ಅಪಘಾತ

ಚಾಲಕನಿಗೆ ಎದೆನೋವು : ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಘಾತ

ಉಪ್ಪಿನಂಗಡಿ: ಬಸ್ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಾಗ ಪ್ರಯಾಣಿಕರೋರ್ವರ ಸಮಯ ಪ್ರಜ್ಞೆಯಿಂದ ಭಾರಿ ಅಪಘಾತ ತಪ್ಪಿಸಿ ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಉಪ್ಪಿನಂಗಡಿಯ ಪೆರ್ನೆ ಎಂಬಲ್ಲಿ ನಡೆದಿದೆ. ಗುರುವಾರ ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಕೆಎಸ್ಸಾರ್ಟಿಸಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಗೋವಿಂದ ನಾಯ್ಕ ಎಂಬವರಿಗೆ ಪೆರ್ನೆ ಗ್ರಾಮದ ಕರ್ವೇಲು ಎಂಬಲ್ಲಿ ಸಮೀಪಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಬಸ್ ಚಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಇದನ್ನು ಗಮನಿಸಿದ ಬಸ್ಸಿನಲ್ಲಿದ್ದ ವಕೀಲ ನೆಲ್ಯಾಡಿಯ ಇಸ್ಮಾಯಿಲ್ ಅವರ ಪುತ್ರ ಸಲ್ಮಾನುಲ್‌ ಫಾರಿಸ್ ತಕ್ಷಣವೇ […]

ಚಾಲಕನಿಗೆ ಎದೆನೋವು : ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಘಾತ Read More »

ಟಿಪ್ಪರ್‌ ಡಿಕ್ಕಿ ಹೊಡೆದು ಒಂದೇ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಸಾವು

ಬೆಂಗಳೂರು : ಟಿಪ್ಪರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದಿದೆ. ಅಜ್ಜವಾರ ಗ್ರಾಮದ ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ ಹಾಗೂ ನಂದೀಶ್ ಸೇರಿದಂತೆ ಅರುಣ್, ಮನೋಜ್ ಮೃತಪಟ್ಟಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್‌ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಹೊರಟಿದ್ದರು.ಮೃತ ನಾಲ್ವರು ಯುವಕರು ನರಸಿಂಹಮೂರ್ತಿಗೆ ಸೇರಿದ ಸಿಟಿ 100 ಬೈಕಿನಲ್ಲಿ ಹೊರಟಿದ್ದು, ಅಜ್ಜವಾರ

ಟಿಪ್ಪರ್‌ ಡಿಕ್ಕಿ ಹೊಡೆದು ಒಂದೇ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಸಾವು Read More »

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಭಾಗಿಯಾಗಿದ್ದ ರಿಕ್ಷಾ ವಶ

ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಭಾಗಿಯಾಗಿದ್ದ ರಿಕ್ಷಾವನ್ನು ಬಂಟ್ವಾಳ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮಲ್ ಕಟ್ಟೆ ನಿವಾಸಿ ಉಸ್ಮಾನ್ ಎಂಬವರ ಸ್ಕೂಟರ್‌ಗೆ ಅಪರಿಚಿತ ರಿಕ್ಷಾ ಡಿಕ್ಕಿ ಹೊಡೆದು ಬಳಿಕ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಆದರೆ ಎರಡು ದಿನ ಹಿಟ್ ರನ್ ಆಗಿದ್ದ ರಿಕ್ಷಾ ಪತ್ತೆಯಾಗಿರಲಿಲ್ಲ. ರಿಕ್ಷಾ ಡಿಕ್ಕಿಯಾಗಿ ಪರಾರಿಯಾಗಿರುವುದನ್ನು

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಭಾಗಿಯಾಗಿದ್ದ ರಿಕ್ಷಾ ವಶ Read More »

ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಲಾರಿ ಗುದ್ದಿದ ಪರಿಣಾಮ ಭೀಕರ ಅಪಘಾತ

ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿ ಒಳಗಿದ್ದವರು ಜೀವಂತ ದಹನ ಬೆಂಗಳೂರು: ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್‌ ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ ಕಾರಣ ಬಸ್ಸಿಗೆ ಕ್ಷಣಾರ್ಧದಲ್ಲಿ ಬೆಂಕಿಹತ್ತಿಕೊಂಡು ಭೀಕರ ದುರಂತ ಸಂಭವಿಸಿದೆ ಎಂದು ಚಿತ್ರದುರ್ಗದಲ್ಲಿ ಸುಟ್ಟು ಕರಕಲಾದ ಸೀಬರ್ಡ್‌ ಬಸ್‌ ಮಾಲೀಕ ನಾಗರಾಜು ಎಂಬವರು ತಿಳಿಸಿದ್ದಾರೆ. ಚಿತ್ರದುರ್ಗದ ಗೊರ್ಲತ್ತು ಗ್ರಾಮದ ಬಳಿ ರಾತ್ರಿ 1.30-2 ಗಂಟೆ ಮಧ್ಯೆ ಈ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪರ್‌ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಟ್ರಕ್‌

ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಲಾರಿ ಗುದ್ದಿದ ಪರಿಣಾಮ ಭೀಕರ ಅಪಘಾತ Read More »

ಅಪಘಾತವಾಗಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್‌ : 17 ಪ್ರಯಾಣಿಕರು ಸಜೀವ ದಹನ

ಗೋಕರ್ಣಕ್ಕೆ ಬರುತ್ತಿದ್ದ ಬಸ್‌ಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತ ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಡಿ.25ರ ನಸುಕಿನ ಹೊತ್ತು ಸಂಭವಿಸಿದ ಭೀಕರ ಅಪಘಾತದಲ್ಲಿ 17ಕ್ಕೂ ಹೆಚ್ಚು ಜನ ಜೀವಂತ ಸುಟ್ಟು ಕರಕಲಾಗಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್‌ ಹೊತ್ತಿ ಉರಿದಿದೆ. ಖಾಸಗಿ ಸ್ಲೀಪರ್ ಕೋಚ್​​ ಬಸ್​ನಲ್ಲಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು

ಅಪಘಾತವಾಗಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್‌ : 17 ಪ್ರಯಾಣಿಕರು ಸಜೀವ ದಹನ Read More »

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ

ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನ ಬಂಟ್ವಾಳ : ಅಪರಿಚಿತ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮಲ್‌ಕಟ್ಟೆ ಎಂಬಲ್ಲಿ ನಡೆದಿದೆ. ಗಾಯಗೊಂಡವರು ರಾಮಲ್‌ಕಟ್ಟೆ ನಿವಾಸಿ ಉಸ್ಮಾನ್ ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸ್ಮಾನ್ ಅವರು ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಉಸ್ಮಾನ್ ಅವರಿಗೆ ಗಂಭೀರ ಸ್ವರೂಪದ

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ Read More »

ಸುಳ್ಯ: ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಲಾರಿ; ಚಾಲಕನಿಗೆ ಗಾಯ

ಸುಳ್ಯ : ಇಲ್ಲಿನ ಗೂನಡ್ಕ ಬಳಿ ನಿಂತಿದ್ದ ಮಾರುತಿ ಓಮ್ನಿ ಕಾರಿಗೆ ಗುದ್ದಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಪೈಪ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮಡಿಕೇರಿಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗೂನಡ್ಕ ಬಳಿ ಸುಳ್ಯದಿಂದ ಕಲ್ಲಗುಂಡಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಓಮ್ನಿ ಕಾರು ಲಾರಿ ಅಡಿಯಲ್ಲಿ ಸಿಲುಕಿಕೊಂಡಿತ್ತು. ಆದರೆ, ಅಪಘಾತದ ಸಮಯದಲ್ಲಿ ಕಾರು ಚಾಲಕ ಹತ್ತಿರದ ಅಂಗಡಿಯಲ್ಲಿ ನಿಂತಿದ್ದರಿಂದ ಪಾರಾಗಿದ್ದಾರೆ.

