ತಿರುಪತಿಯಲ್ಲಿ ಟಿಟಿ ವಾಹನ ಅಪಘಾತ | ಬಿಳಿನೆಲೆ ಕೈಕಂಬ ಮೂಲದ ಮಹಿಳೆ ಮೃತ್ಯು
ತಿರುಪತಿ: ತಿರುಪತಿ ಯಾತ್ರೆಗೆ ತೆರಳಿದ್ದ ಟಿಟಿ ವಾಹನ ಅಪಘಾತಕ್ಕೀಡಾಗಿ ಬಿಳಿನೆಲೆ ಕೈಕಂಬದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಿರುಪತಿ-ಶ್ರೀ ಕಾಳಹಸ್ತಿ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಘಟನೆ ನಡೆದಿದೆ. ಶೇಷಮ್ಮ (70) ಅಪಘಾತದಿಂದ ಮೃತಪಟ್ಟವರು. ಕಡಬ ತಾಲ್ಲೂಕು ಬಿಳಿನೆಲೆ ಗ್ರಾಮದ ಕೈಕಂಬದ ಕುಟುಂಬ ಹಾಗೂ ಅವರ ಸಂಬಂಧಿಕರು ಪ್ಯಾಕೇಜ್ ಟೂರ್ ಯೋಜನೆಯಡಿ ಟಿಟಿಯಲ್ಲಿ ತಿರುಪತಿ ಯಾತ್ರೆ ಕೈಗೊಂಡಿದ್ದರು. ಒಟ್ಟು ಮೂರು ವಾಹನಗಳಲ್ಲಿ ಕರ್ನಾಟಕದ ಇತರ ಭಾಗದವರೂ ವಾಹನದಲ್ಲಿದ್ದರು. ಮಂಗಳವಾರ ಗುಂಡ್ಯದಿಂದ ವಾಹನ ಹೊರಟಿತ್ತು. ಬುಧವಾರ ಸಂಜೆ ತಿರುಪತಿಯಲ್ಲಿ ದರ್ಶನ ನೆರವೇರಿಸುವುದಕ್ಕೂ […]
ತಿರುಪತಿಯಲ್ಲಿ ಟಿಟಿ ವಾಹನ ಅಪಘಾತ | ಬಿಳಿನೆಲೆ ಕೈಕಂಬ ಮೂಲದ ಮಹಿಳೆ ಮೃತ್ಯು Read More »










