ಶೈಕ್ಷಣಿಕ

ಎಸ್‌ಎಸ್‌ಎಲ್‌ಸಿ ತೇರ್ಗಡೆ ಕನಿಷ್ಠ ಅಂಕ ಶೇ.33ಕ್ಕಿಳಿಸಲು ಖಾಸಗಿ ಶಾಲೆಗಳ ಒತ್ತಾಯ

ಸಿಬಿಎಸ್‌ಎ, ಐಸಿಎಸ್‌ಯ ಬೋರ್ಡ್‌ ಮಾದರಿಯಲ್ಲಿ ಅಂಕ ನಿಗದಿಗೆ ಆಗ್ರಹ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಉತ್ತೀರ್ಣಕ್ಕೆ ಕನಿಷ್ಠ 35 ಅಂಕದ ಬದಲು 33ಕ್ಕೆ ಇಳಿಸಿ ಎಂದು ಸರ್ಕಾರಕ್ಕೆ ಖಾಸಗಿ ಶಾಲೆಗಳು ಒತ್ತಾಯ ಮಾಡಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಕುರಿತು ಪತ್ರ ಬರೆದಿರುವ ಖಾಸಗಿ ಶಾಲೆಗಳ ಒಕ್ಕೂಟ ಕನಿಷ್ಠ 35 ಅಂಕಗಳ ಬದಲಾಗಿ ಈ ವರ್ಷದಿಂದಲೇ ಪಾಸ್‌ ಮಾನದಂಡವನ್ನು 33 ಅಂಕಗಳಿಗೆ ಬದಲಾವಣೆ ಮಾಡುವಂತೆ ಒತ್ತಾಯಿಸಿದೆ. ಸರಕಾರ ಸರಕಾರಿ ಮತ್ತು ಅನುದಾನಿತ ಶಾಲೆಗಳ ಎಸ್‌ಎಸ್‌ಎಲ್‌ಸಿ ಮಕ್ಕಳ ತೇರ್ಗಡೆಗೆ ಕನಿಷ್ಠ ಶೇ.35 ಅಂಕ ಗಳಿಕೆ […]

ಎಸ್‌ಎಸ್‌ಎಲ್‌ಸಿ ತೇರ್ಗಡೆ ಕನಿಷ್ಠ ಅಂಕ ಶೇ.33ಕ್ಕಿಳಿಸಲು ಖಾಸಗಿ ಶಾಲೆಗಳ ಒತ್ತಾಯ Read More »

ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ ಶೇ.35 ಅಂಕ ಕಡ್ಡಾಯ

ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಕೃಪಾಂಕ ಸಿಗಲಿದೆ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಂದಿದ್ದ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ವರ್ಷದಿಂದ ರದ್ದಾಗಿದ್ದು, 2024ಕ್ಕೂ ಹಿಂದೆ ಇದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ.35ಕ್ಕೆ ನಿಗದಿ ಮಾಡಲಾಗಿದೆ.ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಗೆ ಅಡ್ಡಿಯಾಗಿದೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವಿವಿಧ ವಲಯಗಳಿಂದ ತೀವ್ರ ಟೀಕೆಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಸ್ ಅಂಕಗಳನ್ನು

ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ ಶೇ.35 ಅಂಕ ಕಡ್ಡಾಯ Read More »

ವಿಟ್ಲ ಮೇಗಿನ ಪೇಟೆ ಶಾಲೆಯಲ್ಲಿ ಅಕ್ಷಯ ಕಾಲೇಜಿನ ರಾ.ಸೇ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವು ದ.ಕ ಜಿ.ಪಂ.ಹಿ.ಪ್ರಾ. ಶಾಲೆ ಮೇಗಿನಪೇಟೆ ವಿಟ್ಲ ಇಲ್ಲಿ ಫೆ.೧೭, ೨೦೨೫ರಂದು ಆರಂಭವಾಯಿತು. ಈ ಕಾರ್ಯಕ್ರಮವನ್ನು ಶ್ರೀ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಇವರು ಉದ್ಘಾಟಿಸಿ , ಶಿಬಿರದಲ್ಲಿನ ಪಾಲ್ಗೊಳ್ಳುವಿಕೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದಲ್ಲದೆ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಶ್ರೀ ಜಯಂತ ನಡುಬೈಲು ಅಧ್ಯಕ್ಷರು ಅಕ್ಷಯ ಕಾಲೇಜು ಪುತ್ತೂರು ಅವರು

