ಅಪಘಾತ

ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ

ವಿಟ್ಲ: ದ್ವಿಚಕ್ರಗಳೆರಡು ಡಿಕ್ಕಿ ಹೊಡೆದುಕೊಂಡ ಪರಿಣಾಮ ಮೂವರು ಗಾಯಗೊಂಡ ಘಟನೆ ಕಂಬಳಬೆಟ್ಟು ಸಮೀಪ ನಡೆದಿದೆ. ಮೂವರ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ Read More »

ವ್ಯಕ್ತಿಯ ಮೃತದೇಹ ಪತ್ತೆ

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಯ ರಾಷ್ಟ್ರೀಯ ಹೆದ್ದಾರಿ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಆಂಧ್ರ ಮೂಲಕ ಶೇಖ್ ಖಾನ್ ಮೃತವ್ಯಕ್ತಿ ಎನ್ನಲಾಗಿದೆ. ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಹಿಟ್ & ರನ್ ಶಂಕೆ ವ್ಯಕ್ತವಾಗಿದೆ. ಉಪ್ಪಿನಂಗಡಿ ಹಾಗೂ ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವ್ಯಕ್ತಿಯ ಮೃತದೇಹ ಪತ್ತೆ Read More »

ತಾಳೆ ಮರದಿಂದ ಬಿದ್ದು ಮೃತ್ಯು

ಕೊಳ್ತಿಗೆ: ತಾಳೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಳ್ತಿಗೆಯಲ್ಲಿ ನಡೆದಿದೆ. ಕೊಳ್ತಿಗೆ ಗ್ರಾಮದ ಪಾಂಬಾರು ನಿವಾಸಿ ಜಯಂತ ಪೂಜಾರಿ ಮೃತಪಟ್ಟವರು. ತಾಳೆ ಮರಕ್ಕೆ ಏರಿ ಮೂರ್ತೆ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದ ಜಯಂತ ಪೂಜಾರಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.  ಮೃತರು ಪತ್ನಿ,ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ತಾಳೆ ಮರದಿಂದ ಬಿದ್ದು ಮೃತ್ಯು Read More »

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!!

ಮಂಗಳೂರು: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಹಿರಿಯ ನಾಗರಿಕರೋರ್ವರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೂಳೂರು ಪೊಯ್ಯೇಲು ನಿವಾಸಿ ದಿ. ಮದನಪ್ಪ ಶೆಟ್ಟಿ ಅವರ ಪತ್ನಿ ಸುನೀತಾ ಎಂ. (84) ಮೃತಪಟ್ಟವರು. ನವಂಬರ್ 14ರಂದು ದೇವರ ಕೋಣೆಯಲ್ಲಿಟ್ಟಿದ್ದ ದೀಪದಿಂದ ಸೀರೆಗೆ ಬೆಂಕಿ ಹತ್ತಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!! Read More »

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ

ಮಲ್ಪೆ: ವಿಂಚ್ ಬೋಟ್ ಪ್ಯಾರಾ ಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗ ಬಾಲಕನೋರ್ವ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಮಲ್ಪೆ ಬೀಚ್ನಲ್ಲಿ ಸಂಭವಿಸಿದೆ. ಬೆಂಗಳೂರು ಮೂಲದ ಇಕ್ಯಾನ್ ಚೌಧರಿ (12) ಗಾಯಗೊಂಡ ಬಾಲಕ. 10 ಮೀಟರ್ ಎತ್ತರದಿಂದ ಬೋಟಿಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ Read More »

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ:  ಬೈಕ್ ಸವಾರನಿಗೆ ಗಾಯ

ನೆಲ್ಯಾಡಿ: ಬೈಕ್ ಚಲಾಯಿಸಿಕೊಂಡು ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ ಸವಾರ ಗಾಯಗೊಂಡಿರುವ ಘಟನೆ ಗುರುವಾರ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಕರೋಪಾಡಿ ನಿವಾಸ ದೀಕ್ಷಿತ್ (23) ಗಾಯಗೊಂಡವರು. ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕೋಲ್ಪೆಯಲ್ಲಿ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಲಾರಿ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದು ಚಾಲಕ ಕೋಲ್ಪೆ ಯಲ್ಲಿ ಲಾರಿ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಗಾಯಾಳು ಬೈಕ್ ಸವಾರ ದೀಕ್ಷಿತ್ ಅವರನ್ನು ಮಂಗಳೂರು ಆಸ್ಪತ್ರೆಗೆ

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ:  ಬೈಕ್ ಸವಾರನಿಗೆ ಗಾಯ Read More »

ಕಂದಕಕ್ಕೆ ಉರುಳಿದ ಬಸ್: 36 ಮಂದಿ ಮೃತ್ಯು

ದೋಡಾ: ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಒಂದು ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಕನಿಷ್ಠ 36 ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದೆ. ಕಿಶ್ತ್ವಾರದಿಂದ ಜಮ್ಮುಗೆ ಪ್ರಯಾಣಿಸುತ್ತಿದ್ದ ಬಸ್, ಅಸ್ಸಾರ್ ಪ್ರದೇಶದಲ್ಲಿನ ತೃಣಾಲ್ ಬಳಿ ಕಡಿದಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದರಿಂದ ಈ ಘಟನೆ ನಡೆದಿದೆ. ಬಸ್‌ನಲ್ಲಿ 55 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆಯ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ತೀವ್ರ

