ಅಪಘಾತ

ಮೇಘಸ್ಫೋಟಕ್ಕೆ ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ!

ಗ್ಯಾಂಗ್ಟಾಕ್: ಸಿಕ್ಕಿಂ ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ತಡ ರಾತ್ರಿ ಹಠಾತ್ ಪ್ರವಾಹ ಉಂಟಾಗಿ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದಲ್ಲಿ ಹಠಾತ್ ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿದೆ. ಇದು ತೀಸ್ತಾದಲ್ಲಿ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಯಿತು. ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿರುವುದರಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳಿಸಿತು. ಇದರಿಂದಾಗಿ ನೀರಿನ ಮಟ್ಟವು ಹೆಚ್ಚಳಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಂಗ್ಟಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು […]

ಮೇಘಸ್ಫೋಟಕ್ಕೆ ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ! Read More »

ಖಾಸಗಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಮೃತ್ಯು

ಹರಾರೆ: ಖಾಸಗಿ ವಿಮಾನ ಪತನಗೊಂಡು ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನೈಋತ್ಯ ಜಿಂಬಾಬ್ವೆಯಲ್ಲಿ ನಡೆದಿರುವುದು ವರದಿಯಾಗಿದೆ. ಚಿನ್ನ, ಕಲ್ಲಿದ್ದಲು ಮತ್ತು ತಾಮ್ರವನ್ನು ಸಂಸ್ಕರಿಸುವ ರಿಯೋಜಿಮ್ ಗಣಿ ಕಂಪನಿಯ ಮಾಲೀಕ ಹರ್ಪಾಲ್ ರಾಂಧವಾ, ಅವರ ಮಗ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ʼಪಿಟಿಐʼ ವರದಿ ಮಾಡಿದೆ. ರಿಯೊಜಿಮ್ ಒಡೆತನದ ಸೆಸ್ನಾ 206 ವಿಮಾನವು ಶುಕ್ರವಾರ (ಸೆ. 29ರಂದು) ಹರಾರೆಯಿಂದ ಜಿಂಬಾಬ್ಬೆಯ ಮುರೊವಾ ವಜ್ರದ ಗಣಿ ಕಡೆಗೆ ತೆರಳುತ್ತಿದ್ದಾಗ

ಖಾಸಗಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಮೃತ್ಯು Read More »

ಹಿಟ್ ಆಂಡ್ ರನ್ : ಸ್ಕೂಟರ್ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರು | ಒಳಮೊಗ್ರು ಗ್ರಾಪಂ ಸದಸ್ಯರಿಬ್ಬರು ‌ಆಸ್ಪತ್ರೆಗೆ ದಾಖಲು

ಪುತ್ತೂರು: ಆಕ್ಟಿವಾ ಸ್ಕೂಟರಿಗೆ 800 ಕಾರು ಡಿಕ್ಕಿಯಾಗಿದ್ದು,ಡಿಕ್ಕಿ ಹೊಡೆದ ಕಾರು ಎಸ್ಕೇಪ್ ಆಗಿದ್ದು ಸ್ಕೂಟರ್‌ನಲ್ಲಿ ತೆಳುತ್ತಿದ್ದ ಗ್ರಾಪಂ ಸದಸ್ಯರಿಬ್ಬರಿಗೆ ಗಾಯಗಳಾಗಿವೆ. ಒಳಮೊಗ್ರು ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ ಹಾಗೂ ಚಿತ್ರ ರವರು ಆಕ್ಟಿವಾ ಸ್ಕೂಟರಿನಲ್ಲಿ ತೆರಳುವಾಗ ಕುಂಬ್ರ ಸಮೀಪ ಕಾರು ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಸ್ಕೂಟರ್ ಪಲ್ಟಿಯಾಗಿದೆ. ಕಾರು ಚಾಲಕ ಕಾರನ್ನು‌ ನಿಲ್ಲಿಸದೆ ಎಸ್ಕೇಪ್ ಆಗಿದ್ದಾನೆ. ಗಾಯಾಳುಗಳಿಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಿಟ್ ಆಂಡ್ ರನ್ : ಸ್ಕೂಟರ್ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರು | ಒಳಮೊಗ್ರು ಗ್ರಾಪಂ ಸದಸ್ಯರಿಬ್ಬರು ‌ಆಸ್ಪತ್ರೆಗೆ ದಾಖಲು Read More »

