ಶೈಕ್ಷಣಿಕ

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಸವಣೂರು :  ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023-24ನೆ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಇವರು ನೆರವೇರಿಸಿದರು. ಬಳಿಕ ಮಾತನಾಡಿದ,ಸೀತಾರಾಮ ರೈ ಅವರು,ಪ್ರಜಾಪ್ರಭುತ್ವದ ಅರಿವು ವಿದ್ಯಾರ್ಥಿಗಳಿಗೆ ಆಗಬೇಕಾದರೆ ವಿದ್ಯಾರ್ಥಿ ಸಂಘಗಳು ಸಕ್ರಿಯರಾಗಬೇಕು. ಇಂತಹ ಸಂಘಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಾಯಕತ್ವವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು. ಮುಖ್ಯ ಅತಿಥಿ ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ರೈ ಅವರು ಮಾತನಾಡಿ ವಿದ್ಯಾರ್ಥಿ ಸಂಘಗಳು ನಾಯಕತ್ವವನ್ನು ಮೈಗೂಡಿಸಿಕೊಳ್ಳಲು ಅತ್ಯಂತ ಸಶಕ್ತವಾದ ವೇದಿಕೆಯಾಗಿದೆ,ನಾಯಕತ್ವ […]

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ Read More »

“ಪ್ರೇರಣಾ” ಸಂಸ್ಥೆಯಲ್ಲಿ “ಸ್ಪೋಕನ್ ಇಂಗ್ಲಿಷ್ ತರಬೇತಿ”ಯ 3ನೇ ಬ್ಯಾಚ್‍ಗೆ ಚಾಲನೆ | ಕಲಿಕೆಗೆ ವಯಸ್ಸಿನ ಮಿತಿಯಿಲ್ಲ : ಪ್ರೀತಾ

ಪುತ್ತೂರು: ನಗರದ ಅರುಣಾ ಥಿಯೇಟರ್ ಬಳಿಯ ಪ್ರಭು ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ “ಪ್ರೇರಣಾ” ಸಂಸ್ಥೆಯಲ್ಲಿ “ಸ್ಪೋಕನ್ ಇಂಗ್ಲಿಷ್ ತರಬೇತಿ”ಯ 3ನೇ ಬ್ಯಾಚ್‍ಗೆ ಗುರುವಾರ ಚಾಲನೆ ನೀಡಲಾಯಿತು. ಪ್ರಗತಿ ಪ್ಯಾರಾ ಮೆಡಿಕಲ್ & ಅಲೈಡ್ ಸೈನ್ಸ್ ನ ಪ್ರಾಂಶುಪಾಲೆ ಪ್ರೀತಾ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತನ್ನ ಆಸಕ್ತಿ ನೆಲೆಯಲ್ಲಿ ಯಾವುದೇ ವಿಷಯವನ್ನು ಕಲಿಯಬಹುದು.  ಪ್ರಸ್ತುತ ದಿನಗಳಲ್ಲಿ ಆಂಗ್ಲ ಭಾಷೆ ಪ್ರತಿಯೊಂದು ಕ್ಷೇತ್ರದಲ್ಲಿ ಅತೀ ಅಗತ್ಯವಿದ್ದು, ದೊಡ್ಡ ದೊಡ್ಡ ನಗರಗಳಲ್ಲಿ

“ಪ್ರೇರಣಾ” ಸಂಸ್ಥೆಯಲ್ಲಿ “ಸ್ಪೋಕನ್ ಇಂಗ್ಲಿಷ್ ತರಬೇತಿ”ಯ 3ನೇ ಬ್ಯಾಚ್‍ಗೆ ಚಾಲನೆ | ಕಲಿಕೆಗೆ ವಯಸ್ಸಿನ ಮಿತಿಯಿಲ್ಲ : ಪ್ರೀತಾ Read More »

