ನಿಧನ

ಬಾಲಿವುಡ್‌ ಖ್ಯಾತ ಸಿನೆಮಾ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ

ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮುಂಬಯಿ : ಬಾಲಿವುಡ್‌ನ ಖ್ಯಾತ ಸಿನೆಮಾ ನಿರ್ದೇಶಕ ಪ್ರದೀಪ್‌ ಸರ್ಕಾರ್‌ (68) ಇಂದು ನಸುಕಿನ ವೇಳೆ ನಿಧನರಾಗಿದ್ದಾರೆ. ಪರಿಣಿತ, ಲಗಾ ಚುನರಿ ಮೇ ದಾಗ್‌, ಮರ್ದಾನಿ, ಹೆಲಿಕಾಪ್ಟರ್‌ ಏಲದಂಥ ಜನಪ್ರಿಯ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.ಜಾಹೀರಾತು ಚಿತ್ರ ನಿರ್ದೇಶಕರಾಗಿ ಸುದೀರ್ಘ 17 ವರ್ಷ ದುಡಿದು ಬಳಿಕ ಪ್ರದೀಪ್‌ ಸರ್ಕಾರ್‌ ಬಾಲಿವುಡ್‌ಗೆ ಬಂದಿದ್ದರು. ಹಲವು ನೆನಪಿನಲ್ಲಿ ಉಳಿಯುವಂಥ ಜಾಹೀರಾತುಗಳನ್ನು ಅವರು ನಿರ್ದೇಶಿಸಿದ್ದರು. ಪರಿಣಿತ ಅವರು ನಿರ್ದೇಶಿಸಿದ ಮೊದಲ ಚಿತ್ರ. ಮೊದಲ ಚಿತ್ರವೇ […]

ಬಾಲಿವುಡ್‌ ಖ್ಯಾತ ಸಿನೆಮಾ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ Read More »

ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. ನಿಧನ

ಪುತ್ತೂರು: ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. (68) ಬುಧವಾರ ನಿಧನರಾಗಿದ್ದಾರೆ. ಬನ್ನೂರು ನಂದಿಲ ನಿವಾಸಿಯಾದ ಅವರು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದು, ಬಳಿಕ ಕಡಬದಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. ನಿಧನ Read More »

ಬೆಳ್ಳಾರೆ ಕುಸುಮಧರ ಆಚಾರ್ಯ ನಿಧನ

ಪುತ್ತೂರು: ಬೆಳ್ಳಾರೆ ನಿವಾಸಿ ಕುಸುಮಧರ ಆಚಾರ್ಯ ಬುಧವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪ್ರಾರ್ಥಿ‍ವ ಶರೀರವನ್ನು ಗುರುವಾರ ರಾತ್ರಿ ತಂದು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗುವುದು. ಶುಕ್ರವಾರ ಬೆಳ್ಳಾರೆ ಸ್ವಗೃಹಕ್ಕೆ ಕೊಂಡೊಯ್ದು ಅಲ್ಲಿ ಅಂತಿಮ ವಿಧಿವಿಧಾನ ನಡೆಸಿ ಪುತ್ತೂರು ಹಿಂದೂ ರುದ್ರಭೂಮಿಯಲ್ಲಿ ಬೆಳಿಗ್ಗೆ 11.30 ಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು.

ಬೆಳ್ಳಾರೆ ಕುಸುಮಧರ ಆಚಾರ್ಯ ನಿಧನ Read More »

ಕಾಂಗ್ರೆಸ್‌ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಸಚಿವ ಅಂಜನಮೂರ್ತಿ (72 ವರ್ಷ) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಇಂದಿರಾನಗರ ನಿವಾಸಿಯಾದ ಅಂಜನಮೂರ್ತಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ.ಬಿಎ, ಬಿ.ಎಲ್ ಪದವೀಧರರಾದ ಅಂಜನ ಮೂರ್ತಿ 10ನೇ ಏಪ್ರಿಲ್ 1941ರಲ್ಲಿ ಜನಿಸಿದ್ದರು. 1989-1994 ಮತ್ತು 1999, ಫೆ.23 2004 ರಿಂದ 2007 ಠಂಪಿಂಗ್ ಮೂರು ಬಾರಿ ಆಯ್ಕೆ ಸಮೀಪದ ಪ್ರತಿಸ್ಪರ್ಧಿಗಿಂತ 37000 ಮತಗಳ ಬಹುಮತ ಸಾಧಿಸಿದ್ದರು.

ಕಾಂಗ್ರೆಸ್‌ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ Read More »

ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ

ಸ್ವಾಮೀಜಿ ಮೂಲತಃ ಹೆಬ್ರಿ ಸಮೀಪದ ವರಂಗದವರು ಹಾಸನ: ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ ಆಗಿದ್ದಾರೆ. 1970, ಏಪ್ರಿಲ್‌ 19ರಂದು ಪಟ್ಟಾಭೀಷಿಕ್ತರಾದ ಸ್ವಾಮೀಜಿ ಸುಮಾರು 50 ವರ್ಷಗಳಿಂದ ಮಠವನ್ನು ಮುನ್ನಡೆಸಿದ್ದಾರೆ. ನಾಲ್ಕು ಮಹಾ ಮಸ್ತಕಾಭಿಷೇಕ ಪೂರೈಸಿದ ಕೀರ್ತಿ ಸ್ವಾಮೀಜಿಗಿದೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಸ್ವಾಮೀಜಿ ಕೊಡುಗೆ ಅಗಣಿತ. ಸಮಾಜಮುಖಿ ಕಾರ್ಯಗಳಿಂದ ಶ್ರವಣಬೆಳಗೊಳ ಸುತ್ತಮುತ್ತಲಿನ ಎಲ್ಲ ಧರ್ಮದವರ ಬದುಕು ಸುಧಾರಿಸಲು ಬಹಳಷ್ಟು ಕೆಲಸ ಮಾಡಿದ್ದ ಸ್ವಾಮೀಜಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು.

ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ Read More »

ರಷ್ಯಾದ ಜನಪ್ರಿಯ ಪಾಪ್‌ ಸಂಗೀತತಾರೆ ನಿಗೂಢ ಸಾವು

ಮಾಸ್ಕೊ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳನ್ನು ಬರೆದು ಹಾಡಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದ ರಷ್ಯಾದ ಜನಪ್ರಿಯ ಪಾಪ್ ತಾರೆ ಡಿಮಾ ನೋವಾ (35) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಡಿಮಾ ನೋವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಕ್ರೀಮ್ ಸೋಡಾ ಮ್ಯೂಸಿಕ್‌ ಗ್ರೂಪ್‌ ಸ್ಥಾಪಿಸಿದ್ದ ಡಿಮಾ ನೋವಾ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು.

ರಷ್ಯಾದ ಜನಪ್ರಿಯ ಪಾಪ್‌ ಸಂಗೀತತಾರೆ ನಿಗೂಢ ಸಾವು Read More »

ಬೆಂಗಳೂರು: ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ವಿಧಿವಶ

ಬೆಂಗಳೂರು: ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ (45)ನಿಧನರಾಗಿದ್ದಾರೆ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಚವತ್ತಿ ಸಮೀಪದವರಾಗಿದ್ದರು.ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಸಾದ್ ಹೆಗಡೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4:30ಕ್ಕೆ ಕೊನೆಯುಸಿರೆಳೆದಿದ್ದಾರೆ. ಹಲವು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದ ಪ್ರಸಾದ್ ಹೆಗಡೆ, ಮಾಧ್ಯಮ ಲೋಕದಲ್ಲಿ ಅಪಾರ ಅನುಭವ ಹೊಂದಿದ್ದರು. ಸದ್ಯ ರಾಜ್ ನ್ಯೂಸ್ ನಲ್ಲಿ ಔಟ್ ಪುಟ್ ಚೀಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ್ದ

ಬೆಂಗಳೂರು: ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ವಿಧಿವಶ Read More »

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಆತ್ಮಹತ್ಯೆ

ಪುತ್ತೂರು: ನಗರಸಭೆ ಸದಸ್ಯ ಶಿವರಾಮ ಸಫಲ್ಯ ಗುರುವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವರಾಮ ಸಪಲ್ಯರು ಒಂದನೇ ವಾರ್ಡ್ ನ ಸದಸ್ಯರಾಗಿದ್ದಾರೆ. ನಗರದ ಹೊರವಲಯದ ಸಾಲ್ಮರ ಸಮೀಪದ ಉರಮಾಲ್ ನಲ್ಲಿ ವಾಸವಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಗುರುವಾರ ಪತ್ನಿ ಹೊರಗೆ ಹೋಗಿದ್ದು, ಪತಿಗೆ ಫೋನ್ ಕರೆ ಮಾಡಿದರೂ ತೆಗೆಯದ ಹಿನ್ನಲೆಯಲ್ಲಿ ಪಕ್ಕದ ಮನೆಯವರಲ್ಲಿ ಮನೆಕಡೆ ಹೋಗುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಮನೆಯತ್ತ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಆತ್ಮಹತ್ಯೆ Read More »

ಮಾಂಬಾಡಿ ರಾಮಕೃಷ್ಣ ಭಟ್‍ ನಿಧನ

ಪುತ್ತೂರು: ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ಮಾಂಬಾಡಿ ರಾಮಕೃಷ್ಣ ಭಟ್ (95) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಪ್ರಸಿದ್ಧ ಜ್ಯೋತಿಷಿ ಮಾಂಬಾಡಿ ಈಶ್ವರ ಭಟ್ಟರ ಪುತ್ರರಾಗಿದ್ದ ಅವರು ತಮ್ಮ ಚಿಕ್ಕಪ್ಪ ಮಾಂಬಾಡಿ ನಾರಾಯಣ ಭಟ್ಟರಿಂದ ಮದ್ದಳೆ ಕಲಿತು ಹವ್ಯಾಸಿ ಕಲಾವಿದರಾಗಿದ್ದರು. ಕೂಡ್ಲು ಮೇಳದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದು, ಪಡುಮಲೆ ಕೋಟಿ-ಚೆನ್ನಯ ಯುವಕ ಮಂಡಲ ಹಾಗೂ ಬೆನಕ ಯಕ್ಷ ಕಲಾ ವೇದಿಕೆ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ನಾಲ್ವರು ಪುತ್ರರು, ನಾಲ್ಕು ಮಂದಿ ಪುತ್ತಿಯರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

ಮಾಂಬಾಡಿ ರಾಮಕೃಷ್ಣ ಭಟ್‍ ನಿಧನ Read More »

ಕಮಲ ನಿಧನ

ಪುತ್ತೂರು: ಬೆಟ್ಟಂಪಾಡಿಯ ಕುದುರೆಕುಮೇರು ನಿವಾಸಿ ನಾರಾಯಣ ಆಚಾರ್ಯರ ಪತ್ನಿ ಕಮಲ (70 ವ.) ಅಲ್ಪಕಾಲದ ಅಸೌಖ್ಯದಿಂದ ಮಾ. 9ರಂದು ಸ್ವಗೃಹದಲ್ಲಿ ನಿಧನರಾದರು. ಪತಿ, 2 ಗಂಡು, 3 ಹೆಣ್ಣು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಮಲ ನಿಧನ Read More »

error: Content is protected !!
Scroll to Top