ಅಪಘಾತ

ಬಸ್ – ಲಾರಿ ಭೀಕರ ಅಪಘಾತ l 9 ಮಂದಿ ಮೃತ್ಯು

ಕೋಲಾರ: ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಬಸ್‌ಗೆ ಕೋಲಾರದ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸದ್ಯ ಪೊಲೀಸ್‌ ತಂಡ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಸ್ – ಲಾರಿ ಭೀಕರ ಅಪಘಾತ l 9 ಮಂದಿ ಮೃತ್ಯು Read More »

ಹಳಿ ದಾಟುತ್ತಿದ್ದ ಆನೆಗೆ ರೈಲು ಡಿಕ್ಕಿ | ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣಬಿಟ್ಟ ಆನೆ

ಅಸ್ಸಾಂ: ಹಳಿ ದಾಟುತ್ತಿದ್ದ ಆನೆಯೊಂದಕ್ಕೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಜಾಗಿರೋಡ್ ರೈಲು ನಿಲ್ದಾಣದ ಸಮೀಪದಲ್ಲಿ ನಡೆದಿದೆ. ಆನೆಗೆ ರೈಲು ಡಿಕ್ಕಿಯಾದ ಪರಿಣಾಮ 2 ಕಾಲು ಕಳೆದುಕೊಂಡ ಆನೆ ತೆವಳುತ್ತಾ ಸಾಗಿ ಪ್ರಾಣಬಿಟ್ಟಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ವೇಗವಾಗಿ ತೆರಳುತ್ತಿದ್ದ ವೇಳೆ ಎರಡು ಆನೆಗಳು ಹಳಿ ದಾಟುತ್ತಿತ್ತು. ಒಂದು ಆನೆ ಕೂದಲೆಳೆಯುವ ಅಂತರದಲ್ಲಿ ಹಳಿ ದಾಟಿದರೆ ಅದರ ಹಿಂದಿದ್ದ ಈ ಆನೆಗೆ ರೈಲು ಡಿಕ್ಕಿಯಾಗಿದೆ. ರೈಲು ಡಿಕ್ಕಿಯಾದ ಪರಿಣಾಮ ಆನೆ ಗಂಭೀರವಾಗಿ ಗಾಯಗೊಂಡಿದೆ.

ಹಳಿ ದಾಟುತ್ತಿದ್ದ ಆನೆಗೆ ರೈಲು ಡಿಕ್ಕಿ | ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣಬಿಟ್ಟ ಆನೆ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ

ಕಡಬ: ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ನಡೆದಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ತೆರಳುತ್ತಿದ್ದ ಕಾರು ನೆಕ್ಕಿತ್ತಡ್ಕ ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ್ದು, ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮಹಿಳೆಯೋರ್ವರು ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ Read More »

ಸೂರತ್‍ ನಲ್ಲಿ ಭಾರೀ ಮಳೆಗೆ ಆರು ಅಂತಸ್ತಿನ ಕಟ್ಟಡ ಕುಸಿತ : 7 ಮಂದಿ ಮೃತ್ಯು

ಸೂರತ್: ಭಾರೀ ಮಳೆಯಿಂದಾಗಿ ಸೂರತ್‍ ನಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು 7 ಜನ ಮೃತಪಟ್ಟು, ಹಲವಾರು ಮಂದಿ ಕಟ್ಟಡದ ಅಡಿಯಲ್ಲಿ ಸಿಲಿಕೊಂಡಿರುವ ಘಟನೆ ನಡೆದಿದೆ. ಮಹಿಳೆಯೊಬ್ಬರನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿತ್ತು. ಈ ದುರ್ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಜನರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ರಾತ್ರಿಯಿಡೀ ಕಾರ್ಯ ನಿರ್ವಹಿಸಿದ್ದಾರೆ. ಕುಸಿದು ಬಿದ್ದ ಕಟ್ಟಡದಲ್ಲಿ ಐದು ಕುಟುಂಬಗಳು ವಾಸವಾಗಿದ್ದವು. ಇದನ್ನು 2017 ರಲ್ಲಿ ನಿರ್ಮಿಸಲಾಗಿತ್ತು. ಈ ದುರ್ಘಟನೆ ವೇಳೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು

ಸೂರತ್‍ ನಲ್ಲಿ ಭಾರೀ ಮಳೆಗೆ ಆರು ಅಂತಸ್ತಿನ ಕಟ್ಟಡ ಕುಸಿತ : 7 ಮಂದಿ ಮೃತ್ಯು Read More »

ಲಾರಿ ಹಾಗೂ ಸ್ಕೂಟರ್  ಡಿಕ್ಕಿ : ಸ್ಕೂಟರ್  ಸವಾರ ಸಾವು

ಬಿ.ಸಿ.ರೋಡ್ : ಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ್ದು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಸಂಭವಿಸಿದೆ. ಕಾಸರಗೋಡು ಸಮೀಪದ ಬೇಕಲ ನಿವಾಸಿ  ಸುಮಿತ್ (24)  ಮೃತಪಟ್ಟ‌ ದುರ್ದೈವಿಯಾಗಿದ್ದಾರೆ. ಸ್ಕೂಟರ್‌ ಸಹಸವಾರ ಗುರುಪ್ರೀತ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ  ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬೆಳ್ತಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಾಗುತ್ತಿದ್ದ ಸ್ಕೂಟರ್ ಗೆ ಎದುರು ನಿಂದ ಬಂಟ್ವಾಳ ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಯಾಗಿದೆ. 

