ಅಪಘಾತ

ದೆಹಲಿ ಸೇರಿದಂತೆ ಉತ್ತರಭಾರತ ಜಲಾವೃತ | ನೀರಿನಲ್ಲಿ ತೇಲುತ್ತಿರುವ 200 ಕ್ಕೂ ಅಧಿಕ ಕಾರುಗಳು

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಮಳೆಯಿಂದ ಜಲಾವೃತವಾಗಿದ್ದು, ಪ್ರವಾಹದ ನೀರಿನಲ್ಲಿ 200 ಹೆಚ್ಚು ಕಾರುಗಳು ಮುಳುಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಹಿಂಡೋನ್ ನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಸಮೀಪದ ಮನೆಯ ಜನರನ್ನು ಸ್ಥಳಾಂತರಿಸಲಾಗಿದೆ. ಪೀಡಿತ ಪ್ರದೇಶದಲ್ಲಿ ನೋಯ್ಡಾ ಸೆಕ್ಟರ್ 63 ರಲ್ಲಿ ಇಕೋಟೆಕ್  ಮತ್ತು ಚಿರ್ಜಾಸಿ ಸೇರಿವೆ. ಇಂದು ಮುಂಜಾನೆ ನೋಯ್ಡಾ ಮತ್ತು ದೆಹಲಿ ಪ್ರದೇಶದ ಇತರ ಭಾಗಗಳಲ್ಲಿ ಸಾಧಾರಣ […]

ದೆಹಲಿ ಸೇರಿದಂತೆ ಉತ್ತರಭಾರತ ಜಲಾವೃತ | ನೀರಿನಲ್ಲಿ ತೇಲುತ್ತಿರುವ 200 ಕ್ಕೂ ಅಧಿಕ ಕಾರುಗಳು Read More »

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು

ನೆಲ್ಯಾಡಿ: ಬೈಕೊಂದು ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನೆಲ್ಯಾಡಿ ಮೊರಂಕಳ ನಿವಾಸಿ ಬೈಕ್ ಸವಾರ ಇಕ್ಬಾಲ್ ಮೃತಪಟ್ಟ ಯುವಕ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಣ್ಣಂಪಾಡಿ ಬಳಿ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ಬದಿ ಕೆಟ್ಟು ನಿಂತಿದ್ದ ಪಾರ್ಸೆಲ್ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಮೃತದೇಹವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು Read More »

ಕಾರು-ಟಿಪ್ಪರ್ ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಂಭೀರ ಗಾಯ

ವಿಟ್ಲ: ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೋಟ್ಟು ಎಂಬಲ್ಲಿ ನಡೆದಿದೆ. ಮುಂಬೈ ಮೂಲದ ಪ್ರಯಾಣಿಕರು ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರು ಹಾಗೂ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸಹಿತ ನಾಲ್ವರು ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದಾಗಿ

ಕಾರು-ಟಿಪ್ಪರ್ ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಂಭೀರ ಗಾಯ Read More »

ಹೆಜ್ಜೇನು ಕಡಿದು ವ್ಯಕ್ತಿಯೋರ್ವರು ಮೃತ್ಯು

ಪುತ್ತೂರು: ಪುತ್ತೂರು: ಕಟ್ಟಿಗೆಗಾಗಿ ಮನೆಯ ಪಕ್ಕದ ಗುಡ್ಡೆಗೆ ಹೋಗಿದ್ದ ವೇಳೆ ಹೆಜ್ಜೇನು(ಪಿಲಿಕುಡೊಲು)ಕಡಿದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಮಾಯಿಲ ಎಂಬವರ ಪುತ್ರ ಗುರುವ (55)  ಮೃತಪಟ್ಟವರು. ಅವರು ಜು.23ರಂದು ಮಧಾಹ್ನ ಕಟ್ಟಿಗೆಗೆಂದು ಮನೆ ಪಕ್ಕದ ಗುಡ್ಡೆಗೆ ಹೋದವರು ಅರ್ಧ ಗಂಟೆ ಬಿಟ್ಟು ಗುಡ್ಡೆಯಿಂದ ಓಡೋಡಿ ಬಂದಾಗ ಅವರ ಮುಖ, ಕುತ್ತಿಗೆ, ಮೈಯೆಲ್ಲಾಯಾವುದೋ ಊದಿಕೊಂಡಿರುವುದು ಕಂಡು ಬಂದಿತ್ತು. ಈ ಕುರಿತು ಅವರ ತಾಯಿ ವಿಚಾರಿಸಿದಾಗ ಹೆಚ್ಚೇನು