ವಿಟ್ಲ ಮೇಗಿನ ಪೇಟೆ ಶಾಲೆಯಲ್ಲಿ ಅಕ್ಷಯ ಕಾಲೇಜಿನ ರಾ.ಸೇ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ Read More »

ಶಾಲೆಗಳಲ್ಲಿ ಚಿಕ್ಕಿ ವಿತರಣೆ ಬಂದ್‌

ಕೊಬ್ಬಿನಂಶ ಹೆಚ್ಚು ಇದೆ ಎಂಬ ಕಾರಣಕ್ಕೆ ವಿತರಣೆ ಸ್ಥಗಿತಗೊಳಿಸಲು ಸರಕಾರದ ಆದೇಶ ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ವಿತರಿಸುತ್ತಿದ್ದ ಚಿಕ್ಕಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ರೂಪದಲ್ಲಿ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಅಪರ್ಯಾಪ್ತ ಕೊಬ್ಬಿನಾಂಶ (ಅನ್‌ಸ್ಯಾಚುರೇಟೆಡ್ ಫ್ಯಾಟ್) ಹೆಚ್ಚಿಗೆ ಇದ್ದು, ಇದರಲ್ಲಿ ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಚಿಕ್ಕಿಯನ್ನು ಸರಿಯಾಗಿ

ಶಾಲೆಗಳಲ್ಲಿ ಚಿಕ್ಕಿ ವಿತರಣೆ ಬಂದ್‌ Read More »

ಅಕ್ಷಯ ಕಾಲೇಜು, ಮಂಗಳೂರು ಕೆರಿಯರ್ ಡೆಸ್ಟಿನಿಯಿಂದ ಪುತ್ತೂರಿನಲ್ಲಿ ಪ್ರಥಮವಾಗಿ ಏವಿಯೇಶನ್, ಸ್ಯಾಪ್, ಬ್ಯಾಟ್ ಕೋರ್ಸ್ ಉದ್ಘಾಟನೆ | ಪಿಯುಸಿ/ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಕೋರ್ಸ್ ಗಳು : ಜಯಂತ್ ನಡುಬೈಲು

ಪುತ್ತೂರು : ದರ್ಬೆಯಲ್ಲಿ ಕೇವಲ ಇಪ್ಪತ್ತು ವಿದ್ಯಾರ್ಥಿಗಳಿಂದ ಆರಂಭವಾದ ಗ್ಲೋರಿಯ ಕಾಲೇಜು ಆಫ್ ಫ್ಯಾಶನ್ ಡಿಸೈನಿಂಗ್ ಇದೀಗ ಸಂಪ್ಯದಲ್ಲಿ ಉದ್ಯಮಿ ಜಯಂತ್ ನಡುಬೈಲುರವರ ಮುಂದಾಳತ್ವದಲ್ಲಿ ಅಕ್ಷಯ ಕಾಲೇಜು ಎಂಬ ನಾಮಾಂಕಿತದೊಂದಿಗೆ ಸುಮಾರು ೪೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಇದೀಗ ದರ್ಬೆ ಬೈಪಾಸ್ ರಸ್ತೆಯ ಫಾ.ಪತ್ರಾವೋ ಸರ್ಕಲ್ ಬಳಿಯ ಆರಾಧ್ಯ ಆರ್ಕೇಡ್‌ನ ಮೂರನೇ ಮಹಡಿಯಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಅಕ್ಷಯ ಕಾಲೇಜು ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು ಜಂಟಿ ಸಹಯೋಗದಲ್ಲಿ `ಅಕ್ಷಯ

