ಕಾರುಗಳೆರಡು ಅಪಘಾತ : ಓರ್ವರಿಗೆ ಗಂಭೀರ ಗಾಯ !
ಪುತ್ತೂರು: ಕಾರುಗಳೆರಡರ ನಡುವೆ ಭೀಕರ ಅಪಘಾತ ನಡೆದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಶೇಖಮಲೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಪಘಾತದ ಪರಿಣಾಮ ಕಾರುಗಳೆರಡು ಜಖಂ ಗೊಂಡಿದೆ. ಪುತ್ತೂರಿನಿಂದ ಬರುತ್ತಿದ್ದ ಕಾರಿನಲ್ಲಿದ್ದ ಚಾಲಕ ಕತ್ಯಾಡಿ ನಿವಾಸಿಯೊಬ್ಬರಿಗೆ ತೀವು ಗಾಯವಾಗಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಕಾರುಗಳೆರಡು ಅಪಘಾತ : ಓರ್ವರಿಗೆ ಗಂಭೀರ ಗಾಯ ! Read More »