ಸುಳ್ಯ: ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಲಾರಿ; ಚಾಲಕನಿಗೆ ಗಾಯ Read More »

ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತ : ಸವಾರ ನಡುರಸ್ತೆಯಲ್ಲಿ ಸಾವು

ಅಂಗಲಾಚಿದರೂ ಸಹಾಯಕ್ಕೆ ಬಾರದೆ ಅಮಾನವೀಯವಾಗಿ ನಡೆದುಕೊಂಡ ಜನ ಬೆಂಗಳೂರು: ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತವಾಗಿ 34ರ ಹರೆಯದ ವ್ಯಕ್ತಿ ನಡುರಸ್ತೆಯಲ್ಲೇ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ಬಿದ್ದಿದ್ದ ಪತಿಯ ಜೀವ ಉಳಿಸಲು ಪತ್ನಿ ಕೈಮುಗಿದು ಅಂಗಲಾಚಿದರೂ ಜನರು ಯಾರು ಕೂಡ ನೆರವಿಗೆ ಬಂದಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬನಶಂಕರಿ ಮೂರನೇ ಸ್ಟೇಜ್ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ವೆಂಕಟರಾಮಣನ್ ಮೃತ ದುರ್ದೈವಿ. ಬೆಳಗಿನ ಜಾವ 3.30ರ ಸುಮಾರಿಗೆ ಇವರಿಗೆ ಮನೆಯಲ್ಲಿಯೇ ಎದೆನೋವು ಕಾಣಿಸಿಕೊಂಡಿದೆ.

ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತ : ಸವಾರ ನಡುರಸ್ತೆಯಲ್ಲಿ ಸಾವು Read More »

ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್‌ : ತಪ್ಪಿದ ಅನಾಹುತ

ಮಡಿಕೇರಿ: ಪ್ರವಾಸಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ವಿರಾಜಪೇಟೆಯ ಮಾಕುಟ್ಟ ಬಳಿಯ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ಇಂದು ಬೆಳಗ್ಗೆ ನಡೆದಿದೆ. ಕೇರಳ ನೋಂದಣಿಯ ಖಾಸಗಿ ಬಸ್ ಇದಾಗಿದ್ದು, ಪ್ರವಾಸಿಗರನ್ನು ಮೈಸೂರಿನಲ್ಲಿ ಇಳಿಸಿ ವಾಪಸ್ ತೆರಳುವಾಗ ಈ ಅವಘಡ ಸಂಭವಿಸಿದೆ. ಬಸ್‍ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದರು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನಲಾಗುತ್ತಿದೆ. ಅಕಸ್ಮಾತ್ ಪ್ರವಾಸಿಗರಿದ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದ್ದಾರೆ.

ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್‌ : ತಪ್ಪಿದ ಅನಾಹುತ Read More »

ಸುಳ್ಯ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸಾವು

ಸುಳ್ಯ : ಮೈಸೂರಿನ ಮಳವಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾರ್ ನಿವಾಸಿ ಶೇಷಪ್ಪ ನಾಯ್ಕ ಎಂಬವರ ಪುತ್ರ ದೀಕ್ಷಿತ್ (25) ಮೃತಪಟ್ಟವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ದೀಕ್ಷಿತ್ ಬೆಂಗಳೂರಿನಿಂದ ಕಂದಡ್ಕದ ಕಲ್ಟಾರಿನ ತನ್ನ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರ ಗಾಯಗೊಂಡ ದೀಕ್ಷಿತ್‌ರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ

ಸುಳ್ಯ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸಾವು Read More »

error: Content is protected !!
Scroll to Top