ಮರ ಕಡಿಯುವ ವೇಳೆ ಗೆಲ್ಲು ಬಡಿದು ಮೃತ್ಯು | ತಡವಾಗಿ ಬೆಳಕಿಗೆ ಬಂದ ಪ್ರಕರಣ
ಕುಂಬ್ರ: ಮನೆ ಹಿತ್ತಲಿನ ಮರ ಕಡಿಯುವ ವೇಳೆ ಮರದ ಗೆಲ್ಲು ತಲೆಗೆ ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದರ್ಬೆತ್ತಡ್ಕದಲ್ಲಿ ಬುಧವಾರ ಸಂಜೆ ನಡೆದಿದೆ. ದರ್ಬೆತ್ತಡ್ಕದ ಗುರುಪ್ರಸಾದ್ ಮೃತಪಟ್ಟವರು. ಬುಧವಾರ ಸಂಜೆ ಮನೆ ಹಿಂಭಾಗದಲ್ಲಿದ್ದ ಮರ ಕಡಿಯುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮರ ಕಡಿಯುವ ವೇಳೆ ಗೆಲ್ಲು ಬಡಿದು ಮೃತ್ಯು | ತಡವಾಗಿ ಬೆಳಕಿಗೆ ಬಂದ ಪ್ರಕರಣ Read More »