ಹೆಜ್ಜೇನು ಕಡಿದು ವ್ಯಕ್ತಿಯೋರ್ವರು ಮೃತ್ಯು Read More »

ಮುಡಿಪಿನಲ್ಲಿ ಬಸ್-ಕಾರು ಅಪಘಾತ

ಮುಡಿಪು : ಮುಡಿಪು ಜಂಕ್ಷನ್ ನಲ್ಲಿ ಸೋಮವಾರ ರಾತ್ರಿ  ಬಸ್‌ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್‌ ಕಾರು ಚಾಲಕ ಯಾವುದೇ ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಎನ್‌ ಎಸ್‌ ಟ್ರಾವೆಲ್ಸ್‌ ಎಂಬ ಬಸ್ಸು ಮಂಗಳೂರಿನಿಂದ ಬಿ ಸಿ ರೋಡಿನತ್ತ ಸಂಚರಿಸುತ್ತಿದ್ದಾಗ, ಮುಡಿಪು ಜಂಕ್ಷನ್ನಿನಲ್ಲಿ ತಿರುಗುವ ಸಂದರ್ಭದಲ್ಲಿ ಭಾರತಿ ಶಾಲೆ ಕಡೆಯಿಂದ ಬಂದ ಝೆನ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಸೀದಾ ಬಸ್ಸಿನ ಮುಂಭಾಗಕ್ಕೆ ನುಗ್ಗಿದ್ದು, ಕಾರು ಚಾಲಕ ಪಾರಾಗಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ

ಮುಡಿಪಿನಲ್ಲಿ ಬಸ್-ಕಾರು ಅಪಘಾತ Read More »

ಭಾರೀ ಮಳೆಗೆ ಕೊಡಗಿನ ಕರ್ತೋಜೆಯಲ್ಲಿ ಭೂಕುಸಿತ | ಸಂಚಾರದಲ್ಲಿ ವ್ಯತ್ಯಯ

ಪುತ್ತೂರು: ಕೊಡಗಿನಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಭೂಕುಸಿತ ಉಂಟಾಗಿ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯಗೊಂಡಿದೆ. ಕೊಡಗಿನ ಮದೆನಾಡು ಸಮೀಪದ ಕರ್ತೋಜೆಯಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತತದಿಂದಾಗಿ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸುವ ಸೂಚನೆಯಿದ್ದು, ಆತಂಕ ಉಂಟಾಗಿದೆ. ಭಾರೀ ಮಳೆಯನ್ನು ಲೆಕ್ಕಿಸದೆ ಕೊಡಗು ಜಿಲ್ಲಾಡಳಿತ ಜೆಸಿಬಿ, ಹಿಟಾಚಿ ಯಂತ್ರಗಳನ್ನು ಬಳಸಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಭಾರೀ ಮಳೆಗೆ ಕೊಡಗಿನ ಕರ್ತೋಜೆಯಲ್ಲಿ ಭೂಕುಸಿತ | ಸಂಚಾರದಲ್ಲಿ ವ್ಯತ್ಯಯ Read More »

ಮಿತ್ತೂರು ಬಳಿ ರಸ್ತೆಗೆ ಉರುಳಿದ ಮರ | ಸಂಚಾರದಲ್ಲಿ ವ್ಯತ್ಯಯ

ಪುತ್ತೂರು: ಮಿತ್ತೂರು ಕುಕ್ಕರೆಬೆಟ್ಟು ಬಳಿ ಸೋಮವಾರ ಮಧ್ಯಾಹ್ನ ಭಾರೀ ಮಳೆಗೆ ಮರ ರಸ್ತೆಗೆ ಉರುಳಿ ಬಿದ್ದು ಪುತ್ತೂರು ಮಾಣಿ ನಡುವಣ ವಾಹನ ಸಂಚಾರ ಸ್ಥಗಿತಗೊಂಡಿತು. ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಮರ ಬಿದ್ದ ಪರಿಣಾಮ ಪುತ್ತೂರು ಮಾಣಿ ನಡುವಣ ಓಡಾಟ ನಡೆಸುವವರಿಗೆ ತೊಂದರೆ ಉಂಟಾಯಿತು. ವಾಹನಗಳು ಮುರ ಮತ್ತು ಇತರೆ ಮಾರ್ಗಗಳ ಮೂಲಕ ಸಂಚರಿಸಿತು.