ಕಾರು- ಟ್ರಾಕ್ಟರ್ ಅಪಘಾತ: ನೆರವಿಗೆ ಧಾವಿಸಿದ ಪುತ್ತಿಲ

ಪುತ್ತೂರು: ಕಾರು ಹಾಗೂ ಟ್ರಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ಟ್ರಾಕ್ಟರ್ ಚಾಲಕ ಸಣ್ಣಪುಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಪರಿಣಾಮ ಟ್ರಾಕ್ಟರ್ ನಜ್ಜುಗುಜ್ಜಾಗಿದ್ದು, ಕಾರು ಬೆಂಗಳೂರಿನಿಂದ ಕಾಣಿಯೂರು ಮಾರ್ಗವಾಗಿ ಬರುತ್ತಿತ್ತು. ಕಾರಿನಲ್ಲಿದ್ದ ಐದು ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ವಿಶ್ವನಾಥ ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಾರು- ಟ್ರಾಕ್ಟರ್ ಅಪಘಾತ: ನೆರವಿಗೆ ಧಾವಿಸಿದ ಪುತ್ತಿಲ Read More »

ಪ್ರವಾಸಕ್ಕೆ ತೆರಳಿದ ಹಿರೇಬಂಡಾಡಿ ನಿವಾಸಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು

ಪುತ್ತೂರು: ವಯನಾಡ್‍ ಗೆ ಪ್ರವಾಸಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಅಡೆಕ್ಕಲ್ ನಿವಾಸಿ ಅಝೀಂ (20) ಮೃತಪಟ್ಟ ಯುವಕ ಅಝೀಂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿಕೊಂಡು ವಯನಾಡ್ ಗೆ ಪ್ರವಾಸಕ್ಕೆ ತೆರಳಿದ್ದರು. ಶುಕ್ರವಾರ ರಾತ್ರಿ ತೆರಳಿದವರು ರೂಮ್ ಅಲ್ಲಿ ಸ್ಟೇ ಆಗಿದ್ದು, ಇಂದು ಬೆಳಿಗ್ಗೆ ಪಯ್ಯನೂರು ಸಮೀಪ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಪ್ರವಾಸಕ್ಕೆ ತೆರಳಿದ ಹಿರೇಬಂಡಾಡಿ ನಿವಾಸಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು Read More »

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಮೃತ್ಯು!!

ಬೈಂದೂರು: ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ದಂಪತಿ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಮಹಾಬಲ ದೇವಾಡಿಗ (58) ಮತ್ತು ಲಕ್ಷ್ಮಿ ಮಹಾಬಲ ದೇವಾಡಿಗ (48) ಮೃತಪಟ್ಟವರು. ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಮನೆ ತೋಟದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಧ್ಯಾಹ್ನದ ವೇಳೆ ಮನೆ ಕೆಲಸಕ್ಕೆ ಹೋಗುವಾಗ ಪತಿಗೆ ವಿದ್ಯುತ್ ಶಾಕ್ ತಗುಲಿದ್ದು ಅವರನ್ನು ಪತ್ನಿ ರಕ್ಷಿಸಲು ಹೋಗಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಮೃತ್ಯು!! Read More »

ಏಕಾಏಕಿ ರಸ್ತೆಗೆ ಅಡ್ಡ ಬಂದ ನಾಯಿ: ಧರೆಗೆ ಅಪ್ಪಳಿಸಿದ ಕಾರು

ಪುತ್ತೂರು: ನಾಯಿಯೊಂದು ರಸ್ತೆಗಡ್ಡವಾಗಿ ಬಂದ ಪರಿಣಾಮ ಕಾರು ಧರೆಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಸರ್ವೆ ಭಕ್ತಕೋಡಿಯಲ್ಲಿ ನಡೆದಿದೆ. ಬಾಲಕೃಷ್ಣ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಲ್ಲಿ ಪರಮೇಶ್ವರಿ, ಪತಿ ಬಾಲಸುಬ್ರಹ್ಮಣ್ಯ, ಮೊಮ್ಮಕ್ಕಳಾದ ಭಾವನಾ ಮತ್ತು ಅನಿರುದ್ ಎಂಬವರಿದ್ದು, ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ನಾಯಿಯೊಂದು ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಂದಿದೆ. ಅಪಘಾತವಾಗುವುದನ್ನು ತಪ್ಪಿಸುವ ಸಲುವಾಗಿ ಒಮ್ಮೆಗೆ ಬ್ರೇಕ್ ಹಾಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಪರಿಣಾಮ ಕಾರಿನಲ್ಲಿ

