ಅಪಘಾತ

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರು

ಕಡಬ: ಕೊಯಿಲ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಬೃಹತ್ ಗಾತ್ರದ ಮಾವಿನ ಮರವೊಂದು ಕಾರಿನ ಮೇಲೆ ಬಿದ್ದ ಘಟನೆ ಇಂದು ನಡೆದಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ-800 ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಮೂರು ಮಂದಿ ಇದ್ದು, ಅಪಾಯದ ಅರಿವು ಆಗುತ್ತಿದ್ದಂತೆ ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರು Read More »

ಬೈಕ್‍ ಗೆ ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಕಡಬ : ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೆಸ್ಟೇಷನ್ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಬೈಕಿಗೆ ಡಿಕ್ಕಿ ಹೊಡೆದು  ಬೈಕ್‌ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ವಿಶ್ವಜಿತ್ (23) ಮೃತಪಟ್ಟವರು. ವಿಶ್ವಜಿತ್ ಮರ್ಧಾಳದ ಪಾಲಡ್ಕದಲ್ಲಿ ಫ್ಯಾಬ್ರಿಕೇಷನ್ ವ್ಯತ್ತಿ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟು ಕಡಬ ಕಡೆ ಬೈಕಿನಲ್ಲಿ ಬರುತ್ತಿದ್ದಾಗ ಹಳೆ ಸ್ಟೇಷನ್ ಬಳಿ

ಬೈಕ್‍ ಗೆ ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

ಕಾರು-ಖಾಸಗಿ ಬಸ್‍ ಡಿಕ್ಕಿ : ಮೂವರಿಗೆ ಗಂಭೀರ ಗಾಯ

ಪುತ್ತೂರು : ಕಾರು ಹಾಗೂ ಖಾಸಗಿ ಬಸ್‍ ಡಿಕ್ಕಿ ಹೊಡೆದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆ ಮುರ ಸಮೀಪ ಇಂದು ಮುಂಜಾನೆ ನಡೆದಿದೆ. ಅಪಘಾತದಿಂದ ಅಂಡೆಪುಣಿ ನಿವಾಸಿ ಈಶ್ವರ ಭಟ್‍, ಪುತ್ರಿ ಅಪೂರ್ವ ಹಾಗೂ ಅಪೂರ್ವ ಅವರ ಪುಟಾಣಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ನಡೆಯುವ ಶ್ರಾದ್ಧ ಕಾರ್ಯಕ್ರಮಕ್ಕೆ ಮಗಳು ಮತ್ತು ಮೊಮ್ಮಗಳನ್ನು ಕರೆದುಕೊಂಡು ಬರುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಪುತ್ತೂರಿನಿಂದ ಕೆದಿಲ ಕಡೆಗೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ

ಕಾರು-ಖಾಸಗಿ ಬಸ್‍ ಡಿಕ್ಕಿ : ಮೂವರಿಗೆ ಗಂಭೀರ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ | ಹಲವರಿಗೆ ಗಾಯ

ಪುತ್ತೂರು : ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾದ ಘಟನೆ ಮಾಣಿ ಕಲ್ಲಡ್ಕ ರಸ್ತೆಯ ಸಮುದ್ರ ಹೋಟೆಲ್ ಬಳಿ ನಡೆದಿದೆ. ಬಸ್‌ ಪಲ್ಟಿಯಾದ ಪರಿಣಾಮ ಹಲವರಿಗೆ ಗಾಯಗಳಾಗಿವೆ. ಈ ಬಸ್ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿತ್ತು ಎನ್ನಲಾಗಿದೆ. ಬೆಳಗಿನಿಂದಲೇ ಬಾರಿ ಮಳೆ ಸುರಿಯುತ್ತಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದೆ. ಇದರಿಂದ ಬಸ್ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ | ಹಲವರಿಗೆ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸತ್ತಿಕಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಘಟನೆ ಪರಿಣಾಮ ಕಾರಿಗೆ ಹಾನಿಯಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ | ನಾಲ್ವರಿಗೆ ಗಾಯ

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ಮಗು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ರವಿವಾರ ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ಸಂಭವಿಸಿದೆ. ಕುಕ್ಕೆ ಸುಬ್ರಹ್ಮಣ್ಯ ಭಾಗದಿಂದ ಇಚ್ಲಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ಬೃಹತ್ ಮರ ಮುರಿದು ಬಿದ್ದಿದೆ. ಘಟನೆಯಿಂದ ಕಾರಿನಲ್ಲಿದ್ದ ಚಾಲಕ, ಇಬ್ಬರು ಮಹಿಳೆಯವರು, ಒಂದು ಮಗು ಕಾರಿನಲ್ಲಿ ಸಿಲುಕಿಕೊಂಡಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಸ್ಥಳೀಯರು ಕಾರಿನಲ್ಲಿದ್ದವರು ಹೊರ ತೆಗೆದು

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ | ನಾಲ್ವರಿಗೆ ಗಾಯ Read More »