ಮಿತ್ತೂರು ಬಳಿ ರಸ್ತೆಗೆ ಉರುಳಿದ ಮರ | ಸಂಚಾರದಲ್ಲಿ ವ್ಯತ್ಯಯ Read More »

ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ | ವಾಹನ ಸಂಚಾರಕ್ಕೆ ಸಮಸ್ಯೆ

ಚಾರ್ಮಾಡಿ : ಸುರಿಯುತ್ತಿರುವ ಭಾರೀ ಮಳೆಗೆ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಬಿದಿರುತಳ ಆಲೇಖಾನ್ ನಡುವಿನ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡದ ಮಣ್ಣು ಕುಸಿತಗೊಂಡು ರಸ್ತೆಗೂ ಬಂದು ಬಿದ್ದು ವಾಹನಗಳು ಸಂಚರಿಸಲು ಅನಾನುಕೂಲವಾಯಿತು. ಇದರಿಂದ ಘಾಟಿ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರಿಯಿತು. ಗುಡ್ಡ ಕುಸಿದ್ದ ಉಂಟಾದ ಸ್ಥಳದ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯಾಗುತ್ತಿದ್ದು, ಈ ರಸ್ತೆ ಇಲ್ಲಿ ತೀವ್ರ

ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ | ವಾಹನ ಸಂಚಾರಕ್ಕೆ ಸಮಸ್ಯೆ Read More »

ಬೈಕ್ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು

ಪುತ್ತೂರು: ಬೈಕ್‍ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ‍ಘಟನೆ ಭಾನುವಾರ ನಡೆದಿದೆ. ಸೇಡಿಯಾಪು ನಿವಾಸಿ ಚೈತ್ರೇಶ್ ಯಾನೆ ಚರಣ್ (19) ಮೃತಪಟ್ಟವರು ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೈಕ್ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು Read More »

ಕೋಡಿಂಬಾಡಿಯಲ್ಲಿ ಭಾರೀ ಮಳೆಗೆ ಆವರಣ ಗೋಡೆ ಕುಸಿತ

ಪುತ್ತೂರು: ಕೋಡಿಂಬಾಡಿ-ಉಪ್ಪಿನಂಗಡಿ ಮೋರಿಯೊಂದು ಭಾರೀ ಮಳೆಗೆ ಬ್ಲಾಕ್ ಆಗಿ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನ ಆವರಣ ಗೋಡೆ ಕುಸಿದಿದೆ. ಮೋರಿ ಬ್ಲಾಕ್ ಆಗಿರುವ ಕುರಿತು ಲೋಕೋಪಯೋಗಿ ಇಲಾಖೆಗೆ ದೂರು ನೀಡಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮಳೆ ನೀರು ನಿಂತು ಜಮೀನು ಆವರಣಗೋಡೆ ಕುಸಿದಿದೆ ಎಂದು ರಮೇಶ್ ಎಂಬವರು ತಿಳಿಸಿದ್ದಾರೆ. ಮೋರಿ ಬ್ಲಾಕ್ ಆಗಿದ್ದರಿಂದ ಚರಂಡಿಯಲ್ಲಿ ನೀರು ತುಂಬಿ ದೊಡ್ಡ ಕೊಳವಾಗಿದೆ. ರಸ್ತೆಯಲ್ಲಿ ಸಾವಿರಾರು ವಾಹನಗಳು ಚಲಿಸುತ್ತಿದ್ದು ಇಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಕೋಡಿಂಬಾಡಿಯಲ್ಲಿ ಭಾರೀ ಮಳೆಗೆ ಆವರಣ ಗೋಡೆ ಕುಸಿತ Read More »

error: Content is protected !!
Scroll to Top