ಬೊಬ್ಬೆಕೇರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭೋತ್ಸವ

ಕಾಣಿಯೂರು: ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲೆಯಲ್ಲಿ ಎಲ್.ಕೆ.ಜಿ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭೋತ್ಸವವು ಜೂ 14ರಂದು ನಡೆಯಿತು. ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಶಿಕ್ಷಕಿಯರು ಆರತಿ ಬೆಳಗಿ, ತಿಲಕವನ್ನಿಟ್ಟು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ತೀರ್ಥರಾಮ ಪೈಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಜೊತೆ ಕಾರ್ಯದರ್ಶಿ ಅಶ್ವಿನ್, ನಿವೃತ್ತ ಸೈನಿಕರು ಮತ್ತು ಚಿಣ್ಣರ ಮಂಟಪ ಟ್ರಸ್ಟ್ ಅಧ್ಯಕ್ಷ ಮಹೇಶ್ ಪೈಕ, ಶಾಲಾ ಮುಖ್ಯಗುರುಗಳಾದ ಶಶಿಕಲಾ, ಸಹ ಶಿಕ್ಷಕರಾದ ಜನಾರ್ಧನ, ಗೀತಾ

ಬೊಬ್ಬೆಕೇರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭೋತ್ಸವ Read More »

ಜೂ.15 ರಿಂದ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಜೂ.15 ರಿಂದ ಆರಂಭಗೊಳ್ಳಲಿದೆ. ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ.ಮಹಾನಗರಗಳ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಬೇಕು ಎನ್ನುವ ಸದುದ್ದೇಶದಿಂದ ಪ್ರೇರಣಾ ಸಂಸ್ಥೆಯಲ್ಲಿ ಜೂ.15 ರಿಂದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸೀಮಿತ ವಿದ್ಯಾರ್ಥಿಗಳಿಗೆ

ಜೂ.15 ರಿಂದ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ Read More »

ಜೂ.17 : ಡಾ.ಎಂ.ಮೋಹನ ಆಳ್ವರಿಗೆ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ | ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧನೆಗೆ ಪ್ರಶಸ್ತಿ

ಪುತ್ತೂರು: ಪುತ್ತೂರು : ಕರ್ನಾಟಕ ರಾಜ್ಯ‌ ನಿವೃತ್ತ ನೌಕರರ ಸಂಘ ಪುತ್ತೂರು ಘಟಕದ ವತಿಯಿಂದ ಕೊಡಮಾಡುವ “ಸ್ವರ್ಣ ಸಾಧನಾ ಪ್ರಶಸ್ತಿಗೆ” ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಪ್ರದಾದ ಸಮಾರಂಭ  ಜೂ.17 ಶನಿವಾರ ಬೆಳಿಗ್ಗೆ 9.30 ಕ್ಕೆ ಬಪ್ಪಳಿಗೆ ಜೈನ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ‌ ಬಿ.ಐತಪ್ಪ ನಾಯ್ಕ್ ತಿಳಿಸಿದ್ದಾರೆ. ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧನೆ ಮಾಡಿದ ಡಾ.ಆಳ್ವರನ್ನು ಈ ಪ್ರಶಸ್ತಿಗೆ ಆಯ್ಕೆ

ಜೂ.17 : ಡಾ.ಎಂ.ಮೋಹನ ಆಳ್ವರಿಗೆ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ | ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧನೆಗೆ ಪ್ರಶಸ್ತಿ Read More »

ಸವಣೂರು ವಿದ್ಯಾರಶ್ಮಿಯಲ್ಲಿ ಶಾಲಾ ಪ್ರಾರಂಭೋತ್ಸವ, ಸವಣೂರು ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬ

ಸವಣೂರು: ಎಸ್.ಎನ್.ಆರ್.ರೂರಲ್ ಎಜುಕೇನಲ್ ಟ್ರಸ್ಟ್ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬ ಜೂ.9ರಂದು ನಡೆಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಭಾಗೀರಥಿ ಮುರುಳ್ಯ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಎನ್.ಸುಂದರ ರೈ ,ಕಸ್ತೂರಿ ಕಲಾ ಸೀತಾರಾಮ ರೈ

ಸವಣೂರು ವಿದ್ಯಾರಶ್ಮಿಯಲ್ಲಿ ಶಾಲಾ ಪ್ರಾರಂಭೋತ್ಸವ, ಸವಣೂರು ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬ Read More »