ಪರ್ಲಡ್ಕ ವೃತ್ತದ ಬಳಿ ರಸ್ತೆಗೆ ಗುಡ್ಡ ಕುಸಿತ

ಪುತ್ತೂರು: ಮಂಜಲ್ಪಡ್ಪು-ದರ್ಬೆ ನಡುವಿನ ಬೈಪಾಸ್ ರಸ್ತೆಯ ಪರ್ಲಡ್ಕದಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿ, ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಯಿತು. ಪರ್ಲಡ್ಕ ವೃತ್ತದ ಬಳಿಯ ಕಾವೇರಿ ಹಾರ್ಡ್’ವೇ ಅಂಗಡಿ  ಪಕ್ಕದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಪರಿಣಾಮ  ಎರಡು ಕಡೆಯ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಎರಡು ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯಿತು.

ಪರ್ಲಡ್ಕ ವೃತ್ತದ ಬಳಿ ರಸ್ತೆಗೆ ಗುಡ್ಡ ಕುಸಿತ Read More »

ನಗರಸಭೆ ಕಾಂಪೌಂಡ್ ಗೋಡೆ ಕುಸಿತ | ರಿಕ್ಷಾಕ್ಕೆ ಹಾನಿ

ಪುತ್ತೂರು: ಇಂದು ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಪುತ್ತೂರು ನಗರಸಭೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ. ಗ್ರಾಮ ಚಾವಡಿಯ ಹಿಂಭಾಗದ ಕೋರ್ಟ್ ರಸ್ತೆಯ ಕಾಂಪೌಂಡ್ ಗೋಡೆ ಇದಾಗಿದ್ದು, ಈ ವೇಳೆ 3 ರಿಕ್ಷಾಗಳಿಗೆ ಹಾನಿಯಾಗಿದೆ. ಇದರಲ್ಲಿ 2 ರಿಕ್ಷಾ ತೀರಾ ಹಾನಿಗೊಳಗಾಗಿದೆ. ಈ ಸಂದರ್ಭದಲ್ಲಿ ಯಾರೂ ಇರದೇ ಇರುವುದರಿಂದ ಜೀವಕ್ಕೆ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಪಕ್ಕದಲ್ಲಿ ನಗರಸಭೆಯ ಟ್ರಾನ್ಸ್ ‘ಫಾರ್ಮರ್ ಇದ್ದು, ಕಾಂಪೌಂಡ್ ಬಿದ್ದಾಗ ರಸ್ತೆಗೆ ವಾಲಿಕೊಂಡು ಬಿಟ್ಟಿತ್ತು. ತಕ್ಷಣ ಮೆಸ್ಕಾಮ್ ಮಾಹಿತಿ ನೀಡಿ,

ನಗರಸಭೆ ಕಾಂಪೌಂಡ್ ಗೋಡೆ ಕುಸಿತ | ರಿಕ್ಷಾಕ್ಕೆ ಹಾನಿ Read More »

ನೇಣು ಬಿಗಿದು ಯುವಕ ಆತ್ಮಹತ್ಯೆ

ವಿಟ್ಲ: ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಸಂತೋಷ್ ನಾಯ್ಕ (32) ಎನ್ನಲಾಗಿದ್ದು, ಈತ ಕೂಲಿ ಕೆಲಸ ನಿರ್ವಹಿಸುತ್ತಿದ್ದ. ಮೃತರು ತಂದೆ, ತಾಯಿ ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ.ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಹೂವಿನ ಸ್ಟಾಲ್‍ ಮೇಲೆ ಬಿದ್ದ ತೆರವಾದ ಕಟ್ಟಡದ ಗೋಡೆ : ಮಹಿಳೆಗೆ ಗಾಯ

ಪುತ್ತೂರು: ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿ ಇತ್ತೇಚೆಗೆ ತೆರವಾದ ಕಟ್ಟಡದ ಪಕ್ಕದ ಕಟ್ಟಡದ ಗೋಡೆಯ ಭಾಗವೊಂದು ಜರಿದು ಬಿದ್ದ ಪರಿಣಾಮ ಹೂವಿನ ವ್ಯಾಪಾರಿ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕಳೆದ ಕೆಲವು ಸಮಯದಿಂದ ವಿನಾಯಕ ಪ್ಲವರ್ ಸ್ಟಾಲ್ ನ ಮಾಲಕತ್ವದ ಹೂವಿನ ಅಂಗಡಿ ಮೇಲೆ ಗೋಡೆ ಜರಿದು ಬಿದ್ದಿದೆ. ಈ ಸಂದರ್ಭ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ, ಉಮೇಶ್ ಕೋಡಿಬೈಲು, ಪ್ರಜ್ವಲ್ ಘಾಟೆ ಭೇಟಿ ನೀಡಿದರು.

ಹೂವಿನ ಸ್ಟಾಲ್‍ ಮೇಲೆ ಬಿದ್ದ ತೆರವಾದ ಕಟ್ಟಡದ ಗೋಡೆ : ಮಹಿಳೆಗೆ ಗಾಯ Read More »

error: Content is protected !!
Scroll to Top