತ

ಚಲಿಸುತ್ತಿದ್ದ ಬಸ್ಸಿನಿಂದ ಬಿದಿದ್ದ ಗೋಳಿತ್ತಡಿ ಮಹಿಳೆ ಮೃತ್ಯು

ಕಡಬ: ಚಲಿಸುತ್ತಿದ್ದ ಕೆ.ಎಸ್ ಆರ್.ಟಿ.ಸಿ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಂಗಳೂರಿನಿಂದ ಉಪ್ಪಿನಂಗಡಿ ಕಡಬ ಮಾರ್ಗವಾಗಿ ಸಾಗುತ್ತಿದ್ದ ಕೆ.ಎಸ್ ಆರ್.ಟಿ.ಸಿ ಬಸ್ಸಿನಲ್ಲಿ ಮೇ 25ರಂದು ಆಲಂಕಾರಿನಲ್ಲಿ ಘಟನೆ ನಡೆದಿತ್ತು. ಗೋಳಿತ್ತಡಿ ಶಾರದಾ ನಗರದ ಗುಲಾಬಿ ಎಂಬ ಮಹಿಳೆ ಆಲಂಕಾರಿನಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಮಾರ್ಗಕ್ಕೆ ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣ ಅವರಿಗೆ ಸ್ಥಳೀಯ ಕ್ಲಿನಿಕ್‌ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ […]

ಚಲಿಸುತ್ತಿದ್ದ ಬಸ್ಸಿನಿಂದ ಬಿದಿದ್ದ ಗೋಳಿತ್ತಡಿ ಮಹಿಳೆ ಮೃತ್ಯು Read More »

ನೆಟ್ಟಣ: ಗಾಳಿ ಮಳೆಗೆ ಎರಡು ಕಾರುಗಳ ಮೇಲೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ

ನೆಟ್ಟಣ: ಸೋಮವಾರ ರಾತ್ರಿ ಸುರಿದ ಗುಡುಗು ಸಹಿತ ಗಾಳಿ ಮಳೆಗೆ ಕಡಬ ತಾಲೂಕಿನ ನೆಟ್ಟಣದಲ್ಲಿ ಹೆದ್ದಾರಿ ಬದಿಯಲ್ಲಿದ್ದ ಮರಗಳು ಎರಡು ಕಾರುಗಳ ಮೇಲೆ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿದ್ದು,ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಬಗ್ಗೆ ವರದಿಯಾಗಿದೆ. ಕಡಬದ ನೆಟ್ಟಣದ ಕೇಂದ್ರೀಯ ನಾಟಾ ಸಂಗ್ರಹ ಘಟಕದ ಬಳಿ ಈ ಘಟನೆ ಸಂಭವಿಸಿದೆ. ಭಾರೀ ಗಾಳಿಗೆ ಹೆದ್ದಾರಿ ಬದಿಯ ದೂಪದ ಹಲವು ಮರಗಳು ರಸ್ತೆಗೆ ಬಿದ್ದಿವೆ. ಈ ವೇಳೆ ಸಂಚರಿಸುತ್ತಿದ್ದ ನ್ಯಾನೋ ಹಾಗೂ ಆಮ್ನಿ ಕಾರುಗಳ ಮೇಲೆ ಮರ ಬಿದ್ದಿದೆ.

ನೆಟ್ಟಣ: ಗಾಳಿ ಮಳೆಗೆ ಎರಡು ಕಾರುಗಳ ಮೇಲೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಗುಡ್ಡಕ್ಕೆ ಬೆಂಕಿ| ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಪುತ್ತೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ ತಗುಲಿ ಗುಡ್ಡ ಬಹುತೇಕ ಸುಟ್ಟುಹೋದ ಘಟನೆ ಭಾನುವಾರ ಸಂಜೆ ಕೆಯ್ಯೂರು ಗ್ರಾಮದ ನೂಜಿ ಎಂಬಲ್ಲಿ ನಡೆದಿದೆ. ನೂಜಿ ಮುತ್ತಪ್ಪ ರೈ ಎಂಬವರ ಮನೆಯ ಸಂಪರ್ಕದ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದ ಪರಿಣಾಮ ತಂತಿಯಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಬಿದ್ದ ಮಾಹಿತಿ ತಿಳಿದು ದಂಬೆಕ್ಕಾನ ಸದಾಶಿವ ರೈ ಹಾಗೂ ಎ.ಕೆ. ಜಯರಾಮ ರೈ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದವರು

ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಗುಡ್ಡಕ್ಕೆ ಬೆಂಕಿ| ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ Read More »

ಕಾಡಾನೆ ದಾಳಿಯಿಂದ-ವ್ಯಕ್ತಿಗೆ ಗಾಯ

ನೆಲ್ಯಾಡಿ: ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಮೇ.28ರಂದು ಮಧ್ಯಾಹ್ನ ನಡೆದಿದೆ. ಇಚ್ಲಂಪಾಡಿ ನಿವಾಸಿ ವಿಜುಕುಮಾರ್ ಕಾಡಾನೆ ದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಇವರು ಮಧ್ಯಾಹ್ನ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಇಚ್ಲಂಪಾಡಿ ಗ್ರಾಮದ ನಡುಮನೆ ಕ್ರಾಸ್ ಬಳಿ ಕಾಡಾನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಗಂಭೀರ ಗಾಯಗೊಂಡಿರುವ ವಿಜುಕುಮಾರ್ ಅವರಿಗೆ ಕಡಬದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಪುತ್ತೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡು

ಕಾಡಾನೆ ದಾಳಿಯಿಂದ-ವ್ಯಕ್ತಿಗೆ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿ ಬೋರ್ ವೆಲ್ ಲಾರಿ ಪಲ್ಟಿ.

ವಿಟ್ಲ : ಚಾಲಕನ ನಿಯಂತ್ರಣ ತಪ್ಪಿ ಬೋರ್ ವೆಲ್ ಗಾಡಿ ಪಲ್ಟಿಯಾದ ಘಟನೆ ವಿಟ್ಲ ಪೆರುವಾಯಿ ಸಮೀಪದ ಮುಚ್ಚಿರಪದವು ಎಂಬಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬೋರ್ ವೆಲ್ ಗಾಡಿ ಹೊಂಡಕ್ಕೆ ಬಿದ್ದಿದೆ. ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಬೋರ್ ವೆಲ್ ಲಾರಿ ಪಲ್ಟಿ. Read More »

ಆಲಂಕಾರಿನಲ್ಲಿ ಬಸ್ಸಿನಿಂದ ಎಸೆಯಲ್ಪಟ್ಟು ಮಹಿಳೆಗೆ ಗಾಯ

ಕಡಬ:  ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿನಿಂದ ಮಹಿಳೆಯೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಮಹಿಳೆ ಗಂಭೀರ ಗಾಯಗೊಂಡ ಘಟನೆ ಆಲಂಕಾರು ಪೇಟೆಯಲ್ಲಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ರಾಮಕುಂಜ ಗ್ರಾಮದ ಶಾರದಾನಗರ ನಿವಾಸಿ ಗುಲಾಬಿ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಪ್ಪಿನಂಗಡಿ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ. ಬಸ್ಸಿಗೆ ಗೋಳಿತ್ತಡಿಯಲ್ಲಿ ಹತ್ತಿದ ಮಹಿಳೆ ಆಲಂಕಾರು ಮುಟ್ಟುತ್ತಿದ್ದಂತೆ ಇಳಿಯಲು ಯತ್ನಿಸಿ ರಸ್ತೆಗೆ ಎಸೆಯಲ್ಪಟ್ಟರು. ರಸ್ತೆಗೆ ಬಿದ್ದ ಪರಿಣಾಮ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರಿಗೆ ಸ್ಥಳೀಯ ಕ್ಲೀನಿಕ್‌ ನಲ್ಲಿ  ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ

ಆಲಂಕಾರಿನಲ್ಲಿ ಬಸ್ಸಿನಿಂದ ಎಸೆಯಲ್ಪಟ್ಟು ಮಹಿಳೆಗೆ ಗಾಯ Read More »

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಕಾರಲ್ಲಿದ್ದವರು ಪಾರು

ಪುತ್ತೂರು: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೌಡಿಚ್ಚಾರು ಮಡ್ಯಂಗಳ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು, ನಜ್ಜುಗುಜ್ಜಾಗಿದೆ. ಕಾರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ನಿದ್ದೆಯ ಮಂಪರಿನಲ್ಲಿದುದೇ, ಘಟನೆಗೆ ಕಾರಣ ಎನ್ನಲಾಗಿದೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಕಾರಲ್ಲಿದ್ದವರು ಪಾರು Read More »

