ಅಪಘಾತ

ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ : ಸವಾರನಿಗೆ ಗಾಯ

ಬೆಳ್ತಂಗಡಿ: ನಿಯಂತ್ರಣ ಕಳೆದುಕೊಂಡ ಬೈಕ್ ಸ್ಕಿಡ್ ಆಗಿ ಸವಾರ ರಸ್ತೆಗೆ ಎಸೆಯಲ್ಪಟ್ಟ ಬಳಿಕ ಬೈಕ್ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದ ಘಟನೆ ಪಿಲ್ಯ ಸಮೀಪ ನಡೆದಿದೆ. ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರ ಸ್ಥಳೀಯ ವಿಘ್ನೇಶ್(22)ಗಂಭೀರ ಗೊಂಡಿದ್ದಾರೆ. ಕ್ಷಣ ಅವರನ್ನು ಉಜಿರೆ  ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಇನ್ನೋವಾ ಕಾರಿನ ಲಾಯಿಲದ ಪ್ರಕಾಶ್ ಕಾಶಿಬೆಟ್ಟು ಬೈಕ್ ಸವಾರನ ವಿರುದ್ಧ ದೂರು ನೀಡಿದ್ದಾರೆ ಎಂದು […]

ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ : ಸವಾರನಿಗೆ ಗಾಯ Read More »

ಮಿನಿ ಲಾರಿ-ಬೈಕ್ ಡಿಕ್ಕಿ : ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

ಕಾಸರಗೋಡು: ಮಿನಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೊಗ್ರಾಲ್ ಪುತ್ತೂರಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಇಂದು ಮುಂಜಾನೆ ಕಣ್ಣೂರು ತಾಲಾಪ್ ಬಳಿ ಸಂಭವಿಸಿದೆ. ಮೊಗ್ರಾಲ್ ಪುತ್ತೂರು ಕಂಬಾರ್ ಬೆದ್ರಡ್ಕ ನಿವಾಸಿ ಮುನಾಫ್ (24) ಹಾಗೂ ಸ್ನೇಹಿತ ಲತೀಫ್ (23) ಮೃತಪಟ್ಟ ದುರ್ದೈವಿಗಳು ಕಣ್ಣೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಬೈಕ್, ಮಂಗಳೂರಿನಿಂದ ಕಣ್ಣೂರು ಕಡೆಗೆ ಹೋಗುತ್ತಿದ್ದ ಮಿನಿ ಲಾರಿ ಕಣ್ಣೂರು ಎ.ಕೆ.ಜಿ. ಆಸ್ಪತ್ರೆ ಎದುರು ಡಿಕ್ಕಿಯಾಗಿದೆ. ಅಪಘಾತದಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು

ಮಿನಿ ಲಾರಿ-ಬೈಕ್ ಡಿಕ್ಕಿ : ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು Read More »

ಖಾಸಗಿ ಆಂಬುಲೆನ್ಸ್ ವಾಹನ ಪಲ್ಟಿ | ಚಾಲಕ ಮೃತ್ಯು

ಬಿ.ಸಿ.ರೋಡ್ : ರೋಗಿಯೋರ್ವನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ವಾಹನವೊಂದು‌ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ,  ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಗುರುವಾಯನಕೆರೆ ನಿವಾಸಿ ಶಬೀರ್ ಮೃತಪಟ್ಟ ಚಾಲಕ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸಾರ ಅಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ಅಂಬ್ಯುಲೆನ್ಸ್ ವಾಹನ ರಸ್ತೆ ಮಧ್ಯ ಪಲ್ಟಿಯಾಗಿದ್ದು, ಚಾಲಕ ಶಬೀರ್ ಗಂಭೀರವಾಗಿ ಗಾಯಗೊಂಡಿದ್ದಾರೆ, ತಕ್ಷಣ ಆತನನ್ನು ಬೇರೆ

ಖಾಸಗಿ ಆಂಬುಲೆನ್ಸ್ ವಾಹನ ಪಲ್ಟಿ | ಚಾಲಕ ಮೃತ್ಯು Read More »