ಅಕ್ಷಯ ಕಾಲೇಜು, ಮಂಗಳೂರು ಕೆರಿಯರ್ ಡೆಸ್ಟಿನಿಯಿಂದ ಪುತ್ತೂರಿನಲ್ಲಿ ಪ್ರಥಮವಾಗಿ ಏವಿಯೇಶನ್, ಸ್ಯಾಪ್, ಬ್ಯಾಟ್ ಕೋರ್ಸ್ ಉದ್ಘಾಟನೆ | ಪಿಯುಸಿ/ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಕೋರ್ಸ್ ಗಳು : ಜಯಂತ್ ನಡುಬೈಲು Read More »

ಪುತ್ತೂರು (ಫೆ.೧೬): ಅಕ್ಷಯ ಕಾಲೇಜಿನಲ್ಲಿ ದಿಕ್ಸೂಚಿ ಕಾರ್ಯಕ್ರಮ

ಪುತ್ತೂರು : ಪುತ್ತೂರಿನಲ್ಲಿ ವಿನೂತನ ಪದವಿ ಕೋರ್ಸುಗಳನ್ನು ಪರಿಚಯಿಸಿ ಶೈಕ್ಷಣಿಕ ಕ್ಷೇತ್ರದೊಂದಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಹಲವು ಸಾಧನೆ ಮಾಡುತ್ತಿರುವ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಫೆ.೧೬ ಭಾನುವಾರ ಬೆಳಿಗ್ಗೆ ೧೦. ಗಂಟೆಯಿಂದ ೧೨.೩೦ ರ ವರೆಗೆ “ದಿಕ್ಸೂಚಿ-೪” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಏನಿದು “ದಿಕ್ಸೂಚಿ”? ಕಳೆದ ೩ ವರ್ಷಗಳಿಂದ ಸಂಸ್ಥೆಯು ಪುತ್ತೂರು ಹಾಗು ಪುತ್ತೂರಿನ ಆಸುಪಾಸಿನ ತಾಲೂಕುಗಳ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪಿ.ಯು.ಸಿ ಬಳಿಕ ಇರುವ ಆಯ್ಕೆ, ವೃತ್ತಿ ಶಿಕ್ಷಣ ಕ್ಷೇತ್ರದ ಪ್ರಾಮುಖ್ಯತೆ ವಿಷಯಗಳಲ್ಲಿ ಸಮಗ್ರ ರೂಪುರೇಷೆಯನ್ನು ನೀಡಿ

ಪುತ್ತೂರು (ಫೆ.೧೬): ಅಕ್ಷಯ ಕಾಲೇಜಿನಲ್ಲಿ ದಿಕ್ಸೂಚಿ ಕಾರ್ಯಕ್ರಮ Read More »

ಕರ್ನಾಟಕ ‘SSLC ಪೂರ್ವ ಸಿದ್ಧತಾ ಪರೀಕ್ಷೆ’ಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು :2024-25ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024-25ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ 25-02-2025ರಿಂದ 04-03-2025ರವರೆಗೆ ನಡೆಸಲು ತೀರ್ಮಾನಿಸಲಾಗಿರುತ್ತದೆ. ಸದರಿ ಪೂರ್ವ ಸಿದ್ಧತಾ ಪರೀಕ್ಷೆಯ ಕೆಲವು ವಿಷಯಗಳ ಸಮಯವನ್ನು ಮಾರ್ಪಾಡು ಮಾಡಿ, ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ

ಕರ್ನಾಟಕ ‘SSLC ಪೂರ್ವ ಸಿದ್ಧತಾ ಪರೀಕ್ಷೆ’ಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ Read More »

