ಶಾರ್ಟ್ ಸರ್ಕ್ಯೂಟ್ ನಿಂದ ಅರಣ್ಯಕ್ಕೆ ಹತ್ತಿಕೊಂಡ ಬೆಂಕಿ | ಗಿಡಮರಗಳ ನಾಶ
ಅನಂತಾಡಿ: ಶಾರ್ಟ್ ಸೆರ್ಕ್ಯೂಟ್ನಿಂದ ಹೊತ್ತಿಕೊಂಡು ಬೆಂಕಿಯಿಂದಾಗಿ ಅನಂತಾಡಿ ಗ್ರಾಮದ ಆರಂಗಳ ಸುಳ್ಯಮಲೆ ಅರಣ್ಯ ಪ್ರದೇಶದಲ್ಲಿ ಗಿಡಮರಗಳು ಬೆಂಕಿಗಾಹುತಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬೆಂಕಿ ಹತ್ತಿಕೊಂಡ ವಿಚಾರ ತಿಳಿದ ತಕ್ಷಣ ಸಾರ್ವಜನಿಕರು ಬೆಂಕಿ ನಂದಿಸುವಲ್ಲಿ ಶ್ರಮ ಪಟ್ಟಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ತಕ್ಷಣ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳವದರ ಜತೆ ಸಾರ್ವಜನಿಕರು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ತೀವ್ರತೆಗೆ ಅರಣ್ಯದಲ್ಲಿದ್ದ ಗಿಡಮರಗಳು ಸುಟ್ಟುಗೋಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಅರಣ್ಯಕ್ಕೆ ಹತ್ತಿಕೊಂಡ ಬೆಂಕಿ | ಗಿಡಮರಗಳ ನಾಶ Read More »