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಅನ್ನು ಆರಂಭಿಸಲಾಗುತ್ತಿದೆ. ಸುಲಲಿತವಾಗಿ ಇಂಗ್ಲೀಷ್ ಬಲ್ಲವರಾಗಿದ್ದರೆ, ಪ್ರಪಂಚದ ಯಾವುದೇ ಮೂಲೆಗಾದರೂ ಹೋಗಿ ವ್ಯವಹರಿಸಬಹುದು. ಆದರೆ ಗ್ರಾಮೀಣ ಭಾಗದವರಿಗೆ ಇಂಗ್ಲೀಷ್ ಎಂದರೆ ತುಸು ಕಷ್ಟವೇ. ಇಂತಹ ಮನಸ್ಥಿತಿಯನ್ನು ದೂರಮಾಡಿ, ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ. ಆಧುನಿಕ ಜಗತ್ತಿನ ಸ್ಪರ್ಧೆಗೆ ಸರಿಯಾಗಿ

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆ

ಪುತ್ತೂರು: ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ಶೈಕ್ಷಣಿಕ ಸಾಧನೆಗಳ ವಿಶ್ಲೇಷಣೆಗೆ ಪೂರಕವಾದ, ವಿದ್ಯಾರ್ಥಿಗಳ ವರ್ತನೆ, ನೈತಿಕತೆ, ಕಲಿಕಾ ಪ್ರಗತಿಗೆ ಪೂರಕವಾದ ವಿಚಾರಗಳ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು.ಇದು ದೇಶದ ಸುಂದರ ಭವಿಷ್ಯ ನಿರ್ಮಾಣದ ಹೆಜ್ಜೆಗಳಾಗಲಿ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್‍ಯದರ್ಶಿ ರೂಪಲೇಖ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳ ತರಗತಿ ಪ್ರವೇಶೋತ್ಸವ

ಪುತ್ತೂರು: ಇಲ್ಲಿನ ಕೃಷ್ಣನಗರ ಅಲಂಬುಡದಲ್ಲಿ ನೂತನವಾಗಿ ಆರಂಭಗೊಂಡಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂನ್ 5ರಂದು ನಡೆಯಿತು. ತಾಳ್ಮೆಯಿಂದ ಮಕ್ಕಳನ್ನು ಬೆಳೆಸಬೇಕು: ಡಾ. ಸುಕುಮಾರ್ ಗೌಡ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಸುಕುಮಾರ್ ಗೌಡ, ಮಕ್ಕಳನ್ನು ತಾಳ್ಮೆಯಿಂದ ಬೆಳೆಸಿ. ಆಗ ಮಕ್ಕಳು ಬೆಳೆಯುತ್ತಾರೆ ಎಂದ ಅವರು, ವಿದ್ಯಾಸಂಸ್ಥೆಯ ಸುತ್ತಲಿನ ಕಾಡನ್ನು ಇದೇ ರೀತಿ ಉಳಿಸುಕೊಳ್ಳಿ ಎಂದು‌ ಕಿವಿಮಾತು ಹೇಳಿದರು.ಶಿಕ್ಷಣ ತಜ್ಞ ಎನಿಸಿಕೊಳ್ಳಲು ಕಾಳಜಿ ಇರಬೇಕು. ಆ ಕಾಳಜಿ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳ ತರಗತಿ ಪ್ರವೇಶೋತ್ಸವ Read More »

ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ

ಕಾಣಿಯೂರು: ನಾಣಿಲ ಸ. ಹಿ. ಪ್ರಾ. ಶಾಲೆಯಲ್ಲಿ ಶಾಲಾರಂಬೋತ್ಸದ ಅಂಗವಾಗಿ ಶಾಲಾ ಮಕ್ಕಳನ್ನು ಮೆರವಣಿಗೆಯೊಂದಿಗೆ ಕರೆ ತಂದು ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರತಿ ಬೆಳಗಿ ಪುಷ್ಪಗುಚ್ಚ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ದಲಾರಿ, ಉಪಾಧ್ಯಕ್ಷೆ ಕುಸುಮಾವತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಪದ್ಮಯ್ಯ

ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ Read More »

error: Content is protected !!
Scroll to Top