ಅಕ್ಷಯ ಕಾಲೇಜಿನಲ್ಲಿ “ಪ್ರಿನ್ಸ್   ಆ್ಯಂಡ್  ಪ್ರಿನ್ಸಸ್” ಗ್ರಾಂಡ್ ಫಿನಾಲೆ

ಪುತ್ತೂರು : ಅಕ್ಷಯ ಕಾಲೇಜು ಪುತ್ತೂರು ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತ ಕಲಾ ಸಂಘದ ವತಿಯಿಂದ ನಡೆದ ”ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್” ಫ್ಯಾಶನ್ ಶೋ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಫೆ. 8 ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಡಿಸೆಂಬರ್ 01 ರಂದು ನಡೆದ ಮೊದಲ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ 260 ಸ್ಪರ್ಧಾಳುಗಳಲ್ಲಿ ಫಿನಾಲೆಗೆ ಆಯ್ಕೆಯಾದ 80 ಸ್ಪರ್ಧಾಳುಗಳು ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷ  ಜಯಂತ್ ನಡುಬೈಲ್ ನೆರವೇರಿಸಿ“ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು

ಅಕ್ಷಯ ಕಾಲೇಜಿನಲ್ಲಿ “ಪ್ರಿನ್ಸ್   ಆ್ಯಂಡ್  ಪ್ರಿನ್ಸಸ್” ಗ್ರಾಂಡ್ ಫಿನಾಲೆ Read More »

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ

ಸುಳ್ಯ : ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರು, ಹಾಗೂ ಎನ್ನೆಂಸಿಯ ಉಪನ್ಯಾಸಕರೂ  ಆದ  ಡಾ. ಅನುರಾಧಾ ಕುರುಂಜಿ ಯವರು ಕರ್ನಾಟಕ‌ ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಎನ್ ಎಸ್ ಎಸ್ ಕೋಶ ಮತ್ತು ಮಂಗಳೂರಿನ ಯೇನೆಪೋಯ ಡೀಮ್ಡ್ ವಿಶ್ವ‌ವಿದ್ಯಾಲಯದ ಸಹಯೋಗದಲ್ಲಿ  ಫೆ 3 ರಿಂದ 7 ರವರೆಗೆ ಏನೇಪೋಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ  ರಾಜ್ಯದ  ವಿವಿಧ ಪದವಿ, ಮೆಡಿಕಲ್ , ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಪದವಿ

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ Read More »

ಕುದ್ಮಾರು ಶಾಲೆ ಎಸ್ ಡಿ ಎಂ ಸಿ ರಚನೆ | ಅಧ್ಯಕ್ಷರಾಗಿ ದೇವರಾಜ್‍ ನೂಜಿ, ಉಪಾಧ್ಯಕ್ಷರಾಗಿ  ನವ್ಯಾ ಅನ್ಯಾಡಿ ಆಯ್ಕೆ

ಕಾಣಿಯೂರು : ಕುದ್ಮಾರು ನ. ಉ.ಹಿ.ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿಯ ಅಧ್ಯಕ್ಷರಾಗಿ ದೇವರಾಜ್‍ ನೂಜಿ, ಉಪಾಧ್ಯಕ್ಷರಾಗಿ  ನವ್ಯಾ ಅನ್ಯಾಡಿ ಆಯ್ಕೆಯಾಗಿದ್ದಾರೆ. ಕುದ್ಮಾರು ನ. ಉ.ಹಿ.ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ನಾಗರಿಕ ಸೌಲಭ್ಯ ಸಮಿತಿಯ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಭಾಸ್ಕರ ಪೂಜಾರಿ ಕೊಡಂಗೆಯವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಲೋಹಿತಾಕ್ಷ ಕಡೆಂಜಿಕಟ್ಟ, ಪ್ರವೀಣ್ ಕೆರೆನಾರು, ಹಾಗೂ ಸವಣೂರು ಸಿ.ಆರ್.ಪಿ ಜಯಂತ್

ಕುದ್ಮಾರು ಶಾಲೆ ಎಸ್ ಡಿ ಎಂ ಸಿ ರಚನೆ | ಅಧ್ಯಕ್ಷರಾಗಿ ದೇವರಾಜ್‍ ನೂಜಿ, ಉಪಾಧ್ಯಕ್ಷರಾಗಿ  ನವ್ಯಾ ಅನ್ಯಾಡಿ ಆಯ್ಕೆ Read More »

error: Content is protected !!
Scroll to Top