ಬೈಕ್-ಕಾರು ಅಪಘಾತ: ಕೆವಿಜಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಸುಳ್ಯ: ಬೈಕ್ ಮತ್ತು ಕಾರಿನ ಮಧ್ಯೆ  ಅಪಘಾತ ನಡೆದು ಬೈಕ್ ಸವಾರ ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಸುಳ್ಯ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಸ್ವರೂಪ್ ಮೃತಪಟ್ಟವರು. ಆದಿತ್ಯವಾರ ರಾತ್ರಿ ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ಸಂಭ್ರಮ್ ಮತ್ತು ಸ್ವರೂಪ್ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಪೆರಾಜೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಇನ್ನೋರ್ವ ಸವಾರ ಸಂಭ್ರಮ್ ಎಂಬವರಿಗೆ

ಬೈಕ್-ಕಾರು ಅಪಘಾತ: ಕೆವಿಜಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು Read More »

ವಿದ್ಯುತ್ ಸ್ಪರ್ಶ : ಯುವಕ ಮೃತ್ಯು

ಪುತ್ತೂರು : ವಿದ್ಯುತ್ ಸ್ಪರ್ಶಗೊಂಡ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ ಘಟನೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಕುಮಾರಧಾರ ನದಿ ತೀರದ ಬಳಿ ನಡೆದಿದೆ. ಶರೀಫುದ್ದೀನ್ (19) ವಿದ್ಯುತ್ ಶಾಕ್‍ನಿಂದ ಮೃತಪಟ್ಟ ಯುವಕ. ಹಮ್ಮಬ್ಬ ಎಂಬವರ ಅಳಿಯ ಶರೀಪುದ್ದೀನ್ , ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಮೇ.21 ರಂದು ಸಂಜೆ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಕುಮಾರಧಾರ ನದಿ ಕಿನಾರೆಯ ಬಳಿ ವಿದ್ಯುತ್ ಸ್ಪರ್ಶವಾಗಿ ಅಸ್ವಸ್ಥಗೊಂಡವರನ್ನು ಸಾರ್ವಜನಿಕರ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಬಗ್ಗೆ

ವಿದ್ಯುತ್ ಸ್ಪರ್ಶ : ಯುವಕ ಮೃತ್ಯು Read More »

ವಿದ್ಯುತ್ ತಂತಿ ರಸ್ತೆಗೆ: ಕೌಡಿಚಾರು – ಸುಳ್ಯಪದವು ರಸ್ತೆ ಸಂಚಾರ ಬಂದ್

ಪುತ್ತೂರು: ಭಾರೀ ಮಳೆಗೆ ಟಿವಿ, ವಿದ್ಯುತ್ ತಂತಿಗಳಿಗೆ ಹಾನಿಯಾಗಿದ್ದು, ಕೌಡಿಚ್ಚಾರು – ಸುಳ್ಯಪದವು ರಸ್ತೆ ಸಂಚಾರಕ್ಕೆ ತೊಡಕಾಗಿದೆ. ರಸ್ತೆಗಡ್ಡವಾಗಿ ಮರ ಬಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಟ್ರಾನ್ಸ್ ಫಾರ್ಮರ್ ಹಾನಿಯಾಗಿರುವುದರಿಂದ ವಿದ್ಯುತ್ ಕಡಿತ ಉಂಟಾಗಿದೆ. ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ಇದರಿಂದ ಜನರ ಓಡಾಟಕ್ಕೂ ತೊಂದರೆಯಾಗಿದೆ. ರಸ್ತೆಗೆ ಬಿದ್ದಿರುವ ಮರವನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಮೆಸ್ಕಾಂ ಇಲಾಖೆಯೂ ವಿದ್ಯುತ್ ತಂತಿಗಳ ಸರಿಪಡಿಸುವ ಕಾರ್ಯದಲ್ಲಿ ಮಗ್ನವಾಗಿದೆ.

ವಿದ್ಯುತ್ ತಂತಿ ರಸ್ತೆಗೆ: ಕೌಡಿಚಾರು – ಸುಳ್ಯಪದವು ರಸ್ತೆ ಸಂಚಾರ ಬಂದ್ Read More »

error: Content is protected !!
Scroll to Top