ಲಾರಿ ಹಾಗೂ ಸ್ಕೂಟರ್  ಡಿಕ್ಕಿ : ಸ್ಕೂಟರ್  ಸವಾರ ಸಾವು Read More »

ಕಾರುಗಳ ನಡುವೆ ಭೀಕರ ಅಪಘಾತ |  3  ಸಾವು, 3 ಗಂಭೀರ

ಶಿವಮೊಗ್ಗ :  ಲಯನ್ ಸಫಾರಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದೆ.  ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರ ಸ್ಥಿತಿ ಗಂಭೀರವಾಗಿದೆ, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಗಯಾಳುಗಳನ್ನು ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಶಿವಮೊಗ್ಗದ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಕಾರುಗಳ ನಡುವೆ ಭೀಕರ ಅಪಘಾತ |  3  ಸಾವು, 3 ಗಂಭೀರ Read More »

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು

ಬಿ.ಸಿ.ರೋಡ್ : ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿ ಹೋದ ಘಟನೆ ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ನಡೆದಿದೆ. ಮಣಿನಾಲ್ಕೂರು ಗ್ರಾಮದ ಕುಟೇಲು ಎಂಬಲ್ಲಿಗೆ ಸುರತ್ಕಲ್ ನ ಕಾನ ನಿವಾಸಿ ಮೈಕಲ್ (53) ನೀರು ಪಾಲಾದವರು. ಮೈಕಲ್ ಅವರು ಸುದೀಪ ಹಾಗೂ ದಯಾನಂದ, ಜನಾರ್ದನ ಎಂಬವರ ಜೊತೆಗೆ ನದಿಗೆ ತೆರಳಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಸಂಜೆ ಸುಮಾರು 6.15 ರ ಹೊತ್ತಿಗೆ ಸುದೀಪ ಮತ್ತು ದಯಾನಂದರು ಮನೆಗೆ

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು Read More »

ನಿಯಂತ್ರಣ ತಪ್ಪಿ ಗ್ಯಾರೇಜ್‍ ಗೆ ನುಗ್ಗಿದ ಕಾರು

ವಿಟ್ಲ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಗ್ಯಾರೇಜ್ ಗೆ ನುಗ್ಗಿದ ಘಟನೆ ವಿಟ್ಲ ಸಮೀಪದ ಅಪ್ಪೆರಿಪಾದೆಯಲ್ಲಿ ನಡೆದಿದೆ. ವಿಟ್ಲ-ಕಾಸರಗೋಡು ರಸ್ತೆಯ ಅಪ್ಪೆರಿಪಾದೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗ್ಯಾರೇಜ್ ನ ಮೇಲ್ಛಾವಣಿಗೆ ಹಾನಿಯಾಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ನಿಯಂತ್ರಣ ತಪ್ಪಿ ಗ್ಯಾರೇಜ್‍ ಗೆ ನುಗ್ಗಿದ ಕಾರು Read More »

ಶಿರಾಡಿ ಘಾಟ್ ನಲ್ಲಿ ಸರಣಿ ಅಪಘಾತ

ಪುತ್ತೂರು : ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ ನಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಗೂಡ್ಸ್ ಹೊತ್ತ ಟೆಂಪೋ, ಐರಾವತ ಬಸ್, ರಾಜಹಂಸ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ ನ್ನು ಗೂಡ್ಸ್ ಹೊತ್ತ ಟೆಂಪೋ ಓವರ್ ಟೇಕ್ ಮಾಡುವ ಭರದಲ್ಲಿ ದುರ್ಘಟನೆ ಸಂಭವಿಸಿತು. ಓವರ್ ಟೇಕ್ ಮಾಡುವ ಸಂದರ್ಭ ಎದುರಿನಿಂದ ರಾಜಹಂಸ ಬಸ್ ಬರುತ್ತಿದ್ದು, ಟೆಂಪೋ ಚಾಲಕ ನಿಯಂತ್ರಣ

ಶಿರಾಡಿ ಘಾಟ್ ನಲ್ಲಿ ಸರಣಿ ಅಪಘಾತ Read More »

ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ

ಬೆಳ್ತಂಗಡಿ: ಖಾಸಗಿ ಬಸ್‌ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಮುಖಾಮುಖಿ ಡಿಕ್ಕಿಯಾದ ಘಟನೆ ಜೂ.29ರಂದು ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಸಂಭವಿಸಿದೆ. ಬೆಳ್ತಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಗುರುವಾಯನಕೆರೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್ ಅಯ್ಯಪ್ಪಗುಡಿಯ ಸಮೀಪ ಮುಖಾಮುಖಿ ಡಿಕ್ಕಿಯಾಗಿದ್ದು ಈ ವೇಳೆ ಖಾಸಗಿ ಬಸ್‌ ಚಾಲಕ ಗಾಯಗೊಂಡಿದ್ದಾರೆ. ಉಳಿದಂತೆ ಎರಡೂ ಬಸ್‌ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸಂತೆಕಟ್ಟೆ ಬಳಿಯಿಂದ ಟ್ರಾಫಿಕ್‌ ಜಾಮ್ ಉಂಟಾಗಿದೆ.

ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ Read More »

error: Content is protected !!
Scroll to Top