ಬೈಕ್-ಓಮ್ನಿ ಡಿಕ್ಕಿ : ಬೈಕ್ ಸವಾರ ಮೃತ್ಯು

ಪುತ್ತೂರು: ನಗರದ ಹೊರವಲಯದ ಮುಕ್ರಂಪಾಡಿಯಲ್ಲಿ ಓಮ್ನಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಉಪ್ಪಳಿಗೆಯ ಅಜಲಡ್ಕ ನಿವಾಸಿ ನಾರಾಯಣ್ ಎಂದು ಗುರುತಿಸಲಾಗಿದೆ. ಮೂಲತಃ ಕೆಮ್ಮಾಯಿ ನಿವಾಸಿಯಾವಗಿರುವ ನಾರಾಯಣ್ ಉಪ್ಪಳಿಗೆಯಲ್ಲಿ ವಾಸವಾಗಿದ್ದು, ಅಡಕೆ ತೆಗೆಯುವುದು, ಅಡಕೆಗೆ ಔಷಧಿ ಸಿಂಪಡಣೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬೈಕ್-ಓಮ್ನಿ ಡಿಕ್ಕಿ : ಬೈಕ್ ಸವಾರ ಮೃತ್ಯು Read More »

ಮಕ್ಕಳಿಗೆ ಗೂಡ್ಸ್‌ ವಾಹನ ಡಿಕ್ಕಿ : ಇಬ್ಬರು ಸಾವು

ಟ್ಯೂಷನ್‌ ಮುಗಿಸಿ ವಾಪಸಾಗುತ್ತಿದ್ದ ಮಕ್ಕಳಿಗೆ ಡಿಕ್ಕಿ ಹೊಡೆದ ವಾಹನ ಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಮಕ್ಕಳ ಮೇಲೆ ಗೂಡ್ಸ್ ವಾಹನ ಹರಿದು ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ರಾಮನಗರದಲ್ಲಿ ಸಂಭವಿಸಿದೆ. ರಾಮನಗರ ತಾಲ್ಲೂಕಿನ ಮಾಗಡಿ ರಸ್ತೆಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್ ಗೂಡ್ಸ್‌ ವಾಹನ ಹರಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 7 ಮಂದಿಗೆ ಗಂಭೀರ ಗಾಯಗಳಾಗಿವೆ. 12

ಮಕ್ಕಳಿಗೆ ಗೂಡ್ಸ್‌ ವಾಹನ ಡಿಕ್ಕಿ : ಇಬ್ಬರು ಸಾವು Read More »

ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು

ಸವಣೂರು: ತೆಂಗಿನಕಾಯಿ ಕೀಳುವ ಸಂದರ್ಭ ತೆಂಗಿನ ಮರದಿಂದ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸವಣೂರು ಸಮೀಪದ ಪುಣ್ಚಪ್ಪಾಡಿಯಲ್ಲಿ ನಡೆದಿದೆ. ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದ ಸುಚಿತ್ರ (30) ಮೃತಪಟ್ಟವರು. ಸುಚಿತ್ರ ಅವರು ಪ್ರಮೋದ್ ಬೊಳ್ಳಾಜೆಯವರ ಪತ್ನಿಯಾಗಿದ್ದು, ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು. ಸುಚಿತ್ರ ರವರ ಈ ಕಾಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು. ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು Read More »

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ಬೆಂಗಳೂರು:ಸ್ಯಾಂಡಲ್‌ವುಡ್ ನಟ ಚಿನ್ನಾರಿ ಮುತ್ತ ಎಂಬ ಖ್ಯಾತಿ ಹೊಂದಿರುವ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ(spandana passed away) ನಿಧನ ಹೊಂದಿದ್ದಾರೆ. ಸ್ಪಂದನಾ ತಮ್ಮ ಪತಿ ವಿಜಯ ರಾಘವೇಂದ್ರ ನಟಿಸಿ ನಿರ್ಮಿಸುತ್ತಿರುವ `ಕಿಸ್ಕತ್’ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.ಈ ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬ್ಯಾಂಕಾಕ್ ನಲ್ಲಿ ಹಾರ್ಟ್ ಅಟ್ಯಾಕ್ ಆಗಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ರಾಘವೇಂದ್ರ 2007,

