ನಂದಿನಿ ಹಾಲು ವಿತರಕ ಉದಯ ನಿಧನ
ಪುತ್ತೂರು: ನಂದಿನಿ ಹಾಲು ವಿತರಕ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ವ್ಯಾಪಾರ ಮಳಿಗೆಯ ಸಿಬ್ಬಂದಿ ಉದಯ (51 ವ.) ಎಂಬವರು ಅ. 13ರಂದು ರಾತ್ರಿ ನಿಧನರಾದರು. ಕೊಡಿಪ್ಪಾಡಿಯಲ್ಲಿ ವಾಸ್ತವ್ಯ ಹೊಂದಿರುವ ಉದಯ ಅವರು ಮೂಲತಃ ಅಡೂರಿನವರು. ಪುತ್ತೂರು ಜೇನು ವ್ಯವಸಾಯ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲಿ ನಂದಿನಿ ಹಾಲು ವಿತರಣೆ ಅಂಗಡಿ ಹೊಂದಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್’ಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ನಿಧನರಾದರು. […]
ನಂದಿನಿ ಹಾಲು ವಿತರಕ ಉದಯ ನಿಧನ Read More »