ಏಕಾಏಕಿ ರಸ್ತೆಗೆ ಅಡ್ಡ ಬಂದ ನಾಯಿ: ಧರೆಗೆ ಅಪ್ಪಳಿಸಿದ ಕಾರು Read More »

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ

ಕಡಬ: ಕಡಬ ತಾಲೂಕಿನ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಚೋಮ ಎಂಬವರು ಕಾಡಾನೆ ದಾಳಿಯಿಂದ ಗಾಯಗೊಂಡವರು. ಗಾಯಗೊಂಡ ಚೋಮ ಅವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪರಿಸರದಲ್ಲಿ ಮತ್ತೆ ಜನರಲ್ಲಿ ಆತಂಕ ಶುರುವಾಗಿದೆ.

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ Read More »

ರಿಕ್ಷಾ ಚಾಲಕರ ಕಾರ್ಯಾಚರಣೆಯಿಂದ ಪತ್ತೆಯಾಯ್ತು ಹಿಟ್ ಆ್ಯಂಡ್ ರನ್’ಗೈದ ಬೊಲೇರೊ!! | ಬೊಲೇರೊದಲ್ಲಿದ್ದ ಅಧಿಕಾರಿಗಳ್ಯಾರು?

ಸವಣೂರು: ಸರ್ವೆಯಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ರೈಲ್ವೇ ಅಧಿಕಾರಿಗಳಿದ್ದ ಬೊಲೆರೋ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಸೆ.27ರಂದು ನಡೆದಿದೆ. ಅಪಘಾತದಿಂದ ದ್ವಿಚಕ್ರ ವಾಹನ ಜಖಂಗೊಂಡಿದ್ದು, ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿದ್ದು, ರಿಕ್ಷಾ ಚಾಲಕ ಅವಿನಾಶ್ ಎಂಬವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪರಾರಿಯಾದ ಬೊಲೆರೋ ವಾಹನವನ್ನು ಪತ್ತೆ ಮಾಡುವ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರು ಕಾರ್ಯಾಚರಣೆ ನಡೆಸಿ ಸರ್ವೆ ಗೌರಿ ಹೊಳೆಯ ಪಕ್ಕದಲ್ಲಿ ರೈಲ್ವೇ ನಿಲ್ದಾಣಕ್ಕೆ ಹೋಗುವ ಕಾಲುದಾರಿಯಲ್ಲಿ ಮರಗಳ ನಡುವೆ ವಾಹನವನ್ನು ಪತ್ತೆ

ರಿಕ್ಷಾ ಚಾಲಕರ ಕಾರ್ಯಾಚರಣೆಯಿಂದ ಪತ್ತೆಯಾಯ್ತು ಹಿಟ್ ಆ್ಯಂಡ್ ರನ್’ಗೈದ ಬೊಲೇರೊ!! | ಬೊಲೇರೊದಲ್ಲಿದ್ದ ಅಧಿಕಾರಿಗಳ್ಯಾರು? Read More »

ಶಾಲಾ ಬಸ್-ರಿಕ್ಷಾ ಡಿಕ್ಕಿ : ಐವರು ಸ್ಥಳದಲ್ಲೇ ಮೃತ್ಯು

ಕಾಸರಗೋಡು: ಶಾಲಾ ಬಸ್ ಹಾಗೂ ಆಟೋ ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದುಕೊಂಡು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಐದು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಸೆ.25 ರಂದು ಸಂಜೆ 5 ಗಂಟೆಗೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ‌ ಪೆರ್ಲ ಭಾಗದಿಂದ ಚಲಿಸುತ್ತಿದ್ದ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಮತ್ತು ಮೊಗ್ರಲ್ ಪುತ್ತೂರು ಮೂಲದ ರಿಕ್ಷಾ ಅಪಘಾತಕ್ಕಿಡಾಗಿರುವುದಾಗಿ ತಿಳಿದು ಬಂದಿದೆ.  ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಡ್ರೈವರ್ ಸಹಿತ ಓರ್ವ ಪುರುಷ ಹಾಗೂ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಪೆರ್ಲ

ಶಾಲಾ ಬಸ್-ರಿಕ್ಷಾ ಡಿಕ್ಕಿ : ಐವರು ಸ್ಥಳದಲ್ಲೇ ಮೃತ್ಯು Read More »

error: Content is protected !!
Scroll to Top