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ Read More »

ಬೈಕ್-ಆಟೋ ಡಿಕ್ಕಿ : ಇಬ್ಬರಿಗೆ ಗಾಯ

ಪುತ್ತೂರು: ಬೈಕ್ ಹಾಗೂ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸಹಸವಾರ, ಆಟೋ ಚಾಲಕ ಇಬ್ಬರಿಗೂ ಗಾಯಗೊಂಡ ಘಟನೆ ನೆಹರುನಗರದ ಕಲ್ಲೇಗ ಸಮೀಪ ನಡೆದಿದೆ. ಬಂಟ್ವಾಳ ಬುಡೋಲಿ ನಿವಾಸಿ ಶ್ರವಣ್ ಕೆ ಪುತ್ತೂರು ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಕಾರೊಂದನ್ನು ಹಿಂದಿಕ್ಕಿ ಬರುತ್ತಿದ್ದ ಆಟೋರಿಕ್ಷಾ ಡಿಕ್ಕಿಯಾಗಿದೆ. ಬೈಕ್ ಸಹಸವಾರ ಅವಿಷ್ ಹಾಗೂ ಆಟೋ ಚಾಲಕ ದಿನೇಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್-ಆಟೋ ಡಿಕ್ಕಿ : ಇಬ್ಬರಿಗೆ ಗಾಯ Read More »

ಸರಕಾರಿ ಆಸ್ಪತ್ರೆ ಆಂಬುಲೆನ್ಸ್ ಚಾಲಕರ ಕೊಠಡಿ ಮೇಲೆ ಬಿದ್ದ ಮರ

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯ ಗೇಟ್ ಬಳಿ ಇರುವ ಬೃಹತ್ ಮರವೊಂದು ಧರೆಗುರುಳಿದ ಘಟನೆ ಆ.1ರಂದು ನಡೆದಿದೆ. ಮರ ಬಿದ್ದ ಪರಿಣಾಮ ಸರಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರ ಕೊಠಡಿಗೆ ಹಾನಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮರದ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಸರಕಾರಿ ಆಸ್ಪತ್ರೆ ಆಂಬುಲೆನ್ಸ್ ಚಾಲಕರ ಕೊಠಡಿ ಮೇಲೆ ಬಿದ್ದ ಮರ Read More »

ಅಪಾರ್ಟ್ ಮೆಂಟ್ ನ ಮಹಡಿಯಿಂದ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿ ಮೃತ್ಯು

ಮಂಗಳೂರು: ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಯೊಬ್ಬ ನಗರದ ಕದ್ರಿ ಶಿವಭಾಗ್‌ನಲ್ಲಿರುವ ಅಪಾರ್ಟ್ ಮೆಂಟ್‌ನ 5ನೇ ಮಹಡಿಯಿಂದ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಜು.31 ರಂದು  ಮಂಗಳೂರಿನಲ್ಲಿ ನಡೆದಿದೆ. ಅಡ್ಯಾರು ನಿವಾಸಿ, ಪ್ರಸ್ತುತ ಕದ್ರಿ ಶಿವಭಾಗ್‌ನಲ್ಲಿ ವಾಸವಾಗಿದ್ದ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಮಯ್‌ (21) ಮೃತಪಟ್ಟವರು. ಸಮಯ್‌ ಅವರು ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಬೆಳಗ್ಗಿನ ಸಮಯದಲ್ಲಿ ಓದುತ್ತಿದ್ದಾಗ ಅವರ ತಾಯಿ ಕಾರು ವಾಷ್‌ ಮಾಡಲು ನೆಲಮಹಡಿಗೆ ಹೋಗೋಣ ಎಂದು ಹೇಳಿ ಕೆಳಗೆ ಹೋಗಿದ್ದರು. ಅವರಿಗೆ ಸಹಾಯ ಮಾಡಲು ಬಕೆಟ್‌ ತೆಗೆದುಕೊಂಡು ಬರಲು

ಅಪಾರ್ಟ್ ಮೆಂಟ್ ನ ಮಹಡಿಯಿಂದ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿ ಮೃತ್ಯು Read More »

error: Content is protected !!
Scroll to Top