ಕಂದಕಕ್ಕೆ ಉರುಳಿದ ಬಸ್: 36 ಮಂದಿ ಮೃತ್ಯು Read More »

ಹೊಳೆಗೆ ಸ್ನಾನಕ್ಕಿಳಿದ ಯುವಕ ಹೃದಯಾಘಾತದಿಂದ ಮೃತ್ಯು

ಪುತ್ತೂರು: ಇರ್ದೆ ಬೆಂದ್ರ ತೀರ್ಥದ ಬಳಿ ಹೊಳೆಗೆ ಸ್ನಾನಕ್ಕೆಂದು ಇಳಿದ ಯುವಕ ಹೃದಯಘಾತದಿಂಂದ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಸ್ಥಳೀಯ ನೆಂಟರೊಬ್ಬರ ಮನೆಗೆ ಬಂದಿದ್ದ ಬೊಳುವಾರಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಜಿತ್ (27.ವ) ಎಂಬ ಯುವಕ ಸ್ನಾನಕ್ಕೆಂದು ಹೊಳೆಗೆ ಇಳಿದ ವೇಳೆಯಲ್ಲಿ ಹೃದಯಘಾತವಾಗಿದೆ. .ನೀರಿನಲ್ಲಿ ತೇಲುತ್ತಿದ್ದ ಯುವಕನನ್ನು ತಕ್ಷಣ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಗಾಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಯನ್ನು ತಿಳಿದುಬಂದಿಲ್ಲ.

ಹೊಳೆಗೆ ಸ್ನಾನಕ್ಕಿಳಿದ ಯುವಕ ಹೃದಯಾಘಾತದಿಂದ ಮೃತ್ಯು Read More »

ದೀಪಾವಳಿ ಪಟಾಕಿಗೆ 8 ಬೋಟುಗಳು ಭಸ್ಮ! | ಮಂಕಾದ ಕಡಲ ಮಕ್ಕಳ ಹಬ್ಬದ ಸಡಗರ!

ಉಡುಪಿ: ದೀಪಾವಳಿ ಸಡಗರದಲ್ಲಿದ್ದ ಕಡಲ ಮಕ್ಕಳ ಪೂಜೆ ಸಂದರ್ಭ 8 ಬೋಟುಗಳಿಗೆ ಬೆಂಕಿ ತಗುಲಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ದೀಪಾವಳಿ ಸಂದರ್ಭ ಪೂಜೆ ನಡೆಯುತ್ತಿತ್ತು. ಈ ಸಂದರ್ಭ ಪಟಾಕಿ ಸಿಡಿಸಿದ್ದು, ಪಟಾಕಿಯಿಂದ ಸಿಡಿದ ಕಿಡಿ ಬೋಟುಗಳಿಗೆ ತಗುಲಿದೆ. ಬೋಟಿನಿಂದ ಬೋಟಿಗೆ ಬೆಂಕಿ ಪಸರಿಸಿ ಒಟ್ಟು 8 ಬೋಟುಗಳು ಸುಟ್ಟು ಹೋಗಿವೆ. ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು, ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.

ದೀಪಾವಳಿ ಪಟಾಕಿಗೆ 8 ಬೋಟುಗಳು ಭಸ್ಮ! | ಮಂಕಾದ ಕಡಲ ಮಕ್ಕಳ ಹಬ್ಬದ ಸಡಗರ! Read More »

ಸರಕಾರಿ ಬಸ್-ಓಮ್ನಿ ಬಸ್ ಡಿಕ್ಕಿ | 5 ಮಂದಿ ಮೃತ್ಯು, 60 ಮಂದಿಗೆ ಗಾಯ

ಬೆಂಗಳೂರು: ಸರ್ಕಾರಿ ಬಸ್ ಹಾಗೂ ಓಮ್ಮಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಮೃತಪಟ್ಟು 60 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚೆನ್ನೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಿಂದ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಮಾರು 10 ಅಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡಿದ್ದು, ಸಮೀಪದ ಚೆಟ್ಟಿಯಪ್ಪನೂರಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ಸಂಸ್ಥೆಯ ಬಸ್ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಓನ್ನಿಬಸ್ ನಡುವೆ ಅಪಘಾತ ಸಂಭವಿಸಿದ್ದು

ಸರಕಾರಿ ಬಸ್-ಓಮ್ನಿ ಬಸ್ ಡಿಕ್ಕಿ | 5 ಮಂದಿ ಮೃತ್ಯು, 60 ಮಂದಿಗೆ ಗಾಯ Read More »

error: Content is protected !!
Scroll to Top