ಅಪಘಾತ

ಪ್ರಭು ಚರುಂಬುರಿ ಅಂಗಡಿಯಲ್ಲಿ ಅಗ್ನಿ ಅವಘಡ

ಪುತ್ತೂರು: ಕೊಂಬೆಟ್ಟು ಬಂಟರ ಭವನದ ಬಳಿ ಕಾರ್ಯಾಚರಿಸುತ್ತಿರುವ ಪ್ರಭು ಚರುಂಬುರಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡಕ್ಕೆ ಅಂಗಡಿಯಲ್ಲಿರುವ ಕೆಲವು ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿದ ಅಗ್ನಿಶಾಮಕ ದಳದವರು ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ಪ್ರಭು ಚರುಂಬುರಿ ಅಂಗಡಿಯಲ್ಲಿ ಅಗ್ನಿ ಅವಘಡ Read More »

ಪಾದಚಾರಿಗೆ ಬೈಕ್ ಡಿಕ್ಕಿ | ಪ್ರಕರಣ ದಾಖಲು

ಪುತ್ತೂರು: ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಾಯಗೊಂಡ ಘಟನೆ ಕುಂಬ್ರದಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ ಕೊರಗಪ್ಪ ಪೂಜಾರಿ ಗಾಯಗೊಂಡವರು. ಪತ್ನಿ ರೇವತಿ ಜೊತೆ ಕುಂಬ್ರ ಪೇಟೆಗೆ ಬಂದು ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡರು. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ | ಪ್ರಕರಣ ದಾಖಲು Read More »

ವ್ಯಾಪಾರಿ ಶ್ರೀರಾಮ್ ಭಟ್ ಮೃತದೇಹ ಕೆರೆಯಲ್ಲಿ ಪತ್ತೆ !

ಪೆರ್ಲ: ಪೆರ್ಲ ಪೇಟೆಯ ವ್ಯಾಪಾರಿಯೊಬ್ಬರ ಮೃತದೇಹ ಮನೆ ಸಮೀಪದ ತೋಟದ ಕರೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ವಿನಾಯಕ ಸ್ಟೋರ್ಸ್ ಮಾಲಕ, ಪಳ್ಳತ್ತಮೂಲೆ ನಿವಾಸಿ ಶ್ರೀರಾಮ್ ಭಟ್‌ (52) ಎಂಬವರ ಮೃತದೇಹ ಮನೆ ಸಮೀಪದ ತೋಟದ ಕೆರೆಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ. ಪೆರ್ಲ ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಶ್ರೀರಾಮ್ ಭಟ್‍ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸದಸ್ಯರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಅವರು ಅಂಗಡಿಯ‌ನ್ನು ಸರಿಯಾಗಿ ತೆರಯುತ್ತಿರಲಿಲ್ಲ. ಎರಡು

ವ್ಯಾಪಾರಿ ಶ್ರೀರಾಮ್ ಭಟ್ ಮೃತದೇಹ ಕೆರೆಯಲ್ಲಿ ಪತ್ತೆ ! Read More »

ಮಡ್ಯಂಗಳದಲ್ಲಿ ಖಾಸಗಿ ಗುಡ್ಡಕ್ಕೆ ಬೆಂಕಿ

ಪುತ್ತೂರು: ತಾಲೂಕಿನ ಕೌಡಿಚ್ಚಾರು ಸಮೀಪದ ಮಡ್ಯಂಗಳದಲ್ಲಿ ಗುಡ್ಡವೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಇಂದು ನಡೆದಿದೆ. ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಮತ್ತಷ್ಟು ಜಾಗಕ್ಕೆ ವ್ಯಾಪಿಸುತ್ತಿದ್ದೆ ಎಂದು ತಿಳಿದು ಬಂದಿದೆ.

ಮಡ್ಯಂಗಳದಲ್ಲಿ ಖಾಸಗಿ ಗುಡ್ಡಕ್ಕೆ ಬೆಂಕಿ Read More »

ಪರೀಕ್ಷೆ ಮುಗಿಸಿ ನಾಪತ್ತೆಯಾದ ನಾಲ್ವರು ವಿದ್ಯಾರ್ಥಿಗಳ ಶವ ನದಿಯಲ್ಲಿ ಪತ್ತೆ !

ಸುರತ್ಕಲ್: ಸುರತ್ಕಲ್ ಖಾಸಗಿ ಅನುದಾನಿತ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆದ ಬಳಿಕ ಮನೆಗೆ ಮರಳದೆ ನಾಪತ್ತೆಯಾದ ಘಟನೆ ನಡೆದಿದ್ದು, ನಾಲ್ವರು ವಿದ್ಯಾರ್ಥಿಗಳ ಮೃತದೇಹ ಹಳೆಯಂಗಡಿ ಕೊಪ್ಪಳ ಅಣೆಕಟ್ಟ ರೈಲ್ವೇ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದೆ. ಸುರತ್ಕಲ್ ಅಗರಮೇಲು ನಿವಾಸಿ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ರಾಘವೇಂದ್ರ (15), ಗುಡ್ಡಕೊಪ್ಪ ನಿವಾಸಿ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್ (15) ಮೃತಪಟ್ಟವರು. ಈ

ಪರೀಕ್ಷೆ ಮುಗಿಸಿ ನಾಪತ್ತೆಯಾದ ನಾಲ್ವರು ವಿದ್ಯಾರ್ಥಿಗಳ ಶವ ನದಿಯಲ್ಲಿ ಪತ್ತೆ ! Read More »

ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಕಾರು ಅಪಘಾತ | ಅಪಾಯದಿಂದ ಪಾರು

ಪುತ್ತೂರು: ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಅವರ ಕಾರು ಅಪಘಾತಗೊಂಡ ಘಟನೆ ಬೆದ್ರಾಳದಲ್ಲಿ ನಡೆದಿದೆ. ಪುರುಷರಕಟ್ಟೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮುಂಭಾಗದಿಂದ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿ ಅಪಘಾತ ತಪ್ಪಿಸಲು ಇನ್ನೋವಾ ಕಾರು ಚಾಲಕ ರಸ್ತೆ ಬದಿಯಲ್ಲಿರುವ ಸೇಫ್ ರೂಟಿಗೆ ಚಲಾಯಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಕೆಂಪು ಕಲ್ಲಿನ ಕಟ್ಟೆಗೆ ಇನ್ನೋವಾ ಕಾರು ಬಡಿದಿದ್ದು ಈ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂ ಗೊಂಡಿದ್ದು ಎದುರಿಂದ ಬಂದ ಫೋರ್ಡ್ ಕಾರು ಕೂಡ

ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಕಾರು ಅಪಘಾತ | ಅಪಾಯದಿಂದ ಪಾರು Read More »

ಬೈಕ್-ಬಸ್ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಪುತ್ತೂರು: ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಕಬಕ ಗ್ರಾಮದ ಪೋಳ್ಯದಲ್ಲಿ ಈ ಅಪಘಾತ ನಡೆದಿದೆ. ಮೃತಪಟ್ಟವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ  ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ.

ಬೈಕ್-ಬಸ್ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಗೇರು ತೋಪಿಗೆ ಅಕಸ್ಮಿಕ ಬೆಂಕಿ : ಅಪಾರ ಗಿಡಗಳ ನಾಶ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಭಾನುವಾರ ಸಂಜೆ ನಡೆದಿದೆ. ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಒಂದು ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಗೇರು ತೋಪಿಗೆ ಆವರಿಸಿತ್ತು. ದಿವಾಕರ ರೈ ಎಂಬವರಿಗೆ ಸೇರಿದ ಗೇರು ತೋಟದಲ್ಲಿ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದು ಗೊತ್ತಾಗಿಲ್ಲ. ತೋಟದ ಕೆಳಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ಅದರಿಂದ ಶಾರ್ಟ್ ಆಗಿ ಬೆಂಕಿ ಕಿಡಿ

ಗೇರು ತೋಪಿಗೆ ಅಕಸ್ಮಿಕ ಬೆಂಕಿ : ಅಪಾರ ಗಿಡಗಳ ನಾಶ Read More »

ರಿಕ್ಷಾಗಳೆರಡು ಮುಖಾಮುಖಿ ಡಿಕ್ಕಿ | ಓರ್ವ ಮೃತ್ಯು, 9 ಮಂದಿಗೆ ಗಾಯ

ವಿಟ್ಲ: ಎರಡು ರಿಕ್ಷಾಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು, 9 ಮಂದಿ ಗಾಯಗೊಂಡ ಘಟನೆ ಪಡಿಬಾಗಿಲು ಅಳಿಕೆ ಸಮೀಪ ನಡೆದಿದೆ. ಮಡಿಯಾಲ ನಿವಾಸಿ ಅಮ್ಮು ಮೂಲ್ಯ (69) ಮೃತಪಟ್ಟವರು. ಎರುಂಬು ನಿವಾಸಿ ಹಮೀದ್, ಪಡಿಬಾಗಿಲು ನಿವಾಸಿ ರವಿ ಎಂಬವರಿಗೆ ಸೇರಿದ ರಿಕ್ಷಾಗಳಾಗಿದ್ದು, ಅಪಘಾತದ ತೀವ್ರತೆಗೆ ರಿಕ್ಷಾಗಳ ಮುಂಭಾಗ ನಜ್ಜುಗುಜ್ಜಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ರಿಕ್ಷಾಗಳೆರಡು ಮುಖಾಮುಖಿ ಡಿಕ್ಕಿ | ಓರ್ವ ಮೃತ್ಯು, 9 ಮಂದಿಗೆ ಗಾಯ Read More »

ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತ್ಯು

ಬಂಟ್ವಾಳ : ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಭಾನುವಾರ ಮುಂಜಾನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾ‌ರ್ ನಿವಾಸಿ ಪ್ರಸ್ತುತ ಪಾಣೆಮಂಗಳೂರು – ಆಲಡ್ಕ ವಾಸ್ತವ್ಯವಿರುವ ಆಶ್ರಫ್ (32) ಮೃತಪಟ್ಟ ಯುವಕ. ಆಲಡ್ಕ ನಿವಾಸಿ ತಸ್ವೀ‌ರ್ ಆಶ್ರಫ್‌ ಅವರ ಸ್ನೇಹಿತರಾಗಿದ್ದು, ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತನಿಗೆ ಡ್ರಾಫ್ ಕೊಡುವ ಉದ್ದೇಶದಿಂದ ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡಿಗೆ ತೆರಳಿದ್ದು ಬೆಳಿಗ್ಗೆ ಸುಮಾರು 5.30

ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತ್ಯು Read More »

error: Content is protected !!
Scroll to Top